ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

                            ಎದುರಿಗಿರುವ ಮನುಷ್ಯನ ಮನಸ್ಸಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳುವ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಆ ಮನುಷ್ಯ ಬಾಯ್ಬಿಚ್ಚಿ ತನ್ನ ಮನಸ್ಸಲ್ಲೇನಿದೆ ಎಂಬುದನ್ನು ಹೇಳುವುದಿಲ್ಲ. ಇಂಥ ಸಂದರ್ಭಗಳಲ್ಲಿ ಅವನ ಬಾಡಿ ಲಾಂಗ್ವೇಜ್ ಪ್ರಯೋಜನಕ್ಕೆ ಬರುತ್ತದೆ. ಹೌದು ಗೆಳೆಯರೇ, ಎದುರಿಗಿರುವ ವ್ಯಕ್ತಿ ತುಟಿ ಬಿಚ್ಚಿ ಏನನ್ನೂ ಮಾತಾಡದಿದ್ದರೂ ನಾವು ಅವನ ಬಾಡಿ ಲಾಂಗ್ವೇಜ್ ಮೂಲಕ ಅವನ ಮನಸ್ಸಲ್ಲಿರುವ ಮಾತುಗಳನ್ನು ತಿಳಿದುಕೊಳ್ಳಬಹುದು. ಹೇಗೆ ಅಂತೀರಾ? ಈ ಅಂಕಣವನ್ನು ಗಮನವಿಟ್ಟು ಓದಿ...

