ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

                ಹಾಯ್ ಗೆಳೆಯರೇ, ಯಾವತ್ತಾದ್ರೂ ನೀವು ನಿಮ್ಮ ಸೋಲಿಗೆ, ನಿಮ್ಮ ಬಡತನಕ್ಕೆ, ನಿಮ್ಮ ಅಪಯಶಸ್ಸಿಗೆ, ನಿಮ್ಮ ಜಂಜಾಟದ ಬದುಕಿಗೆ, ನಿಮ್ಮ ನೋವಿಗೆ, ನಿಮ್ಮ ದು:ಖಕ್ಕೆ ಯಾರು ಕಾರಣ ಅಂತ ಯೋಚನೆ ಮಾಡಿದೀರಾ? ಯೋಚನೆ ಮಾಡಿದ್ದರೆ ನಿಮಗೆ ಈ ಅಂಕಣವನ್ನು ಓದುವ ಅವಶ್ಯಕತೆ ಇಲ್ಲ. ಯೋಚನೆ ಮಾಡಿರದಿದ್ದರೆ ಈ ಅಂಕಣವನ್ನು ಕಡೆ ತನಕ ಓದಿ. ಗೆಳೆಯರೇ ನಿಮ್ಮೆಲ್ಲ ಸೋಲು- ಗೆಲುವುಗಳಿಗೆ, ನೋವು- ನಲಿವುಗಳಿಗೆ, ಏಳು-ಬೀಳುಗಳಿಗೆ, ಇಷ್ಟ-ಕಷ್ಟ-ನಷ್ಟಗಳಿಗೆ, ಉನ್ನತಿ-ಅವನತಿಗಳಿಗೆಲ್ಲ ನೀವೇ ಕಾರಣರು. ನಿಮ್ಮ ಸೋಲು-ಗೆಲುವು, ಬಡತನ-ಸಿರಿತನಕ್ಕೆ ನೀವೇ ಜವಾಬ್ದಾರರು. ನೀವು ನಿಮ್ಮ ಜೀವನದಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳು, ಬೇಜಾವಾಬ್ದಾರಿತನಗಳು, ನಿರ್ಲಕ್ಷ್ಯಗಳು ನಿಮ್ಮನ್ನು ಸೋಲಿನ ಸುಳಿಯಲ್ಲಿ ಸಿಲುಕಿಸುತ್ತವೆ. ಅಪಯಶಸ್ಸಿನ ಕೂಪಕ್ಕೆ ತಳ್ಳುತ್ತವೆ. ನಿಮ್ಮ ಸಕ್ಸೆಸ್ ಮಂತ್ರ ನಿಮ್ಮತ್ರಾನೆ ಇದೆ. ನೀವೇ ನಿಮ್ಮ ಅತಿದೊಡ್ಡ ಸಕ್ಸೆಸ್ ಮಂತ್ರ. ನೀವು ಸ್ವಲ್ಪ ಮ್ಯಾಚುರ್ ಆದರೆ ನಿಮ್ಮ ಫ್ಯುಚರ್ ಬ್ರೈಟಾಗಿ ಬಿಡುತ್ತದೆ. ನಿಮಗೆ ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂಬಾಸೆಯಿದ್ದರೆ ಈ ಸಕ್ಸೆಸ್ ಮಂತ್ರವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಸಕ್ಸೆಸ ಮಂತ್ರದಲ್ಲಿನ ಈ ಪ್ರತಿಜ್ಞೆಗಳನ್ನು ಸ್ವೀಕಾರ ಮಾಡಿ ಮತ್ತು ಅವುಗಳನ್ನು ಚಾಚು ತಪ್ಪದೆ ಪಾಲಿಸಿ ನಿಮಗೆ ಸಕ್ಸೆಸ್ ಸಿಕ್ಕೆ ಸಿಗುತ್ತದೆ.

