ಬಚ್ಚಿಟ್ಟಿದ್ದು ಪರರಿಗೆ ಸೇರುತ್ತೆ ಅಂತಾರೆ. ಆದರೆ ಕೂಡಿಟ್ಟಿದ್ದು ಕಷ್ಟಕಾಲದಲ್ಲಿ ನಮಗಲ್ಲದಿದ್ದರೂ ನಮ್ಮವರಿಗಾದರೂ ಪ್ರಯೋಜನಕ್ಕೆ ಬಂದೇ ಬರುತ್ತದೆ. ಆದ್ದರಿಂದ ಹಣವನ್ನು ಆಡಂಬರದಲ್ಲಿ ಪೋಲು ಮಾಡದೇ ಸರಿಯಾದ ಕೆಲಸಗಳಲ್ಲಿ ಇಲ್ಲವೇ ಸರಿಯಾದ ಸ್ಥಳಗಳಲ್ಲಿ ಸರಿಯಾದ ಸಮಯಕ್ಕೆ ಹೂಡಿಕೆ ಮಾಡುವುದು ಬುದ್ಧಿವಂತರ ಲಕ್ಷಣ. ನಮ್ಮ ಬಳಿಯಿರುವ ದುಡ್ಡು ದುಡಿಯಲು ಪ್ರಾರಂಭಿಸಿದಾಗ ಮಾತ್ರ ನಾವು ಬಹು ಬೇಗನೆ ಶ್ರೀಮಂತರಾಗುತ್ತೇವೆ. ನಾವು ದುಡ್ಡನ್ನು ಹೂಡಿಕೆ ಮಾಡಿ ಅದನ್ನು ದುಡಿಸಬಹುದು. ಹಣವನ್ನು ಹೂಡಿಕೆ ಮಾಡುವ ಕೆಲವು ಉತ್ತಮ ವಿಧಾನಗಳು ಇಲ್ಲಿವೆ ;
1) ಉಳಿತಾಯ ಬ್ಯಾಂಕ್ ಖಾತೆ : (The Saving Bank Account)
ಭಾರತದ ಬಹುಪಾಲು ಜನ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಅಂದರೆ ಸೇವಿಂಗ್ ಬ್ಯಾಂಕ್ ಅಕೌಂಟಿನಲ್ಲಿ ತಮ್ಮ ಹಣವನ್ನು ಕೂಡಿಡುತ್ತಾರೆ ಅಂದರೆ ಹೂಡಿಕೆ ಮಾಡುತ್ತಾರೆ. ಈ ತರಹದ ಹಣ ಹೂಡಿಕೆಯಲ್ಲಿ ಹೆಚ್ಚಿಗೆ ರಿಸ್ಕ ಇರುವುದಿಲ್ಲ, ಜೊತೆಗೆ ಹೆಚ್ಚಿನ ರಿಟರ್ನ್ಸ್ ಕೂಡ ಸಿಗುವುದಿಲ್ಲ. ನಿಮಗಿಲ್ಲಿ ಯಾವುದೇ ತರಹದ ಕಾಲಮಿತಿ ಅಂದರೆ Time Restriction ಇರುವುದಿಲ್ಲ. ನೀವು ಯಾವಾಗ ಬೇಕಾದರೂ ಹಣ ಡಿಪೋಜಿಟ ಮಾಡಬಹುದು, ಯಾವಾಗ ಬೇಕಾದರೂ ವಿಥಡ್ರಾ ಮಾಡಬಹುದು. ಇದು ಫುಲ್ ಸೇಫ ಮನಿ ಇನವೆಸ್ಟಿಂಗ್ ಪ್ಲ್ಯಾನ್ ಆಗಿರುವುದರಿಂದ ನಿಮಗಿಲ್ಲಿ ಹೆಚ್ಚಿನ ರಿಟರ್ನ್ಸ ಸಿಗುವುದಿಲ್ಲ. ಅಬ್ಬಬ್ಬಾ ಅಂದ್ರೆ ನಿಮಗೆ ನಿಮ್ಮ ಹಣದ ಮೇಲೆ ವಾರ್ಷಿಕ 3.5% ರಿಂದ 6% ವರೆಗೆ ರಿಟರ್ನ್ಸ ಸಿಗಬಹುದು ಅಷ್ಟೇ.
