ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? : How to Read Girl's Mind by her Body language in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? : How to Read Girl's Mind by her Body language in Kannada

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language in Kannada

                                         ಅದ್ಯಾಕೋ ಗೊತ್ತಿಲ್ಲ, ಹರೆಯ ಬಂದಾಗ ನಮ್ಮ ಹುಡುಗರಿಗೆ ಮನಸ್ಸಿನ ಮೇಲೆ ಹತೋಟಿ ಸಿಗಲ್ಲ. ಕುಡಿ ಮೀಸೆ ಬಂದಾಗ ಕಾಣೋ ಕನಸುಗಳಿಗೆ ಕಡಿವಾಣ ಇರಲ್ಲ. ಯೌವ್ವನದಲ್ಲಿ ನನಗೂ ಒಬ್ಬಳು ಪ್ರೇಯಸಿ ಇರಬೇಕು ಅಂತಾ ಎಲ್ಲ ಯುವಕರು ಆಸೆ ಪಡ್ತಾರೆ. ಇನ್ನು ಪ್ರೇಯಸಿ ಇದ್ದವರು ಅವಳ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಳ್ಳೋಕೆ ಒದ್ದಾಡ್ತಾರೆ. ಹುಡುಗಿಯರು ಒಂಥರಾ ಮೌನ ದೇವತೆಯರು. ಅವರ ಮಾತಿಗಿಂತ ಮೌನವೇ ಹೆಚ್ಚು ಮಾತಾಡುತ್ತದೆ. ಹುಡುಗಿಯರು ಒಂಥರಾ ನೀರಿನಲ್ಲಿ ಚಲಿಸುವ ಹಾವಿದ್ದಂಗೆ. ಅಷ್ಟು ಸುಲಭವಾಗಿ ಅವರ ಚಲನವಲನಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಮನಶಾಸ್ತ್ರಜ್ಞರಿಗೆ ಅದು ಸ್ವಲ್ಪ ಮಟ್ಟಿಗೆ ಸಾಧ್ಯವಿದೆ. ಅವರು ಮನುಷ್ಯನ ದೇಹದ ಭಾಷೆಯ ಮೂಲಕ ಅಂದರೆ ಬಾಡಿ ಲಾಂಗ್ವೇಜ್ ಮೂಲಕ ಮನಸ್ಸಿನ ಮಾತನ್ನು ತಿಳಿಯಲು ಕೆಲವೊಂದಿಷ್ಟು ಟಿಪ್ಸಗಳನ್ನು ಕೊಟ್ಟಿದ್ದಾರೆ. ಅವು ಹುಡುಗಿಯರಿಗೂ ಅನ್ವಯಿಸುತ್ತವೆ. So ಹುಡುಗಿಯರ ಮನಸ್ಸಿನ ಮಾತನ್ನು ತಿಳಿಯಲು ಕೆಲವೊಂದಿಷ್ಟು ಉಪಾಯಗಳು ಇಲ್ಲಿವೆ ;

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೧) ಕಣ್ಣುಗಳು ಮನಸ್ಸಿನ ಕೈಗನ್ನಡಿಯಾಗಿವೆ. ನಿಮ್ಮೊಂದಿಗೆ ಮಾತನಾಡುತ್ತಿರುವ ಹುಡುಗಿಯ ಕಣ್ಣು ಗುಡ್ಡೆಗಳು ವಿಕಸಿತವಾಗಿದ್ದಾರೆ (Stretched) ಅವಳು ನಿಮ್ಮಡೆಗೆ ಆಕರ್ಷಿತಳಾಗಿದ್ದಾಳೆ ಎಂದರ್ಥ. 