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 1 :  ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣುಗಳ ಚಲನವಲನಗಳ ಮೂಲಕ ನಾವು ಅವರ ಮನಸ್ಸಿನ ಮಾತುಗಳನ್ನು ತಿಳಿದುಕೊಳ್ಳಬಹುದು. ಷೇಕ್ಸ್‌ಪಿಯರ್ ಹೇಳಿದಂತೆ ಕಣ್ಣುಗಳು ಮನಸ್ಸಿನ ಕಿಟಕಿಗಳಾಗಿವೆ. ಅವು ಮನಸ್ಸಿನ ಕನ್ನಡಿಯಾಗಿವೆ.
ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada
* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮೊಂದಿಗೆ Eye Contact ಮಾಡಿದರೆ ಅವರಿಗೆ ನಿಮ್ಮೊಂದಿಗೆ ಮಾತನಾಡಲು ಆಸಕ್ತಿಯಿದೆ ಎಂದರ್ಥ. ಒಂದು ವೇಳೆ ಅವರು ನಿಮ್ಮೊಂದಿಗೆ Eye Contact ಮಾಡದಿದ್ದರೆ ಅವರಿಗೆ ನಿಮ್ಮೊಂದಿಗೆ ಮಾತನಾಡಲು ಅಷ್ಟೊಂದು ಆಸಕ್ತಿ ಇಲ್ಲ ಅಥವಾ ಅವರು Uncomfortable ಆಗಿದ್ದಾರೆ ಎಂದರ್ಥ. ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮನ್ನು ಒಂದೇ ಸಮನೆ ಗುರಾಯಿಸುತ್ತಿದ್ದರೆ ಅವರಿಗೆ ನಿಮ್ಮ ಮೇಲೆ ಕೋಪವಿದೆ ಅಥವಾ ಕೆಟ್ಟ ಉದ್ದೇಶವಿದೆ ಎಂದರ್ಥ. ಈ ಪಾಯಿಂಟ್ ನಿಮಗೆ ಅರ್ಥವಾಗದಿದ್ದರೆ "ಕಣ್ಣಿನಲ್ಲಿ ಕಣ್ಣನ್ನಿಟ್ಟು ನೋಡಬಾರದೆ, ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೇ..." ಹಾಡನ್ನು ಒಮ್ಮೆ ನೆನಪಿಸಿಕೊಳ್ಳಿ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣು ಕುಡ್ಡೆಗಳು (Eye Balls) ವಿಕಸಿತವಾಗಿದ್ದರೆ ಅಂದರೆ ಹಿಗ್ಗಿದ್ದರೆ ಅವರು ನಿಮ್ಮೆಡೆಗೆ ಆಕರ್ಷಿತರಾಗಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣು ಗುಡ್ಡೆಗಳು ಎಡ ಮೇಲ್ಭಾಗದ ಕಡೆಗೆ (Left Upper Side) ಚಾಚಿದ್ದರೆ ಎದುರಿಗಿರುವ ವ್ಯಕ್ತಿ ಏನನ್ನೋ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದರ್ಥ. ಒಂದು ವೇಳೆ ಆ ವ್ಯಕ್ತಿಯ ಕಣ್ಣು ಗುಡ್ಡೆಗಳು ಬಲ ಮೇಲ್ಭಾಗದ ಕಡೆಗೆ (Right Upper Side) ಚಾಚಿದ್ದರೆ ಎದುರುಗಡೆ ಇರುವ ವ್ಯಕ್ತಿ ಏನನ್ನೋ ಕಲ್ಪಿಸಿಕೊಳ್ಳುತ್ತಿದ್ದಾನೆ ಎಂದರ್ಥ. ಈ ಸಂದರ್ಭದಲ್ಲಿ ಆ ವ್ಯಕ್ತಿ ಸುಳ್ಳುಗಳನ್ನು ಹೇಳುವ ಸಾಧ್ಯತೆ ಅಧಿಕವಾಗಿರುತ್ತದೆ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣ ರೆಪ್ಪೆಗಳು ಅಬನಾರ್ಮಲ್ಲಾಗಿ ಬಡಿಯುತ್ತಿದ್ದರೆ ಅವರು ಟೆನ್ಶನಲ್ಲಿದ್ದಾರೆ ಎಂದರ್ಥ. ಒಂದು ವೇಳೆ ಅವರು ಕಣ್ಣ ರೆಪ್ಪೆಗಳನ್ನು ಬಡಿಯದಂತೆ ತಡೆಯುತ್ತಿದ್ದರೆ ಅವರು ತಮ್ಮ ಭಾವನೆಗಳನ್ನು ನಿಮ್ಮಿಂದ ಮುಚ್ಚಿಡುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 2 :  ತುಟಿಗಳು ಬಡಿದಾಗ ಮಾತುಗಳು ಹೊರ ಬರುತ್ತವೆ. ಆದರೆ ಅವು ಬಡಿಯದಿದ್ದರೂ ಅವು ಮನಸ್ಸಿನಲ್ಲಿರುವ ಮಾತುಗಳನ್ನು ವ್ಯಕ್ತಪಡಿಸುತ್ತವೆ.

* ನೀವು ಮಾತನಾಡುವಾಗ ನಿಮ್ಮ ಎದುರಿಗಿರುವ ವ್ಯಕ್ತಿ ತುಟಿಗಳನ್ನು ಗಟ್ಟಿಯಾಗಿ ಮುಚ್ಚಿದರೆ ಅವರಿಗೆ ನಿಮ್ಮ ಮಾತಿನಲ್ಲಿ ಸಹಮತವಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುವಾಗ ಎದುರಿಗಿರುವ ವ್ಯಕ್ತಿ ಪದೇ ಪದೇ ತುಟಿಗಳನ್ನು ಕಚ್ಚಿಕೊಳ್ಳುತ್ತಿದ್ದರೆ ಅವರು ಟೆನ್ಶನ ಅಥವಾ ಸ್ಟ್ರೇಸಲ್ಲಿದ್ದಾರೆ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಪದೇಪದೇ ತನ್ನ ಕೈಗಳಿಂದ ತುಟಿಗಳನ್ನು ಮುಚ್ಚುತ್ತಿದ್ದರೆ ಅವರು ನಿಮ್ಮಿಂದ ಅವರ ಭಾವನೆಗಳನ್ನು ಬಚ್ಚಿಡುತ್ತಿದ್ದಾರೆ ಎಂದರ್ಥ. ಅವರು ನಿಮ್ಮಿಂದ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 3 : ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕೈಗಳ ಚಲನವಲನಗಳನ್ನು ಗಮನಿಸುವ ಮೂಲಕ ನಾವು ಅವರ ಮನಸ್ಸಿನ ಮಾತನ್ನು ತಿಳಿದುಕೊಳ್ಳಬಹುದು.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ತನ್ನ ಕೈಗಳಷ್ಟು ಗಟ್ಟಿಯಾಗಿ ಮುಷ್ಟಿ ಮಾಡಿದರೆ ಅವರು ಕೋಪದಲ್ಲಿದ್ದಾರೆ, ಟೆನ್ಶನಲ್ಲಿದ್ದಾರೆ ಎಂದರ್ಥ.

