ಪಾಲಕರಿಗೊಂದು ಪತ್ರ : An Open Letter to Parents in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪಾಲಕರಿಗೊಂದು ಪತ್ರ : An Open Letter to Parents in Kannada

ಪಾಲಕರಿಗೊಂದು ಪತ್ರ : An Open Letter to Parents in Kannada

                ನಿನ್ನೆ ನಾನು ನನ್ನ ಗೆಳೆಯನ ಸ್ಕೂಲಿಗೆ ಹೋಗಿದ್ದೆ. ಅವನಿಗೆ ಸರ್ಕಾರಿ ಸ್ಕೂಲಲ್ಲಿ ಶಿಕ್ಷಕನಾಗಿ ನೌಕರಿ ಸಿಕ್ಕಿ ಒಂದು ವರ್ಷ ಆಯಿತು. ಆತ ಒಂದು ವರ್ಷದಿಂದ ಅವರ ಸ್ಕೂಲ ಮಕ್ಕಳಿಗೆ ಒಂದು ಮೋಟಿವೆಷನಲ್ ಕ್ಲಾಸ್ ಹೇಳಲು ಬಾ ಅಂತಾ ಕರೆಯುತ್ತಿದ್ದ. ಆದರೆ ನನಗೆ ಹೋಗಲು ಸಮಯ ಸಿಕ್ಕಿರಲಿಲ್ಲ. ನಿನ್ನೆ ಸಮಯ ಸಿಕ್ಕಿದ್ದರಿಂದ ನಾನು ಹೋಗಿದ್ದೆ. ನನಗೆ ಆಶ್ಚರ್ಯವಾಯಿತು. ಏಕೆಂದರೆ ಅಷ್ಟೊಂದು ಸಣ್ಣ ಹಳ್ಳಿಯಲ್ಲಿ ಆತ ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೆ ಕಮ್ಮಿ ಇಲ್ಲದಂತೆ ನೋಡಿಕೊಂಡಿದ್ದ. ಅದನ್ನು ನೋಡಿ ಖುಷಿಯೆನೆಸಿತು. ನಾನು ಸಹ ಸರ್ಕಾರಿ ಶಾಲೆಯಲ್ಲಿಯೇ ಓದಿರುವೆ. ನನಗೆ ಸರ್ಕಾರಿ ಶಾಲೆಗಳ ಮೇಲೆ ಹೆಮ್ಮೆಯಿದೆ. ಏಕೆಂದರೆ ಸರ್ಕಾರಿ ಶಾಲೆಯಲ್ಲಿ ಸಿಗುವ ಖುಷಿ, ಸ್ವಾತಂತ್ರ್ಯ, ಸಂಸ್ಕಾರ, ಸಾಮಾಜಿಕ ಜ್ಞಾನ, ಮಾರ್ಗದರ್ಶನ, ಶಿಕ್ಷಕರ ಪ್ರೀತಿ ನೀವು ಲಕ್ಷಲಕ್ಷ ಖರ್ಚು ಮಾಡಿ ಸೇರುವ ಖಾಸಗಿ ಶಾಲೆಗಳಲ್ಲಿ ಸಿಗಲ್ಲ. ಆದರೆ ಎಷ್ಟೋ ಜನ ಪಾಲಕರಿಗೆ ಅದರ ಮಹತ್ವ ಅರ್ಥವಾಗಲ್ಲ. ಅದಕ್ಕವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ಕಾನ್ವೆಂಟ್ ಎಂಬ ಜೈಲಿಗೆ ಸೇರಿಸುತ್ತಾರೆ, ಅವರ ನೆಮ್ಮದಿಯ ಜೊತೆಗೆ ಅವರಲ್ಲಿನ ಕಲೆಯನ್ನು ಸಹ ಕೊಲೆ ಮಾಡುತ್ತಾರೆ.


