ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada - Guru Mantragalu in Kannada For Success in Life - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada - Guru Mantragalu in Kannada For Success in Life

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

               ಹಾಯ್ ಗೆಳೆಯರೇ, ಆಚಾರ್ಯ ಚಾಣಕ್ಯರ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಅವರ ಜೀವನಕಥೆಯನ್ನು ಈಗಾಗಲೇ ನಾನು ನನ್ನ ಆಫೀಸಿಯಲ್ ವೆಬಸೈಟ್ www.Skkannada.comದಲ್ಲಿ ಪ್ರಕಟಿಸಿರುವೆ. ನೀವು ಅದನ್ನು ಓದಿಲ್ಲ ಅಂದ್ರೆ ನನ್ನ ವೆಬಸೈಟಗೆ ವಿಸಿಟ್ ಮಾಡಿ ಫ್ರಿಯಾಗಿ ಓದಬಹುದು. ಓದುವುದರಲ್ಲಿ ನೀವು ಆಲಸಿಗಳಾಗಿದ್ದರೆ ಅವರ ಜೀವನಕಥೆಯನ್ನು ನೀವು ನಮ್ಮ ಆಫೀಸಿಯಲ್ ಯುಟ್ಯೂಬ ಚಾನೆಲ್ "Roaring Creations Kannada''ದಲ್ಲಿ ಫ್ರಿಯಾಗಿ ನೋಡಬಹುದು. ಆಚಾರ್ಯ ಚಾಣಕ್ಯರು ತಮ್ಮ ಮೇರು ಕೃತಿ "ಅರ್ಥಶಾಸ್ತ್ರ"ದಲ್ಲಿ ನಮಗೆ ಬಹಳಷ್ಟು ಹಿತೋಪದೇಶಗಳನ್ನು, ಜೀವನ ಸಂದೇಶಗಳನ್ನು, ಬದುಕಿನ ಪಾಠಗಳನ್ನು ನೀಡಿದ್ದಾರೆ. ಅವುಗಳನ್ನು ನಾವು ಚಾಣಕ್ಯ ತಂತ್ರಗಳೇನ್ನುತ್ತೇನೆ. ಎಲ್ಲರಿಗೂ ಈ ಚಾಣಕ್ಯ ತಂತ್ರಗಳು ಪ್ರಯೋಜನಕ್ಕೆ ಬರುವುದಿಲ್ಲ. ಪಂಚತಂತ್ರಗಳು ಕೈಕೊಟ್ಟಾಗ ರಣತಂತ್ರಗಳನ್ನು ಪ್ರಯೋಗಿಸಬೇಕು. ರಣತಂತ್ರಗಳು ಕೈಕೊಟ್ಟಾಗ ಚಾಣಕ್ಯ ತಂತ್ರಗಳನ್ನು ಅನುಸರಿಸಬೇಕು. ಆದರೆ ನನಗೆ ತಿಳಿದ ಮಟ್ಟಿಗೆ ಸದ್ಯಕ್ಕೆ ಈ ತಂತ್ರಗಳನ್ನು ಹೆಚ್ಚಾಗಿ ರಾಜಕಾರಣಿಗಳು ಹಾಗೂ ಬ್ಯುಸಿನೆಸಮ್ಯಾನಗಳು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈ ತಂತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಜನರ ಯಶಸ್ವಿ ಜೀವನಕ್ಕಾಗಿ ಆಚಾರ್ಯ ಚಾಣಕ್ಯರು ಕೆಲವೊಂದಿಷ್ಟು ಗುರು ಮಂತ್ರಗಳನ್ನು ಸಹ ಹೇಳಿದ್ದಾರೆ. ಆ ಗುರು ಮಂತ್ರಗಳು ಇಂತಿವೆ.

