ಆಸೆ ಪಡೋದು ತಪ್ಪಾ? : Is desiring is wrong? : Kannada Life Changing Article - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಆಸೆ ಪಡೋದು ತಪ್ಪಾ? : Is desiring is wrong? : Kannada Life Changing Article

ಆಸೆ ಪಡೋದು ತಪ್ಪಾ? Is desiring is wrong? Kannada Life Changing Article

                    ನಿನ್ನೆ ನಾನೊಂದು ಲೈವ್ ಮೋಟಿವೇಷನಲ್ ಸೆಷನ್ ಮಾಡ್ತಿದ್ದೆ. ಆಗ ಒಬ್ಬಳು ಯುವತಿ "ಸರ್ ಆಸೆ ಪಡೋದು ತಪ್ಪಾ? ಆಸೆ ಪಟ್ರೆ ದು:ಖ ಆಗುತ್ತೆ ಅಂತಾರೆ. ನನಗೆ ನನ್ನ ಜೀವನದಲ್ಲಿ ದೊಡ್ಡ ಬ್ಯುಸಿನೆಸ್ ವ್ಯುಮನ ಆಗಬೇಕು ಎಂಬಾಸೆಯಿದೆ. ನಾನು ಅದಕ್ಕಾಗಿ ಸಿಕ್ಕಾಪಟ್ಟೆ ಕೆಲಸ ಮಾಡ್ತಿದೀನಿ. ಆದ್ರೆ ಎಲ್ಲರೂ ತುಂಬಾ ಆಸೆ ಪಡಬೇಡ ಅಂತಿದೀರಾ. ಆಸೆ ಪಡೋದು ತಪ್ಪಾ?" ಅಂತಾ ಕೇಳಿದಳು. ಸಾಮಾನ್ಯವಾಗಿ ಎಲ್ಲರ ಮನಸ್ಸಲ್ಲಿ "ಆಸೆ ಪಡೋದು ತಪ್ಪು. ಆಸೆ ಪಡಬಾರದು..." ಎಂಬ ತಪ್ಪು ಕಲ್ಪನೆಯಿದೆ. ನನ್ನ ಪ್ರಕಾರ ಆಸೆ ಪಡೋದು ತಪ್ಪಲ್ಲ. ಏಕೆಂದರೆ ಸಣ್ಣ ಸಣ್ಣ ಆಸೆಗಳೇ ದೊಡ್ಡ ದೊಡ್ಡ ಕನಸುಗಳಿಗೆ ಬುನಾದಿಯಾಗುತ್ತವೆ. ಸಣ್ಣ ಆಸೆಗಳೇ ದೊಡ್ಡ ಸಾಧನೆಗೆ ಮುನ್ನುಡಿ ಬರೆಯುತ್ತೇವೆ. ಈ ಜಗತ್ತಿನಲ್ಲಿ ಯಾರು ನಮ್ಮ ಆಸೆಗಳನ್ನು ಈಡೇರಿಸಲು ಖಾಲಿ ಕುಂತಿಲ್ಲ. ನಮಗೆ ಏನು ಬೇಕೋ ಅದನ್ನು ನಾವೇ ಇಷ್ಟಪಟ್ಟು ಪಡೆದುಕೊಳ್ಳಬೇಕು. ನಾವು ಬಯಸಿದ್ದನ್ನು ಕಷ್ಟಪಟ್ಟು ಇಷ್ಟಪಟ್ಟು ದುಡಿದು ಸಂಪಾದಿಸುವ ತಾಕತ್ತು ನಮ್ಮಲ್ಲಿರುವಾಗ ನಾವೇಕೆ ಅಸೆಪಡಲು ಹಿಂಜರಿಯಬೇಕು? ಆಸೆ ಪಡದೆ ಅಂತಸ್ತು ಸಿಗಲ್ಲ. ನಮಗೇನು ಬೇಕೋ ಅದನ್ನ ನಾವೇ ಆಸೆಪಟ್ಟು, ನಾವೇ ಕಷ್ಟಪಟ್ಟು ಪಡೆದುಕೊಳ್ಳಬೇಕು. ಅದೇ ಜೀವನ.