ಪಾಲಕರಿಗೊಂದು ಪತ್ರ : A Open Letter to Parents in Kannada

                  ನಿನ್ನೆ ನಾನು ನನ್ನ ಗೆಳೆಯನ ಶಾಲೆಗೆ ಹೋದಾಗ ಆತ ಇಂಟರ್ ಸ್ಕೂಲ್ ಕಾಂಪಿಟೇಷನಗೆ ಕಳುಹಿಸಲು ತನ್ನ ಕ್ಲಾಸ್ ಹುಡುಗರನ್ನು ಆಯ್ಕೆ ಮಾಡುತ್ತಿದ್ದ. ಆಗ ಒಬ್ಬ ಹುಡುಗ ಪ್ರತಿಭೆಯಿದ್ದರೂ ಸ್ಪರ್ಧೆಯಲ್ಲಿ ಭಾಗವಹಿಸಲು ಬೇಡವೆನ್ನುತ್ತಿದ್ದ. ಆತ ಕಳೆದ ವರ್ಷ ಕ್ಲೇ ಮಾಡೆಲಿಂಗನಲ್ಲಿ ಫಸ್ಟ್ ಪ್ರೈಜ್ ತಂದಿದ್ದ. ಆದರೆ ಟ್ಯೂಷನ್ ತಪ್ಪಿಸಿ ಸ್ಪರ್ಧೆಗೆ ಹೋಗಿದ್ದರಿಂದ ಅವರಮ್ಮ ಅವನನ್ನು ಹೊಡೆದಿದ್ದಳಂತೆ. ಅದಕ್ಕಾಗಿ ಆತ ಈ ಸಲ ಸ್ಪರ್ಧೆಯಲ್ಲಿ ಭಾಗವಹಿಸಲು ಬೇಡವೆನ್ನುತ್ತಿದ್ದ. ನನ್ನ ಗೆಳೆಯ ಒಬ್ಬ ಶಿಕ್ಷಕನಾಗಿ ಅವನನ್ನು ಪ್ರೀತಿಯಿಂದ ಸಂತೈಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಹೇಳಿದ. ಆದರೆ ಆ ಹುಡುಗ ಒಪ್ಪಲಿಲ್ಲ. ಕೊನೆಗೆ ಅವರಮ್ಮನನ್ನು ಶಾಲೆಗೆ ಕರೆಸಿ ಕೇಳಿದಾಗ ಅವರಮ್ಮ "ಮಣ್ಣಿನಲ್ಲಿ ಮೂರ್ತಿ ಮಾಡಿದರೆ ಏನ್ ಆಗುತ್ತೆ? ಎಕ್ಸಾಮಲ್ಲಿ ಫಸ್ಟ್ ಬಂದರೆ ಮಾತ್ರ ಲೈಫ ಸೆಟ್ಲಾಗುತ್ತೆ. ನಿಮಗೆ ಕಲಿಸೋ ಹಾಗಿದ್ರೆ ಕಲಿಸಿ. ಇಲ್ಲಾಂದ್ರೆ ನನ್ನ ಮಗನನ್ನು ಬೇರೆ ಸ್ಕೂಲಿಗೆ ಸೇರಿಸ್ತೀನಿ..." ಅಂತಾ ಹೇಳಿ ಹೋದಳು. ಒಬ್ಬ ಹುಡುಗನಲ್ಲಿನ ಕಲೆಗೆ ಬೆಲೆ ತಂದುಕೊಡಲು ಹೋಗಿ ನನ್ನ ಗೆಳೆಯ ಛೀಮಾರಿ ಹಾಕಿಸಿಕೊಂಡ. ಅದನ್ನು ನೋಡಿ ನನಗೆ ತುಂಬಾ ಬೇಜಾರಾಯಿತು. ಅದಕ್ಕೆ ನಾನು ಎಲ್ಲ ಪಾಲಕರಿಗೆ ಕೆಲವೊಂದಿಷ್ಟು ವಿಚಾರಗಳನ್ನು ನೇರವಾಗಿ ಹೇಳಬೇಕೆಂದು ಈ ಅಂಕಣವನ್ನು ಬರೆಯುತ್ತಿರುವೆ.