* ಯಾರಾದರೂ ನಿಮ್ಮೊಂದಿಗೆ ಕೈಕಟ್ಟಿ ಮಾತಾಡುತ್ತಿದ್ದರೆ (With Folded Hands) ಅವರು ಡಿಫೆನ್ಸಸಿವ್ ಹಾಗೂ ರಿಸರ್ವ್ಡ ಆಗಿದ್ದಾರೆ ಎಂದರ್ಥ. ಅವರಿಗೆ ತಮ್ಮ ಸೆಕ್ರೆಟ್ಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸಕ್ತಿಯಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಮಾತನಾಡುತ್ತಾ ಹಿಂದೆ ಕೈ ಕಟ್ಟಿದ್ದರೆ ಅವರು ಬೋರ್ ಆಗಿದ್ದಾರೆ, ಅವರಿಗೆ ನಿಮ್ಮ ಮಾತಿನಲ್ಲಿ ಆಸಕ್ತಿಯಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ತಮ್ಮ ಕೈಬೆರಳುಗಳನ್ನು ಮುರಿದುಕೊಳ್ಳುತ್ತಿದ್ದರೆ, ಅವುಗಳಿಂದ ಪಕ್ಕದಲ್ಲಿರುವ ವಸ್ತುಗಳಿಗೆ ಬಡಿಯುತ್ತಿದ್ದರೆ ಅವರು ದು:ಖದಲ್ಲಿದ್ದಾರೆ, ಅವಸರದಲ್ಲಿದ್ದಾರೆ ಇಲ್ಲವೇ ಬೇಸರದಲ್ಲಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 4 : ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಾಲುಗಳ ಹಾವಭಾವ, ಸ್ಥಾನಗಳನ್ನು ಗಮನಿಸುವ ಮೂಲಕ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಾಲುಗಳ ಪೋಸಿಷನ್  V ಶೇಪಲ್ಲಿದ್ದರೆ ಅವರು Extrovert ಆಗಿದ್ದಾರೆ ಎಂದರ್ಥ. ಅವರು ಎಲ್ಲರನ್ನು ಸೆಳೆಯುವ ವ್ಯಕ್ತಿತ್ವದವರಾಗಿದ್ದಾರೆ ಎಂದರ್ಥ. ಅವರು ಎಲ್ಲರೊಂದಿಗೆ ಮಾತನಾಡಲು, ಬೆರೆಯಲು ಹಂಬಲಿಸುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ಯಾರಾದರೂ ನಿಮ್ಮೊಂದಿಗೆ ತಮ್ಮ ಕಾಲುಗಳನ್ನು ಒಟ್ಟಿಗೆ ಜೋಡಿಸಿ ಸ್ಟ್ರೇಟಾಗಿ ನಿಂತು ಮಾತಾಡುತ್ತಿದ್ದರೆ ಅವರು ರಿಸರ್ವ್ಡ ಆಗಿದ್ದಾರೆ ಎಂದರ್ಥ. ಅವರಿಗೆ ಯಾರೊಂದಿಗೆ ಬೆರೆಯುವ ಮನಸ್ಸಿಲ್ಲ ಎಂದರ್ಥ. ಕಾಟಾಚಾರಕ್ಕೆ ಮಾತಾಡುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತಾನಾಡುತ್ತಿರುವ ವ್ಯಕ್ತಿಯ ಕಾಲುಗಳ ಸ್ಥಾನ ಅಂದರೆ ಪೋಸಿಷನ್ A ಶೇಪಲ್ಲಿದ್ದರೆ ಅವರು Introvert ಆಗಿದ್ದಾರೆ ಎಂದರ್ಥ. ಅವರಿಗೆ ಅತಿಯಾದ ನಾಚಿಕೆ ಸ್ವಭಾವಯಿದೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಾಲುಗಳು ಒಪನ್ ಪೋಸಿಷನಲ್ಲಿದ್ದರೆ ಅವರು ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಅವರು ಸಿಚುವೇಷನನ್ನು ಕಂಟ್ರೋಲ್ ಮಾಡಲು ಕಾಯುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ಯಾರಾದರೂ ನಿಮ್ಮೊಂದಿಗೆ ತಮ್ಮ ಕಾಲುಗಳನ್ನು ಕೆಳಗಡೆ ಜೋತು ಬಿಟ್ಟುಕೊಂಡು ಮಾತಾಡುತ್ತಿದ್ದರೆ ಅವರು Introvert ಅಥವಾ ನಾಚಿಕೆ ಸ್ವಭಾವದವರು ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ಯಾರಾದರೂ ನಿಮ್ಮೆದುರು ಕಾಲ ಮೇಲೆ ಕಾಲಾಕಿಕೊಂಡು ಕುಳಿತು ಮಾತನಾಡುತ್ತಿದ್ದರೆ ಅವರು ಕಾನ್ಫಿಡೆಂಟಾಗಿದ್ದರೆ ಎಂದರ್ಥ. ಇಲ್ಲವೇ ಅವರು ಅಹಂಕಾರಿಗಳೆಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 5 : ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗಳು ನಮ್ಮಿಂದ ಎಷ್ಟು ದೂರದಲ್ಲಿ ನಿಂತು ಮಾತನಾಡುತ್ತಿದ್ದಾರೆ ಎಂಬುದರ ಮೇಲೆ ನಾವು ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬಹುದು.

