ಅಭಿನಂದನೆಗಳು : Congratulations - ಅತೀ ದೊಡ್ಡ ಸ್ಪೂರ್ತಿದಾಯಕ ಅಂಕಣ - Biggest Motivational Article in Kannada
ಗೆಳೆಯರೇ, Congratulations. ಏಕೆಂದರೆ ಈ ಅಂಕಣವನ್ನು ಓದುತ್ತಿರುವ ಕೆಲವೇ ಕೆಲವು ಲಕ್ಕಿ ವ್ಯಕ್ತಿಗಳಲ್ಲಿ ನೀವು ಕೂಡ ಒಬ್ಬರಾಗಿದ್ದೀರಾ...
ಒಂದು ವೇಳೆ ನಿಮಗೆ insult (ಇನಸಲ್ಟ) ಆಗಿದ್ದರೆ Congratulations. ಏಕೆಂದರೆ ಇವತ್ತು ನಿಮಗೆ insult (ಇನಸಲ್ಟ) ಆಗಿದ್ದರೆ ಮಾತ್ರ ಮುಂದೊಂದು ದಿನ ನಿಮಗೆ ಅವಾರ್ಡಗಳು, ರಿವಾರ್ಡಗಳು ಸಿಗುತ್ತವೆ...
ಒಂದು ವೇಳೆ ನಿಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿದ್ದರೆ Congratulations. ಏಕೆಂದರೆ ದೊಡ್ಡ ದೊಡ್ಡ ಸಮಸ್ಯೆಗಳೇ ದೊಡ್ಡ ಯಶಸ್ಸನ್ನು ತಂದು ಕೊಡುತ್ತವೆ...
ಒಂದು ವೇಳೆ ನಿಮಗೆ ದ್ವೇಷಿಗಳು, ಶತ್ರುಗಳಿದ್ದರೆ Congratulations. ಏಕೆಂದರೆ ನಿಮ್ಮನ್ನು ನಿಮ್ಮ ಗುರಿ ತಲುಪಿಸಲು, ನಿಮ್ಮನ್ನು ಬಲಿಷ್ಟರನ್ನಾಗಿಸಲು ನಿಜವಾದ ಮೋಟಿವೇಟರಗಳು ನಿಮಗೆ ಸಿಕ್ಕಿದ್ದಾರೆ...
ಒಂದು ವೇಳೆ ಜನ ನಿಮಗೆ ಕೆಟ್ಟದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ Congratulations. ಏಕೆಂದರೆ ನೀವು ಒಳ್ಳೆಯ ವ್ಯಕ್ತಿಗಳಾಗಿದ್ದೀರಿ...
ಒಂದು ವೇಳೆ ಜನ ನಿಮ್ಮನ್ನು ನೋಡಿ ಹೊಟ್ಟೆ ಉರಿದು ಕೊಳ್ಳುತ್ತಿದ್ದರೆ Congratulations. ಏಕೆಂದರೆ ನೀವು ನಿಮ್ಮ ಜೀವನದಲ್ಲಿ ಮುಂದೆ ಸಾಗುತ್ತಿದ್ದೀರಿ...
ಒಂದು ವೇಳೆ ಜನ ನಿಮ್ಮ ಬಗ್ಗೆ ಗಾಸಿಪಗಳನ್ನು ಹಬ್ಬಿಸುತ್ತಿದ್ದರೆ Congratulations. ಏಕೆಂದರೆ ನೀವೀಗ ಸೆಲೆಬ್ರಿಟಿಯಾಗಿದ್ದೀರಾ, ದೊಡ್ಡ ವ್ಯಕ್ತಿಯಾಗಿದ್ದೀರಾ...
ಒಂದು ವೇಳೆ ನೀವು ಯಾವುದರಲ್ಲಾದರೂ ಹೀನಾಯವಾಗಿ ಸೋತಿದ್ದರೆ ಇಲ್ಲ ಕೆಟ್ಟದಾಗಿ ಫೇಲ್ ಆಗಿದ್ದರೆ Congratulations. ಏಕೆಂದರೆ ನಿಮಗೆ ಅತಿ ದೊಡ್ಡ ಯಶಸ್ಸು ಸಿಗುವುದಿದೆ. ನೀವು ಅತ್ಯಂತ ಯಶಸ್ವಿ ವ್ಯಕ್ತಿಯಾಗಲು ಹೊರಟಿದ್ದೀರಿ...
