ಸೋತವರು ಮಾತ್ರ ಇದನ್ನು ಓದಿ ಸೋಲಿನಿಂದಲೇ ಗೆಲುವು ಅವಮಾನದಿಂದಲೇ ಸನ್ಮಾನ : Kannada Inspirational and Motivational Stories and Articles
ಹಾಯ್ ಗೆಳೆಯರೇ, ಸೋಲಿನ ರುಚಿ ನೋಡದೆ ಗೆದ್ದ ಶೂರ ಯಾವನೂ ಇಲ್ಲ. ಸೋಲದೆ ಗೆಲ್ಲಲು ಸಾಧ್ಯವಿಲ್ಲ, ಒಂದು ವೇಳೆ ಗೆದ್ದರೂ ಪ್ರಯೋಜನವಿಲ್ಲ. ಅದಕ್ಕಾಗಿ ಸೋತಾಗ ಅಳುವ ಬದಲು, ಖುಷಿಪಡಿ. ಏಕೆಂದರೆ ಸೋಲೆ ಗೆಲುವಿನ ಮೊದಲ ಮೆಟ್ಟಿಲು. ನೀವು ಸೋತಾಗ ನಿಮ್ಮ ಗೆಲುವಿನ ಪಯಣ ಪ್ರಾರಂಭವಾಗುತ್ತದೆ. ನೀವಿಗ ಯಾವುದರಲ್ಲಾದರೂ ಸೋತಿದ್ದರೆ ಅಡವಾನ್ಸ Congratulations, ನೀವು ಗೆಲುವಿನೆಡೆಗೆ ಹೋರಟಿದ್ದೀರಾ...
ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು. ಏಕೆಂದರೆ ಅವಮಾನವನ್ನು ಮಾಡಿಸಿಕೊಳ್ಳದೆ ಸನ್ಮಾನ ಮಾಡಿಸಿಕೊಂಡವರು ಯಾರು ಇಲ್ಲ. ಅವಮಾನವಾದಾಗಲೇ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮಸಾಕ್ಷಿಗೆ ನೋವಾದಾಗಲೇ ನಿಮಲ್ಲಿ ಜವಾಬ್ದಾರಿ ಮೂಡುತ್ತದೆ. ಅವಮಾನವಾದಾಗಲೇ ಸನ್ಮಾನ ಸಿಗುತ್ತದೆ. ಅವಮಾನವಾದಾಗಲೇ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಕಿಚ್ಚು ಎದೆಯಲ್ಲಿ ಹೊತ್ತಿಕೊಳ್ಳುತ್ತದೆ. ನೀವು ಯಾವಾಗಲಾದರೂ ಅವಮಾನಿತರಾಗಿದ್ದರೆ ಅಡವಾನ್ಸ್ Congratulations. ಏಕೆಂದರೆ ನಿಮಗೆ ಒಂದಲ್ಲ ಒಂದಿನ ಸನ್ಮಾನ ಸಿಕ್ಕೇ ಸಿಗುತ್ತದೆ...
ನಾನು ಸೋತೆ ಅಥವಾ ನನಗೆ ಅವಮಾನವಾಯಿತು ಎಂದು ಕೊರಗುವವರಿಗೆ ಕೆಲವೊಂದಿಷ್ಟು ಸ್ಪೂರ್ತಿಗಳು ಇಲ್ಲಿವೆ ;
೧) ಒಂದು ವೇಳೆ ವಾಲ್ಟ ಡಿಸ್ನಿಯವರನ್ನು ದಿನಪತ್ರಿಕೆಯೊಂದು ಅವರಲ್ಲಿ ಕಲ್ಪನಾ ಶಕ್ತಿಯಿಲ್ಲ, ಅವರ ಬರವಣಿಗೆಯಲ್ಲಿ ಹೊಸ ವಿಚಾರಗಳಿಲ್ಲ ಎಂದು ಅವರನ್ನು ಕೆಲಸದಿಂದ ತೆಗೆದು ಹಾಕದಿದ್ದರೆ ಅವರು ಡಿಸ್ನಿ ಸ್ಟುಡಿಯೋವನ್ನು ಕಟ್ಟುತ್ತಿರಲಿಲ್ಲ, 22 ಆಸ್ಕರ ಪ್ರಶಸ್ತಿಗಳನ್ನು ಪಡೆಯುತ್ತಿರಲಿಲ್ಲ...