ಪಾಲಕರಿಗೊಂದು ಪತ್ರ : A Open Letter to Parents in Kannada

                 ಪಾಲಕರೇ, ನಿಮಗೆ ನಿಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ, ಪ್ರೀತಿ ಎಲ್ಲವೂ ಇದೆ ಎಂಬುದು ನಂಗೊತ್ತು. ಹಾಗೆಂದ ಮಾತ್ರಕ್ಕೆ ನೀವು ಮಾಡುತ್ತಿರುವುದೆಲ್ಲ ಸರಿಯೆಂದು ನಾನು ಹೇಳುವುದಿಲ್ಲ. ನೀವು ನಿಮ್ಮ ಮಕ್ಕಳನ್ನು ಓದಿನ ಹೆಸರಲ್ಲಿ ಬಂಧಿಸಿ ಅವರಲ್ಲಿನ ಕಲೆಯನ್ನು ಕೊಲೆ ಮಾಡುವುದು ಒಂಚೂರು ಸರಿಯಲ್ಲ ಎಂಬುದಷ್ಟೇ ನನ್ನ ಆತಂಕ. ಒಂದ್ಸಲ ಯೋಚಿಸಿ, ನಿಮ್ಮ ಮಕ್ಕಳನ್ನು ಓದಿನ ನೆಪದಲ್ಲಿ ಬಂಧಿಸಿದರೆ ನಿಮ್ಮ ಮಕ್ಕಳು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಆಟ ಆಡೋದ್ಯಾವಾಗ?, ಸಂತೆಯಲ್ಲಿ ತಿರುಗಾಡಿ ಸಮಾಜದ ಜ್ಞಾನವನ್ನು ಪಡೆಯೋದ್ಯಾವಾಗ? ನಿಮ್ಮ ಮಕ್ಕಳ ಓದಿಗೆ ಲಕ್ಷಲಕ್ಷ ಸುರಿದು ಅವರಲ್ಲಿನ ಕಲೆಯನ್ನು ಸಾಯಿಸಿ, ಅವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ನಿಮ್ಮ ಮಕ್ಕಳನ್ನು ನೀವೇ ಹಾಳು ಮಾಡುತ್ತಿರುವಿರಿ. ಬರೀ ಮೂರವೊತ್ತು ಮಾರ್ಕ್ಸ್ ಮಾರ್ಕ್ಸ್ ಎನ್ನುತ್ತಾ ನಿಮ್ಮ ಮಕ್ಕಳ ಟೆನ್ಶನ್ ಹಾಗೂ ಡಿಪ್ರೆಶನಗೆ ನೀವೇ ಕಾರಣರಾಗುತ್ತೀರುವಿರಿ. ಪಕ್ಕದ ಮನೆಯವರ ಮೇಲಿನ ಜಲಸಿಗೆ ನಿಮ್ಮ ಮಗುವಿನ ನೆಮ್ಮದಿಯನ್ನು ಯಾಕೆ ಕಿತ್ತುಕೊಳ್ಳುತ್ತಿರುವಿರಿ? ಬರೀ ಮಾರ್ಕ್ಸಗಳಿಂದ ಏನು ಪ್ರಯೋಜನವಿಲ್ಲ ಎಂಬುದು ನಿಮಗೆ ಯಾವಾಗ ಅರ್ಥವಾಗುತ್ತೆ?