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

ಅವಳ ಕಣ್ಣು ಗುಡ್ಡೆಗಳು ಎಡ ಮೇಲ್ಭಾಗದಲ್ಲಿದ್ದರೆ (At Left Upper Side) ಅವಳು ಏನನ್ನೋ ನೆನಪಿಸಿಕೊಳ್ಳುತ್ತಿದ್ದಾಳೆ ಎಂದರ್ಥ. ಅವಳ ಕಣ್ಣುಗುಡ್ಡೆಗಳು ಬಲ ಮೇಲ್ಭಾಗದಲ್ಲಿದ್ದರೆ (At Right Upper Side) ಅವಳು ಏನನ್ನೋ ಕಲ್ಪಿಸಿಕೊಳ್ಳುತ್ತಿದ್ದಾಳೆ ಎಂದರ್ಥ. ಈ ಸಂದರ್ಭದಲ್ಲಿ ಆಕೆ ಸುಳ್ಳೇಳುವ ಸಾಧ್ಯತೆ ಅಧಿಕವಾಗಿರುತ್ತದೆ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

 ಯಾವುದಾದರೂ ಹುಡುಗಿ ನಿಮ್ಮ ಕಣ್ಣಲಿ ಕಣ್ಣಿಟ್ಟು ಮಾತನಾಡಿದರೆ ಅಂದರೆ Eye Contact ಮಾಡಿದರೆ ಅವಳು ನಿಮ್ಮೊಂದಿಗೆ ಮಾತನಾಡುವಲ್ಲಿ ಆಸಕ್ತಿ ಹೊಂದಿದ್ದಾಳೆ ಎಂದರ್ಥ. ಒಂದು ವೇಳೆ ಅದೇ ಹುಡುಗಿ Eye Contact ಮಾಡದಿದ್ದರೆ ಅವಳಿಗೆ ನಿಮ್ಮೊಂದಿಗೆ ಮಾತನಾಡಲು ಆಸಕ್ತಿ ಇಲ್ಲವೆಂದರ್ಥ. ಅವಳು ನಿಮ್ಮೊಂದಿಗೆ ಅನಕಂಫರ್ಟೆಬಲ್ ಆಗಿದ್ದಾಳೆ ಎಂದರ್ಥ. ಅವಳು ನಿಮ್ಮನ್ನು ಗುರಾಯಿಸಿದರೆ ಅವಳು ಕೋಪದಲ್ಲಿದ್ದಾಳೆ ಎಂದರ್ಥ. 