೨) ಒಂದು ವೇಳೆ ಸ್ಟೀವ್ ಜಾಬ್ಸರನ್ನು ಅವರೇ ಕಟ್ಟಿದ ಆ್ಯಪಲ್ ಕಂಪನಿಯಿಂದ ಉಚ್ಛಾಟಿಸದಿದ್ದರೆ ಅವರು NeXt ಹಾಗೂ Pixar ಕಂಪನಿಗಳನ್ನು ಪ್ರಾರಂಭಿಸುತ್ತಿರಲಿಲ್ಲ. ಮುಂದೆ ಆ್ಯಪಲನ್ನು ದಿವಾಳಿಯಾಗುವುದರಿಂದ ಕಾಪಾಡುತ್ತಿರಲಿಲ್ಲ...
೩) ಒಂದು ವೇಳೆ ಹೆನ್ರಿ ಫೋರ್ಡರವರು ಪ್ರಾರಂಭಿಸಿದ ಮೊದಲೆರಡು ಅಟೋಮೋಬೈಲ್ ಕಂಪನಿಗಳು ಫೇಲಾಗದಿದ್ದರೆ ಅವರ ಫೋರ್ಡ್ ಮೋಟಾರ್ಸ್ ಕಂಪನಿ ಅಷ್ಟೊಂದು ಸಕ್ಸೆಸಫುಲ್ಲಾಗುತ್ತಿರಲಿಲ್ಲ...
೪) ಒಂದು ವೇಳೆ ನಾರಾಯಣ ಮೂರ್ತಿಯವರ ಮೊದಲ IT ಕಂಪನಿ Softronics ಫೇಲಾಗದಿದ್ದರೆ, ಅವರಿಗೆ ವಿಪ್ರೋದಲ್ಲಿ ಕೆಲಸ ಸಿಕ್ಕಿದ್ದರೆ ಇವತ್ತು ಇನ್ಫೋಸಿಸ್ ಇರುತ್ತಿರಲಿಲ್ಲ...
೫) ಒಂದು ವೇಳೆ ಥಾಮಸ್ ಆಲ್ವಾ ಎಡಿಸನರನ್ನು ಮಂದಬುದ್ಧಿಯೆಂದು ಶಾಲೆಯಿಂದ ಹೊರ ಹಾಕದಿದ್ದರೆ ಅವರು ಬಲ್ಬನ್ನು ಕಂಡುಹಿಡಿದು ಜಗತ್ತಿಗೆ ಬೆಳಕನ್ನು ನೀಡುತ್ತಿರಲಿಲ್ಲ...
೬) ಒಂದು ವೇಳೆ ಜೆಫ್ ಬೆಝೋಸ್ Z-Shop ಎಂಬ ಶಾಪಿಂಗ್ ಸೈಟನ್ನು ಪ್ರಾರಂಭಿಸಿ ಅದರಲ್ಲಿ ಫೇಲಾಗದಿದ್ದರೆ ಇವತ್ತು ಅಮೆಜಾನ್ ಈ ಕಾಮರ್ಸ್ ಕಂಪನಿ ಇಷ್ಟೊಂದು ಯಶಸ್ವಿಯಾಗುತ್ತಿರಲಿಲ್ಲ...
೭) ಒಂದು ವೇಳೆ ಬಿಲಗೇಟ್ಸ ಕಾಲೇಜ ಡ್ರಾಪೌಟ್ ಮಾಡದಿದ್ದರೆ ಮೈಕ್ರೊಸಾಫ್ಟ ಇರುತ್ತಿರಲಿಲ್ಲ. ಮಾರ್ಕ ಜುಕರಬರ್ಗ ಕಾಲೇಜ ಡ್ರಾಪೌಟ್ ಮಾಡದಿದ್ದರೆ ಫೇಸ್ಬುಕ್ ಇರುತ್ತಿರಲಿಲ್ಲ. ಸ್ವೀವ್ ಜಾಬ್ಸ ಕಾಲೇಜ್ ಡ್ರಾಪೌಟ್ ಮಾಡದಿದ್ದರೆ ಇವತ್ತು ಆ್ಯಪಲ್ ಇರುತ್ತಿರಲಿಲ್ಲ...