* ಯಾರಾದರೂ ನಿಮಗೆ ಅಂಟಿಕೊಂಟು ಇಲ್ಲವೇ 6ರಿಂದ 12 ಇಂಚುಗಳ ಅಂತರದಲ್ಲಿದ್ದುಕೊಂಡು ಮಾತನಾಡುತ್ತಿದ್ದರೆ ಅವರು ನಿಮಗೆ ಅತ್ಯಂತ ಕ್ಲೋಸಾಗಿದ್ದಾರೆ ಎಂದರ್ಥ. ಅವರು ನಿಮ್ಮೊಂದಿಗೆ ಫುಲ್ಲಿ ಕಂಫರ್ಟೇಬಲ್ ಆಗಿದ್ದಾರೆ ಎಂದರ್ಥ. ನಿಮ್ಮ ಲವರ್ ಇಲ್ಲವೇ ಲೈಫ್ ಪಾರ್ಟನರ್ ಮಾತ್ರ ನಿಮ್ಮೊಂದಿಗೆ ಇಷ್ಟು ಸನಿಹದಲ್ಲಿ ನಿಂತು ಮಾತನಾಡಲು ಸಾಧ್ಯ.

* ಯಾರಾದರೂ ನಿಮ್ಮೊಂದಿಗೆ 2 ರಿಂದ 4 ಫೂಟಗಳ ಅಂತರದಲ್ಲಿದ್ದುಕೊಂಡು ಮಾತನಾಡುತ್ತಿದ್ದರೆ ಅವರು ನಿಮ್ಮೊಂದಿಗೆ ಕಂಫರ್ಟೇಬಲ ಆಗಿದ್ದಾರೆ ಎಂದರ್ಥ. ಸಾಮಾನ್ಯವಾಗಿ ನಿಮ್ಮ ಬೆಸ್ಟ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಮೆಂಬರ್ಸ ನಿಮ್ಮೊಂದಿಗೆ ಇಷ್ಟು ಅಂತರದಲ್ಲಿದ್ದುಕೊಂಡು ಮಾತನಾಡುತ್ತಾರೆ.

