ನಮ್ಮನ್ನು ನಾವು ನಂಬುವುದನ್ನು, ನಮ್ಮ ನಿಜವಾದ ಶಕ್ತಿ ಸಾಮರ್ಥ್ಯಗಳನ್ನು ನಂಬುವುದನ್ನು, ನಾವು ನಮ್ಮಲ್ಲಿರುವ ಟ್ಯಾಲೆಂಟನ್ನು ನಂಬುವುದನ್ನು ಆತ್ಮವಿಶ್ವಾಸ ಎನ್ನುತ್ತೇವೆ. Believing in yourself, Believing in your abilities, Believing in talent is the Self confidence. ನಮ್ಮ ಮೇಲೆ ನಮಗೇ ವಿಶ್ವಾಸವಿಲ್ಲವೆಂದ್ಮೇಲೆ ಈ ನಮ್ಮ ಶ್ವಾಸಕ್ಕೆ ಬೆಲೆಯೇನು? ಮೊದಲು ನಮ್ಮನ್ನು ನಾವು ನಂಬಬೇಕು. ಮೊದಲು ನಿಮ್ಮನ್ನು ನೀವು ನಂಬಿ. ಮೊದಲು ನಿಮ್ಮನ್ನು ನೀವು ನಂಬಿದರೆ ಆಮೇಲೆ ಈ ಜಗತ್ತು ನಿಮ್ಮನ್ನು ನಂಬುತ್ತದೆ. ಅನುಮಾನದ ಹೆಜ್ಜೆಗಳು ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ನೀವು ಧೈರ್ಯವಾಗಿ ಮುನ್ನುಗುವುದನ್ನು ಕಲಿಯಬೇಕು. ಅದಕ್ಕಾಗಿ ನೀವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲೇಬೇಕು. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕೆಲವು ಸುಲಭ ಸೂತ್ರಗಳು ಇಲ್ಲಿವೆ.
ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು 11 ಸುಲಭ ಸೂತ್ರಗಳು :
೧) ನೀವು ಯಾವುದಕ್ಕೆ ಹೆದರುತ್ತಿರೋ ಅದನ್ನೊಮ್ಮೆ ಮಾಡಿ ಮುಗಿಸಿ ಬಿಡಿ. ನಿಮ್ಮನ್ನು ಹೆದರಿಸುವ ಸಂಗತಿಯನ್ನು ಧೈರ್ಯವಾಗಿ ಫೇಸ್ ಮಾಡಿ. ಉದಾಹರಣೆಗಾಗಿ ನಿಮಗೆ ನೀರಿನಿಂದ ಭಯವಾಗುತ್ತಿದ್ದರೆ ಈಜು ಕಲಿತು ಬಿಡಿ. ನಿಮಗೆ ಪಬ್ಲಿಕಲ್ಲಿ ಮಾತನಾಡಲು ಭಯವಾಗುತ್ತಿದ್ದರೆ ಒಮ್ಮೆ ಧೈರ್ಯ ಮಾಡಿ ಸ್ಟೇಜ್ ಮೇಲತ್ತಿ ಮಾತಾಡಿ, ನಿಮ್ಮ ಭಯ ಮಂಗಮಾಯವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
೨) ನಿಮ್ಮ ದೇಹದ ಕಡೆಗೆ ಸರಿಯಾಗಿ ಗಮನ ಹರಿಸಿ. ದಿನಾಲು ವರ್ಕೌಟ್ ಮಾಡಿ. ಎಕ್ಸರಸೈಜ್ ಮಾಡಿ. ಯೋಗ ಪ್ರಾಣಾಯಾಮಗಳನ್ನು ಮಾಡಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಟರಾಗಿ. ಸದೃಢವಾದ ದೇಹದಲ್ಲಿಯೇ ಸದೃಢವಾದ ಮನಸ್ಸಿರುತ್ತದೆ ಎಂಬುದನ್ನು ಮರೆಯದಿರಿ.
೩) ನಿಮ್ಮ ಕೆಲಸದ ಬಗ್ಗೆ ಸರಿಯಾಗಿ ಪ್ರಿಪೇರ್ ಆಗಿ. ನಿಮ್ಮ ಕೆಲಸವನ್ನು ಅಥವಾ ಕಲೆಯನ್ನು ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡಿ. ನೀವು ಪ್ರ್ಯಾಕ್ಟೀಸ್ ಮಾಡಿದಷ್ಟು ಪರಫೇಕ್ಟ ಆಗುತ್ತೀರಿ. ಚೆನ್ನಾಗಿ ಪ್ರಿಪೇರ ಆಗಿ ಮತ್ತು ವ್ಯರ್ಥ ಕಾಲಹರಣ ಮಾಡದೇ ಆ್ಯಕ್ಷನಗಳನ್ನು ತೆಗೆದುಕೊಳ್ಳಿ. ಸೋತರೂ ಪರವಾಗಿಲ್ಲ ಮತ್ತೆಮತ್ತೆ ಪ್ರಯತ್ನಿಸಿ. ನಿಮ್ಮexperienceನ್ನು ಹೆಚ್ಚಿಸಿಕೊಳ್ಳಿ. ಒಳ್ಳೆಯ ಅನುಭವ ಕೆಟ್ಟ ಅನುಭವಗಳಿಂದಲೇ ಬರುತ್ತದೆ ಎಂಬುದನ್ನು ಮರೆಯದಿರಿ.
