ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? : How to convert your Passion into Profitable Profession or Business? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? : How to convert your Passion into Profitable Profession or Business?

ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? How to convert your Passion into Profitable Profession or Business?

                    ಹಾಯ್ ಗೆಳೆಯರೇ, ನೀವು ಮಾಡುವ ಕೆಲಸದಿಂದ ನಿಮಗೆ ಖುಷಿ ಸಿಗುತ್ತಿದ್ದರೆ ಇದಕ್ಕಿಂತಲೂ ಖುಷಿಯ ವಿಷಯ ಬೇರೊಂದಿಲ್ಲ. ನೀವು ಮಾಡುವ ಕೆಲಸ ನಿಮಗೆ ಕೆಲಸದಂತೆ ಕಾಣದೆ ಆಟದಂತೆ ಕಂಡರೆ ನೀವು ನಿಮಗಿಷ್ಟವಿರುವ ಕೆಲಸವನ್ನು ಮಾಡುತ್ತಿದ್ದೀರಿ ಎಂದರ್ಥ. ನೀವು ಮಾಡುವ ಕೆಲಸ ನಿಮಗೆ ಕಾಟಾಚಾರದಂತೆ ಕಂಡರೆ ನೀವು ನಿಮಗಿಷ್ಟವಿಲ್ಲದ ಕೆಲಸವನ್ನು ಒತ್ತಡದಲ್ಲಿ ಮಾಡುತ್ತಿದ್ದೀರಿ ಎಂದರ್ಥ. ನೀವು ಕಷ್ಟಪಟ್ಟು ಮಾಡುವ ಕೆಲಸ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ, ನೀವು ಇಷ್ಟಪಟ್ಟು ಮಾಡುವ ಕೆಲಸ ಮಾತ್ರ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಅದಕ್ಕಾಗಿ ಗೆಳೆಯರೇ ಇವತ್ತಿನ ಅಂಕಣದಲ್ಲಿ "ನಿಮ್ಮಲ್ಲಿರುವ ಪ್ಯಾಷನನ್ನು ಫ್ರೋಫಿಟೇಬಲ್ ಪ್ರೋಫೆಷನ್ನಾಗಿ ಪರಿವರ್ತಿಸುವುದು ಹೇಗೆ?" ಎಂಬುದನ್ನು ನೋಡೊಣಾ...

ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? How to convert your Passion into Profitable Profession or Business?

Step - 1 : ನಿಮ್ಮಲ್ಲಿರುವ ಪ್ಯಾಷನನ್ನು ಪತ್ತೆ ಹಚ್ಚಿ (First Find your Passion) : 

ಮೊದಲು ನಿಮ್ಮಲ್ಲಿರುವ ಪ್ಯಾಷನನ್ನು ಪತ್ತೆ ಹಚ್ಚಿ. ಆನಂತರ ಅದನ್ನು ಸ್ವಲ್ಪ ಆಳವಾಗಿ ಪರೀಕ್ಷಿಸಿ. ನಿಜವಾಗಿಯೂ ನಿಮ್ಮಲ್ಲಿ ನೀವೆಂದುಕೊಂಡ ಕಲೆ ಇದೆಯಾ ಎಂಬುದನ್ನು ಕಂಡುಕೊಳ್ಳಿ. ನಿಮಗೆ ಸಂಬಳ ಸಿಗದಿದ್ದರೂ ನೀವು ಯಾವ ಕೆಲಸವನ್ನು ಆಯಾಸವಿಲ್ಲದೆ, ಒತ್ತಡವಿಲ್ಲದೆ ಖುಷಿಖುಷಿಯಾಗಿ ನಿಯತ್ತಾಗಿ ಮಾಡುತ್ತಿರೋ ಅದೇ ನಿಮ್ಮ ಪ್ಯಾಷನ್ ಆಗಿರುತ್ತದೆ. ನೀವು ಯಾವುದಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುತ್ತಿರೋ ಅದೇ ನಿಮ್ಮ ಪ್ಯಾಷನ್ ಆಗಿರುತ್ತದೆ. ನಿಮ್ಮ ಪ್ಯಾಷನನ್ನು ಪತ್ತೆ ಹಚ್ಚಿ ಮತ್ತು ಅದನ್ನು ಪರೀಕ್ಷಿಸಿ.

ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? How to convert your Passion into Profitable Profession or Business?