ಒಂದು ವೇಳೆ ಜನ ನಿಮ್ಮ ಕಾಲೆಳೆದು ನಿಮ್ಮನ್ನು ಕೆಳಗೆ ಬೀಳಿಸಲು ಪ್ರಯತ್ನಿಸುತ್ತಿದ್ದರೆ Congratulations. ಏಕೆಂದರೆ ನೀವು ಅವರಿಗಿಂತಲೂ ಎತ್ತರವಾದ ಸ್ಥಾನದಲ್ಲಿದೀರಿ...
ಒಂದು ವೇಳೆ ಜನ ನಿಮಗೆ ತಲೆ ಕೆಟ್ಟಿದೆ ಎಂದುಕೊಳ್ಳುತ್ತಿದ್ದರೆ Congratulations. ಏಕೆಂದರೆ ನೀವು ಸರಿಯಾದ ರಸ್ತೆಯಲ್ಲಿ ಹೊರಟಿರುವಿರಿ...
ಒಂದು ವೇಳೆ ಜನ ನಿಮಗೆ "ನಿನ್ನಿಂದ ಈ ಕೆಲಸ ಆಗಲ್ಲ, ಬಿಟ್ಟ ಬಿಡು..." ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದರೆ Congratulations. ಏಕೆಂದರೆ ನೀವು ನಿಜವಾಗಿಯೂ ಬಹಳಷ್ಟು ಶಕ್ತಿಶಾಲಿ ವ್ಯಕ್ತಿಯಾಗಿರುವಿರಿ ಮತ್ತು ನೀವು ಆ ಕೆಲಸವನ್ನು ಖಂಡಿತ ಮಾಡಿ ತೋರಿಸುವಿರಿ...
ಒಂದು ವೇಳೆ ನಿಮಗೆ ನಿಮ್ಮ ಕನಸುಗಳಿಂದ ಭಯವಾಗುತ್ತಿದ್ದರೆ Congratulations. ಏಕೆಂದರೆ ನಿಮ್ಮ ಕನಸುಗಳು ದೊಡ್ಡದಾಗಿವೆ...
ಒಂದು ವೇಳೆ ನಿಮಗೆ ಕಮ್ಮಿ ಜನ ಸ್ನೇಹಿತರಿದ್ದರೆ Congratulations. ಏಕೆಂದರೆ ನೀವು ನಿಜವಾಗಿಯೂ ಸಿನ್ಸಿಯರ್ ಹಾಗೂ ಸಕ್ಸೆಸಫುಲ್ ವ್ಯಕ್ತಿಯಾಗಿದ್ದೀರಿ...
ಒಂದು ವೇಳೆ ನಿಮಗೆ ಬಡವರ, ದುರ್ಬಲರ ಕಷ್ಟಗಳನ್ನು ನೋಡಿ ದು:ಖವಾಗುತ್ತಿದ್ದರೆ Congratulations. ಏಕೆಂದರೆ ಫ್ಯುಚರದಲ್ಲಿ ಕೋಟ್ಯಾಂತರ ಜನ ನಿಮ್ಮನ್ನು ಭೇಟಿಯಾಗಲು, ನಿಮ್ಮೊಂದಿಗೆ ಮಾತನಾಡಲು, ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಾಯುತ್ತಿದ್ದಾರೆ...
ಒಂದು ವೇಳೆ ನೀವು ಈ ಅಂಕಣವನ್ನು ಕೊನೆತನಕ ಓದಿದ್ದರೆ Congratulations. ಏಕೆಂದರೆ ನೀವು ಇವತ್ತಿನಿಂದ ನಿಮ್ಮ ಜೀವನದಲ್ಲಿ ಫುಲ್ ಪವರ್ ಮೋಟಿವೇಷನದೊಂದಿಗೆ ಸರಿಯಾದ ದಿಶೆಯಲ್ಲಿ ಮುಂದೆ ಸಾಗುತ್ತೀರಿ...