೪) ನಿಮ್ಮಲ್ಲಿರುವ ನೆಗೆಟಿವಿಟಿಯನ್ನು ಸಾಯಿಸಿ, ಪಾಸಿಟಿವಿಟಿಯನ್ನು ಹೆಚ್ಚಿಸಿ. ನಕಾರಾತ್ಮಕ ವಸ್ತುಗಳಿಂದ, ವ್ಯಕ್ತಿಗಳಿಂದ ದೂರವಿರಿ. ಒಂದು ಪಾಸಿಟಿವ ಆ್ಯಟಿಟುಡನ್ನು ಬೆಳೆಸಿಕೊಳ್ಳಿ. ನಿಮ್ಮ ಸಮಸ್ಯೆಗಳಿಗೆ ಹೆದರಿ ಹಿಂದೆ ಸರಿಯಬೇಡಿ. ನಿಮ್ಮ ಸಮಸ್ಯೆಗಳೆಡೆಗೆ ಸ್ಮೈಲ್ ಮಾಡಿ ಅವುಗಳನ್ನು ಧೈರ್ಯವಾಗಿ ಎದುರಿಸಿ.
೫) ಪ್ರತಿದಿನ ಕನ್ನಡಿ ಮುಂದೆ ನಿಂತುಕೊಂಡು ನಿಮ್ಮಷ್ಟಕ್ಕೆ ನೀವು ಮಾತನಾಡಿ. ನಿಮ್ಮ ಎರಡು ಕೈಗಳನ್ನು ನಿಮ್ಮ ಸೊಂಟದ ಮೇಲಿರಿಸಿಕೊಂಡು ನಿಂತು ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಂಡು ಮಾತಾಡಿ. ಇದರಿಂದ ನಿಮ್ಮಲ್ಲಿರುವ ಕೀಳರಿಮೆ, ಗುಪ್ತ ಭಯ, ನಾಚಿಕೆ ಸ್ವಭಾವಗಳೆಲ್ಲವು ದೂರಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
೬) ಮೊದಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ. ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಅಂದಾಜಿಸಿ. ಎಲ್ಲರಿಗೂ ಒಂದಲ್ಲ ಒಂದು ರೀತಿಯ ವಿಕ್ನೆಸಗಳು ಇದ್ದೇ ಇರುತ್ತವೆ. ನಿಮ್ಮ ವಿಕ್ನೇಸಗಳಿಗೆ ಕೊರಗದೆ ನಿಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ಫೋಕಸ್ ಮಾಡಿ. ನಿಮ್ಮ ಶಕ್ತಿ ಸಾಮರ್ಥ್ಯದ ಮೇಲೆ ನಂಬಿಕೆಯಿಡಿ.
೭) ಮೊದಲಿಗೆ ದೊಡ್ಡ ಟಾರ್ಗೆಟಗಳನ್ನು ಇಟ್ಟುಕೊಳ್ಳಬೇಡಿ. ಮೊದಲಿಗೆ ಸಣ್ಣಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ. ಆ ಗುರಿಗಳನ್ನು ಸಾಧಿಸಿ. ನಂತರ ನಿಮ್ಮ ಗೆಲುವನ್ನು ಸಂಭ್ರಮಿಸಿ. ನಿಮ್ಮನ್ನು ನೀವು ಅಪ್ರಿಸಿಯೇಟ ಮಾಡಿಕೊಳ್ಳಿ. ನಿಮ್ಮ ಬೆನ್ನನ್ನು ನೀವೇ ಚಪ್ಪರಿಸಿಕೊಳ್ಳಿ. First keep small targets. Achieve them and celebrate your success. ಈ ರೀತಿ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಕ್ರಮೇಣವಾಗಿ ವೃದ್ಧಿಯಾಗುತ್ತದೆ.
೮) ಎಲ್ಲ ಮೂಲಗಳಿಂದ ಜ್ಞಾನವನ್ನು ಸಂಪಾದಿಸಿ. ಯಾವುದೇ ಕಾರಣಕ್ಕೂ ಕಲಿಯುವುದನ್ನು ನಿಲ್ಲಿಸದಿರಿ. ದಿನಾಲು ಹೊಸ ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳಿ. ಹೊಸಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಹೊಸಹೊಸ ಸ್ಕೀಲಗಳನ್ನು ಕಲಿಯಿರಿ. ನಿಮ್ಮ ಕಮ್ಯುನಿಕೇಷನ ಸ್ಕೀಲನ್ನು, ಬಾಡಿ ಲಾಂಗ್ವೇಜನ್ನು ಇಂಪ್ರೂವ್ ಮಾಡಿಕೊಳ್ಳಿ.