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 1 : ಪ್ರತಿದಿನ ಮುಂಜಾನೆ ನಾನು ಸುರ್ಯೋದಯಕ್ಕಿಂತ ಮುಂಚೆ ಎದ್ದು ಎಕ್ಸರಸೈಜ ಮಾಡ್ತೀನಿ, ಯೋಗ ಪ್ರಾಣಾಯಾಮಗಳನ್ನು ಮಾಡ್ತೀನಿ. ಯಾವಾಗಲೂ ಫಿಟ್ ಆ್ಯಂಡ್ ಆಕ್ಟೀವ್ ಆಗೀರತ್ತೀನಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಟನಾಗ್ತೀನಿ. ಏಕೆಂದರೆ ನನ್ನ ದೇಹ ಸದೃಢವಾಗಿದ್ದರೆ ಮಾತ್ರ ನನ್ನ ಮನಸ್ಸು ಸದೃಢವಾಗಿರುತ್ತದೆ. ನನ್ನ ದೇಹವನ್ನು ನಾನು ಸದೃಢವಾಗಿಟ್ಟುಕೊಳ್ಳುತ್ತೇನೆ. ಏಕೆಂದರೆ ಈ ದೇಹ ಆ ದೇವರು ನನಗೆ ಕೊಟ್ಟ ಬೆಲೆಬಾಳುವ ಆಸ್ತಿ. ಅದನ್ನು ಸುಂದರವಾಗಿಟ್ಟುಕೊಳ್ಳುವುದು ನನ್ನ ಜವಾಬ್ದಾರಿ. ಹೇಗೆ ಕಾರ್ ರೇಸಲ್ಲಿ ಗೆಲ್ಲಬೇಕೆಂದರೆ ಗಾಡಿ ಚೆನ್ನಾಗಿರಬೇಕೋ, ಅದೇ ರೀತಿ ಜೀವನದಲ್ಲಿ ಗೆಲ್ಲಬೇಕೆಂದರೆ ಮೊದಲು ನನ್ನ ಬಾಡಿ ಚೆನ್ನಾಗಿರಬೇಕು. ನಾನು ನನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುಂದೆ ಸಾಗುತ್ತೇನೆ. ಮೊದಲು ನನ್ನನ್ನು ನಾನು ಗೆಲ್ಲುತ್ತೇನೆ. ನನ್ನನ್ನು ನಾನು ಗೆದ್ದರೆ ಇಡೀ ಜಗತ್ತನ್ನೇ ಗೆದ್ದಂತೆ...

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 2 : ನಾನು ಅನಾವಶ್ಯಕವಾಗಿ ಬೇರೆಯವರ ಬಗ್ಗೆ ಮಾತನಾಡುವುದನ್ನು, ಚಿಂತಿಸುವುದನ್ನು ನಿಲ್ಲಿಸುತ್ತೇನೆ. ಈ ಕ್ಷಣದಿಂದಲೇ ನಾನು ಬೇರೆಯವರನ್ನು ನಿಂದಿಸುವುದನ್ನು, ತೆಗಳುವುದನ್ನು, ಕೆಟ್ಟದಾಗಿ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ. ಏಕೆಂದರೆ ನಾನು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದಷ್ಟು ನನ್ನ ಮಾನಸಿಕ ಶಾಂತಿ ಹದಗೆಡುತ್ತದೆ. ಜನ ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಯಾರನ್ನು ನೋವಿಸುವ ಪ್ರಯತ್ನ ಮಾಡಲ್ಲ. ನಾನು ನಿಯತ್ತಾಗಿ ನನ್ನ ಕೆಲಸ ಮಾಡ್ತೀನಿ, ಮುಂದೆ ಬರ್ತೀನಿ. ನನಗೆ ಸಿಗುವ ಸಂಪೂರ್ಣ ಸಮಯವನ್ನು ನಾನು ನನ್ನ ಬ್ಯುಸಿನೆಸ್ ಗ್ರೋಥಗಾಗಿ ಬಳಸಿಕೊಳ್ಳುತ್ತೇನೆ...

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 3 : ನಾನು ಈಗಲೇ ನನ್ನ ಈಗೋವನ್ನು ಬಿಟ್ಟು ಬಿಡುತ್ತೇನೆ. ಇಲ್ಲವಾದರೆ ಜನ ನನ್ನನ್ನು ಬಿಟ್ಟು ಬಿಡುತ್ತಾರೆ. ನಾನು ಅಂಥ ಮೂರ್ಖ ಸನ್ನಿವೇಶಗಳಿಗೆಲ್ಲ ಅವಕಾಶ ಮಾಡಿ ಕೊಡಲ್ಲ. ಬೇರೆ ಯಾರನ್ನೋ ಪ್ರೀತಿಸುವುದಕ್ಕಿಂತ ಮುಂಚೆ ನಾನು ನನ್ನನ್ನು ಪ್ರೀತಿಸುತ್ತೇನೆ, ನನ್ನ ಕೆಲಸವನ್ನು ಪ್ರೀತಿಸುತ್ತೇನೆ. ನಾನು ನನ್ನಲ್ಲಿರುವ ಆಲಸ್ಯವನ್ನು ಸಾಯಿಸಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಕಂಫರ್ಟ ಝೋನನಿಂದ ಹೊರಬಂದು ಕ್ಯಾಲ್ಕುಲೆಟೆಡ್ ರಿಸ್ಕಗಳನ್ನು ತೆಗೆದುಕೊಂಡು ನನ್ನ ಗುರಿ ತಲುಪುತ್ತೇನೆ... 