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

ಅವಳ ಕಣ್ಣ ರೆಪ್ಪೆಗಳು ಅಬನಾರ್ಮಲಾಗಿ ಬಡಿಯುತ್ತಿದ್ದರೆ ಅವಳು ಟೆನ್ಶನಲ್ಲಿದ್ದಾಳೆ ಎಂದರ್ಥ. ಅವಳು ತನ್ನ ಕಣ್ಣ ರೆಪ್ಪೆಗಳನ್ನು ಬಡಿಯದಂತೆ ತಡೆಯಲು ಪ್ರಯತ್ನಿಸುತ್ತಿದ್ದರೆ ಅವಳು ಅವಳ ಭಾವನೆಗಳನ್ನು ನಿಮ್ಮಿಂದ ಬಚ್ಚಿಡುತ್ತಿದ್ದಾಳೆ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೨) ಯಾವುದಾದರೂ ಹುಡುಗಿ ನಿಮ್ಮೊಂದಿಗೆ ಸಂಭಾಷಣೆಯಲ್ಲಿರುವಾಗ ತನ್ನ ತುಟಿಗಳನ್ನು ಗಟ್ಟಿಯಾಗಿ ಮುಚ್ಚಿದರೆ ಅವಳು ನಿಮ್ಮ ಮಾತುಗಳಿಗೆ ಅಸಹಮತಳಾಗಿದ್ದಾಳೆ ಎಂದರ್ಥ. ಅವಳು ತನ್ನ ತುಟಿಗಳನ್ನು ಕಚ್ಚಿಕೊಳ್ಳುತ್ತಿದ್ದರೆ ಅವಳು ಟೆನ್ಶನಲ್ಲಿದ್ದಾಳೆ ಎಂದರ್ಥ. ಒಂದು ವೇಳೆ ಅವಳು ತನ್ನ ಕೈಬೆರಳುಗಳಿಂದ ತನ್ನ ತುಟಿಗಳನ್ನು ಮುಚ್ಚುತ್ತಿದ್ದರೆ ಅವಳು ತನ್ನ ಭಾವನೆಗಳನ್ನು ನಿಮ್ಮಿಂದ ಮುಚ್ಚಿಡುತ್ತಿದ್ದಾಳೆ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೩) ಯಾವುದಾದರೂ ಹುಡುಗಿ ನಿಮ್ಮೊಂದಿಗೆ ಮಾತನಾಡುವಾಗ ಗಟ್ಟಿಯಾಗಿ ಕೈಮುಷ್ಟಿ ಮಾಡಿದರೆ ಅವಳಿಗೆ ಕೋಪ ಬಂದಿದೆ ಎಂದರ್ಥ. ಇಲ್ಲವೇ ಅವಳು ಟೆನ್ಶನಲ್ಲಿದ್ದಾಳೆ ಎಂದರ್ಥ. ಅದೇ ಹುಡುಗಿ ತನ್ನ ಕೈಗಳನ್ನು ಕಟ್ಟಿ ಮಾತಾಡುತ್ತಿದ್ದರೆ ಅವಳು ರಿಸರ್ವ್ಡ ಆಗಿದ್ದಾಳೆ ಎಂದರ್ಥ. ಅವಳಿಗೆ ತನ್ನ ಸೆಕ್ರೆಟ್ಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸಕ್ತಿ ಇಲ್ಲವೆಂದರ್ಥ. ಅವಳಿಗೆ ನಿಮ್ಮೊಂದಿಗೆ ಹೆಚ್ಚಿಗೆ ಮಾತನಾಡಲು ಮನಸ್ಸಿಲ್ಲ ಎಂದರ್ಥ. ಅದೇ ಹುಡುಗಿ ತನ್ನ ಕೈಬೆರಳುಗಳನ್ನು ಮುರಿದುಕೊಳ್ಳುತ್ತಿದ್ದರೆ ಅಥವಾ ಅವುಗಳಿಂದ ಪಕ್ಕದಲ್ಲಿರುವ ವಸ್ತುಗಳಿಗೆ ಹೊಡೆಯುತ್ತಿದ್ದರೆ ಅವಳಿಗೆ ನಿಮ್ಮ ಮಾತುಗಳಿಂದ ಬೇಸರವಾಗಿದೆ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೪) ಯಾವುದಾದರೂ ಹುಡುಗಿ ಅತ್ಯಂತ ಹತ್ತಿರದಲ್ಲಿ ಬಂದು ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ಅವಳು ನಿಮ್ಮೊಂದಿಗೆ ಫುಲ್ಲಿ ಕಂಫರ್ಟೇಬಲ್ ಆಗಿದ್ದಾಳೆ ಎಂದರ್ಥ. ಅವಳು ನಿಮ್ಮನ್ನು ಅತಿಯಾಗಿ ನಂಬುತ್ತಾಳೆ, ಯಾವಾಗಲೂ ನಿಮ್ಮೊಂದಿಗಿರಲು ಆಸೆ ಪಡ್ತಾಳೆ ಎಂದರ್ಥ. ಸಾಮಾನ್ಯವಾಗಿ ನಿಮ್ಮ ಪ್ರೇಯಸಿ ಅಥವಾ ಮಡದಿ ಮಾತ್ರ ಇಷ್ಟು ಸನಿಹ ಬಂದು ನಿಮ್ಮೊಂದಿಗೆ ಮಾತನಾಡುತ್ತಾಳೆ. ಯಾವುದಾದರೂ ಹುಡುಗಿ ಸ್ವಲ್ಪ ದೂರದಲ್ಲಿ ನಿಂತು ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ಅವಳು ನಿಮ್ಮೊಂದಿಗೆ ಸ್ವಲ್ಪ ಕಂಫರ್ಟೇಬಲ್ ಆಗಿದ್ದಾಳೆ ಎಂದರ್ಥ. ಅವಳು ನಿಮಗೆ ಬೆಸ್ಟ ಫ್ರೆಂಡ್ ಆಗಬಹುದು. ಅದೇ ಹುಡುಗಿ ನಿಮ್ಮಿಂದ ಬಹುದೂರದಲ್ಲಿ ನಿಂತು ಮಾತನಾಡುತ್ತಿದ್ದರೆ ಅವಳು ನಿಮ್ಮೊಂದಿಗೆ ಅನಕಂಫರ್ಟೇಬಲ್ ಆಗಿದ್ದಾಳೆ ಎಂದರ್ಥ. ಅವಳು ನಿಮಗೆ ಜಸ್ಟ ಫ್ರೆಂಡ್ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೫) ನಿಮ್ಮೊಂದಿಗೆ ಮಾತನಾಡುತ್ತಿರುವ ಹುಡುಗಿಯ ನಗು ಕೇವಲ ಒಂದೆರಡು ಸೆಕೆಂಡುಗಳಿಗಷ್ಟೇ ಸೀಮಿತವಾಗಿದ್ದರೆ ಅವಳು ಕೋಪ ಮಾಡಿಕೊಂಡಿದ್ದಾಳೆ ಅಥವಾ ದು:ಖದಲ್ಲಿದ್ದಾಳೆ ಎಂದರ್ಥ. ಅವಳ ನಗು 3ರಿಂದ 6 ಸೆಕೆಂಡುಗಳಿಗೆ ಸೀಮಿತವಾದರೆ ಅವಳು ತೋರಿಕೆಗೆ ನಗುತ್ತಿದ್ದಾಳೆ ಎಂದರ್ಥ. ಅವಳ ನಗು 6 ಸೆಕೆಂಡುಗಳಿಗಿಂತಲೂ ಹೆಚ್ಚಾದರೆ ಅವಳು ನಿಜವಾಗಿಯೂ ಖುಷಿಯಾಗಿ ಮನಸ್ಸಿನಿಂದ ನಗುತ್ತಿದ್ದಾಳೆ ಎಂದರ್ಥ. ಅವಳು ನಗುವಾಗ ಅವಳ ಕಣ್ಣುಗಳ ಕೆಳಗೆ ಕ್ರಿಂಕಲ್ಸ ಮೂಡಿದರೆ ನಿಜವಾಗಿಯೂ ಖುಷಿಯಾಗಿದ್ದಾಳೆ ಎಂದರ್ಥ. ಒಂದು ವೇಳೆ ಕ್ರಿಂಕಲ್ಸ ಮೂಡದಿದ್ದರೆ ಅವಳು ತೋರಿಕೆಗೆ ನಗುತ್ತಿದ್ದಾಳೆ, ಖುಷಿಯಾಗಿಲ್ಲ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೬) ಯಾವುದಾದರೂ ಹುಡುಗಿ ನಿಮ್ಮೊಂದಿಗೆ ಮಾತನಾಡುವಾಗ ಎದೆ ಸೆಟಿಸಿ ನಿಂತರೆ ಅವಳಿಗೆ ನಿಮ್ಮೊಂದಿಗೆ ಮಾತನಾಡುವ ಆಸಕ್ತಿ ಇಲ್ಲವೆಂದರ್ಥ. ಅವಳಿಗೆ ಅಹಂಕಾರಯಿದೆ ಎಂದರ್ಥ. ಒಂದು ವೇಳೆ ಅವಳೆದೆ ಮುಂದೆ ಬಾಗಿದ್ದರೆ ಅವಳು ನಿಮ್ಮೊಂದಿಗೆ ಮಾತನಾಡುವಲ್ಲಿ ಆಸಕ್ತಿ ಹೊಂದಿದ್ದಾಳೆ, ನಿಮ್ಮನ್ನು ನಂಬುತ್ತಾಳೆ ಎಂದರ್ಥ.  ಒಂದು ವೇಳೆ ಅವಳೆದೆ ಹಿಂದೆ ಬಾಗಿದ್ದರೆ ಅವಳು ಆತಂಕದಲ್ಲಿದ್ದಾಳೆ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