2) ಸಂಚಿತ ಠೇವಣಿ (Fixed Deposit or FD)
ಸಂಚಿತ ಠೇವಣಿ ಅಂದರೆ ಫಿಕ್ಸ್ಡ ಡಿಪೋಜಿತ ಅಂದರೆ FD ಕೂಡ ಸೇವಿಂಗ್ ಬ್ಯಾಂಕ್ ಖಾತೆಯಂತೆ ಕಡಿಮೆ ರಿಸ್ಕ ಮತ್ತು ಕಡಿಮೆ ರಿಟರ್ನ್ಸ್ ಇರುವ ಹಣ ಹೂಡಿಕೆ ವಿಧಾನವಾಗಿದೆ. ಇಲ್ಲಿ ನಿಮಗೆ ಕಾಲಮಿತಿ ಅಂದರೆ Time Restriction ಇರುತ್ತದೆ. ಅಂದರೆ ನೀವು ನಿಮ್ಮ ಹಣವನ್ನು ನಿಗದಿತ ಅವಧಿಯವರೆಗೆ ಸಂಚಿತ ಠೇವಣಿಯಾಗಿ ಇಡಬೇಕಾಗುತ್ತದೆ. ಇಲ್ಲಿ ನೀವು ಒಂದು ನಿಗದಿತ ಅವಧಿಯವರೆಗೆ ನಿಮ್ಮ ಹಣವನ್ನು ಫಿಕ್ಸ್ಡ ಆಗಿ ಇಡುವುದರಿಂದ ನಿಮಗೆ ನಿಮ್ಮ ಹಣದ ಮೇಲೆ ನಿಗದಿತ ಅವಧಿಯ ನಂತರ 6% ರಿಂದ 8% ವರೆಗೆ ರಿಟರ್ನ್ಸ ಸಿಗುತ್ತದೆ.
3) ರಿಯಲ್ ಎಸ್ಟೇಟ್ ಮತ್ತು ಗೋಲ್ಡ್ :
ನಿಮ್ಮ ಹಣವನ್ನು ಬ್ಯಾಂಕಲ್ಲಿಟ್ಟು ಕೊಳೆಯಿಸಿ ಏನು ಪ್ರಯೋಜನವಿಲ್ಲ. ವರ್ಷಗಳು ಕಳೆದರೂ ಹಣದ ಬೆಲೆ ಹೆಚ್ಚಾಗಲ್ಲ. ಅದರ ಮೌಲ್ಯ ಇದ್ದಷ್ಟೇ ಇರುತ್ತದೆ. ಆದ್ದರಿಂದ ನಿಮ್ಮ ಹಣವನ್ನು ಬ್ಯಾಂಕಲ್ಲಿಡುವುದರ ಬದಲು ಅದನ್ನು ಗೋಲ್ಡ್ ಅಂದರೆ ಬಂಗಾರದಲ್ಲಿ ಮತ್ತು ರಿಯಲ್ ಎಸ್ಟೇಟ ಅಂದರೆ ಪ್ಲ್ಯಾಟು, ಜಮೀನು, ಮನೆಗಳ ಖರೀಧಿಯಲ್ಲಿ ತೊಡಗಿಸುವುದು ಒಳ್ಳೆಯದು. ನೀವು ರಿಯಲ್ ಎಸ್ಟೇಟನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬೇಕೆಂದರೆ ಮೊದಲು ನಿಮಗೆ ಲಕ್ಷಾಂತರ ಅಥವಾ ಕೋಟ್ಯಾಂತರ ರೂಪಾಯಿ ಬಂಡವಾಳ ಬೇಕಾಗುತ್ತದೆ. ಅಷ್ಟೊಂದು ಹಣ ನಿಮ್ಮ ಬಳಿ ಇಲ್ಲದಿದ್ದರೆ ನೀವು ಗೋಲ್ಡನಲ್ಲಿ ನಿಮ್ಮ ಬಳಿಯಿರುವ ಹಣವನ್ನು ಹೂಡಿಕೆ ಮಾಡಬಹುದು. ಇಲ್ಲಿ ನಿಮಗೆ ಮಾಡರೇಟ್ ರಿಸ್ಕನೊಂದಿಗೆ ಮಾಡರೇಟ್ ಅಥವಾ ಮ್ಯಾಕ್ಸಿಮಮ್ ರಿಟರ್ನ್ಸ ಸಿಗುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಜಮೀನು ಹಾಗೂ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತದೆ. ಅವುಗಳ ಬೆಲೆ ಇಳಿಯುವ ಸಂದರ್ಭಗಳು ತುಂಬಾ ವಿರಳ.