ಪಾಲಕರಿಗೊಂದು ಪತ್ರ : A Open Letter to Parents in Kannada

             ಸದ್ಯಕ್ಕೆ ನಮ್ಮ ದೇಶ ಅನುಸರಿಸುತ್ತಿರುವ ಶಿಕ್ಷಣ ಪದ್ಧತಿ ನಮ್ಮ ದೇಶದಲ್ಲ. ಇದು ಇಂಗ್ಲೀಷರ ಶಿಕ್ಷಣ ಪದ್ಧತಿ. ಇಂಗ್ಲಿಷರು ತಮ್ಮ ಕೈಕೆಳಗೆ ಕೆಲಸ ಮಾಡಲು ಬೇಕಾಗುವ ಕ್ಲರ್ಕಗಳನ್ನು ತಯಾರು ಮಾಡುವುದಕ್ಕಾಗಿ ಜಾರಿಗೆ ತಂದ ಶಿಕ್ಷಣ ಪದ್ಧತಿಯನ್ನೇ ನಾವಿಂದೂ ಅನುಸರಿಸುತ್ತಾ ಬಂದಿದ್ದೇವೆ.  ಇದಕ್ಕಿಂತಲೂ ಕೆಟ್ಟ ಶಿಕ್ಷಣ ಪದ್ಧತಿ ಬೇರೊಂದಿಲ್ಲ. ಏಕೆಂದರೆ ಶಾಲೆಯಲ್ಲಿ ಕಲಿತ ಪಾಠಗಳಲ್ಲಿ 90%ಗಿಂತಲೂ ಹೆಚ್ಚಿನ ವಿಷಯಗಳು ಜೀವನದಲ್ಲಿ ಯಾವತ್ತು ಪ್ರಯೋಜನಕ್ಕೆ ಬರುವುದಿಲ್ಲ. ಬೇರೆಯವರ ವಿಷಯ ಬಿಡಿ. ನಾನು ಕಾಲೇಜ್ನಲ್ಲಿ ಕಲಿತ ಮ್ಯಾಥ್ಸ್ ಹಾಗೂ ಸೈನ್ಸ್ ಒಮ್ಮೆಯೂ ನನಗೆ  ನನ್ನ ಬಿಜನೆಸ್ಸನಲ್ಲಿ ಪ್ರಯೋಜನಕ್ಕೆ ಬಂದಿಲ್ಲ. ನಾನು ಹಾಯ್ ಸ್ಕೂಲಿನಲ್ಲಿ ಕಲಿತ ಹಿಸ್ಟರಿಗೆ ಮಾರ್ಕೆಟನಲ್ಲಿ ಯಾವುದೇ ಬೆಲೆಯಿಲ್ಲ. ಸದ್ಯದ ಶಿಕ್ಷಣ ಪದ್ಧತಿ ಬರೀ ಕ್ಲರ್ಕಗಳನ್ನು ತಯಾರು ಮಾಡಲು ಮಾತ್ರ ಲಾಯಕ್ಕಾಗಿದೆ. ಅದಕ್ಕಾಗಿ ಫಸ್ಟ ಬರುವುದಕ್ಕಾಗಿ ನಿಮ್ಮ ಮಕ್ಕಳ ಪ್ರಾಣ ತಿನ್ನುವುದರಲ್ಲಿ ಯಾವುದೇ ಅರ್ಥವಿಲ್ಲ.
ಪಾಲಕರಿಗೊಂದು ಪತ್ರ : A Open Letter to Parents in Kannada
                 ನಮ್ಮ ಸದ್ಯದ ಶಿಕ್ಷಣ ಉಪ್ಪಿಲ್ಲದ ಅಡುಗೆಯಂತಾಗಿದೆ. Yes, there is no salt in today's education. ಇವತ್ತಿನ ಶಿಕ್ಷಣದಲ್ಲಿ ಕ್ರಿಯೇಟಿವಿಟಿಯಿಲ್ಲ, ಪ್ರ್ಯಾಕ್ಟಿಕಲ್ ನಾಲೇಡ್ಜಯಿಲ್ಲ, ಸ್ಕೀಲಗಳಿಲ್ಲ, ಸಾಮಾಜಿಕ ಜ್ಞಾನವಿಲ್ಲ, ವ್ಯವಹಾರಿಕ ಜ್ಞಾನವಿಲ್ಲ, ದೊಡ್ಡ ವಿಜನಯಿಲ್ಲ, ಇನೋವೆಷನಯಿಲ್ಲ, ಒಂದು ಕ್ಲಿಯರ್ ಪರಪಜ ಇಲ್ಲ, ಸ್ಪೋರ್ಟ್ಸಿಗೆ ಪ್ರಾಮುಖ್ಯತೆಯಿಲ್ಲ, ಯೋಗಾಭ್ಯಾಸಕ್ಕೆ ಜಾಗವಿಲ್ಲ, ಮೆಂಟಲ್ ಹಾಗೂ ಫಿಜಿಕಲ ಫಿಟನೆಸಯಿಲ್ಲ, ಹೊಸ ರಿಸರ್ಚಗಳಿಲ್ಲ, ಹೊಸ ಟೆಕ್ನಾಲಜಿಗಳಿಲ್ಲ, ಪರ್ಸನಾಲಿಟಿ ಡೆವಲೆಪಮೆಂಟಿಲ್ಲ, ಸೆ... ಎಜ್ಯುಕೇಷನಯಿಲ್ಲ. ಹೀಗೆಯೇ ಹೇಳುತ್ತಾ ಹೋದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿನ ಕೊರತೆಗಳು ಮುಗಿಯುವುದಿಲ್ಲ. ಈ ಶಿಕ್ಷಣದಲ್ಲಿ ಅರ್ಥವೇ ಇಲ್ಲ. ಇದೊಂದು ಡಸ್ಟಬಿನ್ ಆಗಿದೆ ಅಷ್ಟೇ.