೯) ನಿಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳಿಂದ, ವಸ್ತುಗಳಿಂದ inspirationನ್ನು ಪಡೆದುಕೊಳ್ಳಿ. ಯಾವಾಗಲೂ ಫಿಟ್ ಆ್ಯಂಡ್ ಆ್ಯಕ್ಟೀವ ಆಗಿರಿ. ನಿಮಗೆ ಸ್ಪೂರ್ತಿ ಕೊಡುವ ಸಿನಿಮಾಗಳನ್ನು ನೋಡಿ, ಹಾಡುಗಳನ್ನು ಕೇಳಿ, ಕಥೆಕವನಗಳನ್ನು ಓದಿ. ನಿಮ್ಮನ್ನು ಮೋಟಿವೆಟ್ ಮಾಡುವ ವಿಡಿಯೋಗಳನ್ನು ನೋಡಿ.
೧೦) ನಿಮ್ಮನ್ನು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಳ್ಳುವುದನ್ನು ನಿಲ್ಲಿಸಿ. ನೀವು ನೀವಾಗಿರಲು ಪ್ರಯತ್ನಿಸಿ. ನೀವು ಸಾಮಾನ್ಯರಲ್ಲ, ನೀವು ಮಾಸ್ಟರಪೀಸ್ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಜಗತ್ತು ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಆತ್ಮತೃಪ್ತಿಗಾಗಿ, ಖುಷಿಗಾಗಿ ಖುಷಿಯಿಂದ ನೀವು ನಿಮ್ಮ ಕೆಲಸ ಮಾಡಿ. ಫಲಿತಾಂಶವನ್ನು ಬಿಟ್ಟು ಬಿಡಿ.
೧೧) ಬದಲಾಯಿಸಲು ಸಾಧ್ಯವಿರದ ಸಂಗತಿಗಳನ್ನು ಸುಮ್ಮನೆ ಒಪ್ಪಿಕೊಂಡು ಬಿಡಿ. ಉದಾಹರಣೆಗಾಗಿ ನೀವು ಕಪ್ಪಗಿದ್ದೀರಿ, ಕುಳ್ಳಗಿದ್ದೀರಿ ಎಂದು ನೀವು ಹಿಂಜರಿಕೆ ಪಟ್ಟುಕೊಳ್ಳುತ್ತಿದ್ದರೆ ಈಗಲೇ ಆ ರೀತಿ ಮಾಡುವುದನ್ನು ನಿಲ್ಲಿಸಿ. ನಿಮ್ಮ ಯಶಸ್ಸು ನಿಮ್ಮ ಕೆಲಸದ ಮೇಲೆ ನಿರ್ಧಾರಿತವಾಗುತ್ತದೆಯೋ ಹೊರತು ನಿಮ್ಮ ಸೌಂದರ್ಯದ ಮೇಲಲ್ಲ. ಸಾಧಿಸೋಕೆ ಸೌಂದರ್ಯ, ಸಂಪತ್ತು, ಸ್ನೇಹಿತರ ಸಹಾಯ, ಸಂಬಂಧಿಕರ ಸಲಹೆಗಳಾವುವು ಬೇಕಾಗಿಲ್ಲ. ಸಾಧಿಸೋಕೆ ಬೇಕಾಗಿರುವುದು ಛಲ ಮತ್ತು ಮನೋಬಲ ಮಾತ್ರ. ಅದಕ್ಕಾಗಿ ನಿಮ್ಮ ಕೀಳರಿಮೆ ಬಿಟ್ಟು ಕೆಲಸ ಮಾಡಲು ಪ್ರಾರಂಭಿಸಿ.
ಇವಿಷ್ಟು ಸಲಹೆಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಾಕೆನಿಸುತ್ತವೆ. ಇವೆಲ್ಲ ನನ್ನ ವೈಯಕ್ತಿಕ ಅನುಭವಗಳು. ಆದರೆ ನೀವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಖಂಡಿತ ಇವು ಪ್ರಯೋಜನಕ್ಕೆ ಬರುತ್ತವೆ. ಹೆದರಿಕೊಂಡು ನೂರು ವರ್ಷ ಬದುಕುವುದಕ್ಕಿಂತ ಧೈರ್ಯವಾಗಿ ಆತ್ಮವಿಶ್ವಾಸದಿಂದ ಒಂದು ದಿನ ಬದುಕುವುದು ಹೆಮ್ಮೆಯ ವಿಷಯ. ಆದ್ದರಿಂದ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಆತ್ಮವಿಶ್ವಾಸದೊಂದಿಗೆ ಧೈರ್ಯವಾಗಿ ಮುಂದೆ ಸಾಗಿ. All the Very Best and Thanks you...