4) ಮ್ಯುಚುವಲ್ ಫಂಡ್ಸ (Mutual Funds)
ಹಣ ಹೂಡಿಕೆಯಲ್ಲಿ ಅಷ್ಟೊಂದು ಅನುಭವ ಹಾಗೂ ಜ್ಞಾನವಿಲ್ಲದವರಿಗೆ ಮ್ಯುಚುವಲ್ ಫಂಡ್ಸಗಳು ಉತ್ತಮ ಆಯ್ಕೆಗಳಾಗಿವೆ. ಈ ಮ್ಯುಚುವಲ್ ಫಂಡ್ಸಗಳು ಜನರಿಂದ ಅಂದರೆ ಹೂಡಿಕೆದಾರರಿಂದ ಹಣ ಪಡೆದುಕೊಂಡು ಅದನ್ನು ಸೂಕ್ತವಾದ ಸ್ಥಳಗಳಲ್ಲಿ ಹೂಡಿಕೆ ಮಾಡಿ ಹಣ ಮಾಡಿಕೊಡುತ್ತವೆ. ಇವು AMCಗಳಿಂದ ಅಂದರೆ Asset Management Companyಗಳಿಂದ ನಡೆಸಲ್ಪಡುತ್ತವೆ. AMCಯಿಂದ ನೇಮಿಸಲ್ಪಟ್ಟ ಒಬ್ಬ ಎಕ್ಸಪರ್ಟ ಹೂಡಿಕೆದಾರರಿಂದ ಹಣವನ್ನು ಪಡೆದುಕೊಂಡು ಅದನ್ನು ಹೂಡಿಕೆ ಮಾಡಿ ಹಣ ಗಳಿಸುತ್ತಾನೆ. ನಂತರ ಬಂದ ಲಾಭದಲ್ಲಿ ತನ್ನ ಕಮಿಷನನ್ನು ಕಡಿತಗೊಳಿಸಿ ಮಿಕ್ಕ ಹಣವನ್ನು ಹೂಡಿಕೆದಾರರಿಗೆ ರಿಟರ್ನ ಮಾಡುತ್ತಾನೆ. ಇಲ್ಲಿ ನಿಮಗೆ 0 to High ರಿಸ್ಕಯಿದೆ. ನಿಮಗಿಲ್ಲಿ 4% ರಿಂದ 30+% ವರೆಗೆ ರಿಟರ್ನ್ಸ ಸಿಗಬಹುದು. ಇಲ್ಲಿ ನಿಮ್ಮ ಲಾಭನಷ್ಟ ನೀವು ಆಯ್ಕೆ ಮಾಡಿದ AMCಯ ಮೇಲೆ ನಿರ್ಧಾರಿತವಾಗುತ್ತದೆ.