* ಯಾರಾದರೂ ನಿಮ್ಮೊಂದಿಗೆ ಅತ್ಯಂತ ದೂರದಲ್ಲಿದ್ದುಕೊಂಡು ಮಾತನಾಡುತ್ತಿದ್ದರೆ ಅವರು ನಿಮ್ಮೊಂದಿಗೆ ಅನಕಂಪರ್ಟೇಬಲ ಆಗಿದ್ದಾರೆ ಎಂದರ್ಥ. ಅವರು ನಿಮಗೆ ಜಸ್ಟ ಫ್ರೆಂಡ್ಸಾಗಿದ್ದಾರೆ ಎಂದರ್ಥ. ಇಲ್ಲವೇ ಅವರು ನಿಮಗೆ ಅಪರಿಚಿತರು ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 6 :  ಒಬ್ಬ ವ್ಯಕ್ತಿ ನಗುವ ರೀತಿಯಿಂದ ನಾವು ಅವರ ಮನಸ್ಸಲ್ಲಿರುವ ಮಾತನ್ನು ತಿಳಿದುಕೊಳ್ಳಬಹುದು. ನಗೆಯಲ್ಲಿ ಹಗೆಯ ಸಂಚಿರುತ್ತೆ, ನಗೆಯಲ್ಲಿ ನೋವಿನ ಸಂತೆಯಿರುತ್ತೆ ಎಂಬುದನ್ನು ಮರೆಯದಿರಿ.

* ನಿಮ್ಮ ಎದುರಿಗಿರುವ ವ್ಯಕ್ತಿ ನಕ್ಕಾಗ ಅವರ ಕಣ್ಣುಗಳ ಕೆಳಗೆ ಕ್ರಿಂಕಲ್ಸ (Crinkles) ಮೂಡಿದರೆ ಅವರು ನಿಜವಾಗಿಯೂ ಸಂತೋಷದಿಂದ ನಗುತ್ತಿದ್ದಾರೆ ಎಂದರ್ಥ. ಅವರದ್ದು ರಿಯಲ್ ಸ್ಮೈಲ್ ಎಂದರ್ಥ. ಒಂದು ವೇಳೆ ಕ್ರಿಂಕಲ್ಸಗಳು ಮೂಡದಿದ್ದರೆ ಅವರು ತೋರಿಕಗೆ ನಗುತ್ತಿದ್ದಾರೆ ಎಂದರ್ಥ. ಅವರದ್ದು ಫೇಕ್ ಸ್ಮೈಲ್ ಎಂದರ್ಥ.

* ಒಬ್ಬ ವ್ಯಕ್ತಿಯ ನಗು 1ರಿಂದ 2 ಸೆಕೆಂಡುಗಳಿಗೆ ಸೀಮಿತವಾದರೆ ಅವರು ದು:ಖ ಅಥವಾ ಕೋಪದಲ್ಲಿದ್ದಾರೆ ಎಂದರ್ಥ.

* ಒಬ್ಬ ವ್ಯಕ್ತಿ 3 ರಿಂದ 6 ಸೆಕೆಂಡಗಳ ತನಕ ನಕ್ಕರೆ ಅವರು ತೋರಿಕೆಗೆ ನಗುತ್ತಿದ್ದಾರೆ ಎಂದರ್ಥ.

