ನಿನ್ನಿಂದೇಕೆ ಏನು ಸಾಧ್ಯವಿಲ್ಲ...? - Why can't you...? - Powerful Motivational Article in Kannada - motivational speech in kannada
ಈ ದೇಶದಲ್ಲಿ ಒಬ್ಬಳು ಹುಡುಗಿ ಬರೀ ಕಣ್ಣೊಡೆದು ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗುತ್ತಾಳೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಪ್ರಿಯಾ ಪ್ರಕಾಶ್ ವಾರಿಯರ್)
ಈ ದೇಶದಲ್ಲಿ ಒಬ್ಬಳು ಹುಡುಗಿ ಕೆಟ್ಟದಾಗಿ ಹಾಡ ಹಾಡಿ ಯೂಟ್ಯೂಬ್ ಸೆನ್ಸೇಷನ್ ಆಗುತ್ತಾಳೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಡಿಂಕಚಕ್ ಪೂಜಾ)
ಗೆಳೆಯರೇ, ಇವೆಲ್ಲ ಸ್ವಲ್ಪ ತಮಾಷೆಯೆನಿಸಬಹುದು. ಅದಕ್ಕಾಗಿ ಸ್ವಲ್ಪ ಸೀರಿಯಸ್ ಉದಾಹರಣೆಗಳನ್ನು ನೋಡೋಣ.
ಸ್ವಂತ ದುಡ್ಡಿನಲ್ಲಿ ಫಿಲಂ ಸೀಟಿಗೆ ಬರುವ ಯೋಗ್ಯತೆಯಿಲ್ಲದ ಒಬ್ಬ ಹುಡುಗ ಬಾಲಿವುಡ್ ಬಾದಷಹ ಆಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಶಾರುಖ ಖಾನ)
ಒಬ್ಬ ಸಾಧಾರಣ ಬಸ್ ಕಂಡಕ್ಟರ್ ಆಗಿದ್ದ ಹುಡುಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಸ್ಟಾರ ಆಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ರಜನಿಕಾಂತ)
ಒಂದು ಸಾಧಾರಣ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದು ಯೆಮೆನ ದೇಶದ ಆಯಿಲ್ ಕಂಪನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಭಾರತಕ್ಕೆ ವಾಪಸ ಬಂದು ರಿಲಯನ್ಸನಂಥ ದೈತ್ಯ ಕಂಪನಿಯನ್ನು ಕಟ್ಟುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಧೀರೂಭಾಯಿ ಅಂಬಾನಿ)
ಚಿಕ್ಕ ವಯಸ್ಸಿನಲ್ಲಿ ತನ್ನ ಕುಟುಂಬಕ್ಕೆ ಆಧಾರವಾಗಲು ನ್ಯೂಸ್ ಪೇಪರ್ ಮಾರುತ್ತಿದ್ದ ಹುಡುಗ ಭಾರತದ ರಾಷ್ಟ್ರಪತಿ, ಶ್ರೇಷ್ಟ ವಿಜ್ಞಾನಿಯಾಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಡಾ. ಎ.ಪಿ.ಜೆ. ಅಬ್ದುಲ ಕಲಾಂ)
ಭಾರತೀಯ ರೇಲ್ವೆ ಇಲಾಖೆಯಲ್ಲಿ ಟೀಕೆಟ್ ಎಕ್ಸಾಮಿನರ್ ಆಗಿ ಕೆಲಸ ಮಾಡುತ್ತಿದ್ದ ಹುಡುಗ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಒನ್ ಡೇ ಹಾಗೂ ಟಿ-20 ವರ್ಲ್ಡ್ ಕಪಗಳನ್ನು ಗೆಲ್ಲುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಮಹೇಂದ್ರ ಸಿಂಗ್ ಧೋನಿ)
