ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada

Chanakya Niti in Kannada
ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada

              ಸಿನಿಮಾ ನಟರನ್ನು ಹುಚ್ಚರಂತೆ ಅನುಕರಿಸೋದು ತಪ್ಪಲ್ಲ. ಆದರೆ ನಮ್ಮ ಸ್ವಂತಿಕೆಯನ್ನು ನಾವೇ ಸಾಯಿಸೋದು ತಪ್ಪು. ನಮ್ಮತನವನ್ನು ನಾವೇ ಸಾಯಿಸುವುದು ತಪ್ಪು. ನಾವು Unique ಎಂಬುದನ್ನು ಮರೆತು ಕುರಿಗಳ ಗುಂಪಲ್ಲಿ ಕುರಿಗಳಾಗಿ ಸಾಗುವುದು ತಪ್ಪು. ರಿಯಲ್ ಲೈಫಲ್ಲಿ ನಾವ್ಗಳೇ ಹೀರೋ ಆಗಲು ಸಾಧ್ಯವಿರುವಾಗ ಡಮ್ಮಿ ಹೀರೋಗಳನ್ನು ಯಾಕೆ ಅನುಸರಿಸಬೇಕು?. ಸಿನಿಮಾ ಗೆಲ್ಲೊತನಕ ಮಾತ್ರ ಜನ ಅವರನ್ನು ತಲೆ ಮೇಲೆ ಕುರಿಸಿಕೊಂಡು ಮೆರೆಸ್ತಾರೆ. So ಗೆಳೆಯ ರಿಯಲ್ ಲೈಫಲ್ಲಿ ರಿಯಲ್ ಹೀರೋ ಆಗು...
ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada
                 ಗೆಳೆಯ, ನೀನು ರಿಯಲ್ ಲೈಫಲ್ಲಿ ಹೀರೋ ಆಗಬೇಕೆಂದರೆ ಮೊದಲು ನೀನು ರಿಯಲ್ ಮ್ಯಾನ್ ಆಗು. ಅಸಲಿ ಪುರುಷನಾಗು. ಒಬ್ಬ ಆರ್ಡಿನರಿ ಮನುಷ್ಯ ಬರೀ ತನ್ನ ಹಾಗೂ ತನ್ನ ಕುಟುಂಬದ ಬಗ್ಗೆಯಷ್ಟೇ ಯೋಚಿಸುತ್ತಾನೆ. ಒಬ್ಬ ಆರ್ಡಿನರಿ ಮನುಷ್ಯ ಮೂರು ಬಿಟ್ಟು ಹೆಣ್ಣಿನ ಹಿಂದೆ ಅಲೆದು ಮೋಸಹೋಗಿ ಮಣ್ಣು ಸೇರ್ತಾನೆ. ಆದರೆ ಒಬ್ಬ ಅಸಲಿ ಪುರುಷ ಹೆಣ್ಣನ್ನು ಪ್ರೀತಿಸುತ್ತಾನೆ, ಗೌರವಿಸುತ್ತಾನೆ ಮತ್ತು ರಕ್ಷಿಸುತ್ತಾನೆ. ಅಸಲಿ ಪುರುಷ ಹೆಣ್ಣನ್ನು ಹಿಂಬಾಲಿಸುವುದಿಲ್ಲ. ಹೆಣ್ಣೆ ಅವನನ್ನು ಹಿಂಬಾಲಿಸುತ್ತಾಳೆ. ಒಬ್ಬ ಅಸಲಿ ಪುರುಷ ಬರೀ ತನ್ನ ಕುಟುಂಬಕ್ಕಷ್ಟೇ ಅಲ್ಲ ಇಡೀ ಸಮಾಜಕ್ಕಾಗಿ ಬದುಕುತ್ತಾನೆ. ಎಲ್ಲರ ಯೋಗಕ್ಷೇಮವನ್ನು, ಉನ್ನತಿಯನ್ನು ಬಯಸುತ್ತಾನೆ. ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಾನೆ.

ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada

             ಗೆಳೆಯ ನೀನು ರಿಯಲ್ ಲೈಫಲ್ಲಿ ಹೀರೋ ಆಗಬೇಕೆಂದರೆ ಮೆಂಟಲಿ ಹಾಗೂ ಫಿಸಿಕಲಿ ಸ್ಟ್ರಾಂಗ್ ಆಗು. ಮೆಂಟಲಿ ಮ್ಯಾಚುರ್ ಆಗು. ದಿನಾಲು ಎಕ್ಸರಸೈಜ್ ಮಾಡು. ಯಾವಾಗಲೂ ಫಿಟ್ ಆ್ಯಂಡ್ ಆ್ಯಕ್ಟೀವ್ ಆಗಿರು. ಬಾಡಿ ಜೊತೆಗೆ ಬುದ್ಧಿನೂ ಬೆಳೆಸು. ಸಿಕ್ಸ ಪ್ಯಾಕ್ ಜೊತೆಗೆ ಸಿಕ್ಸ್ಥ ಸೆನ್ಸನ್ನು ಬೆಳೆಸು. ಕಷ್ಟದಲ್ಲಿರುವವರಿಗೆ ಸಹಾಯ ಮಾಡು. ನೊಂದವರಿಗೆ ನೆರಳಾಗು. ಹಸಿದವರಿಗೆ ಬೆಂಗಾವಲಾಗಿ ನಿಲ್ಲು. ಹೃದಯದಿಂದಷ್ಟೇ ಅಲ್ಲ ಅಂತಸ್ತಿನಿಂದಲೂ ಶ್ರೀಮಂತನಾಗು. ದೇಹ ಪ್ರೇಮಿಯಾಗುವ ಮೊದಲು ದೇಶಪ್ರೇಮಿಯಾಗು. ಎಲ್ಲರ ಮುಖದಲ್ಲಿ ನಗು ತರಲು ಪ್ರಯತ್ನಿಸು. ಇಡೀ ದೇಶದ ಜನ ನಿನ್ನನ್ನು ಮನೆ ಮಗನಂತೆ ನೋಡಬೇಕು. ಆ ರೀತಿ ನೀನಾಗಬೇಕು.
ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada

                      ಗೆಳೆಯ, ನೀನು ರಿಯಲ್ ಲೈಫಲ್ಲಿ ಹೀರೋ ಆಗಬೇಕೆಂದರೆ ದೇಶದಲ್ಲಿ ನಡೆಯುತ್ತಿರುವ ಅನೀತಿ, ಅತ್ಯಾಚಾರ, ಹಗರಣಗಳ ವಿರುದ್ಧ ಧ್ವನಿ ಎತ್ತು. ತಾಯಿ ಕೊಟ್ಟ ಜೀವಾನಾ ತಾಯ್ನಾಡಿಗೆ ಅರ್ಪಿಸೋಕೆ ಸದಾ ಸಿದ್ಧವಾಗಿರು. ಜನಸಾಮಾನ್ಯರ ಧ್ವನಿಯಾಗು. ನೀನು ಒಳ್ಳೆಯದನ್ನು ಮಾಡಲು ಹೊರಟಾಗ ಕೆಟ್ಟವರು ನಿನ್ನ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ನಿನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಾರೆ. ಇಂಥವರಿಗೆಲ್ಲ ನೀನು ಕೇರ್ ಮಾಡದಿರು. ಏಕೆಂದರೆ ನೂರು ನಾಯಿಗಳು ಸೇರಿ ಒಟ್ಟಾಗಿ ಬೊಗಳಿದರೆ ಅದು ಸಿಂಹ ಗರ್ಜನೆಯಾಗುವುದಿಲ್ಲ. ಹತ್ತು ಹಂದಿಗಳು ಸೇರಿ ಒಂದು ಸಿಂಹವನ್ನು ಬೇಟೆಯಾಡಲು ಸಾಧ್ಯವಿಲ್ಲ. ನೀನು ಸಿಂಹವಾಗಿ ನಿರ್ಭಯವಾಗಿ ಮುನ್ನುಗ್ಗು.
ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada
          ಗೆಳೆಯ, ನೀನು ರಿಯಲ್ ಲೈಫಲ್ಲಿ ಹೀರೋ ಆಗಬೇಕೆಂದರೆ ಬೇರೆಯವರಿಗೆ ಬೇರೆಯವರ ಉದಾಹರಣೆಗಳನ್ನು ಕೊಡುವುದನ್ನು ನಿಲ್ಲಿಸು. ನೀನೇ ಒಂದು ಜೀವಂತ ಉದಾಹರಣೆಯಾಗಲು ಪ್ರಯತ್ನಿಸು. ಹೆದರಿಕೊಂಡು ನೂರು ವರ್ಷ ಬದುಕುವುದಕ್ಕಿಂತ ಧೈರ್ಯದಿಂದ ಹುಲಿಯಂತೆ ಒಂದಿನ ಬದುಕಿದರೆ ಸಾಕು. ಕಷ್ಟಗಳು ಬಂದಾಗ ಕಣ್ಣೀರು ಸುರಿಸುವ ಬದಲು ಬೆವರು ಸುರಿಸು. ನೀನು ಇಷ್ಟಪಟ್ಟಿದ್ದು ನಿನಗೆ ಸಿಕ್ಕೇ ಸಿಗುತ್ತೆ.


ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada

             ಗೆಳೆಯ, ಹುಟ್ಟೋವಾಗ ಮೂರ ಜನ ಇದ್ರು ಪರವಾಗಿಲ್ಲ. ಸಾಯೋವಾಗ ನಾಲ್ಕು ಜನ ಇದ್ರು ಪರವಾಗಿಲ್ಲ. ಆದರೆ ಹುಟ್ಟು ಸಾವುಗಳ ಮಧ್ಯೆ ಕೋಟ್ಯಾಂತರ ಜನ ನಿನ್ನನ್ನು ಗುರ್ತಿಸಬೇಕು. ನಿನ್ನನ್ನು ನೋಡಲು, ನಿನ್ನೊಂದಿಗೆ ಮಾತನಾಡಲು ಹಂಬಲಿಸಬೇಕು. ನೀನು ಕಣ್ಣು ಬಿಟ್ಟಾಗ ನೀನು ಅಳ್ತಾಯಿದ್ದೆ. ಆದರೆ ನೀನು ಕಣ್ಮುಚ್ಚಿದಾಗ ಈ ಜಗತ್ತು ನಿನಗಾಗಿ ಬಿಕ್ಕಿಬಿಕ್ಕಿ ಅಳಬೇಕು. ನೀನು ಸತ್ತ ಮೇಲೂ ನೀ ಬದುಕಿರಬೇಕು. ನಿನ್ನ ಬೆನ್ನ ಹಿಂದೆಯೂ ಜನ ನಿನ್ನ ಬಗ್ಗೆ ಒಳ್ಳೆಯದನ್ನೇ ಮಾತಾಡಬೇಕು. ಆ ರೀತಿ ನಿನ್ನ ವ್ಯಕ್ತಿತ್ವ ಬೆಳೆಯಬೇಕು. ನಿನ್ನ ಜೀವನವೇ ಒಂದು ಮಹಾನ್ ಸಂದೇಶವಾಗಬೇಕು.
ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada

                     ಗೆಳೆಯರೇ, ಗೆಳತಿಯರೇ ನಿಮ್ಮಿಂದ ಎಲ್ಲವು ಸಾಧ್ಯವಿದೆ. ರಿಯಲ್ ಲೈಫಲ್ಲಿ ಹೀರೋ ಆಗಲು ಪ್ರಯತ್ನಿಸಿ. All the Best...
  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 

ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada ರಿಯಲ ಲೈಫಲ್ಲಿ ಹೀರೋ ಆಗುವುದು ಹೇಗೆ? Be a Hero in Real Life. Motivational Article in Kannada Reviewed by Director Satishkumar on April 12, 2019 Rating: 4.5
Powered by Blogger.