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೧) ತನ್ನ ಹಲ್ಲಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮರಕ್ಷಣೆಗಾಗಿ ಬುಸುಗುಡಲೇಬೇಕು. ಅಂದರೆ ನಾವು ನಮ್ಮ ದುರ್ಬಲತೆಗಳನ್ನು ಯಾರ ಬಳಿಯೂ ಬಿಟ್ಟು ಕೊಡಬಾರದು. ವಿಶೇಷವಾಗಿ ನಮ್ಮ ಶತ್ರುಗಳಿಗೆ ನಮ್ಮ ದುರ್ಬಲತೆಗಳನ್ನು ಅಂದರೆ ವಿಕನೇಸಗಳನ್ನು ಬಿಟ್ಟು ಕೊಡಬಾರದು. ನಮ್ಮ ತೋಳಲ್ಲಿ ತಾಕತ್ತಿರದಿದ್ದರೂ ಮನಸ್ಸಲ್ಲಿ ತಾಕತ್ತಿರಬೇಕು. ಯಾವುದೇ ಕಾರಣಕ್ಕೂ ನಾವು ನಮ್ಮನ್ನು ದುರ್ಬಲರಂತೆ ತೋರಿಸಿಕೊಳ್ಳಬಾರದು. ನಾವು ದುರ್ಬಲರೆಂದು ಗೊತ್ತಾದಾಗ ಎಲ್ಲರೂ ನಮ್ಮನ್ನು ಗುಲಾಮರನ್ನಾಗಿ ದುಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ನಮ್ಮನ್ನು ತುಳಿಯಲು ಪ್ರಯತ್ನಿಸುತ್ತಾರೆ. ಈ ಜಗತ್ತಿನಲ್ಲಿ ದುರ್ಬಲರಿಗೆ ಜಾಸ್ತಿ ದಿನ ಬದುಕುವ ಅವಕಾಶವಿಲ್ಲ. ಬಲಿಷ್ಟರಾದವರು ಮಾತ್ರ ಬದುಕುಳಿಯುತ್ತಾರೆ. ದುರ್ಬಲರು ಬೇಗನೆ ಮಣ್ಣಾಗುತ್ತಾರೆ. ಆದಕಾರಣ ನಮ್ಮ ದೌರ್ಬಲ್ಯಗಳು ಯಾರಿಗೂ ಗೊತ್ತಾಗಬಾರದು. ತನ್ನ ಹಲ್ಲಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮರಕ್ಷಣೆಗಾಗಿ ಬುಸುಗುಡುವಂತೆ ನಾವು ನಮ್ಮ ದೌರ್ಬಲ್ಯಗಳನ್ನು ಬಚ್ಚಿಟ್ಟು ಶಕ್ತಿಶಾಲಿಗಳಂತೆ ಗುರ್ತಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಬದುಕಬೇಕು... 

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೨) ನಮ್ಮ ಸಮಸ್ಯೆಗಳನ್ನು, ನೋವುಗಳನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಜನ ನಮ್ಮ ನೋವುಗಳನ್ನು ನೋಡಿ ಗೇಲಿ ಮಾಡಿಕೊಂಡು ನಗುವುದಲ್ಲದೇ ನಮ್ಮ ದುರ್ಬಲತೆಗಳ ಲಾಭ ಪಡೆಯುತ್ತಾರೆ. ನಮ್ಮ ನೋವುಗಳು ಅನಾವಶ್ಯಕವಾಗಿ ಬೇರೆಯವರ ಕೊಂಕು ನಗುವಿಗೆ ಕಾರಣವಾಗುತ್ತವೆಯೇ ಹೊರತು ನಮಗೆ ಪರಿಹಾರ ಸಿಗಲ್ಲ. ನಾವು ನಮ್ಮ ಸಮಸ್ಯೆಗಳನ್ನು ಹಂಚಿಕೊಂಡಷ್ಟು ಜನ ನಮ್ಮಿಂದ ದೂರಾಗುತ್ತಾರೆ. ಆದ್ದರಿಂದ ನಮ್ಮ ನೋವುಗಳನ್ನು, ಸಮಸ್ಯೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳದೇ ಇರುವುದು ಕ್ಷೇಮ. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವುದು ಉತ್ತಮ... 

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೩) ಬೇರೆಯವರ ತಪ್ಪುಗಳನ್ನು ನೋಡಿ ನಾವು ನಮ್ಮನ್ನು ತಿದ್ದಿಕೊಳ್ಳಬೇಕು. ಎಲ್ಲ ತಪ್ಪುಗಳನ್ನು ನಾವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಮ್ಮ ಬಳಿಯಿಲ್ಲ. ಅದಕ್ಕಾಗಿ ನಾವು ಬೇರೆಯವರ ತಪ್ಪುಗಳಿಂದ ಕಲಿಯಬೇಕು...

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೪) ಅತೀ ದೊಡ್ಡ ಗುರು ಮಂತ್ರವೆಂದರೆ ನಿಮ್ಮ ಗುಟ್ಟುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹಂಚಿಕೊಳ್ಳದೆ ಇರುವುದು. ಇಲ್ಲವಾದರೆ ನಿಮ್ಮ ಸಮಾಧಿಯನ್ನು ನೀವೇ ತೊಡಿಕೊಳ್ಳುತ್ತಿರಿ. ನಿಮ್ಮ ಗುಟ್ಟುಗಳು ಗುಟ್ಟಾಗಿರುವ ತನಕ ಮಾತ್ರ ನೀವು ಸೇಫಾಗಿರುತ್ತೀರಿ. ನಿಮ್ಮ ಗುಟ್ಟುಗಳು ರಟ್ಟಾದರೆ ನಿಮ್ಮ ಜುಟ್ಟು ಬೇರೆಯವರ ಕೈಗೆ ಹೋದಂತೆ...