ಹಾರ್ವರ್ಡ್ ಕಾಲೇಜನಿಂದ ಡ್ರಾಪ್ ಔಟ್ ಆಗಿ ಒಂದು ಸಣ್ಣ ಕಂಪನಿಯಲ್ಲಿ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಮೈಕ್ರೋಸಾಫ್ಟನಂಥ ದೈತ್ಯ ಕಂಪನಿಯನ್ನು ಪ್ರಾರಂಭಿಸಿ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬನಾಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಬಿಲ್ ಗೇಟ್ಸ್)
McDonaldsನಲ್ಲಿ ಗ್ರಿಲ್ ಆಪರೇಟರ್ ಆಗಿದ್ದ ಹುಡುಗ ಅಮೆಜಾನ್ ಈ-ಕಾಮರ್ಸ್ ಕಂಪನಿಯನ್ನು ಪ್ರಾರಂಭಿಸಿ ಜಗತ್ತಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಜೆಫ್ ಬೆಝೋಸ್)
10th ಫೇಲಾದ ಒಬ್ಬ ಹುಡುಗ God of Cricket ಆಗುತ್ತಾತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಸಚಿನ್ ತೆಂಡೂಲ್ಕರ್)
ಹೋಮಲೆಸ್ ಆಗಿ ಅಲೆಯುತ್ತಿದ್ದ ಒಬ್ಬ ವ್ಯಕ್ತಿ ತನ್ನ 65 ವಯಸ್ಸಿನಲ್ಲಿ KFC ಪ್ರಾರಂಭಿಸಿ ಕೋಟಿಗಟ್ಟಲೇ ಸಂಪಾದಿಸುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಕ್ಯಾಲೊನೆಲ್ ಸ್ಯಾಂಡರ್ಸ್)
ಒಬ್ಬ ಹುಡುಗ ಸಾವಿರ ಸಲ ಫೇಲ್ ಆದರೂ ಛಲ ಬಿಡದೇ ಮತ್ತೆಮತ್ತೆ ಪ್ರಯೋಗಗಳನ್ನು ಮಾಡಿ ಬಲ್ಬನ್ನು ಕಂಡು ಹಿಡಿದು ಜಗತ್ತಿಗೆ ಬೆಳಕನ್ನು ಕೊಡುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಥಾಮಸ್ ಆಲ್ವಾ ಎಡಿಸನ್)
ಚಿಕ್ಕ ವಯಸ್ಸಿನಲ್ಲಿ ಡಿಸ್ಲೆಕ್ಸಿಯಾ ಕಾಯಿಲೆಯಿಂದ ಬಳಲಿ ಹಾಯ್ ಸ್ಕೂಲಿನಿಂದಲೇ ಡ್ರಾಪ್ ಔಟ್ ಆದ ಒಬ್ಬ ಹುಡುಗ ವರ್ಜಿನ್ ಬುಸಿನೆಸ್ ಗ್ರೂಪನ್ನು ಪ್ರಾರಂಭಿಸಿ ಮಲ್ಟಿ ಟಾಲೆಂಟೆಡ್ ಬ್ಯುಸಿನೆಸಮ್ಯಾನ್ ಆಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...?
(ರಿಚರ್ಡ್ ಬ್ರಾನಸನ್)
ಒಬ್ಬ ಹುಡುಗ ಯಾರ ಮಾರ್ಗದರ್ಶನವೂ ಇಲ್ಲದೇ, ಕಾಲೇಜ್ ಡಿಗ್ರಿಗಳ ಸಹಾಯವಿಲ್ಲದೆ ಬರೀ ಪುಸ್ತಕಗಳನ್ನು ಓದಿ ರಾಕೆಟ್ ಸೈನ್ಸನ್ನು ಕಲಿತು Space-X ಕಂಪನಿ ಕಟ್ಟಿ ಸ್ವಂತ ಬಲದ ಮೇಲೆ ಮಂಗಳಯಾನ ಮಾಡುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಇಲಾನ್ ಮಸ್ಕ್)
ಚಿಕ್ಕ ವಯಸ್ಸಿನಲ್ಲಿ ಹಾರ್ಟ್ ಆಪರೇಷನಗೆ ಒಳಗಾಗಿ ಆಲ್ ಮೋಸ್ಟ ಆಲ್ ಎಲ್ಲವನ್ನು ಕಳೆದುಕೊಂಡಿದ್ದ ಹುಡುಗ ಮತ್ತೆ ಸಿಡಿದೆದ್ದು ವರ್ಲ್ಡ್ ಫೇಮಸ್ ರೀಚೆಸ್ಟ್ ಫುಟ್ಬಾಲ್ ಪ್ಲೇಯರ್ ಆಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? ( ಕ್ರಿಶ್ಚಿಯಾನೊ ರೊನಾಲ್ಡೊ)