ಪಾಲಕರಿಗೊಂದು ಪತ್ರ : A Open Letter to Parents in Kannada

                   ಸದ್ಯಕ್ಕೆ ಸ್ಕೂಲು ಸ್ಕೂಲಾಗಿ ಉಳಿದಿಲ್ಲ. ಅದೊಂದು ದೊಡ್ಡ ಪ್ರೆಶ್ಶರ್ ಕುಕ್ಕರ್ ಆಗಿದೆ. ಅನವಾಂಟೆಡ್ ಸಿಲ್ಯಾಬಸ್ಸು, ಅಸೈನಮೆಂಟಗಳು, ಹೆವ್ವಿ ಹೊಮ ವರ್ಕು, ರೆಸ್ಟಲೆಸ್ ಕಂಟಿನ್ಯುವಸ್ ಕ್ಲಾಸಗಳು ಮಕ್ಕಳನ್ನು ಹಂತಹಂತವಾಗಿ ನಾಶ ಮಾಡುತ್ತಿವೆ. ಜೊತೆಗೆ ನೀವು ಮಾರ್ಕ್ಸಗಾಗಿ ಹೇರುವ ಒತ್ತಡದಿಂದಾಗಿ ಮಕ್ಕಳು ಸ್ಟ್ರೇಸ್ ಹಾಗೂ ಡಿಪ್ರೆಶ್ಶನನಿಂದ ಬಳಲುತ್ತಿದ್ದಾರೆ. ಆತ್ಮಹತ್ಯೆಗಳಂಥ ಕೆಟ್ಟ ನಿರ್ಧಾರಕ್ಕೆ ಕೈಹಾಕುತ್ತಿದ್ದಾರೆ. ಶಾಲಾ ಬ್ಯಾಗಿನ ಭಾರದಿಂದ ನಿಮ್ಮ ಮಕ್ಕಳ ಹೈಟ್ ಬೆಳೆದಿಲ್ಲ ಎಂಬುದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಿಕ್ಷಣ ಪದ್ಧತಿಯ ಒತ್ತಡದಿಂದಾಗಿ ಅವರ ಬ್ರೇನ್ ಕೂಡ ಬೆಳೆದಿಲ್ಲ ಎಂಬುದು ನಿಮಗೆ ಕಾಣಿಸಲ್ಲ. ಇದು ಬರೀ ಶಿಕ್ಷಣ ವ್ಯವಸ್ಥೆಯ ತಪ್ಪಲ್ಲ, ಶಿಕ್ಷಕರ ತಪ್ಪಲ್ಲ. ಇದರಲ್ಲಿ ಪಾಲಕರಾದ ನಿಮ್ಮ ತಪ್ಪೂ ಇದೆ.


ಪಾಲಕರಿಗೊಂದು ಪತ್ರ : A Open Letter to Parents in Kannada

               ಸದ್ಯಕ್ಕೆ ಎಜ್ಯುಕೇಷನ ಸಿಸ್ಟಮ್ ಒಂದು ದೊಡ್ಡ ಬ್ಲ್ಯಾಕ್ ಬ್ಯುಸಿನೆಸ್ಸಾಗಿದೆ. ಅದರಲ್ಲಿ ಕರಪ್ಷನ ತುಂಬಿ ತುಳುಕುತ್ತಿದೆ. ನಮ್ಮ ಮಕ್ಕಳಿಗೆ ಕಲಿಸುತ್ತಿರುವ ಸಿಲ್ಯಾಬಸ್ ಔಟಡೇಟೆಡ್ ಆಗಿದೆ. ಜಗತ್ತು ಆರ್ಟಿಫಿಸಿಯಲ್ ಇಂಟ್ಲಿಜೆನ್ಸಿ ಕಡೆಗೆ ಹೊರಟಿದೆ. ಆದರೆ ನಮ್ಮ ಎಜ್ಯುಕೇಷನ್ ಸಿಸ್ಟಮ್ ಇನ್ನೂ ಪ್ರಯೋಜನಕ್ಕೆ ಬಾರದ ಗೊಡ್ಡು ಇತಿಹಾಸವನ್ನು ಕಲಿಸುತ್ತಿದೆ. ಬೇರೆ ದೇಶದ ಮಕ್ಕಳು ಕೋಡಿಂಗ್, ಕಂಪ್ಯೂಟರ್ ಪ್ರೋಗ್ರಾಮಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದವುಗಳನ್ನು ಕಲಿತು ಬಿಲಿಯನ್ ಡಾಲರ್ ಬ್ಯುಸಿನೆಸ್ಸನ್ನು ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದ ಮಕ್ಕಳು ಅದೇ ಪೈಥಾಗೋರಸ ಪ್ರಮೇಯವನ್ನು ಬಿಡಿಸುತ್ತಾ ಕೆಲಸಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ನಮ್ಮ ಶಾಲಾ ಕಾಲೇಜುಗಳು ಲರ್ನಿಂಗ್ ಕಡೆಗೆ ಫೋಕಸ್ ಮಾಡಲ್ಲ, ಕೇವಲ ಅರ್ನಿಂಗ್ ಕಡೆಗೆ ಫೋಕಸ್ ಮಾಡುತ್ತವೆ. No learning, only Earning. ಅದಕ್ಕಾಗಿ ಅನಕ್ವಾಲಿಫೈಡ್ ಹಾಗೂ ಅನಟ್ರೇನಡ್ ಟೀಚಿಂಗ್ ಫ್ಯಾಕಲ್ಟಿಗಳನ್ನು ಅಪಾಯಿಂಟ ಮಾಡಿಕೊಳ್ಳುತ್ತವೆ. ಕಲಿಸುವವರಲ್ಲಿಯೇ ಒಂದು ದೊಡ್ಡ ವಿಜನ ಇಲ್ಲ, ಗ್ರೇಟ್ ಐಡಿಯಾಗಳಿಲ್ಲ, ಆ್ಯಂಬಿಷನ ಇಲ್ಲ, ಮೋಟಿವೇಷನ್ ಇಲ್ಲ. ಇಂಥವರು ನಿಮ್ಮ ಮಕ್ಕಳಿಗೆ ಏನು ಕಲಿಸುತ್ತಾರೆ? ಇಂಥವರ ಕೈಕೆಳಗೆ ಕಲಿತಿದ್ದರ ಪರಿಣಾಮವಾಗಿ ಇವತ್ತು ಅದೆಷ್ಟೋ ಜನ ಅಂಡರ್ ಎಂಪ್ಲಾಯ್ಡ ಆಗಿದ್ದಾರೆ ಇಲ್ಲ ನೋ ಎಂಪ್ಲಾಯ್ಡ ಆಗಿದ್ದಾರೆ. ಅದಕ್ಕಾಗಿ ತಲೆಯಲ್ಲಿ ಏನೇನೋ ಕಲ್ಪಿಸಿಕೊಂಡು ಬರೀ ಮಾರ್ಕ್ಸಗಳಿಗಾಗಿ ನಿಮ್ಮ ಮಕ್ಕಳ ಪ್ರಾಣ ತಿನ್ನುವುದನ್ನು ನಿಲ್ಲಿಸಿ.


