ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada

                                   ಮಾನವನಾಗಿ ಜನಿಸಿದ ತಪ್ಪಿಗೆ ನಿಮಗೆ ಪದೇ ಪದೇ ಸಂಕಷ್ಟಗಳು ಬರುತ್ತಿವೆ, ಜನಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆ ಹೆಚ್ಚಿದೆ ಎಂದು ನೀವು ಕೊರಗುತ್ತಿದ್ದರೆ ಮೊದಲು ನೀವು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. "ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ" ಎಂಬ ಸತ್ಯವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಹುಟ್ಟುವುದಕ್ಕಿಂತ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ. ನೀವು ಹುಟ್ಟುವಾಗಲೇ ಒಂದು ಮಹಾನ್ ರೇಸನ್ನು ಗೆದ್ದು ವಿಜಯಶಾಲಿಯಾಗಿ ಕಣ್ತೆರೆದಿರುವಿರಿ... 

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada

                ಲೈಂಗಿಕ ಸಂಭೋಗದ ನಂತರ, ಮನುಷ್ಯನಿಂದ ಸಂಗ್ರಹಿಸಲ್ಪಟ್ಟ ಸುಮಾರು 200 ರಿಂದ 300 ಮಿಲಿಯನ್ ವೀರ್ಯಾಣುಗಳು (Sperms) ಅಂಡಾಣುವನ್ನು (Ovum / Egg) ತಲುಪಲು ಫೀಮೇಲ್ ರಿಪ್ರೊಡಕ್ಟಿವ್  ಟ್ರ್ಯಾಕನೊಳಗೆ ಮೇಲ್ಮುಖವಾಗಿ ಈಜಲು ಪ್ರಾರಂಭಿಸುತ್ತವೆ. 300 ಮಿಲಿಯನನಲ್ಲಿ ಕೇವಲ 300 ರಿಂದ 500 ವೀರ್ಯಾಣುಗಳು ಮಾತ್ರ ಅಂಡಾಣುವನ್ನು ತಲುಪುತ್ತವೆ. ಏಕೆಂದರೆ ಇದು ಸುಲಭವಾದ ಓಟವಲ್ಲ, ಇದರಲ್ಲಿ ಬಹಳಷ್ಟು ವೀರ್ಯಾಣುಗಳು ದಣಿದು ಹಿಂದೆ ಸರಿಯುತ್ತವೆ. ಅಂಡಾಣುವನ್ನು ತಲುಪಿದ 500 ವೀರ್ಯಾಣುಗಳಲ್ಲಿ ಕೇವಲ 1 ವೀರ್ಯಾಣು ಮಾತ್ರ ಮೊಟ್ಟೆಯೊಂದಿಗೆ ಫಲವತ್ತಾಗುತ್ತದೆ. ಅಂತಹ ವಿಜೇತ ವೀರ್ಯಾಣುಗಳಲ್ಲಿ ನೀವು ಒಬ್ಬರು. ನೀವು ಹುಟ್ಟುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗುತ್ತದೆ. ನೀವು ಹುಟ್ಟುವಾಗಲೇ ವಿಜಯಶಾಲಿಯಾಗಿ ಹುಟ್ಟುತ್ತೀರಿ. You are a champion from by birth only... 

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada

               ಈ ವಿಷಯ ಮೊದಲೇ ನಿಮಗೆ ಗೊತ್ತಿರಬಹುದು. ಆದರೆ ನೀವು ಇದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಒಂದು ವೇಳೆ ಈ ವಿಷಯ ನಿಮ್ಮ ತಲೆಯೊಳಗೆ ಹೋಗಿದ್ದರೆ ನೀವು ನಿಮ್ಮ ಜೀವನದಲ್ಲಿ ಬರುವ ಸಂಕಷ್ಟಗಳಿಗೆ, ಸ್ಪರ್ಧೆಗೆ ಹೆದರುತ್ತಿರಲಿಲ್ಲ. ಒಂದು ಸಲ ಶಾಂತಚಿತ್ತದಿಂದ ಯೋಚಿಸಿ, ನೀವು ಜನಿಸುವ ಮೊದಲು ಕಣ್ಣಿಲ್ಲದೆ, ಕಾಲಿಲ್ಲದೇ, ಮೆದುಳಿಲ್ಲದೇ, ಬುದ್ಧಿಯಿಲ್ಲದೆ, ವಿದ್ಯೆಯಿಲ್ಲದೆ, ಯಾರ ಸಹಾಯವೂ ಇಲ್ಲದೆ ನೀವು ನಿಮ್ಮ ಮೊದಲ ಯುದ್ಧವನ್ನು ಯಶಸ್ವಿಯಾಗಿ ಗೆದ್ದಿರುವಿರಿ. ಹೀಗಿರುವಾಗ ನೀವು ಈಗ್ಯಾಕೆ ಸುಮ್ಮನೆ ಚಿಂತಿಸುತ್ತಾ ಕೈಕಟ್ಟಿ ಕುಳಿತ್ತಿದ್ದೀರಾ? ನಿಮ್ಮ ಬಳಿ ಈಗ ಕೈ, ಕಾಲು, ಕಣ್ಣು, ಮೆದುಳು, ಬುದ್ಧಿ, ವಿದ್ಯೆ ಎಲ್ಲವು ಇರುವಾಗ ಚಿಂತೆಯೇಕೆ? ನಿಮಗಿಂತ ನಿಮ್ಮ ಸಮಸ್ಯೆಗಳು ದೊಡ್ಡವಲ್ಲ. ಜನಿಸುವ ಮೊದಲೇ 300 ಮಿಲಿಯನ್ ಜನರೊಂದಿಗೆ ಸ್ಪರ್ಧಿಸಿ ಗೆದ್ದವರಿಗೆ ಈಗ ಜನಿಸಿದ ನಂತರ ಕೆಲವೊಂದಿಷ್ಟು ಜನರೊಂದಿಗೆ, ಕೆಲವೊಂದಿಷ್ಟು ಸಮಸ್ಯೆಗಳೊಂದಿಗೆ ಸ್ಪರ್ಧಿಸಿ ಗೆಲ್ಲುವುದು ದೊಡ್ಡ ವಿಷಯವೇನಲ್ಲ. ಅಲ್ವಾ? ಸತ್ತ ವೀರ್ಯಾಣುವಿಗೂ ಸಹ ಜನ್ಮ ನೀಡುವ ಸಾಮರ್ಥ್ಯವಿರುವಾಗ ಜೀವಂತವಾಗಿರುವ ನಿಮಗೇನಾಗಿದೆ? ನಿಮ್ಮ ಜೀವನದಲ್ಲಿ ಬಂದಿರುವ ಸಮಸ್ಯೆಗಳನ್ನು, ಸ್ಪರ್ಧೆಗಳನ್ನು ಧೈರ್ಯವಾಗಿ ಎದುರಿಸಿ ವಿಜಯಶಾಲಿಗಳಾಗಿ. ಚಾಂಪಿಯನಗಳಿಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ ಅನ್ಕೋತ್ತೀನಿ. All the Best and Thanks you...  

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada
Blogger ನಿಂದ ಸಾಮರ್ಥ್ಯಹೊಂದಿದೆ.