ಒಬ್ಬಳು ಹುಡುಗಿ ಮಣಿಪುರದ ಒಂದು ಚಿಕ್ಕ ಹಳ್ಳಿಯಲ್ಲಿ ಜನಿಸಿ ಬಡತನದೊಂದಿಗೆ ಹೋರಾಡಿ ಹೈ ಕ್ಲಾಸ್ ಟ್ರೇನಿಂಗ ಇಲ್ಲದೇ 6 ಬಾರಿ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ ಆಗುತ್ತಾಳೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಮೇರಿ ಕೋಮ್)
ತನ್ನ ಫುಟ್ಬಾಲ್ ಕೋಚಿಂಗಗಾಗಿ ಹಣ ಹೊಂದಿಸಲು ಟೀ ಮಾರುತ್ತಿದ್ದ ಒಬ್ಬ ಹುಡುಗ ಹೈಯೆಸ್ಟ್ ಪೇಡ ಗ್ರೇಟ್ ಫುಟ್ಬಾಲರ್ ಆಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಲಿಯೋನ್ ಮೆಸ್ಸಿ)
30 ಜಾಬ್ ಇಂಟರ್ವ್ಯೂವಗಳಲ್ಲಿ ಫೇಲಾದ ಒಬ್ಬ ಹುಡುಗ ಅಲಿಬಾಬಾ ಈ ಕಾಮರ್ಸ್ ಬ್ಯುಸಿನೆಸ್ ಕಂಪನಿ ಕಟ್ಟುವ ಮೂಲಕ ದೈತ್ಯ ಬ್ಯುಸಿನೆಸಮ್ಯಾನ್ ಆಗುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಜಾಕ್ ಮಾ)
ಟ್ರಕ್ ಡ್ರೈವರ್ ಆಗಿದ್ದ ಒಬ್ಬ ಹುಡುಗ ಹಾಲಿವುಡ್ ಡೈರೆಕ್ಟರ್ ಆಗಿ ಟೈಟಾನಿಕ್ ಮತ್ತು ಅವತಾರಗಳಂಥ ಬ್ಲಾಕ್ ಬ್ಲಾಸ್ಟರ್ ಸಿನೆಮಾಗಳನ್ನು ಮಾಡುತ್ತಾನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ...? (ಜೇಮ್ಸ್ ಕ್ಯಾಮರಾನ್)
ಕಾಲೇಜು ದಿನಗಳಲ್ಲಿ ಪಾರ್ಟ್ ಟೈಮ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಬ್ಬ ಸಕ್ಸೆಸಫುಲ್ ರೈಟರ್ ಆಗುವುದರ ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೋ ಫೌಂಡರ್ & ಸಿಇಒ ಆಗುತ್ತೇನೆಂದರೆ ನಿನ್ನಿಂದೇಕೆ ಏನು ಸಾಧ್ಯವಿಲ್ಲ....? (ಡೈರೆಕ್ಟರ್ ಸತೀಶಕುಮಾರ)
ನೀವು ಯಾರಿಗಿಂತ ಕಮ್ಮಿಯಿಲ್ಲ, ನೀವು ಸದ್ಯಕ್ಕೆ ಮಾಡುತ್ತಿರುವ ಯಾವುದೇ ಕೆಲಸ ಕೀಳಲ್ಲ, ನಿಮ್ಮಿಂದ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡುವ ಏಕಮಾತ್ರ ಉದ್ದೇಶದಿಂದ ನಾನೀ ಅಂಕಣವನ್ನು ಬರೆದಿರುವೆ. ಈ ಅಂಕಣದಿಂದ ನಿಮಗೆ ಸ್ಫೂರ್ತಿ ಸಿಕ್ಕಿದ್ದರೆ, ಜೀವನದಲ್ಲಿ ನಾನು ನನ್ನ ಗುರಿ ಮುಟ್ಟುತ್ತೇನೆ ಎಂಬ ಕಾನ್ಫಿಡೆನ್ಸ್ ಬಂದಿದ್ದರೆ ಮಾತ್ರ ಈ ಅಂಕಣವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. Thanks and All the Best...