೮) ಒಂದು ವೇಳೆ ಕ್ಯಾಲೋನೆಲ್ ಸ್ಯಾಂಡರ್ಸರವರ ಫ್ರಾಯಿಡ್ ಚಿಕನ ರೇಸಿಪಿ 1000 ಸಲ ಬೇರೆ ಬೇರೆ ರೆಸ್ಟೊರಂಟಗಳಿಂದ ರಿಜೆಕ್ಟ ಆಗದಿದ್ದರೆ ಇವತ್ತು KFC ಇರುತ್ತಿರಲಿಲ್ಲ...
೧೦) ಒಂದು ವೇಳೆ ಬಿಲ್ ಫೋರ್ಡ್ ನಮ್ಮ ಭಾರತೀಯರಾದ ರತನ ಟಾಟಾರನ್ನು ಅವಮಾನಿಸದಿದ್ದರೆ ಇವತ್ತು ಫೋರ್ಡ್ ಕಂಪನಿಯ ಹೆಮ್ಮೆಯ ಕಾರಗಳಾದ ಜಾಗ್ವಾರ ಹಾಗೂ ಲ್ಯಾಂಡ್ ಲೋವರ್ ಟಾಟಾ ಕಂಪನಿಯ ಸ್ವತ್ತಾಗುತ್ತಿರಲಿಲ್ಲ...
೧೦) ಒಂದು ವೇಳೆ ಜಾಕ್ ಮಾ ಅವರನ್ನು 30 ಜಾಬ್ ಇಂಟರ್‌ವ್ಯೂವಗಳಲ್ಲಿ ರಿಜೆಕ್ಟ ಮಾಡದಿದ್ದರೆ ಅವರು ಅಲಿಬಾಬಾ ಬ್ಯುಸಿನೆಸ್ ಗ್ರುಪನ್ನು ಪ್ರಾರಂಭಿಸುತ್ತಿರಲಿಲ್ಲ ಮತ್ತು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗುರ್ತಿಸಿಕೊಳ್ಳುತ್ತಿರಲಿಲ್ಲ...
೧೧) ಒಂದು ವೇಳೆ ಗಾಂಧೀಜಿಯವರನ್ನು ಬ್ರಿಟಿಷರು ಸೌಥ ಆಫ್ರಿಕಾದ ರೈಲಿನಲ್ಲಿ ಅವಮಾನಿಸದಿದ್ದರೆ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುತ್ತಿರಲಿಲ್ಲ, ಬ್ರಿಟಿಷರಿಗೆ ಮಧ್ಯರಾತ್ರಿ ಭಾರತ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ...
೧೨) ಒಂದು ವೇಳೆ ಸಂದೀಪ ಮಹೇಶ್ವರಿ ಮಾಡಲಿಂಗನಲ್ಲಿ ಫೇಲ್ ಆಗದಿದ್ದರೆ, ಬುಕ್ ರೈಟಿಂಗನಲ್ಲಿ ಫೇಲ್ ಆಗದಿದ್ದರೆ ಅವರು ಇಮೇಜ್ ಬಜಾರ್ ಕಂಪನಿಯನ್ನು ಪ್ರಾರಂಭಿಸುತ್ತಿರಲಿಲ್ಲ ಹಾಗೂ ಭಾರತದ ಬೆಸ್ಟ ಮೋಟಿವೆಷನಲ್ ಸ್ಪೀಕರ್ ಆಗುತ್ತಿರಲಿಲ್ಲ...