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೫) ಯಾವಾಗಲೂ ಮನೆ, ಮಡದಿ, ಮಕ್ಕಳು, ಗಳಿಕೆ, ಹಣ, ಆಸ್ತಿ, ಅಂತಸ್ತು, ಸಂಪತ್ತಿನ ವಿಷಯದಲ್ಲಿ ಸಾಧ್ಯವಾದಷ್ಟು ಸಂತೃಪ್ತರಾಗಿರಬೇಕು. ಆದರೆ  ಜ್ಞಾನದ ವಿಚಾರದಲ್ಲಿ ಸಂತೃಷ್ಟನಾಗಿರಬಾರದು. ನಮ್ಮಲ್ಲಿ ಯಾವಾಗಲೂ ಜ್ಞಾನದ ಹಸಿವು ಇರಬೇಕು. ಜೀವನದಲ್ಲಿ ಏನಾದರೂ ಒಂದನ್ನು ಕಲಿಯುವಾಗ, ಬ್ಯುಸಿನೆಸ್ ಮಾಡುವಾಗ ಮತ್ತು ಊಟ ಮಾಡುವಾಗ ನಾಚಿಕೆಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು. ನಾಚಿಕೆಯನ್ನು ಬಿಡದಿದ್ದರೆ ಹೊಸದನ್ನು ಕಲಿಯಲು, ಬ್ಯುಸಿನೆಸ್ ಮಾಡಲು ಸಾಧ್ಯವಿಲ್ಲ... 

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೬) ರಾವಣನ ಅತಿಯಾದ ಅಹಂಕಾರದಿಂದ ಲಂಕೆ ಸರ್ವನಾಶವಾಯಿತು. ಕೌರವರು ತಮ್ಮಲ್ಲಿನ ಅತಿಯಾದ ಅಹಂಕಾರದಿಂದ ಸರ್ವನಾಶವಾದರು. ಅತಿಯಾದ ದಾನದಿಂದ ಬಲಿ ಚಕ್ರವರ್ತಿ ಸರ್ವನಾಶವಾದನು. ಆದ್ದರಿಂದ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಎಲ್ಲವೂ ಒಂದು ಇತಿಮಿತಿಯಲ್ಲಿದ್ದರೆ ಚೆನ್ನ ಹಾಗೂ ಕ್ಷೇಮ...
ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೭) ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸುತ್ತದೆ ಇಲ್ಲವೇ  ಸಾಯಿಸುತ್ತದೆ. ಕಾಲ ಯಾರ ಕೈಯ್ಯಿಗೂ ಸಿಕ್ಕಿಲ್ಲ, ಸಿಗೋದು ಇಲ್ಲ. ಒಂದು ಸಲ ಕಾಲ ಕಳೆದು ಹೋದರೆ ಮತ್ತೆ ಸಿಗಲ್ಲ. ಆದ್ದರಿಂದ ಕಾಲವನ್ನು ಗೌರವಿಸಿ, ಒಂದಲ್ಲ ಒಂದಿನ ನಿಮ್ಮನ್ನು ಗೌರವಿಸುವ ಕಾಲ ಬಂದೇ ಬರುತ್ತದೆ. ಕಾಲಕ್ಕೆ ಬೆಲೆ ಕೊಡಿ, ನಿಮಗೆ ಬೆಲೆ ತಾನಾಗಿಯೇ ಬರುತ್ತದೆ...

ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

೮) ನಿಮ್ಮ ಮುಂದೆ ಸಿಹಿ ಮಾತುಗಳನ್ನಾಡಿ, ನಂತರ ನಿಮ್ಮ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುವವರ ಸ್ನೇಹ ತೊರೆದರೆ ತುಂಬಾ ಒಳ್ಳೆಯದು. ಇಂಥ ವಿಶ್ವಾಸಘಾತುಕ ಗೆಳೆಯರೊಂದಿಗೆ ಇರುವುದು ಕ್ಷೇಮವಲ್ಲ. ಏಕೆಂದರೆ ಹಾವಿಗೆ ಬರೀ ಹಲ್ಲಲ್ಲಿ ಮಾತ್ರ ವಿಷವಿದ್ದರೆ, ಜೀನುನೊಣವಿಗೆ ಬರೀ ಬಾಯಲ್ಲಿ ಮಾತ್ರ ವಿಷವಿದ್ದರೆ, ಚೇಳಿಗೆ ಬರೀ ಕೊಂಡಿಯಲ್ಲಿ ಮಾತ್ರ ವಿಷವಿದ್ದರೆ ಇಂಥ ವ್ಯಕ್ತಿಗಳಿಗೆ ಮೈತುಂಬ ವಿಷವಿರುತ್ತದೆ. ಆದ್ದರಿಂದ ಇಂಥ ನಕಲಿ ಗೆಳೆಯರಿಂದ ಸಾಧ್ಯವಾದಷ್ಟು ದೂರವಿರಿ...


ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada

             ಇವಿಷ್ಟು ಗುರುಮಂತ್ರಗಳನ್ನು ಆಚಾರ್ಯ ಚಾಣಕ್ಯರು ಯಶಸ್ವಿ ಜೀವನಕ್ಕಾಗಿ ನೀಡಿದ್ದಾರೆ. ಇಷ್ಟವಾದರೆ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿ. All the Best and Thanks you...
ಯಶಸ್ವಿ ಜೀವನಕ್ಕಾಗಿ 8 ಗುರು ಮಂತ್ರಗಳು - 8 Tricks for Successful Life in Kannada




Blogger ನಿಂದ ಸಾಮರ್ಥ್ಯಹೊಂದಿದೆ.