ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

            ಹಾಯ್ ಗೆಳೆಯರೇ, ನಿಮಗೆ ಯಾರಾದರೂ "ನಾನು ಮಂಗಳ ಗ್ರಹದ ಮೇಲೆ ಬದುಕುತ್ತೇನೆ, ಅಲ್ಲಿಯೇ ಜೀವನ ನಡೆಸುತ್ತೇನೆ, ಅಲ್ಲಿಯೇ ಸಾಯುತ್ತೇನೆ" ಎಂದೇಳಿದರೆ ನೀವು ಖಂಡಿತ ಅವರಿಗೆ ತಲೆ ಕೆಟ್ಟಿದೆ ಅಂತಾ ಅನ್ಕೋತ್ತೀರಿ ತಾನೇ? ಅಂಥವರ ಪಟ್ಟಿಗೇನೆ ಇವತ್ತಿನ ಅಂಕಣದ ಹೀರೋ ಈಲಾನ್ ಮಸ್ಕ (Elon Musk) ಸೇರಿಕೊಳ್ಳುತ್ತಾರೆ. ಆರ್ಡಿನರಿ ಮನುಷ್ಯರಿಗೆ ಈಲಾನ್ ಮಸ್ಕ ಒಬ್ಬ ಹುಚ್ಚನಂತೆಯೇ ಕಾಣಿಸುತ್ತಾರೆ. ಏಕೆಂದರೆ ಅವರ ಕನಸುಗಳು, ಕೆಲಸಗಳು ಆ ರೀತಿಯಿವೆ. ಜಗತ್ತು ಅಸಾಧ್ಯವೆಂದು ನಂಬಿದ್ದ ಹಲವು ಸಂಗತಿಗಳನ್ನು ಅವರು ಸಾಧ್ಯವಾಗಿಸಿದ್ದಾರೆ. ಉದಾಹರಣೆಗಾಗಿ ಆನಲೈನ್ ಮನಿ ಟ್ರಾಂಜ್ಯಾಕ್ಷನಗಾಗಿ ಪೇಪಾಲ್ (PayPal), ಖಾಸಗಿ ಉದ್ಯಮದಿಂದ ಯಶಸ್ವಿ ಮಂಗಳಯಾನಕ್ಕಾಗಿ ಸ್ಪೇಸಎಕ್ಸ (SpaceX) ಹಾಗೂ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಅವರ ಮಹಾನ ಕೆಲಸಗಳನ್ನು ಸಾಬೀತುಪಡಿಸಲು ಸಾಕು. ನವೀಕರಿಸಬಲ್ಲ ಶಕ್ತಿಯ ಮೂಲಗಳನ್ನು ತಯಾರಿಸುವ ಮತ್ತು ಬಳಸುವ ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸುವುದು, ಮಂಗಳ ಗ್ರಹದ ಜನ ಜೀವನ ಪ್ರಾರಂಭಿಸುವುದು ಈಲಾನ್ ಮಸ್ಕರ ಸದ್ಯದ ಕನಸುಗಳಾಗಿವೆ.

ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

                 ಸದ್ಯಕ್ಕೆ ಈಲಾನ್ ಮಸ್ಕ್ SpaceX, Tesla Motors, Hyperloop, Solarcity, The Boring Company, Neuralink ಮತ್ತು Open AIಗಳಂಥ ದೈತ್ಯ ಕಂಪನಿಗಳ Co-Founder and CEO ಆಗಿದ್ದಾರೆ. ಎಷ್ಟೋ ಜನರಿಗೆ ಇರೋ ಒಂದು ಕೆಲ್ಸಾನೆ ಸರಿಯಾಗಿ ಮಾಡಲು ಬರಲ್ಲ. ಅಂಥದರಲ್ಲಿ ಈಲಾನ್ ಮಸ್ಕ್ ಒಂದಲ್ಲ, ಎರಡಲ್ಲ ಒಟ್ಟು 7 ಕಂಪನಿಗಳ CEO ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುಂಚೆ ಇವರು Zip2, X.Com ಮತ್ತು PayPalಗಳಂಥ ಕಂಪನಿಗಳ Co Founder and CEO ಆಗಿದ್ದರು. ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಈಲಾನ್ ಮಸ್ಕ ಜಗತ್ತಿನ ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 21 ಸ್ಥಾನವನ್ನು ಅಲಂಕರಿಸಿದ್ದಾರೆ. ಜೊತೆಗೆ ಜಗತ್ತಿನ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ 54ನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಈಲಾನ್ ಮಸ್ಕ್ ಅಸಾಧ್ಯ ಸಂಗತಿಗಳ ಸಾಧಕ ಎಂಬುದರಲ್ಲಿ ಎರಡು ಮಾತಿಲ್ಲ. ಬನ್ನಿ ಅವರ ಬಗ್ಗೆ ಇನ್ನಷ್ಟು ಡಿಟೇಲಾಗಿ ತಿಳಿದುಕೊಳ್ಳೋಣಾ.


ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

            ಈಲಾನ್ ಮಸ್ಕರ ಜನನ 1971ರ ಜೂನ್ 28ರಂದು ಸೌಥ ಆಫ್ರಿಕಾದ ಪ್ರಿಟೋರಿಯಾದಲ್ಲಾಯಿತು. (Pretoria) ಅವರ ತಾಯಿ ಮಾಯೆ ಮಸ್ಕ್ (Maye Musk) ಕೆನಡಾ ಮೂಲದ ಮಾಡೆಲ್ ಹಾಗೂ ಡೈಟಿಷಿಯನ್ ಆಗಿದ್ದರು. ಅವರ ತಂದೆ ಎರಾಲ್ ಮಸ್ಕ್ (Errol Musk) ಸೌಥ ಆಫ್ರಿಕನ ಎಲೆಕ್ಟ್ರೋಮ್ಯಾಕೆನಿಕಲ್ ಇಂಜಿನಿಯರ್, ಪೈಲೆಟ್ ಹಾಗೂ ಸೇಲರ್ (Sailor) ಆಗಿದ್ದರು. ಈಲಾನ್ ಮಸ್ಕರಿಗೆ ಚಿಕ್ಕಂದಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಅವರು ದಿನದಲ್ಲಿ 10ರಿಂದ 12 ಗಂಟೆಗಳ ಕಾಲ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಿದ್ದರು. ಅವರ ಆರಂಭಿಕ ಶಿಕ್ಷಣ ಪ್ರಿಟೋರಿಯಾದ ಬಾಯ್ಸ ಹೈಸ್ಕೂಲಿನಲ್ಲಾಯಿತು. ಚಿಕ್ಕಂದಿನಲ್ಲಿ ಅವರು ಬಹಳ ನಾಚಿಕೆ ಸ್ವಭಾವವುಳ್ಳ ಹುಡುಗನಾಗಿದ್ದರು. ಶಾಲೆಯಲ್ಲಿ ಕೆಲ ಹುಡುಗರು ಅವರನ್ನು ಎಳೆದಾಡಿ ಮೆಟ್ಟಿಲುಗಳ ಮೇಲಿಂದ ಕೆಳ ತಳ್ಳಿ ಅವರನ್ನು ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಅವರು ತಮ್ಮಷ್ಟಕ್ಕೆ ತಾವೇ ಕಂಪ್ಯೂಟರ್ ಪ್ರೋಗಾಮಿಂಗನ್ನು ಕಲಿತರು. I mean he is self taught computer programmer. ಅವರು ತಮ್ಮ 10ನೇ ವಯಸ್ಸಿನಲ್ಲಿ "Blaster" ಎಂಬ ವಿಡಿಯೋ ಗೇಮನ್ನು ಡಿಸೈನ್ ಮಾಡಿ ಅದನ್ನು ಸ್ಥಳೀಯ ಮ್ಯಾಗಜೀನವೊಂದಕ್ಕೆ 500 ಡಾಲರಗಳಿಗೆ ಮಾರಿದ್ದರು. ಬಾಲ್ಯದಿಂದಲೇ ಅವರು ಪ್ರತಿಭಾಶಾಲಿಯಾಗಿ ಹೊರ ಹೊಮ್ಮಿದರು.
ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ
                    ಆವಾಗಿನ ಕಾಲದಲ್ಲಿ ಎಲ್ಲ ನವ ಯುವಕರು ಸೌಥ ಆಫ್ರಿಕನ ಆರ್ಮಿಗೆ ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಆದರೆ ಈಲಾನ್ ಮಸ್ಕರಿಗೆ ಸೈನ್ಯ ಸೇರುವುದು ಒಂಚೂರು ಇಷ್ಟವಿರಲಿಲ್ಲ. ಅವರಿಗೆ ಓದುವ ಹಂಬಲವಿತ್ತು. ಅದಕ್ಕಾಗಿ ಅವರು ತಮ್ಮ ತಂದೆಯ ವಿರೋಧದ ನಡುವೆಯು 17ನೇ ವಯಸ್ಸಿನಲ್ಲಿ ತಮ್ಮ ತಾಯಿಯ ತವರು ದೇಶ ಕೆನಡಾಗೆ ತೆರಳಿದರು. ಅಲ್ಲಿನ Queen's Universityಗೆ ಸೇರಿಕೊಂಡರು. ನಂತರ University of Pennsylvaniaದಲ್ಲಿ Commerce and Physicsನಲ್ಲಿ ಡ್ಯುಯಲ ಡಿಗ್ರಿ ಮಾಡಿದರು. ನಂತರ ಅವರು ತಮ್ಮ PhD ವಿದ್ಯಾಭ್ಯಾಸಕ್ಕಾಗಿ ಅಮೆರಿಕಾದ Stanford Universityಯನ್ನು ಸೇರಿಕೊಂಡರು. ಆದರೆ ಎರಡನೇ ದಿನಕ್ಕೇನೆ ಕಾಲೇಜ್ ಡ್ರಾಪೌಟ್ ಮಾಡಿದರು. ಆವಾಗ ಹೊಸದಾಗಿ ಮಾರುಕಟ್ಟೆಗೆ ಕಾಲಿಟ್ಟು ಜೋರಾಗಿ ಸದ್ದು ಮಾಡುತ್ತಿದ್ದ ಇಂಟರನೆಟ್ ಬೂಮ್ ಅವರನ್ನು ಆಕರ್ಷಿಸಿತು. ಅದಕ್ಕಾಗಿ ಅವರು ಕಾಲೇಜ ಬಿಟ್ಟು ನೇರವಾಗಿ ಬ್ಯುಸಿನೆಸ್ ಫೀಲ್ಡಿಗೆ ಇಳಿದರು.


ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

                 1995ರಲ್ಲಿ ಈಲಾನ್ ಮಸ್ಕ್ ತಮ್ಮ ಸೋದರ ಕಿಂಬಲನೊಂದಿಗೆ ಸೇರಿ Zip2 ಕಂಪನಿಯನ್ನು ಪ್ರಾರಂಭಿಸಿದರು. Zip2 ಒಂದು Web Software ಕಂಪನಿಯಾಗಿತ್ತು. ಅದನ್ನವರು ಆ್ಯಂಜೆಲ್ ಇನ್ವೇಸ್ಟರಗಳ ಹಣದಿಂದ ಪ್ರಾರಂಭಿಸಿದ್ದರು. Zip2 ಕಂಪನಿ The NewYork Times and Chicago Tribuneಗಳಂಥ ನ್ಯೂಸಪೇಪರಗಳಿಗೆ ಇಂಟರನೆಟ್ ಸೀಟಿ ಗೈಡಾಗಿ ಕೆಲಸ ಮಾಡಿತು. ಈಲಾನ್ ಮಸ್ಕ್ Zip2ನ CEO ಆಗಬೇಕು ಎನ್ನುವಷ್ಟರಲ್ಲಿ ಬೋರ್ಡ ಆಫ್ ಡೈರೆಕ್ಟರಗಳು Zip2ವನ್ನು Compaq ಕಂಪನಿಗೆ ಮಾರಿದರು. Zip2 ಕಂಪನಿಯಲ್ಲಿ ಈಲಾನ್ ಮಸ್ಕರದ್ದು 7% ಶೇರ್ ಇತ್ತು. ಹೀಗಾಗಿ ಅವರಿಗೆ ಒಟ್ಟು 22 ಮಿಲಿಯನ್ ಡಾಲರಗಳಷ್ಟು ಹಣ ದೊರಕಿತು.


ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

                                 1999ರಲ್ಲಿ ಈಲಾನ್ ಮಸ್ಕ್ 10 ಮಿಲಿಯನ್ ಡಾಲರಗಳನ್ನು ಹೂಡಿಕೆ ಮಾಡಿ X.com ಎಂಬ Online Financial Service ಕಂಪನಿ ತೆಗೆದರು. ಒಂದು ವರ್ಷದ ನಂತರ X.com, Confinity ಎಂಬ ಸಾಫ್ಟವೇರ್ ಕಂಪನಿಯೊಂದಿಗೆ ಮಿಲನವಾಯಿತು. ಅನಂತರ X.com ಪೇಪಾಲ್ (PayPal) ಎಂಬ Online Money Transfer Service Tool ಆಗಿ ಬದಲಾಯಿತು. 2002 ರಲ್ಲಿ ಪೇಪಾಲನ್ನು E-Bay ಕಂಪನಿ ಖರೀದಿಸಿತು. ಆಗ CEO ಆದ ಈಲಾನ್ ಮಸ್ಕರಿಗೂ ಹಾಗೂ CTOಗೂ ಒಂದು ಸಣ್ಣ ಮನಸ್ತಾಪ ಬಂದಿತು. ಈಲಾನ್ ಮಸ್ಕ ಪೇಪಾಲನ್ನು ವಿಂಡೋಸನಲ್ಲಿಡಲು ಯೋಜಿಸಿದ್ದರು. ಆದರೆ CTO ಅದನ್ನು Linuxನಲ್ಲಿಡಲು ಬಯಸಿದರು. ಈ ವಿಷಯವಾಗಿ ಅವರ ಮನಸ್ತಾಪ ದೊಡ್ಡದಾಗಿ ವಿವಾದದ ಸ್ವರೂಪ ಪಡೆದುಕೊಂಡಿತು. ಇದರಿಂದಾಗಿ ಅವರಿಗೆ ಪೇಪಾಲನಿಂದ ಹೊರಬರಬೇಕಾಯಿತು. ಆದರೆ  ಈಗ ಅವರ ಶೇರಹೋಲ್ಡ ಜಾಸ್ತಿಯಿತ್ತು. (11.7%) ಹೀಗಾಗಿ ಅವರಿಗೆ 165 ಮಿಲಿಯನ್ ಡಾಲರಗಳಷ್ಟು ಹಣ ಸಂದಾಯವಾಯಿತು. ಇಷ್ಟೊಂದು ಹಣ ಬಂದಾಗ ಅವರು ಅವುಗಳನ್ನು ಬ್ಯಾಂಕಲ್ಲಿಟ್ಟು ಆರಾಮಾಗಿರಬಹುದಿತ್ತು. ಆದರೆ ಅವರು ಹಾಗೆ ಮಾಡದೆ ಮತ್ತೆ ಹೊಸ ಬ್ಯುಸಿನೆಸಗೆ ಕೈ ಹಾಕಿದರು.

ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

           ಈಲಾನ್ ಮಸ್ಕರಿಗೆ ಮಂಗಳ ಗ್ರಹದ ಮೇಲೆ ಯಾಕೆ ಜನ ಜೀವನ ಪ್ರಾರಂಭಿಸಬಾರದು ಎಂಬ ಪ್ರಶ್ನೆ ಹೊಳೆಯಿತು. ಆಗ ಅವರು ಮಂಗಳ ಗ್ರಹದ ಮೇಲೆ ಜನ ಜೀವನ ಪ್ರಾರಂಭಿಸುವೆ, ಗಿಡಮರಗಳನ್ನು ಬೆಳೆಸುವೆ ಎಂದೇಳಿದರು. ಆಗವರು ಎಲ್ಲರ ನಗೆಪಾಟಲಿಗೆ ಒಳಗಾದರು. ಅವರು ಮಂಗಳಯಾನದ ಯೋಜನೆಗಾಗಿ 2002ರಲ್ಲಿ SpaceX ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಅವರು ಮಂಗಳಯಾನಕ್ಕಾಗಿ ಬೇಕಾದ ರಾಕೆಟಗಳನ್ನು ಖರೀದಿಸಲು ರಷ್ಯಾಗೆ ತೆರಳಿದರು. ಆದರೆ ರಷ್ಯಾದ ಕಂಪನಿಗಳು ಒಂದು ರಾಕೆಟಗಾಗಿ 8 ಮಿಲಿಯನ್ ಡಾಲರಗಳಷ್ಟು ಹಣದ ಬೇಡಿಕೆಯಿಟ್ಟವು. ಆದರೆ 8 ಮಿಲಿಯನ್ ಡಾಲರ್ ತುಂಬಾ ದುಬಾರಿ ಮೊತ್ತವಾಗಿತ್ತು. ಅವರು ಬೆಲೆಯನ್ನು ತಗ್ಗಿಸುವಂತೆ ಕೇಳಿಕೊಂಡಾಗ ರಷ್ಯಾ ಕಂಪನಿಗಳು ಅವರ ಮಂಗಳಯಾನ ಪ್ರೊಜೆಕ್ಟನ್ನು ರಿಜೇಕ್ಟ ಮಾಡಿದವು. ಹೀಗಾಗಿ ಅವರು ರಷ್ಯಾದಿಂದ ಬರಿಗೈಯಲ್ಲಿ ಮರಳಿದರು. ಮರಳಿ ಬಂದ ನಂತರ ಅವರು ರಾಕೆಟ್ ಸಾಯಿನ್ಸಗೆ ಸಂಬಂಧಪಟ್ಟ ಪುಸ್ತಕಗಳನ್ನೆಲ್ಲ ಓದಿ ರಾಕೆಟ್ ಸಾಯಿನ್ಸನ್ನು ಕಲಿತರು. He self taught Rocket Science himself. 

ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

             ಅಟೋಮೊಬೈಲಗಳನ್ನು Commercially Viable ಮಾಡಿದ ಹೆನ್ರಿ ಫೋರ್ಡರಿಂದ ಸ್ಪೂರ್ತಿ ಪಡೆದುಕೊಂಡು ಈಲಾನ್ ಮಸ್ಕ್ Space Transportationನ್ನು Commercially Viable ಮಾಡಲು ಮುಂದಾದರು. ಅವರ SpaceX ಕಂಪನಿಯನ್ನಾಗಲಿ, ಮಂಗಳಯಾನವನ್ನಾಗಲಿ ಯಾರು ನಂಬಲಿಲ್ಲ. ಹೀಗಾಗಿ ಅವರು ಒನ್ ಮ್ಯಾನ್ ಆರ್ಮಿಯಾಗಿ ಕೆಲಸ ಪ್ರಾರಂಭಿಸಿದರು. 100 ಮಿಲಿಯನ್ ಡಾಲರಗಳನ್ನು ಸುರಿದು SpaceXಗೆ ಜೀವ ತುಂಬಿದರು. ಪ್ರಾಬ್ಲೆಮ್ ಸಾಲ್ವಿಂಗ್ ವಿಜನ ಹಾಗೂ ಪರವಫುಲ್ ಟೀಮನೊಂದಿಗೆ ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡಿದರು. ಅಂದರೆ ವಾರಕ್ಕೆ ಸರಿಸುಮಾರು 100 ಗಂಟೆಗಳ ಕಾಲ ಕೆಲಸ ಮಾಡಿದರು. ರಾಕೆಟ್ ಸಾಯಿನ್ಸನ ಯಾವುದೇ ಫಾರ್ಮಲ ಎಜುಕೇಶನ್ ಇಲ್ಲದಿದ್ದರೂ Reusable ರಾಕೆಟಗಳನ್ನು ತಯಾರಿಸಿದರು. ಲೋ ಕಾಸ್ಟನಲ್ಲಿ ರಾಕೆಟಗಳನ್ನು ಆರ್ಬಿಟಗೆ ತಲುಪಿಸುವುದು ಮತ್ತದನ್ನು Reuseಗಾಗಿ ಮರಳಿ ಭೂಮಿಗೆ ತರುವುದು ದೊಡ್ಡ ಸವಾಲಾಗಿತ್ತು. ಆದರೆ ಅವರು ಆ ಸವಾಲನಲ್ಲಿ ಗೆದ್ದರು. ಜಗತ್ತಿನ ಮೊಟ್ಟ ಮೊದಲ Reusable ರಾಕೇಟನ್ನು ತಯಾರಿಸಿದ ಖ್ಯಾತಿ ಈಲಾನ್ ಮಸ್ಕ್ರಿಗೆ ಸಲ್ಲುತ್ತದೆ. 

ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

         ಮೊದಲ ಸಲ ಈಲಾನ್ ಮಸ್ಕರವರು ರಾಕೆಟನ್ನು ಮಂಗಳನ ಕಕ್ಷೆಗೆ ಬಿಟ್ಟಾಗ ಅದು ಬೆಂಕಿ ಹತ್ತಿಕೊಂಡು ಉರಿದು ಬೂದಿಯಾಯಿತು. ಎರಡನೆಯ ಸಲ ರಾಕೆಟನ್ನು ಹಾರಿಸಿದಾಗ ಅದು ಆಫ್ ರೂಟಾಯ್ತು. ಮೂರನೇ ಸಲ ರಾಕೆಟನ್ನು ಹಾರಿ ಬಿಟ್ಟಾಗ ಅದು ಮಂಗಳ ಕಕ್ಷೆಗೆ ಹೋಗುತ್ತಿದ್ದಂತೆಯೇ ಆಫ್ ರೂಟಾಯ್ತು. ಸತತ ಮೂರು ಬಾರಿ ಅವರ ಮಂಗಳಯಾನದ ಯೋಜನೆ ವಿಫಲವಾದಾಗ ಅವರು ಆರ್ಥಿಕವಾಗಿ ದಿವಾಳಿತನವನ್ನು ಎದುರಿಸಿದರು. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ಮನೆ ಮಾರಿಕೊಂಡು ಬಾಡಿಗೆ ಮನೆಯಲ್ಲಿ ಇರಲು ಪ್ರಾರಂಭಿಸಿದರು. ಎಲ್ಲ ಕಡೆಗಳಿಂದ ಹಣ ಹೊಂದಿಸಿ ಅದನ್ನು ಮಂಗಳಯಾನದಲ್ಲಿ ಇನ್ವೇಸ್ಟ ಮಾಡಿದರು. ಇಷ್ಟೆಲ್ಲ ಆದರೂ ಅವರು ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಏಕೆಂದರೆ Failure is an option ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅವರು ಧೈರ್ಯ ಮಾಡಿ ನಾಲ್ಕನೆಯ ಬಾರಿಗೆ ಮಂಗಳನ ಕಕ್ಷೆಗೆ ರಾಕೆಟನ್ನು ಹಾರಿಸಿದರು. ಆದರೆ ಈ ಸಲ ಅವರ ರಾಕೆಟ್ ಯಶಸ್ವಿಯಾಗಿ ಮಂಗಳನ ಅಂಗಳವನ್ನು ತಲುಪಿಸಿ ಮತ್ತೆ ಭೂಮಿಗೆ ಮರಳಿ ಬಂದಿತು. ಅವರ ಮಂಗಳಯಾನದ ಯೋಜನೆ ಸಫಲವಾಯಿತು. ಒಂದು ಪ್ರೈವೇಟ್ ಕಂಪನಿ ಸ್ಪೇಸ್ ಟ್ರಾವೆಲನ್ನು ಪ್ರಾರಂಭಿಸುವುದು ಕನಸಿನ ಮಾತಾಗಿತ್ತು. ಆದರೆ ಈಲಾನ್ ಮಸ್ಕ್ ಇದನ್ನು ನಿಜವಾಗಿಸಿ ತೋರಿಸಿದರು. ತದ ನಂತರ ಅವರಿಗೆ ನಾಸಾದಿಂದ 1.5 ಬಿಲಿಯನ್ ಡಾಲರಗಳ ಪ್ರೊಜೆಕ್ಟ ಸಿಕ್ಕಿತು. ಅವರ ಸಂಕಷ್ಟಗಳೆಲ್ಲ ದೂರಾದವು.


ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

          SpaceX ಕಂಪನಿ ಸಕ್ಸೆಸಿನ ಹಾದಿಯಲ್ಲಿ ಸಾಗುತ್ತಿತ್ತು. ಅದೇ ಸಮಯದಲ್ಲಿ ಅಂದರೆ ಫೆಬ್ರುವರಿ 2004ರಲ್ಲಿ ಈಲಾನ್ ಮಸ್ಕ್ ಟೆಸ್ಲಾ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಅದರ ಚೇರಮನ ಆದರು. ಸದ್ಯಕ್ಕೆ ಈಗವರು ಟೆಸ್ಲಾದ CEO and CTO ಆಗಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಕಂಪನಿಯಾಗಿದೆ. ನಂತರ 2006ರಲ್ಲಿ ಈಲಾನ್ ಮಸ್ಕ್ Solar City ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಈಗ ಸೋಲಾರಸಿಟಿ ಟೆಸ್ಲಾದೊಂದಿಗೆ ಸೇರಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ರಹಿತ ಕಾರುಗಳನ್ನು ತಯಾರಿಸಿ ಗ್ಲೋಬಲ್ ವಾರ್ಮಿಂಗನ್ನು ಕಡಿಮೆ ಮಾಡುವುದು ಅವರ ಗುರಿಯಾಗಿದೆ. ಅದೇ ನಿಟ್ಟಿನಲ್ಲಿ ಸೋಲಾರಸಿಟಿ Sustainable ಎನರ್ಜಿಯನ್ನು ತಯಾರಿಸಿದರೆ, ಟೆಸ್ಲಾ ಆ ಎನರ್ಜಿಯನ್ನು ಬಳಸಿಕೊಳ್ಳುತ್ತದೆ.


ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ

          2013ರ ಅಗಸ್ಟನಲ್ಲಿ ಈಲಾನ್ ಮಸ್ಕ Traffic free High Speed Transportation Systemಗಾಗಿ Hyperloop ಕಂಪನಿಯನ್ನು ಪ್ರಾರಂಭಿಸಿದರು. ಇದಲ್ಲದೆ ಅವರು Artificial Intelligencyಯಲ್ಲಿ ರಿಸರ್ಜ ಆ್ಯಂಡ್ ಡೆವಲಪ್‌ಮೆಂಟಗಾಗಿ 2015ರಲ್ಲಿ Open AI ಎಂಬ ನಾನ್ ಪ್ರಾಫಿಟ್ ಕಂಪನಿಯನ್ನು ಸಹ ಪ್ರಾರಂಭಿಸಿದ್ದಾರೆ. ಇದಲ್ಲದೆ ಅವರು ಮಾನವನ ಮೆದುಳನ್ನು Artificial Intelligencyಯೊಂದಿಗೆ ಇಂಟಿಗ್ರೆಟ್ ಮಾಡುವುದಕ್ಕಾಗಿ 2016ರಲ್ಲಿ Neuralink ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಸದ್ಯ Neuralink ಡ್ರೈವರಲೆಸ್ ಕಾರ ಮತ್ತು ಬಸಗಳ ನಿರ್ಮಾಣದಲ್ಲಿ ನಿರತವಾಗಿದೆ. ಅವರು 2016ರ ಡಿಸೆಂಬರನಲ್ಲಿ ಪ್ರಾರಂಭಿಸಿದ The Boring Company ಟನೆಲಗಳನ್ನು ನಿರ್ಮಿಸಿ ಟ್ರಾಫಿಕನ್ನು ತಗ್ಗಿಸುವ ಕೆಲಸದಲ್ಲಿ ತೊಡಗಿದೆ.
ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ
                ಒಟ್ಟಾರೆಯಾಗಿ ಸಮಾಜಕ್ಕೆ ಮತ್ತು ಸಾಯಿನ್ಸ ಆ್ಯಂಡ್ ಟೆಕ್ನಾಲಜಿಗೆ, ಆರ್ಟಿಫಿಸಿಯಲ್ ಇಂಟಲಿಜೆನ್ಸಿಗೆ ಈಲಾನ್ ಮಸ್ಕರ ಕೊಡುಗೆ ಅತ್ಯಮೂಲ್ಯವಾಗಿದೆ. ಅವರು ಜಗತ್ತು ಊಹಿಸಲು ಅಸಾಧ್ಯವಾದ ಸಂಗತಿಗಳನ್ನು ಸಾಧ್ಯವಾಗಿಸಿ ಜಗತ್ತಿನ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರೇ ನಿಜವಾದ ಐರನ ಮ್ಯಾನ್ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಇವರ ಜೀವನದಿಂದ ಸ್ಪೂರ್ತಿ ಪಡೆದುಕೊಂಡು Iron Man ಸಿನಿಮಾ ತಯಾರಾಗಿದೆ. ಅವರು ಸುಲಭವಾದ ಕೆಲಸಗಳನ್ನು ಮಾಡುವ ಬದಲು, ಮಾಡಲೇಬೇಕಾದ ಅವಶ್ಯಕತೆಯಿರುವ ಕೆಲಸಗಳನ್ನಷ್ಟೇ ಮಾಡಲು ಬಯಸುತ್ತಾರೆ. ಸದ್ಯಕ್ಕವರು ವಾಯು ಮಾಲಿನ್ಯವನ್ನು ತಡೆಗಟ್ಟಲು ಕಾರ್ಬನ ಟ್ಯಾಕ್ಸನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈಲಾನ್ ಮಸ್ಕರಂಥ Barrier Free Thinking ಇರೋ ವ್ಯಕ್ತಿಗಳು ಪ್ರತಿ ದೇಶದಲ್ಲಿ ಹುಟ್ಟಲಿ ಎಂಬ ಆಶಯ ನನ್ನದು. ಅವರ ಜೀವನ ಕಥೆಯಿಂದ ಸ್ಪೂರ್ತಿ ಪಡೆದುಕೊಂಡು ನೀವು ಸಹ ಅವರಂತೆ ಮಹಾನ್ ಕೊಡುಗೆಗಳನ್ನು ಕೊಡಲು ಮುಂದಾದರೆ ನನ್ನ ಶ್ರಮ ಸಾರ್ಥಕ. ಈ ಜೀವನಕಥೆಯನ್ನು ತಪ್ಪದೆ ಲೈಕ್ ಮತ್ತು ಶೇರ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಪ್ರತಿದಿನ ಹೊಸಹೊಸ ಸಾಧಕರ ಜೀವನ ಕಥೆಗಳನ್ನು ಓದಲು ನನ್ನ ಆಫೀಸಿಯಲ್ ಫೇಸ್ಬುಕ್ ಪೇಜನ್ನು ಫಾಲೋ ಮಾಡಿ...


ಈಲಾನ್ ಮಸ್ಕರವರ ಜೀವನ ಕಥೆ : Life Story of Elon Musk in Kannada - ಅಸಾಧ್ಯವಾದ ಸಂಗತಿಗಳನ್ನೆಲ್ಲ ಸಾಧ್ಯವಾಗಿಸಿದ ಮಹಾನ್ ಸಾಧಕನ ನೈಜಕಥೆ




Blogger ನಿಂದ ಸಾಮರ್ಥ್ಯಹೊಂದಿದೆ.