ಆಸೆ ಪಡೋದು ತಪ್ಪಾ? Is desiring is wrong? Kannada Life Changing Article

                      ನೋವಾದರೂ ಪರವಾಗಿಲ್ಲ, ನಾವು ಆಸೆಪಡಲು ಹಿಂಜರಿಯಬಾರದು. ಸಣ್ಣಪುಟ್ಟ ಚಿಲ್ಲರೆ ಸ್ವಾರ್ಥ ಆಸೆಗಳು ಮಾತ್ರ ನಿರಾಸೆ ಮಾಡುತ್ತವೆ, ನೋವನ್ನು ನೀಡುತ್ತವೆ. ನಿಯತ್ತಾಗಿರುವ ಮಹಾನ್ ಆಸೆಗಳು, ನಿಸ್ವಾರ್ಥ ಆಸೆಗಳು ಯಾವತ್ತೂ ನಿರಾಸೆ ಮಾಡಲ್ಲ, ನೋವಿಸಲ್ಲ. ಮನುಷ್ಯನಲ್ಲಿ ಆಸೆಗಳಿದ್ದರೆ ಮಾತ್ರ ಆತ ಎತ್ತರಕ್ಕೆ ಬೆಳೆಯುತ್ತಾನೆ ಮತ್ತು ಅಂದುಕೊಂಡಂತೆ ಬದುಕುತ್ತಾನೆ. ಮನುಷ್ಯನಿಗೆ ಆಸೆಗಳು ಬೇಕು. ಆದರೆ ಕೆಲಸ ಮಾಡದೇ ನನಗೆ ಅಂತಸ್ತು ಸಿಗಬೇಕು, ಐಶ್ವರ್ಯ ಸಿಗಬೇಕು, ಓದದೇ ನಾನು ಪಾಸಾಗಬೇಕು, ಕಷ್ಟ ಪಡದೇ ನಾನು ಕುಬೇರನಾಗಬೇಕು, ವಿಶ್ವಸುಂದರಿ ನನ್ನ ಪ್ರೇಯಸಿಯಾಗಬೇಕು ಎಂಬೆಲ್ಲ ಮೂರ್ಖ ಆಸೆಗಳಿರಬಾರದು. ನಮ್ಮ ಆಸೆಗಳು ನೀತಿಯುತವಾಗಿರಬೇಕು ಹಾಗೂ ನಿಯತ್ತಾಗಿರಬೇಕು. 


ಆಸೆ ಪಡೋದು ತಪ್ಪಾ? Is desiring is wrong? Kannada Life Changing Article

          ಕಲಿಯೋ ಆಸೆ ಇರದಿದ್ದರೆ ರನ್ನ ಕವಿ ಚಕ್ರವರ್ತಿ ಆಗುತ್ತಿರಲಿಲ್ಲ, ವಿಜ್ಞಾನಿಗಳಿಗೆ ಸಾಧಿಸೋ ಆಸೆ ಇರದಿದ್ದರೆ ಇವತ್ತು ವಿಜ್ಞಾನ ತಂತ್ರಜ್ಞಾನ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ, ಆಡೋ ಆಸೆ ಇರದಿದ್ದರೆ ರಾಹುಲ ದ್ರಾವಿಡ ಇವತ್ತು ವಾಲ್ ಆಫ್ ಕ್ರಿಕೆಟ್ ಎಂದು ಕರೆಸಿಕೊಳ್ಳುತ್ತಿರಲಿಲ್ಲ. ಮಿಂಚೋ ಆಸೆ ಇರದಿದ್ದರೆ ಇವತ್ತು ಯಾವನು ಫಿಲ್ಮ ಸ್ಟಾರ ಆಗುತ್ತಿರಲಿಲ್ಲ. ಹಣ ಗಳಿಸೋ ಆಸೆ ಇರದಿದ್ದರೆ ಇವತ್ತು ಜೆಫ್ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಆಗುತ್ತಿರಲಿಲ್ಲ. ಯಾರಿಗೂ ಪ್ರೀತಿಸೋ ಆಸೆ ಇರದಿದ್ದರೆ ಈ ಜಗತ್ತಿನಲ್ಲಿ ಯಾರಿಗೂ ದೇವದಾಸ-ಪಾರು, ಲೈಲಾ-ಮಜನು, ರೋಮಿಯೋ-ಜ್ಯೂಲಿಯಟರ ಹೆಸರೇ ಗೊತ್ತಿರುತ್ತಿರಲಿಲ್ಲ. ಯಾರಿಗೂ ಬದುಕೋ ಆಸೆ ಇಲ್ಲದಿದ್ದರೆ ಇವತ್ತು ಈ ಭೂಮಿ ಮನುಷ್ಯರಿಲ್ಲದೆ ಮರಭೂಮಿ ಆಗಿರುತ್ತಿತ್ತು. So ಆಸೆ ಪಡೋದು ತಪ್ಪಲ್ಲ, ಚಿಲ್ಲರೆ ವಿಷಯಗಳಿಗೆ ಆಸೆ ಪಡೋದು ತಪ್ಪು. ಆಸೆ ಪಡೋದು ತಪ್ಪಲ್ಲ, ಆಸೆಪಟ್ಟ ನಂತರ ಅದನ್ನು ಕಷ್ಟಪಟ್ಟು ಪಡೆದುಕೊಳ್ಳುವ ಬದಲು ಅವಕಾಶವನ್ನೆಲ್ಲ ಕೈಚೆಲ್ಲಿ "ಆಸೆಯೇ ದು:ಖಕ್ಕೆ ಮೂಲ ಕಾರಣ" ಎಂದೆನ್ನುತ್ತಾ ನಿಮ್ಮ ತಪ್ಪನ್ನು ಮುಚ್ಚಾಕೋದು ದೊಡ್ಡ ತಪ್ಪು. ಆಸೆ ಪಡದೆ ಅಂತಸ್ತು ಸಿಗಲ್ಲ. ಅದಕ್ಕಾಗಿ ಆಸೆ ಪಡಿ. ನಿಯತ್ತಾಗಿರೋ ಆಸೆಗಳು ಯಾವತ್ತೂ ನಿಮಗೆ ನಿರಾಸೆ ಮಾಡಲ್ಲ. All the best and Thanks you...


ಆಸೆ ಪಡೋದು ತಪ್ಪಾ? Is desiring is wrong? Kannada Life Changing Article





Blogger ನಿಂದ ಸಾಮರ್ಥ್ಯಹೊಂದಿದೆ.