* ಒಬ್ಬ ವ್ಯಕ್ತಿಯ ನಗು 6 ಸೆಕೆಂಡುಗಳ ನಂತರವೂ ಮುಂದುವರೆದರೆ ಅವರು ನಿಜವಾಗಿಯೂ ಮನಸ್ಸತುಂಬಿ ಸಂತೋಷದಿಂದ ನಗುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 7 :  ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಎದೆಯ ಹಾವಭಾವದ ಮೇಲೆ ನಾವು ಅವರ ಅಭಿಮತವನ್ನು ತಿಳಿದುಕೊಳ್ಳಬಹುದು.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಎದೆ ಸೆಟೆಸಿ ನಿಂತಿದ್ದರೆ ಅವರು ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದರ್ಥ. ಅವರಿಗೆ ನಿಮ್ಮ ಮಾತಲ್ಲಿ ಹೆಚ್ಚಿನ ಆಸಕ್ತಿ ಇಲ್ಲವೇ ಸಹಮತವಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಎದೆ ಮುಂದೆ ಬಾಗಿದ್ದರೆ ಅವರು ನಿಮ್ಮ ಮಾತನ್ನು ನಂಬುತ್ತಾರೆ ಎಂದರ್ಥ. ಅವರಿಗೆ ನಿಮ್ಮೊಂದಿಗೆ ಮಾತನಾಡಲು ಆಸಕ್ತಿ ಇದೆ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಎದೆ ಸ್ವಲ್ಪ ಹಿಂದೆ ಬಾಗಿದ್ದಾರೆ ಅವರು ಭಯದಲ್ಲಿದ್ದಾರೆ, ಆತಂಕದಲ್ಲಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 8 : ಒಬ್ಬ ವ್ಯಕ್ತಿಯ ಬಾಡಿ ಪೋಸ್ಚರ್ಸ (Postures) ಮತ್ತು ಗೆಸ್ಚರ್ಸಗಳ (Gestures) ಮೂಲಕ ನಾವು ಕೆಲವೊಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.

* ಒಬ್ಬ ವ್ಯಕ್ತಿ ಬೆಂಟಾಗಿ ನಡೆಯುತ್ತಿದ್ದರೆ ಅಂದರೆ ಬಾಗಿ ನಡೆಯುತ್ತಿದ್ದರೆ ಅವರು ನರ್ವಸ್ ಆಗಿದ್ದಾರೆ ಎಂದರ್ಥ. ಅದೇ ವ್ಯಕ್ತಿ ಪುಟಿಯುತ್ತಾ ಅಂದರೆ ಬೌನ್ಸಾಗುತ್ತಾ ನಡೆಯುತ್ತಿದ್ದರೆ ಅವರು ಖುಷಿಯಲ್ಲಿದ್ದಾರೆ, ಎಕ್ಸೈಟ್ ಆಗಿದ್ದಾರೆ ಎಂದರ್ಥ.

* ಒಬ್ಬ ವ್ಯಕ್ತಿ ಭುಜಗಳನ್ನು ಸ್ಟ್ರೇಟಾಗಿಟ್ಟುಕೊಂಡು ನಡೆಯುತ್ತಿದ್ದರೆ ಅವರು ಕಾನ್ಫಿಡಂಟಾಗಿದ್ದಾರೆ ಎಂದರ್ಥ. ಅದೇ ವ್ಯಕ್ತಿ ತೋಳುಗಳನ್ನು ಜೋತು ಬೀಳಿಸಿಕೊಂಡು ನಡೆಯುತ್ತಿದ್ದರೆ ಅವರು ಕಾನ್ಫಿಡೆಂಟಾಗಿಲ್ಲ ಎಂದರ್ಥ. ಅವರಿಗೆ ಅವರ ಮೇಲೆ ನಂಬಿಕೆ ಇಲ್ಲವೆಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮ ಗೆಸ್ಚರ್ಸಗಳನ್ನು ಕಾಪಿ ಮಾಡುತ್ತಿದ್ದರೆ ಅವರು ನಿಮ್ಮೆಡೆಗೆ ಅಟ್ರ್ಯಾಕ್ಟ ಆಗಿದ್ದಾರೆ ಎಂದರ್ಥ. ಅವರು ನಿಮ್ಮೊಂದಿಗೆ ಫ್ಲರ್ಟ ಮಾಡುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 9 :  ಹೆಚ್ಚಾಗಿ ಹುಡುಗಿಯರು ಬೇರೆಯವರೊಂದಿಗೆ ಮಾತನಾಡುವಾಗ ತಮ್ಮ ಕೂದಲುಗಳೊಂದಿಗೆ ಆಟವಾಡುತ್ತಿರುತ್ತಾರೆ ಅದಕ್ಕೂ ಕೆಲವು ಅರ್ಥಗಳಿವೆ.