ಪಾಲಕರಿಗೊಂದು ಪತ್ರ : A Open Letter to Parents in Kannada

                ನಮ್ಮ ಪುರಾತನ ಭಾರತೀಯ ಶಿಕ್ಷಣ ಪದ್ಧತಿ ಈ ರೀತಿ ಇರಲಿಲ್ಲ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ನೈತಿಕತೆ ಹಾಗೂ ಫಿಜಿಕಲ ಫಿಟನೆಸಗೆ ಮೊದಲ ಪ್ರಾಮುಖ್ಯತೆ ಇತ್ತು. ಮಕ್ಕಳಲ್ಲಿನ ವಿಶೇಷ ಕೌಶಲ್ಯವನ್ನು ನೋಡಿ ಅದರ ಅನುಸಾರವಾಗಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ಮಕ್ಕಳ ಆಸಕ್ತಿ ಹಾಗೂ ಖುಷಿಗೆ ಬೆಲೆ ಇರುತ್ತಿತ್ತು. ಉದಾಹರಣೆಗಾಗಿ ಪಾಂಡವರ ಗುರು ದ್ರೋಣಾಚಾರ್ಯರನ್ನು ನೋಡಿ. ಅವರು ಮನಸ್ಸು ಮಾಡಿದ್ದರೆ ಎಲ್ಲ ಪಾಂಡವರಿಗೂ ಬಿಲ್ವಿದ್ಯೆ ಒಂದನ್ನೇ ಕಲಿಸಿ ಕೈತೊಳೆದುಕೊಳ್ಳಬಹುದಿತ್ತು. ಆದರೆ ಅವರು ಹಾಗೇ ಮಾಡಲಿಲ್ಲ. ಯುಧಿಷ್ಠಿರ ರಾಜನೀತಿಯಲ್ಲಿ ಜಾಣನಾಗಿರುವುದರಿಂದ ಅವನಿಗೆ ರಾಜನೀತಿಯನ್ನು ಕಲಿಸಿದರು. ಭೀಮ ಗಧಾ ಪ್ರಯೋಗದಲ್ಲಿ ಜಾಣನಾಗಿರುವುದರಿಂದ ಅವನಿಗೆ ಗಧಾ ಪ್ರಯೋಗವನ್ನು ಕಲಿಸಿದರು. ಅದೇ ರೀತಿ ಅರ್ಜುನನಿಗೆ ಬಿಲ್ವಿದ್ಯೆಯನ್ನು, ನಕುಲನಿಗೆ ಕತ್ತಿ ವರಸೆಯನ್ನು ಹಾಗೂ ಸಹದೇವನಿಗೆ ಕೊಡಲಿ ವರಸೆ ಮತ್ತು ಲೆಕ್ಕಪತ್ರಗಳನ್ನು ಕಲಿಸಿದರು. ಮೊದಲು ನಮ್ಮ ಶಿಕ್ಷಣ ಪದ್ಧತಿ ಸರಿಯಾಗಿತ್ತು. ಆದರೆ ಈ ಆಂಗ್ಲರು ಬಂದಾಗ ಎಲ್ಲವೂ ಹಾಳಾಗಿ ಹೋಯಿತು. ಸ್ವಾತಂತ್ರ್ಯ ಸಿಕ್ಕ ನಂತರವಾದರೂ ನಾವು ನಮ್ಮ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿಕೊಳ್ಳಬಹುದಿತ್ತು. ಆದರೆ ನಾವು ಶಿಕ್ಷಣಕ್ಕೆ ಅಷ್ಟೊಂದು ಮಹತ್ವ ಕೊಡಲಿಲ್ಲ. ಬ್ರಿಟಿಷರ ಶಿಕ್ಷಣ ಪದ್ಧತಿಯನ್ನೇ ಮುಂದುವರೆಸಿಕೊಂಡು ಬಂದೆವು. ಅದಕ್ಕಾಗಿಯೇ ನಾವು ಹೀಗಿದ್ದೇವೆ. ಅದಕ್ಕಾಗಿಯೇ ನಮ್ಮ ಮಕ್ಕಳು ಕೆಲಸವಿಲ್ಲದೆ ಬೀದಿಬೀದಿ ಅಲೆಯುತ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. 