೭) ಒಂದು ವೇಳೆ ನಿಮ್ಮೊಂದಿಗೆ ಮಾತನಾಡುತ್ತಿರುವ ಹುಡುಗಿ ನಿಮ್ಮ ಹಾವಭಾವಗಳನ್ನು ಅಂದರೆ ಬಾಡಿ ಗೆಸ್ಚರ್ಸ ಮತ್ತೆ ಪೋಸ್ಚರ್ಸಗಳನ್ನು ಕಾಪಿ ಮಾಡುತ್ತಿದ್ದರೆ ಅವಳು ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದರ್ಥ. ಒಂದು ವೇಳೆ ನಿಮ್ಮೊಂದಿಗೆ ಮಾತನಾಡುತ್ತಿರುವ ಹುಡುಗಿ ತನ್ನ ತಲೆಗೂದಲುಗಳೊಂದಿಗೆ ಆಟವಾಡುತ್ತಿದ್ದರೆ ಅವಳು ನಿಮ್ಮ ವಿಷಯದಲ್ಲಿ ಓಪನ ಮೈಂಡೆಡ್ ಆಗಿದ್ದಾಳೆ ಎಂದರ್ಥ. ಅವಳು ನಿಮ್ಮನ್ನು ಲೈಕ್ ಮಾಡುತ್ತಾಳೆ ಎಂದರ್ಥ. ಅದೇ ಹುಡುಗಿ ಒಂದು ವೇಳೆ ತನ್ನ ಕೂದಲುಗಳನ್ನು ಅನಾವಶ್ಯಕವಾಗಿ ಸರಿ ಮಾಡಿಕೊಳ್ಳುತ್ತಿದ್ದರೆ ಇಲ್ಲವೇ ತಲೆ ಕೆರೆದುಕೊಳ್ಳುತ್ತಿದ್ದರೆ ಅವಳು ನರ್ವಸ್ ಆಗಿದ್ದಾಳೆ ಎಂದರ್ಥ. ನಿಮ್ಮಿಂದ ಬೇಗನೆ ದೂರ ಹೋಗಲು ಯತ್ನಿಸುತ್ತಿದ್ದಾಳೆ ಎಂದರ್ಥ.