ಮ್ಯುಚುವಲ್ ಫಂಡ್ಸಗಳಲ್ಲಿ ಈಕ್ವಿಟಿ ಮ್ಯುಚುವಲ್ ಫಂಡ್ಸ (Equity Mutual Funds), ಡೆಬ್ಟ ಮ್ಯುಚುವಲ್ ಫಂಡ್ಸ (Debt Mutual Funds), ಹೈಬ್ರಿಡ್ ಮ್ಯುಚುವಲ್ ಫಂಡ್ಸ (Hybrid Mutual Funds) ಹಾಗೂ ಸೋಲುಷನ್ ಓರಿಯೆಂಡೆಡ್ ಮ್ಯುಚುವಲ್ ಫಂಡ್ಸ (Solution Oriented Mutual Funds) ಎಂಬ ನಾಲ್ಕು ವಿಧಗಳಿವೆ. ನಿಮಗೆ ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವ ಮನಸ್ಸಿದ್ದರೆ ಒಂದೊಂದಾಗಿ ಅವುಗಳ ಬಗ್ಗೆ ತಿಳಿದುಕೊಳ್ಳಿ. ಒಂದು ವೇಳೆ ಏನಾದರೂ ಅನುಮಾನ ಬಂದರೆ ನನ್ನನ್ನು ಅಥವಾ ಇನವೆಸ್ಟಮೆಂಟ್ ಎಕ್ಸಪರ್ಟನ್ನು ಸಂಪರ್ಕಿಸಿ.
5) ಶೇರು ಮಾರುಕಟ್ಟೆ (Stock Market)
ನಿಮಗೆ ಬೇಗನೆ ಶ್ರೀಮಂತರಾಗುವ ಆಸೆಯಿದ್ದರೆ ನೀವು ಶೇರು ಮಾರುಕಟ್ಟೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಆದರೆ ಇಲ್ಲಿ ಹೆಚ್ಚಿಗೆ ಲಾಭವಿರುವಂತೆ ಹೆಚ್ಚಿಗೆ ರಿಸ್ಕ ಇದೆ, ಹೆಚ್ಚಿಗೆ ನಷ್ಟವೂ ಇದೆ. ಶೇರು ಮಾರುಕಟ್ಟೆ ಯಾವಾಗ ಏಳುತ್ತೆ, ಯಾವಾಗ ಬೀಳುತ್ತೆ ಎಂಬುದನ್ನು ಹೇಳೊಕ್ಕಾಗಲ್ಲ. ಶೇರು ಮಾರುಕಟ್ಟೆಯಲ್ಲಿ ನೀವು ಹಣ ಹೂಡಬೇಕೆಂದರೆ ಮೊದಲು ನಿಮಗೆ ಶೇರುಗಳ ಬಗ್ಗೆ, ಶೇರು ಮಾರುಕಟ್ಟೆಯ ಬಗ್ಗೆ, ಶೇರು ಮಾರುಕಟ್ಟೆಯ ಕಾರ್ಯಶೈಲಿಯ ಬಗ್ಗೆ ಸಂಪೂರ್ಣ ಜ್ಞಾನವಿರಬೇಕು. ಅಂದಾಗಲೇ ನೀವು ಲಾಭಗಳಿಸಬಹುದು. ಒಂದು ವೇಳೆ ನಿಮಗೆ ಶೇರು ಮಾರುಕಟ್ಟೆಯ ಬಗ್ಗೆ ಜ್ಞಾನವಿಲ್ಲದಿದ್ದರೆ ನಿಮ್ಮ ಹಣವನ್ನು ಅದರಲ್ಲಿ ಹೂಡಿಕೆ ಮಾಡಬೇಡಿ. ಆದಾಗ್ಯೂ ಮಾಡಲೇಬೇಕೆಂದರೆ ಎಕ್ಸಪರ್ಟಗಳ ಸಲಹೆ ಹಾಗೂ ಸಹಾಯವನ್ನು ಪಡೆದುಕೊಂಡು ಇನವೇಸ್ಟ ಮಾಡಿ.
ಗೆಳೆಯರೇ, ನಿಮ್ಮ ದುಡ್ಡನ್ನು ಬ್ಯಾಂಕಲಿಟ್ಟು ಕೊಳೆಯಿಸಬೇಡಿ. ಅದನ್ನು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಗಳಲ್ಲಿ ಇನವೇಸ್ಟ ಮಾಡಿ. ನಿಮ್ಮ ದುಡ್ಡನ್ನು ದುಡಿಸಿ ಬೇಗನೆ ಶ್ರೀಮಂತರಾಗಿ. All the very Best and Thanks You...