ಪಾಲಕರಿಗೊಂದು ಪತ್ರ : A Open Letter to Parents in Kannada

        ದೇಶದ 95%ರಷ್ಟು ಹಣ ಕೇವಲ 5%ರಷ್ಟು ಜನರ ಹತ್ತಿರವಿದೆ. ಇದಕ್ಕೆ ನಮ್ಮ ಕೆಟ್ಟ ಎಜ್ಯುಕೇಷನ ಸಿಸ್ಟಮ್ ಕೂಡ ಒಂದು ಕಾರಣ. ನಿಮ್ಮಿಂದ ಎಜ್ಯುಕೇಷನ ಸಿಸ್ಟಮನ್ನು ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ  ನಮ್ಮ ದೇಶ ಮೂರ್ಖರಿಂದ ಮುನ್ನಡೆಸಲ್ಪಡುತ್ತಿದೆ. ಸ್ವಾರಿ, ಶತಮೂರ್ಖರಿಂದ ಮುನ್ನಡೆಸಲ್ಪಡುತ್ತಿದೆ. ಅದಕ್ಕಾಗಿ ನೀವು ಬದಲಾಗಿ. ನಿಮ್ಮ ಮಕ್ಕಳನ್ನು ನೌಕರರನ್ನಾಗಿ ಮಾಡುವ ಬದಲು ಮಾಲೀಕರನ್ನಾಗಿ ಮಾಡಿ. ಆಮೇಲೆ ಶಿಕ್ಷಣ ಪದ್ಧತಿ ತಾನಾಗಿಯೇ ಸುಧಾರಿಸುತ್ತೆ.