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 4 : ನಾನು ಸಮಯವನ್ನು ಗೌರವಿಸುತ್ತೇನೆ. ಏಕೆಂದರೆ ನಾನೀಗ ಸಮಯವನ್ನು ಗೌರವಿಸಿದರೆ ಅದು ಒಂದಲ್ಲ ಒಂದಿನ ನನಗೆ ಗೌರವವನ್ನು ತಂದುಕೊಡುತ್ತದೆ. ನಾನು ಯಾವುದೇ ಕಾರಣಕ್ಕೂ ಸಮಯವನ್ನು ಕೊಲ್ಲುವುದಿಲ್ಲ. ನನಗೆ ಸಿಕ್ಕಿರುವ ಸಮಯವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಂಡು ನಾನು ಸಕ್ಸೆಸಫುಲ್ ವ್ಯಕ್ತಿಯಾಗುತ್ತೇನೆ. ಟೈಮನ್ನು ದುಡ್ಡಿನಂತೆ ಖರ್ಚು ಮಾಡುತ್ತೇನೆ. ನಾನು ಏನಂತಾ ನನಗೆ ಗೊತ್ತು, ನಾನು ನಾನಾಗಿದ್ದರೆ ನನಗಿಲ್ಲ ಯಾವುದೇ ಆಪತ್ತು, ಸಮಯವೇ ನನ್ನ ಅತಿದೊಡ್ಡ ಸಂಪತ್ತು....

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 5 : ನಾನು ನನ್ನೆಲ್ಲ ಜವಾಬ್ದಾರಿಗಳನ್ನು ನನ್ನ ಹೆಗಲ ಮೇಲೆ ಹೊತ್ತುಕೊಂಡು ಅವುಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಕುಂಟು ನೆಪಗಳನ್ನು ಹೇಳಿ ಜವಾಬ್ದಾರಿಗಳಿಂದ ತಪ್ಪಿಸಿಕೊಂಡು ದೂರ ಓಡುವ ಮುಠ್ಠಾಳತನವನ್ನು ನಾನೆಂದು ಮಾಡಲ್ಲ. ನಾನು ನನ್ನ ತಪ್ಪುಗಳಿಂದ ಕಲಿಯುತ್ತೇನೆ. ನೋವಿನಿಂದ ನಗುವುದನ್ನು ಕಲಿಯುತ್ತೇನೆ. ಸೋಲನ್ನು ಸಕ್ಸೆಸಾಗಿ ಬದಲಾಯಿಸುತ್ತೇನೆ. ಏನಾದರೂ ಧೈರ್ಯದಿಂದ ಮುನ್ನುಗ್ಗುತ್ತೇನೆ, ನನ್ನ ಗುರಿ ತಲುಪುತ್ತೇನೆ...

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 6 : ನಾನು ನನ್ನೆಲ್ಲ ನೋವುಗಳನ್ನು ನುಂಗಿಕೊಂಡು ನಗುತ್ತೇನೆ. ಏನೇ ಕಷ್ಟ ಬಂದರೂ ಅವುಗಳನ್ನು ಧೈರ್ಯವಾಗಿ ಎದುರಿಸಿ ಮುಂದೆ ಸಾಗುತ್ತೇನೆ. ನನ್ನ ದು:ಖವನ್ನು ಬೇರೆಯವರಿಗೆ ಹೇಳಿ ಅವರ ನಗುವನ್ನು ಕಿತ್ತುಕೊಳ್ಳಲ್ಲ.

ನಗುವನ್ನು ಹಂಚಿದರೆ ನಗು ಹೆಚ್ಚಾಗುತ್ತೆ, 
ವಿದ್ಯೆಯನ್ನು ಹಂಚಿದರೆ ವಿದ್ಯೆ ಹೆಚ್ಚಾಗುತ್ತೆ, 
ಹಣವನ್ನು ಹಂಚಿದರೆ ಹಣ ಹೆಚ್ಚಾಗುತ್ತೆ, 
ಅದೇ ರೀತಿ ನೋವನ್ನು ಹಂಚಿದರೆ ನೋವು ಕೂಡ ಹೆಚ್ಚಾಗುತ್ತೆ. 
ಅದಕ್ಕಾಗಿ ನನ್ನ ನೋವು ನನ್ನಲ್ಲೇ ಇರಲಿ.... 