Step - 2 : ಮಾರುಕಟ್ಟೆಯಲ್ಲಿರುವ ಪ್ರಾಬ್ಲೆಮಗಳನ್ನು, ಅವಕಾಶಗಳನ್ನು ಗಮನಿಸಿ (Observe the Problems and Opportunities of Market) : 

ನಿಮ್ಮಲ್ಲಿರುವ ಪ್ಯಾಷನನ್ನು ಪತ್ತೆ ಹಚ್ಚಿದ ನಂತರ ಮಾರುಕಟ್ಟೆಯಲ್ಲಿರುವ ಪ್ರಾಬ್ಲೆಮಗಳನ್ನು, ಅವಕಾಶಗಳನ್ನು ಸ್ವಲ್ಪ ಕೇರಫುಲ್ಲಾಗಿ ಗಮನಿಸಿ. ಮಾರುಕಟ್ಟೆಯಲ್ಲಿರುವ ಯಾವ ಪ್ರಾಬ್ಲೆಮನ್ನು ಸಾಲ್ವ ಮಾಡುವ ಶಕ್ತಿ ನಿಮ್ಮ ಪ್ಯಾಷನಗಿದೆ ಎಂಬುದನ್ನು ತಾಳೆ ಹಾಕಿ. ನಿಮ್ಮ ಪ್ಯಾಷನ್ ಮೂಲಕ ಮಾರುಕಟ್ಟೆಯಲ್ಲಿರುವ ಪ್ರಾಬ್ಲೆಮ ಸಾಲ್ವ ಆಗುತ್ತಿದ್ದರೆ ಮಾತ್ರ ನಿಮ್ಮಲ್ಲಿರುವ ಪ್ಯಾಷನಗೆ ಬೆಲೆ ಸಿಗುತ್ತದೆ. ನಿಮ್ಮ ಪ್ಯಾಷನದಿಂದ ಸಮಾಜದ ಸಮಸ್ಯೆ ಬಗೆಹರಿಯುತ್ತಿದ್ದರೆ ಇಲ್ಲ ಸಂತೋಷವಾಗುತ್ತಿದ್ದರೆ ಇಲ್ಲ ಮನರಂಜನೆ ಸಿಗುತ್ತಿದ್ದರೆ ಮಾತ್ರ ನಿಮ್ಮ ಪ್ಯಾಷನ್ ಪ್ರೊಫೆಷನ್ನಾಗಿ ಬದಲಾಗುತ್ತದೆ. ನಿಮ್ಮ ಪ್ಯಾಷನನಿಂದ ಯಾವುದೇ ಪ್ರೊಫಿಟ್ ಆಗದಿದ್ದರೆ ಅದು ಕೇವಲ ಹಾಬಿಯಾಗಿ ಉಳಿಯುತ್ತದೆ. ಆದ್ದರಿಂದ ನಿಮ್ಮ ಪ್ಯಾಷನ್ ಹಾಗೂ ಸಮಾಜದ ಪ್ರಾಬ್ಲಮಗಳನ್ನು ಟ್ಯಾಲಿ ಮಾಡಿ ಮತ್ತು ನಿಮ್ಮ ಪ್ಯಾಷನನ್ನುಫ್ರೋಫಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸಿ. 

ಉದಾಹರಣೆಗಾಗಿ :

* ಜನರಿಗೆ ತಮ್ಮ ಜೀವನಕ್ಕಿಂತ ಬೇರೆಯವರ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಜಾಸ್ತಿ ಆಸಕ್ತಿಯಿದೆ. ಜನ ಬೇರೆಯವರ ಜೀವನದಲ್ಲಿ ಇಣುಕಿ ನೋಡಲು ಕಾತರಿಸುತ್ತಾರೆ. ಜನರಿಗೆ ತಮ್ಮ ಬದುಕನ್ನು ಎಕ್ಸಪೋಸ್ ಮಾಡಲು ಒಂದು ಫ್ರೀ ಆನಲೈನ್ ಸೈಟನ ಅವಶ್ಯಕತೆಯಿದೆ ಎಂದು ಗೊತ್ತಾದಾಗ ಮಾರ್ಕ್ ಜುಕರಬರ್ಗನಿಂದ ಫೇಸ್ಬುಕ್ ಜನ್ಮತಾಳಿತು. ಮಾರ್ಕ್ ಜುಕರಬರ್ಗರಿಗೆ ಬಾಲ್ಯದಿಂದಲೂ ಕೊಡಿಂಗನಲ್ಲಿ ಆಸಕ್ತಿಯಿತ್ತು. ಅದೇ ಅವರ ಪ್ಯಾಷನ್ ಆಗಿತ್ತು. ಅವರ ಪ್ಯಾಷನ್ ಫೇಸ್ಬುಕ್ ಮೂಲಕ ಒಂದು ಫ್ರೋಫಿಟೇಬಲ್ ಬ್ಯುಸಿನೆಸ್ ಆಯಿತು. 