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

            ಇದೀಷ್ಟು ಹುಡುಗಿಯ ಮನಸ್ಸಿನ ಮಾತನ್ನು ತಿಳಿದುಕೊಳ್ಳಲು ಕೆಲವೊಂದಿಷ್ಟು ಉಪಾಯಗಳು. ಆದರೆ ಒಂದು ಕಿವಿಮಾತು. ನೀವು ಅವಳ ಮನಸ್ಸಿನ ಮಾತನ್ನು ತಿಳಿದುಕೊಳ್ಳುವುದಕ್ಕಾಗಿ ಅವಳಿಗೆ ಅನುಮಾನ ಬರುವ ರೀತಿಯಲ್ಲಿ ಅವಳನ್ನು ಗಮನಿಸಿ ಅವಳಿಂದ ಬೈಯ್ಯಿಸಿಕೊಳ್ಳಬೇಡಿ ಅಷ್ಟೇ. ನೀವು ಅವಳ ಹಾವಭಾವಗಳನ್ನು ಗಮನಿಸುತ್ತಿರುವುದು ನಿಮಗಷ್ಟೇ ಗೊತ್ತಿರಬೇಕು. ಈ ಅಂಕಣ ಇಷ್ಟವಾಗಿದ್ದರೆ ತಪ್ಪದೆ ಇದನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ. ಪ್ರತಿದಿನ ಇದೇ ರೀತಿ ಇಂಟರೆಸ್ಟಿಂಗಾಗಿರೋ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು, ಜೀವನ ಕಥೆಗಳನ್ನು, ಬ್ಯುಸಿನೆಸ್ ಟಿಪ್ಸಗಳನ್ನು ಉಚಿತವಾಗಿ ಓದಲು ಫೇಸ್ಬುಕ್, ಇನಸ್ಟಾಗ್ರಾಮ, ಟ್ವೀಟರ್ ಹಾಗೂ ಯುಟ್ಯೂಬಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ. (Search as Director Satishkumar and Roaring Creations)

ಹುಡುಗಿಯ ಮನಸ್ಸಿನ ಮಾತನ್ನು ತಿಳಿಯುವುದು ಹೇಗೆ? How to Read Girl's Mind by her Body language? in Kannada

Blogger ನಿಂದ ಸಾಮರ್ಥ್ಯಹೊಂದಿದೆ.