೧೪) ಒಂದು ವೇಳೆ ಈಲಾನ್ ಮಸ್ಕರನ್ನು ಪೇಪಾಲನಿಂದ ಬ್ಯಾಕ್ ಫಾಯರ್ ಮಾಡದಿದ್ದರೆ ಅವರು ಇವತ್ತು Space X, Tesla Motors, Hyperloop, Solarcity, The Boring Company, Neuralink ಹಾಗೂ Open AIಗಳಂಥ ದೈತ್ಯ ಕಂಪನಿಗಳ Founder and CEO ಆಗುತ್ತಿರಲಿಲ್ಲ...
೧೫) ನಮ್ಮ ಜನ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಅವಮಾನಿಸದಿದ್ದರೆ, ಅವರಿಗೆ ತೊಂದರೆ ಕೊಡದಿದ್ದರೆ ಅವರಲ್ಲಿ ಕಲಿಯುವ ಛಲ ಹುಟ್ಟುತ್ತಿರಲಿಲ್ಲ ಹಾಗೂ ಅವರು ನಮ್ಮ ದೇಶದ ಸಂವಿಧಾನವನ್ನು ಬರೆಯುತ್ತಿರಲಿಲ್ಲ.
೧೬) ಕೊನೆಯದಾಗಿ ನಾನು ಹಾಗೂ ನನ್ನ ಬ್ಯುಸಿನೆಸ್ ಪಾರ್ಟನರ್ ಶ್ರೀಕಾಂತ್ ಕಾಲೇಜ್ ಡ್ರಾಪೌಟ್ ಮಾಡದಿದ್ದರೆ, ಗೆಳೆಯರಿಂದ, ಸಂಬಂಧಿಕರಿಂದ ಅವಮಾನಿತರಾಗದಿದ್ದರೆ ನಾವಿಬ್ಬರೂ Roaring Creations Private Limited Companyಯನ್ನು ಪ್ರಾರಂಭಿಸುತ್ತಿರಲಿಲ್ಲ ಹಾಗೂ ಇಷ್ಟೊಂದು ಸಕ್ಸೆಸಫುಲ್ ಆಗುತ್ತಿರಲಿಲ್ಲ...
೧೬) ಕೊನೆಯದಾಗಿ ನಾನು ಹಾಗೂ ನನ್ನ ಬ್ಯುಸಿನೆಸ್ ಪಾರ್ಟನರ್ ಶ್ರೀಕಾಂತ್ ಕಾಲೇಜ್ ಡ್ರಾಪೌಟ್ ಮಾಡದಿದ್ದರೆ, ಗೆಳೆಯರಿಂದ, ಸಂಬಂಧಿಕರಿಂದ ಅವಮಾನಿತರಾಗದಿದ್ದರೆ ನಾವಿಬ್ಬರೂ Roaring Creations Private Limited Companyಯನ್ನು ಪ್ರಾರಂಭಿಸುತ್ತಿರಲಿಲ್ಲ ಹಾಗೂ ಇಷ್ಟೊಂದು ಸಕ್ಸೆಸಫುಲ್ ಆಗುತ್ತಿರಲಿಲ್ಲ...
ನೋಡಿದ್ರಲ್ಲಾ ಗೆಳೆಯರೇ, ನಮ್ಮ ಮಧ್ಯೆ ಎಷ್ಟೊಂದು ಜನ ಸೋತು ಗೆದ್ದವರಿದ್ದಾರೆ, ಅವಮಾನಿತರಾಗಿ ಸನ್ಮಾನಿತರಾಗಿದ್ದಾರೆ. ಸೋಲದೆ ಗೆದ್ದವರು, ಅವಮಾನಿತರಾಗದೆ ಸನ್ಮಾನಿಸಿಕೊಂಡವರು ಯಾರು ಇಲ್ಲ. ಅದಕ್ಕಾಗಿ ವಿನಾಕಾರಣ ಕೊರಗುವುದನ್ನು ಬಿಟ್ಟು, ಕೆಲಸ ಮಾಡಿ ಹಾಗೂ ಸಕ್ಸೆಸಫುಲ್ಲಾಗಿ. ಸೋಲಿನಿಂದಲೇ ಗೆಲುವು : ಅವಮಾನದಿಂದಲೇ ಸನ್ಮಾನ ಎಂಬುದನ್ನು ಮರೆಯದಿರಿ. All the Best and Thanks You...