* ಬಿಲಗೇಟ್ಸರಿಗೆ ಬಾಲ್ಯದಿಂದಲೂ ಕೋಡಿಂಗ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮಿಂಗನಲ್ಲಿ ಪ್ಯಾಷನ್ ಇತ್ತು. ಅದರ ಮೂಲಕ ಅವರು ವಿಂಡೋಸನ್ನು ತಯಾರಿಸಿ ಜಗತ್ತಿನ ಪ್ರಾಬ್ಲೆಮನ್ನು ಸಾಲ್ವ ಮಾಡಿ ಶ್ರೀಮಂತರಾದರು. 

* ಕೆಲಸದ ಒತ್ತಡದಿಂದಾಗಿ ಜನ ಟೆನ್ಶನ್ ಹಾಗೂ ಡೆಪ್ರೆಶನ್ನಲ್ಲಿ ಒದ್ದಾಡುತ್ತಿದ್ದಾರೆ ಎಂಬುದನ್ನು ಕಂಡುಕೊಂಡ ನಂತರ ಕಪಿಲ್ ಶರ್ಮ ತಮ್ಮಲ್ಲಿರುವ ಹಾಸ್ಯ ಕಲೆಯನ್ನೇ ಪ್ರೊಫೆಶನ್ ಮಾಡಿಕೊಂಡು ಜನರನ್ನು ನಗಿಸಿ ತಾವು ಕೂಡ ಲೈಫಲ್ಲಿ ಚೆನ್ನಾಗಿ ಸೆಟ್ಲಾದರು. 

* ಜನರಿಗೆ ಡಿಸೈನರ್ ಕಾರಗಳಲ್ಲಿ ತುಂಬಾ ಆಸಕ್ತಿ ಇದೆ ಎಂಬುದು ಗೊತ್ತಾದಾಗ ದಿಲೀಪ್ ಛಾಬರಿಯಾ ಕಾರುಗಳ ಬಗ್ಗೆ ತಮಗಿದ್ದ ಪ್ಯಾಷನನ್ನೇ ಪ್ರೊಫೆಷನನ್ನಾಗಿ ಪರಿವರ್ತಿಸಿಕೊಂಡು ಕಾರುಗಳನ್ನು ಡಿಸೈನ್ ಮಾಡಲು ಪ್ರಾರಂಭಿಸಿದರು. 

* ಸದ್ಯಕ್ಕೆ ಯುವ ಜನಾಂಗಕ್ಕೆ ವಿಡಿಯೋಗಳನ್ನು ಮಾಡಲು ಒಂದು ಈಜಿ ವಿಡಿಯೋ ಮೇಕಿಂಗ್ & ವಿಡಿಯೋ ಶೇರಿಂಗ್ Appನ ಅವಶ್ಯಕತೆ ತುಂಬಾನೇ ಇದೆ ಎಂದಾಗ TikTok ಮಾರುಕಟ್ಟೆಗೆ ಬಂದು ಧೂಳೆಬ್ಬಿಸಿತು. 

ಈ ರೀತಿ ನಿಮ್ಮ ಪ್ಯಾಷನ್ ಹಾಗೂ ಮಾರುಕಟ್ಟೆಯ ಪ್ರಾಬ್ಲಮ್ ಒಂದಾದಾಗ ಒಂದು ಫ್ರೋಫಿಟೇಬಲ್ ಬ್ಯುಸಿನೆಸ್ ಪ್ರಾರಂಭವಾಗುತ್ತದೆ.  


ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? How to convert your Passion into Profitable Profession or Business?

Step - 3 : ನಿಮ್ಮ ಪ್ಯಾಷನನ್ನು ಪ್ರ್ಯಾಕ್ಟೀಸ್ ಮಾಡಿ ಮತ್ತು ಸರಿಯಾದ ಆ್ಯಕ್ಷನಗಳನ್ನು ತೆಗೆದುಕೊಳ್ಳಿ (Practice your Passion and Take Right Actions) : 

