ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ - Importance of Books Reading in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ - Importance of Books Reading in Kannada

ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading

            ನಾವು ಒಂದು ಹವ್ಯಾಸವನ್ನು ಬೆಳೆಸಿಕೊಂಡರೆ ನಾವು ಬಯಸಿದ್ದೆಲ್ಲವು ನಮಗೆ ಸಿಗುತ್ತದೆ. ಆದರೆ ನಾವದನ್ನು ಬೆಳೆಸಿಕೊಳ್ಳಲ್ಲ. ಏಕೆಂದರೆ ನಾವು ಓದುವುದರಲ್ಲಿ ತುಂಬಾ ಆಲಸಿಗಳಾಗಿದ್ದೇವೆ. ನಿಜವಾದ ಕಲಿಕೆ ಪ್ರಾರಂಭವಾಗುವುದು ಕಾಲೇಜ ಬಿಟ್ಟ ಮೇಲೆಯೇ. ಆದರೆ ಕಾಲೇಜ ಎಜ್ಯುಕೇಷನ್ ಮುಗಿದ ನಂತರ ನಾವು ಓದುವುದರ ಕಡೆಗೆ ತಲೆ ಕೂಡ ಹಾಕಿ ಮಲಗಲ್ಲ. ದಿನಾಲು ಪುಸ್ತಕಗಳನ್ನು ಓದಲ್ಲ, ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸಲ್ಲ. ಅದಕ್ಕಾಗಿಯೇ ನಾವು ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಖಂಡಿತ ನಾವು ಬಯಸಿದ್ದು ನಮಗೆ ಸಿಗುತ್ತದೆ. ಏಕೆಂದರೆ ಪುಸ್ತಕಗಳಿಗೆ ಬದುಕನ್ನು ಬದಲಿಸುವ ಸಾಮರ್ಥ್ಯವಿದೆ. ನಾವೆನೆಂದುಕೊಳ್ಳುತ್ತೇವೆಯೋ ಅದೇ ರೀತಿ ನಾವಾಗುತ್ತೇವೆ. ಅಂದರೆ ನಮ್ಮ ಯೋಚನೆಗಳ ಮೇಲೆ ನಮ್ಮ ಬದುಕು ನಿರ್ಧಾರಿತವಾಗುತ್ತದೆ. ಹೀಗಾಗಿ ನಾವು ನಮ್ಮ ಯೋಚನೆಗಳ ಮೇಲೆ ಹಿಡಿತವನ್ನು ಸಾಧಿಸಲೇಬೇಕು. ಕೆಟ್ಟ ವಿಚಾರಗಳನ್ನು ಹೊಡೆದೊಡಿಸಿ ಒಳ್ಳೇ ವಿಚಾರಗಳನ್ನು ಮೆದುಳಿನೊಳಗೆ ತುಂಬಬೇಕು. ಇದಕ್ಕೆ ನಾವು ಮೈಂಡ್ ಡಯಟ್ ಎನ್ನುತ್ತೇವೆ. ಹೇಗೆ ನಾವು ಆರೋಗ್ಯಕರ ಶರೀರಕ್ಕಾಗಿ ಡಯಟ್ ಮಾಡುತ್ತೇವೆಯೋ ಅದೇ ರೀತಿ ನಾವು ಬ್ಯಾಲೆನ್ಸ್ಡ್ ಮೈಂಡಗಾಗಿ ಡಯಟ್ ಮಾಡಬೇಕು. ನಮ್ಮ ಮೆದುಳಿನಲ್ಲಿ ಒಳ್ಳೇ ವಿಚಾರಗಳನ್ನು ತುಂಬಬೇಕು.

ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading

                       ನೀವು ನಿಮ್ಮ ಮೈಂಡ್ ಡಯಟಗೋಸ್ಕರ ದಿನಾಲು ಪುಸ್ತಕಗಳನ್ನು ಓದಬೇಕಾಗುತ್ತದೆ. ಪುಸ್ತಕಗಳನ್ನು ಓದುವುದರಿಂದ ನಿಮ್ಮ ಮೆದುಳು ಬ್ಯಾಲೆನ್ಸ್ಡ್ ಆಗಿ ರೂಪುಗೊಳ್ಳುತ್ತದೆ. ನಂತರ ನೀವು ಬಯಸಿದ್ದು ನಿಮಗೆ ಸಿಗುತ್ತದೆ. ಹೇಗೆಂದರೆ ಪುಸ್ತಕಗಳನ್ನು ಓದುವುದರಿಂದ ನಿಮ್ಮ ನಾಲೇಡ್ಜ ಹೆಚ್ಚಾಗುತ್ತದೆ, ನಿಮ್ಮ ಮೆಮೊರಿ ಪವರ್ ಅಂದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ನಿಮ್ಮ ಯೋಚನಾ ಶಕ್ತಿ ಹಾಗೂ ಕಲ್ಪನಾ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಅನಲೈಜಿಂಗ್ ಪವರ್ ಅಂದರೆ ವಿಶ್ಲೇಷನಾ ಸಾಮರ್ಥ್ಯ ಸಿಗುತ್ತದೆ. ನೀವು ಹೆಚ್ಚಿಗೆ ಓದುವುದರಿಂದ ನಿಮಗೆ ಹೆಚ್ಚಿನ ಶಬ್ದಗಳು ಪರಿಚಿತವಾಗುತ್ತವೆ. ಇದರಿಂದ ನಿಮ್ಮ ಶಬ್ದ ಸಂಗ್ರಹ ಹೆಚ್ಚಾಗುತ್ತದೆ. ನಿಮ್ಮ ಶಬ್ದ ಸಂಗ್ರಹ ಹೆಚ್ಚಾದಾಗ ನೀವು ಧೈರ್ಯವಾಗಿ ಎದುರುಗಡೆ ವ್ಯಕ್ತಿಗೆ ಬೋರಾಗದಂತೆ ಗಂಟೆಗಟ್ಟಲೆ ಮಾತನಾಡಬಹುದು. 


ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading

       ನೀವು ಪುಸ್ತಕಗಳನ್ನು ಓದುವುದರಿಂದ ನಿಮ್ಮ ಸ್ಪೀಕಿಂಗ್ ಸ್ಕೀಲ್ಸ ಅಂದರೆ ಮಾತನಾಡುವ ಕೌಶಲ್ಯ ಹಾಗೂ ರೈಟಿಂಗ್ ಸ್ಕೀಲ್ಸ ಅಂದರೆ ಬರೆಯುವ ಕೌಶಲ್ಯ ಅಭಿವೃದ್ಧಿಯಾಗುತ್ತದೆ. ಓದುವುದರಿಂದ ನಿಮ್ಮ ಕಮ್ಯುನಿಕೇಷನ ಸ್ಕೀಲ್ಸ ಅಂದರೆ ಸಂವಹನ ಕೌಶಲ್ಯಗಳು ಇಂಪ್ರೂವ್ ಆಗುತ್ತವೆ. ಓದುವುದರಿಂದ ನಿಮ್ಮ ಫೋಕಸ್ ಹಾಗೂ ಕ್ರಿಯೆಟಿವಿಟಿ ಹೆಚ್ಚಾಗುತ್ತದೆ. ಪುಸ್ತಕಗಳು ನಿಮ್ಮನ್ನು ಮೋಟಿವೆಟ್ ಮಾಡುತ್ತವೆ, ನಿಮಗೆ ಕಠಿಣ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸುವುದನ್ನು ಕಲಿಸುತ್ತವೆ, ನಿಮ್ಮ ಭಾವನೆಗಳನ್ನು ಬಲಿಷ್ಟಗೊಳಿಸುತ್ತವೆ, ನಿಮ್ಮ ಕ್ರಿಯೆಟಿವಿಟಿಯನ್ನು ಹೆಚ್ಚಿಸುತ್ತವೆ, ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತವೆ.  ಪುಸ್ತಕಗಳನ್ನು ಓದುವುದರಿಂದ ನಿಮ್ಮ ಮೆದುಳಿಗೆ ಎಕ್ಸರಸೈಜ ಆಗುತ್ತದೆ. ಪುಸ್ತಕಗಳನ್ನು ಓದುವುದರಿಂದ ನಿಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಒಂದು ಅಟ್ರ್ಯಾಕ್ಟಿವ ಪರ್ಸನಾಲಿಟಿ ಡೆವಲಪ ಆಗುತ್ತದೆ. ಇದರಿಂದ ನೀವೊಬ್ಬ ಲೈಕೆಬಲ್ ಪರ್ಸನ ಆಗುತ್ತೀರಿ. ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ. ಈ ರೀತಿ ನೀವು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ನೀವು ಬಯಸಿದ್ದೆಲ್ಲವು ನಿಮಗೆ ಸಿಗುತ್ತದೆ. 

ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading

        ಎಲ್ಲ ಸಕ್ಸೆಸಫುಲ್ ವ್ಯಕ್ತಿಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಸಾಮ್ಯತೆಯೆಂದರೆ ಬುಕ್ ರೀಡಿಂಗ್.  ಸಕ್ಸೆಸಫುಲ್ ವ್ಯಕ್ತಿಗಳು ದಿನಾಲು ಪುಸ್ತಕಗಳನ್ನು ಓದುತ್ತಾರೆ. ಬಿಲಗೇಟ್ಸನಂಥ ಬಿಲೆನಿಯರಗಳು ದಿನಾಲು ಒಂದು ಗಂಟೆ ಕಥೆ, ಕಾದಂಬರಿ, ಅಂಕಣಗಳನ್ನು ಓದುತ್ತಾರೆ. ಈಲಾನ್ ಮಸ್ಕ ಬರೀ ಪುಸ್ತಕಗಳನ್ನು ಓದಿ ರಾಕೆಟ್ ಸಾಯಿನ್ಸನ್ನು ಕಲಿತು SpaceX ಕಂಪನಿ ಕಟ್ಟಿದ್ದಾರೆ. ಜೇಮ್ಸ ಕ್ಯಾಮರಾನ ಬರೀ ಪುಸ್ತಕಗಳನ್ನು ಓದಿ ಫಿಲ್ಮಮೇಕಿಂಗನ್ನು ಕಲಿತು ಟೈಟಾನಿಕ ಹಾಗೂ ಅವತಾರಗಳಂಥ ಸೂಪರ ಹಿಟ್ ಫಿಲ್ಮಗಳನ್ನು ಕೊಟ್ಟಿದ್ದಾರೆ. ಹೀಗಿರುವಾಗ ನೀವೇಕೆ ಪುಸ್ತಕಗಳನ್ನು ಓದಬಾರದು? ನೀವೇಕೆ ಪುಸ್ತಕಗಳನ್ನು ಓದಿ ಹೊಸ ಹೊಸ ಸಂಗತಿಗಳನ್ನು ಕಲಿತುಕೊಂಡು ಸಕ್ಸೆಸಫುಲ್ ವ್ಯಕ್ತಿಗಳಾಗಬಾರದು?. ಪುಸ್ತಕಗಳೊಂದಿಗೆ ಫ್ರೆಂಡಶೀಪ ಮಾಡಿ ನಿಮ್ಮ ಲೈಫ ಸೂಪರಾಗಿರುತ್ತದೆ. 


ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading

              ಮುಂಬೈನ ಖಾಸಗಿ ಕಾಲೇಜೊಂದರಿಂದ ಇಂಜಿನಿಯರಿಂಗ್ ಪದವಿ ಮುಗಿಸಿದ ಜೀಷನ್ ಶೇಖ್ ಎಂಬ ಹುಡುಗನಿಗೆ ಪುಸ್ತಕಗಳನ್ನು ಓದುವ ಹುಚ್ಚಿತ್ತು. ಆತ ಎಲ್ಲ ತರಹದ ಪುಸ್ತಕಗಳನ್ನು ಓದುತ್ತಿದ್ದ. ಅವನಿಗೆ ಸಕ್ಸೆಸಫುಲ್ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಬಿಜನೆಸ್ ಬುಕ್ಸಗಳನ್ನು ಓದುವುದರಲ್ಲಿ ತುಂಬಾನೇ ಆಸಕ್ತಿಯಿತ್ತು. ಆತನ ಪುಸ್ತಕ ಓದುವ ಹವ್ಯಾಸ ಅವನಿಗೆ ಒಂದು ಉಜ್ವಲ ಭವಿಷ್ಯವನ್ನು ಕಟ್ಟಿಕೊಟ್ಟಿತು. ಆತ ತಾನು ಓದಿದ ಪುಸ್ತಕಗಳ ಸಾರಾಂಶವನ್ನು ವಿಡಿಯೋ ರೂಪಕ್ಕೆ ಪರಿವರ್ತಿಸಿ ಯ್ಯುಟ್ಯೂಬನಲ್ಲಿ ಅಪಲೋಡ್ ಮಾಡಲು ಪ್ರಾರಂಭಿಸಿದನು. ಅವನು ತನ್ನ "ಸಿಕೇ (Seeken)" ಯ್ಯುಟ್ಯೂಬ ಚಾನೆಲನಲ್ಲಿ ಹೀಗೆಯೇ ಬುಕ್ ಸಮರಿಗಳ ವಿಡಿಯೋಗಳನ್ನು ಹಾಕುತ್ತಾ ಹೋದನು. ಜನ ಅವುಗಳನ್ನು ಇಷ್ಟಪಟ್ಟು ನೋಡುತ್ತಾ ಬದಲಾಗುತ್ತಾ ಹೋದರು. ಇವತ್ತು ಜೀಷನ್ ಶೇಖನಿಗೆ ಯ್ಯುಟ್ಯೂಬನಲ್ಲಿ 20 ಲಕ್ಷಕ್ಕೂ ಅಧಿಕ ಸಬಸ್ಕೈಬ್ರರ್ಸ ಇದ್ದಾರೆ. ಬಹಳಷ್ಟು ಜನರಿಗೆ ಜೀಷನ ಶೇಖನ ಹೆಸರು ಗೊತ್ತಿಲ್ಲ. ಆದರೆ "ಸಿಕೇ (Seeken)" ಎಂಬ ಹೆಸರು ಚೆನ್ನಾಗಿ ಗೊತ್ತಿದೆ. ಇಂದಿಗೂ ಶೇಖನ ಕ್ಲಾಸಮೇಟ್ಸಗಳು ಯಾವುದೋ ಟೆಕ್ ಕಂಪನಿಗಳಲ್ಲಿ ಹತ್ತು ಸಾವಿರದ ಕೆಲಸ ಮಾಡುತ್ತಿದ್ದಾರೆ. ಆದರೆ ಜಷೀನ್ ಶೇಖ್ ಬುಕ್ ಸಮರಿಗಳನ್ನು ಮಾಡಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾನೆ. ಅವನು ಓದಿದ ಪುಸ್ತಕಗಳು ಅವನ ಬದುಕಿಗೆ ಬೆಂಗಾವಲಾಗಿ ನಿಂತಿವೆ. ಇದು ಒಬ್ಬ ಶೇಖನ ಕಥೆಯಾದರೆ, ಇನ್ನು ಅದೆಷ್ಟೋ ಶೇಖಗಳು ಪುಸ್ತಕಗಳನ್ನು ಓದಿ ತಮ್ಮ ಲೈಫನ್ನು ಬೆಳಗಿಸಿಕೊಂಡಿದ್ದಾರೆ. ಅದಕ್ಕಾಗಿ ನೀವು ಪುಸ್ತಕಗಳನ್ನು ಓದಿ. 


ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading

                 ನೀವು ಬರೀ ಪುಸ್ತಕಗಳನ್ನೇ ಓದಬೇಕು ಎಂದೆನಿಲ್ಲ. ನೀವು ಕಥೆ, ಕಾದಂಬರಿ, ಕವನ, ಜೀವನ ಚರಿತ್ರೆ, ವಿಜ್ಞಾನದ ವಿಷಯ, ಮೊಟಿವೇಷನಲ್ ಅಂಕಣ ಇತ್ಯಾದಿಗಳನ್ನು ಓದಬಹುದು. ನಿಮಗೆ ಪುಸ್ತಕಗಳನ್ನು ಖರೀದಿಸಿ ಓದಬೇಕೆಂದೇನಿಲ್ಲ. ಏಕೆಂದರೆ ನಿಮ್ಮ ಬಳಿಯಿರುವ ಮೊಬೈಲನಲ್ಲಿ ಸಾಕಷ್ಟು ಫ್ರಿ ಪುಸ್ತಕಗಳಿವೆ. ಅವುಗಳನ್ನು ಓದಿ. ಇಲ್ಲವೇ ಅವುಗಳ ಆಡಿಯೋ ಬುಕಗಳನ್ನು ಕೇಳಿ. ಇಷ್ಟೆಲ್ಲ ಹೇಳಿದ ನಂತರ ನಿಮಗೆ ಓದಬೇಕೆಂಬ ಆಸೆ ಹುಟ್ಟಿದ್ದರೆ ನೀವು ನನ್ನ ಆಫೀಸಿಯಲ್ ವೆಬಸೈಟ www.Skkannada.comಗೆ ಭೇಟಿ ನೀಡಿ ಕಥೆ, ಕವನ, ಜೀವನ ಚರಿತ್ರೆ, ವೈಜ್ಞಾನಿಕ ಬರಹ, ಮೊಟಿವೇಷನಲ್ ಅಂಕಣ, ಬಿಜನೆಸ್ ಟಿಪ್ಸ ಇತ್ಯಾದಿಗಳನ್ನು ಫ್ರಿಯಾಗಿ ಓದಬಹುದು. ನಿಮಗೆ ಯಾವುದೇ ವಿಷಯದ ಬಗ್ಗೆ ಅಂಕಣಗಳು ಬೇಕಿದ್ದರೆ ಇಲ್ಲ ಅನುಮಾನಗಳಿದ್ದರೆ ನೀವು ನನ್ನನ್ನು ಇನಸ್ಟಾಗ್ರಾಮಲ್ಲಿ ಫಾಲೋ ಮಾಡಿ ಡೈರೆಕ್ಟ್ ಮೆಸೇಜ್ ಕಳಿಸಬಹುದು. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಮತ್ತು ಸಕ್ಸೆಸಫುಲ್ ವ್ಯಕ್ತಿಗಳಾಗಿ. All the Best and Thanks You...


ಈ ಹವ್ಯಾಸವನ್ನು ಬೆಳೆಸಿಕೊಳ್ಳಿ ನೀವು ಬಯಸಿದ್ದು ನಿಮಗೆ ಸಿಗುತ್ತದೆ -  Importance of Books Reading
Blogger ನಿಂದ ಸಾಮರ್ಥ್ಯಹೊಂದಿದೆ.