ಯಾರಾದರೂ ನಿಮ್ಮೊಂದಿಗೆ ಮಾತನಾಡುವಾಗ ತಮ್ಮ ತಲೆಗೂದಲುಗಳೊಂದಿಗೆ ಆಟವಾಡುತ್ತಿದ್ದರೆ ಅವರು ಓಪನ ಮೈಡೆಂಡ್ ಆಗಿದ್ದಾರೆ ಎಂದರ್ಥ. ಅವರಿಗೆ ನಿಮ್ಮಲ್ಲಿ ಇಂಟರೆಸ್ಟ್ ಇದೆ ಎಂದರ್ಥ. ಅದೇ ವ್ಯಕ್ತಿ ನಿಮ್ಮೊಂದಿಗೆ ಮಾತನಾಡುವಾಗ ಕೂದಲುಗಳನ್ನು ಸರಿ ಮಾಡಿಕೊಳ್ಳುವುದಾಗಲಿ ಅಥವಾ ತಲೆ ಕೆರೆದುಕೊಳ್ಳುವುದನ್ನಾಗಲಿ ಮಾಡುತ್ತಿದ್ದರೆ ಅವರು ನರ್ವಸ್ ಆಗಿದ್ದಾರೆ ಎಂದರ್ಥ. ಅವರು ನಿಮ್ಮಿಂದ ಬೇಗನೆ ದೂರ ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 10 :  ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಹ್ಯಾಂಡಶೇಕ್ ಮಾಡಿದಾಗಲೂ ಸಹ ನೀವು ಅವರ ಇಂಟನೆಷನನ್ನು ತಿಳಿದುಕೊಳ್ಳಬಹುದು.

ಯಾರಾದರೂ ನಿಮ್ಮೊಂದಿಗೆ ಸ್ಟ್ರಾಂಗಾಗಿ ಹ್ಯಾಂಡಶೇಕ್ ಮಾಡಿದರೆ ಅವರು ಕ್ಲೋಸ್ ಪ್ರಾಮಿಸ್ ಮಾಡುತ್ತಿದ್ದಾರೆ, ಕಮ್ಮಿಟ್ಟಾಗಿದ್ದಾರೆ ಎಂದರ್ಥ. ಅದೇ ವ್ಯಕ್ತಿ ವೀಕಾಗಿ ಹ್ಯಾಂಡಶೇಕ್ ಮಾಡಿದರೆ ಅವರಿಗೆ ನಿಮ್ಮ ಡೀಲಲ್ಲಿ ನಂಬಿಕೆ ಅಥವಾ ಆಸಕ್ತಿ ಇಲ್ಲವೆಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

ಟ್ರಿಕ್ - 11 :  ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಧ್ವನಿಯ ಏರಿಳಿತದ ಮೇಲೆ ನೀವು ಅವರ ಮನಸ್ಸನ್ನು ಅರಿಯಬಹುದು.

ಯಾರಾದರೂ ನಿಮ್ಮೊಂದಿಗೆ ಏರಿದ ಧ್ವನಿಯಲ್ಲಿ ಕಾನ್ಫಿಡೆಂಟಾಗಿ ಮಾತನಾಡುತ್ತಿದ್ದರೆ ಅವರು ನಿಜ ಹೇಳುತ್ತಿದ್ದಾರೆ ಎಂದರ್ಥ.