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 7 : ಬೇರೆಯವರ ಹಣ, ಆಸ್ತಿ, ಅಂತಸ್ತಿಗೆ ನಾನು ಆಸೆ ಪಡಲ್ಲ. ಪರಸ್ತ್ರೀಯರ ಬಗ್ಗೆ ಕೆಟ್ಟದಾಗಿ ಯೋಚಿಸಲ್ಲ. ಯಾರ ಮೇಲೂ ಹೊಟ್ಟೆ ಉರಿದುಕೊಳ್ಳಲ್ಲ. ಏಕೆಂದರೆ ನನ್ನ ಹೊಟ್ಟೆ ಕಿಚ್ಚು ನನ್ನನ್ನೇ ಸುಡುತ್ತದೆ. ನನಗೆ ಏನು ಬೇಕೋ ನಾನೇ ಆಸೆಪಟ್ಟು, ಕಷ್ಟಪಟ್ಟು ದುಡಿದು ನಿಯತ್ತಾಗಿ ಪಡೆದುಕೊಳ್ಳುವೆ. ಬಿಟ್ಟಿಯಾಗಿ ಏನನ್ನೂ ತಗೊಳಲ್ಲ. ಯಾರ ಬಳಿಯೂ ಕೈ ಚಾಚಲ್ಲ. ಯಾರಿಗೂ ಮೋಸ ಮಾಡಲ್ಲ. ನನ್ನ ದೇಹದ ಜೊತೆಗೆ ನನ್ನ ಮೆದುಳನ್ನು ಸಹ ದಂಡಿಸಿ ನಾನು ಮುಂದೆ ಬರುತ್ತೇನೆ...
ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 8 : ಸಿರಿತನ ಬಂದಾಗ ಆಡಂಬರ ತೋರಿಸದೇ ಸಿಂಪಲ್ ಆಗಿ ಬದುಕುತ್ತೇನೆ. ಬೇರೆಯವರಿಗೆ ಬೇರೆಯವರ ಉದಾಹರಣೆಗಳನ್ನು ನೀಡುವ ಬದಲು ನಾನೇ ಒಂದು ಜೀವಂತ ಉದಾಹರಣೆಯಾಗುತ್ತೇನೆ... 

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

ಪ್ರತಿಜ್ಞೆ - 9 : ಜನನಿಗೆ, ಜನ್ಮಭೂಮಿಗೆ, ಕಲಿಸಿದ ಗುರುವಿಗೆ ಕೀರ್ತಿ ತರುತ್ತೇನೆ. ನನಗೋಸ್ಕರ ತಮ್ಮ ಖುಷಿಯನ್ನು ತ್ಯಾಗ ಮಾಡಿದ ತಂದೆತಾಯಿಗಳನ್ನು ಖುಷಿಯಾಗಿ ನೋಡಿಕೊಳ್ಳುತ್ತೇನೆ. ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುತ್ತೇನೆ. ಸತ್ಮೇಲೂ ಬದುಕಿರುತ್ತೇನೆ. ಈ ದೇಶ ನನ್ನ ಯೋಗ್ಯತೆಗೂ ಮೀರಿ ನನಗೆಲ್ಲವನ್ನು ಕೊಟ್ಟಿದೆ. ಅದಕ್ಕಾಗಿ ನಾನು ನನ್ನ ದೇಶಕ್ಕೆ ಮಹತ್ತರವಾದ ಕೊಡುಗೆಯನ್ನು ಕೊಟ್ಟ ನಂತರವೇ ಮಣ್ಣಾಗುತ್ತೇನೆ...

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada

                ಗೆಳೆಯರೇ, ಈ ಸಕ್ಸೆಸ ಮಂತ್ರಾನಾ ಮೆದುಳಲ್ಲಿ ಪ್ರಿಂಟ್ ಮಾಡ್ತೀರೋ ಅಥವಾ ಪೇಪರಲ್ಲಿ ಬರೆದು ಮನೆ ಗೋಡೆ ಮೇಲೆ ಅಂಟಿಸ್ತೀರೋ ಗೊತ್ತಿಲ್ಲ. ಒಟ್ನಲ್ಲಿ ಈ ಸಕ್ಸೆಸ್ ಮಂತ್ರಾನಾ ಫಾಲೋ ಮಾಡಿ ಸಕ್ಸೆಸಫುಲ್ ವ್ಯಕ್ತಿಗಳಾಗಿ. All the Best and Thanks You...

ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada
ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada ಅತೀ ದೊಡ್ಡ ಸಕ್ಸೆಸ್ ಮಂತ್ರ - Biggest Success Mantra in Kannada Reviewed by Director Satishkumar on June 23, 2019 Rating: 4.5
Powered by Blogger.
close
skkkannada.com