ನಿಮ್ಮ ಪ್ಯಾಷನನಿಂದ ಮಾರುಕಟ್ಟೆಯಲ್ಲಿನ ಯಾವ ಪ್ರಾಬ್ಲಮ್ ಸಾಲ್ವ ಆಗುತ್ತೆ ಎಂಬುದನ್ನು ಕಂಡುಕೊಂಡ ನಂತರ ನಿಮ್ಮ ಪ್ಯಾಷನನ್ನು ಸರಿಯಾಗಿ ಪ್ರ್ಯಾಕ್ಟೀಸ್ ಮಾಡಿ. ನಿಮ್ಮ ಕೆಲಸದಲ್ಲಿ ನೀವು ಫರಫೆಕ್ಟಾಗಿ. ನಿಮಗೆ ಟ್ರೇನಿಂಗನ ಅಥವಾ ಕೋಚಿಂಗನ ಅವಶ್ಯಕತೆ ಇದೆ ಅಂಥ ಅನ್ನಿಸಿದ್ರೆ ಟ್ರೇನಿಂಗ್ ತೆಗೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಕಿಂಗ್ ಆಗಿ. ಆನಂತರ ಸರಿಯಾದ ಪ್ಲ್ಯಾನಿಂಗನ್ನು ಮಾಡಿ ಸರಿಯಾದ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಿ. ನೀವು ನಿಮ್ಮ ಕೆಲಸದಲ್ಲಿ, ಪ್ಲ್ಯಾನಿಂಗಲ್ಲಿ, ಆ್ಯಕ್ಷನ್ಸಗಳಲ್ಲಿ ಫರಫೆಕ್ಟಾಗಿದ್ದರೆ ನಿಮ್ಮ ಪ್ಯಾಷನ್ ಬರೀ ಒಂದು ಫ್ರೋಫಿಟೇಬಲ್ ಪ್ರೋಫೆಷನ್ ಮಾತ್ರವಲ್ಲ ಒಂದು ಫ್ರೋಫಿಟೇಬಲ್ ಬ್ಯುಸಿನೆಸ್ ಆಗಿ ಬದಲಾಗುತ್ತದೆ. ನಿಮ್ಮ ಪ್ಯಾಷನ್ ನಿಮ್ಮ ಬ್ಯುಸಿನೆಸ್ಸಾದಾಗ ನಿಮಗೆ ಬಯಸಿದ್ದೆಲ್ಲವು ಸಿಗುತ್ತದೆ.

ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? How to convert your Passion into Profitable Profession or Business?

    Friends, Believe me. ಈ ಜಗತ್ತಿನಲ್ಲಿ ಎಷ್ಟು ಜನ ಸಾಧಕರಿದ್ದಾರೋ ಅವರೆಲ್ಲರೂ ಅವರ ಪ್ಯಾಷನನ್ನು ಪ್ರೋಫೆಷನ್ನಾಗಿ ಪರಿವರ್ತಿಸಿಕೊಂಡು ಸಕ್ಸೆಸಫುಲ್ ವ್ಯಕ್ತಿಗಳಾಗಿದ್ದಾರೆ. ನೀವು ಸಹ ನಿಮ್ಮಲ್ಲಿರುವ ಪ್ಯಾಷನನ್ನು ಫ್ರೋಫೆಷನ್ನಾಗಿ ಪರಿವರ್ತಿಸಿಕೊಂಡು ಸಕ್ಸೆಸಫುಲ್ ವ್ಯಕ್ತಿಗಳಾಗಿ. ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಅರೇಂಜ್ ಮ್ಯಾರೇಜ ಆಗುವುದು, ಇಷ್ಟವಿಲ್ಲದ ಕೆಲಸವನ್ನು ಕಾಟಾಚಾರಕ್ಕೆ ಮಾಡುವುದು ಎರಡು ಒಂದೇ. ಜೀವನಪೂರ್ತಿ ಬರೀ ಅಡ್ಜಷ್ಟಮೆಂಟಲ್ಲೇ ಬದುಕಬೇಕಾಗುತ್ತದೆ. ನೋಡಿ ಸರಿಯಾಗಿ ಯೋಚನೆ ಮಾಡಿ. ನಿಮ್ಮ ಲೈಫ್ ನಿಮ್ಮಿಷ್ಟ. Think over it. All the Best and Thanks you...

ನಿಮ್ಮ ಪ್ಯಾಷನನ್ನು ಫ್ರೋಪಿಟೇಬಲ್ ಪ್ರೊಫೆಷನ್ನಾಗಿ ಪರಿವರ್ತಿಸುವುದು ಹೇಗೆ? How to convert your Passion into Profitable Profession or Business?




Blogger ನಿಂದ ಸಾಮರ್ಥ್ಯಹೊಂದಿದೆ.