ಯಾರಾದರೂ ನಿಮ್ಮೊಂದಿಗೆ ತಗ್ಗಿದ ಧ್ವನಿಯಲ್ಲಿ ಮುಖ ತೋರಿಸದೆ ಮಾತಾಡುತ್ತಿದ್ದರೆ ಅವರು ಸುಳ್ಳೇಳುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

           ಬೇರೆಯವರ ಮನಸ್ಸಿನ ಮಾತನ್ನು ತಿಳಿದುಕೊಳ್ಳುವುದಕ್ಕಾಗಿ ಅವರ ಬಾಡಿ ಲಾಂಗ್ವೇಜನ್ನು ಅನುಮಾನಾಸ್ಪದವಾಗಿ ಗಮನಿಸಿ ಅವರಿಂದ ಮುಖಕ್ಕೆ ಮಂಗಳಾರುತಿ ಮಾಡಿಸಿಕೊಳ್ಳಬೇಡಿ. ಹುಡುಗಿಯರೊಂದಿಗೆ ಮಾತನಾಡುವಾಗ ಅವರ ಬಾಡಿ ಲಾಂಗ್ವೇಜನ್ನು ಕೆಟ್ಟ ಅರ್ಥ ಬರುವಂತೆ ಗಮನಿಸಿ ಅವರಿಂದ ಚಪ್ಪಲಿ ಸೇವೆ ಮಾಡಿಸಿಕೊಳ್ಳಬೇಡಿ. ನೀವು ಅವರ ಬಾಡಿ ಲಾಂಗ್ವೇಜನ್ನು ಗಮನಿಸುತ್ತಿರುವುದು ನಿಮ್ಮೆದುರಿಗಿರುವ ವ್ಯಕ್ತಿಗೆ ಗೊತ್ತಾಗಬಾರದು. ಆ ರೀತಿ ನಿಮ್ಮ ನೋಟ ಇರಬೇಕು. ಇದೀಷ್ಟು ಬಾಡಿ ಲಾಂಗ್ವೇಜ ಮೂಲಕ ಬೇರೆಯವರ ಮನಸ್ಸಿನ ಮಾತನ್ನು ತಿಳಿದುಕೊಳ್ಳುವ ಉಪಾಯಗಳು. ಇವೆಲ್ಲ ಉಪಾಯಗಳನ್ನು ನಾನು ಮನಶಾಸ್ತ್ರದ ಕೆಲವು ಪುಸ್ತಕಗಳನ್ನು, ಅಂಕಣಗಳನ್ನು, ರಿಸರ್ಚ್ ಜರ್ನಲಗಳನ್ನು ಓದಿ ತಿಳಿದುಕೊಂಡಿರುವೆ. ಇದರಲ್ಲಿ ನನ್ನ ಸ್ವಂತಿಕೆ ಏನು ಇಲ್ಲ. ಈ ಅಂಕಣ ಇಷ್ಟ ಆಗಿದ್ದರೆ ತಪ್ಪದೇ ಇದನ್ನು ಲೈಕ್ ಮತ್ತು ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಪ್ರತಿದಿನ ಇಂಟರೆಸ್ಟಿಂಗಾಗಿರುವ ಅಂಕಣಗಳನ್ನು, ಪ್ರೇಮಕಥೆ, ಜೀವನಕಥೆ ಹಾಗೂ ಕವನಗಳನ್ನು ಓದಲು ತಪ್ಪದೆ ಫೇಸ್ಬುಕ್, ಇನಸ್ಟಾಗ್ರಾಮ, ಟ್ವೀಟರ್, ಪೆಟ್ರಿಯಾನ ಹಾಗೂ ಯುಟ್ಯೂಬಗಳಲ್ಲಿ ನನ್ನನ್ನು (Search as Director Satishkumar) ಫಾಲೋ ಮಾಡಿ....

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in KannadaBlogger ನಿಂದ ಸಾಮರ್ಥ್ಯಹೊಂದಿದೆ.