ಪಾಲಕರಿಗೊಂದು ಪತ್ರ : A Open Letter to Parents in Kannada

                  ಒಂದು ಸಲ ಶಾಂತ ಚಿತ್ತದಿಂದ ಯೋಚಿಸಿ ಮತ್ತು ಗಮನಿಸಿ. ಪರೀಕ್ಷೆಯಲ್ಲಿ ಫೇಲಾದವರು, ಕಾಲೇಜ ಡ್ರಾಪೌಟ ಆದವರು ಫಸ್ಟ್ ಬೆಂಚರಗಳಿಗಿಂತ ಬೇಗನೆ ಮತ್ತು ಬೆಸ್ಟಾಗಿ ಸೆಟ್ಲಾಗುತ್ತಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳನ್ನು, ಕಾರ್ಖಾನೆಗಳನ್ನು ತೆಗೆದು  ಫಸ್ಟ್ ಬೆಂಚರಗಳಿಗೆ ಕೆಲಸ ಕೊಡುತ್ತಿದ್ದಾರೆ. ಎಕ್ಸಾಮಲ್ಲಿ ಫೇಲಾದವರ್ಯಾರು ಇವತ್ತು ಖಾಲಿ ಕುಂತಿಲ್ಲ. ಎಕ್ಸಾಮಲ್ಲಿ ಟಾಪ ಮಾಡಿದವರೇ ಸರಿಯಾದ ಕೆಲಸವಿಲ್ಲದೆ ಡಿಪ್ರೆಶ್ಶನನಲ್ಲಿ ಒದ್ದಾಡುತ್ತಿದ್ದಾರೆ. ಆದ್ದರಿಂದ ನಿಮ್ಮ ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸಿ, ಅದನ್ನು ಕೊಲೆ ಮಾಡಬೇಡಿ. ಅವರನ್ನು ಬಂಧಿಸಬೇಡಿ. ಅವರಿಗೆ ಬಾಲ್ಯದ ಸ್ವಾತಂತ್ರ್ಯವನ್ನು ನೀಡಿ. ಅವರಿಗೆ ನೈತಿಕತೆಯ ಜೊತೆಗೆ ಯೋಗವನ್ನು ಹೇಳಿಕೊಡಿ. ಅವರಲ್ಲಿನ ವಿಶೇಷ ಪ್ರತಿಭೆಗೆ ಬೆಂಗಾವಲಾಗಿ ನಿಲ್ಲಿ. ಮಾರ್ಕ್ಸಗಳಿಂದ ನಿಮ್ಮ ಮಕ್ಕಳ ಭವಿಷ್ಯ ಡಿಸೈಡ್ ಆಗಲ್ಲ, ಅವರಲ್ಲಿನ ಸ್ಕೀಲ ಹಾಗೂ ಟ್ಯಾಲೆಂಟನಿಂದ ಅವರ ಫ್ಯುಚರ್ ಡಿಸೈಡ್ ಆಗುತ್ತೆ. ಅದಕ್ಕಾಗಿ ಮಾರ್ಕ್ಸಗಳಿಗಾಗಿ ನಿಮ್ಮ ಮಕ್ಕಳ ಪ್ರಾಣ ತಿನ್ನಬೇಡಿ. ನಿಮ್ಮ ಮಕ್ಕಳನ್ನು ಸರ್ಕಾರಿ ನೌಕರರನ್ನಾಗಿಸಲು ಒದ್ದಾಡಬೇಡ. ಇಪ್ಪತ್ತೋ ಮೂವತ್ತೋ ಸಾವಿರ ಸಂಬಳ ಸಿಗುವ ಕೆಲಸಕ್ಕೆ ನಿಮ್ಮ ಮಕ್ಕಳನ್ನು ಸೇರಿಸುವ ಬದಲು ನಿಮ್ಮ ಮಕ್ಕಳನ್ನು ದೊಡ್ಡ ಬ್ಯುಸಿನೆಸಮ್ಯಾನ, ಸ್ಪೋರ್ಟ್ಸಮ್ಯಾನ್, ಸೈಂಟಿಸ್ಟ, ಎಕಾನಾಮಿಸ್ಟ, ಆರ್ಟಿಸ್ಟ, ಸೆಲೆಬ್ರಿಟಿಗಳನ್ನಾಗಿ ಮಾಡಲು ಶ್ರಮಿಸಿ. All the Best and Thanks You...


ಪಾಲಕರಿಗೊಂದು ಪತ್ರ : A Open Letter to Parents in Kannada

         ಗೆಳೆಯರೇ, ಈ ವಿಷಯ ಕರ್ನಾಟಕದ ಪ್ರತಿಯೊಬ್ಬ ಪಾಲಕರಿಗೆ ತಲುಪುವ ತನಕ ಈ ಅಂಕಣವನ್ನು ಶೇರ್ ಮಾಡಿ. ನಿಮ್ಮಿಂದ ಲಕ್ಷಲಕ್ಷ ಫೀಜನ್ನು ಕಿತ್ತುಕೊಂಡು ನಿಮಗೆ ಪ್ರಯೋಜನಕ್ಕೆ ಬಾರದ ವಿಷಯಗಳನ್ನು ಕಳಿಸಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಟ್ಯಾಗ್ ಮಾಡಿ  "ನೀವು ಕಲಿಸಿದ ಔಟ್ ಡೇಟೆಡ್ ವಿಷಯಗಳಿಂದ ಏನು ಮಾಡಲಿ?'' ಎಂದು ಕೇಳಿ. ನೀವು ಕಾಲೇಜಿನಲ್ಲಿರುವಾಗ ನಿಮ್ಮನ್ನು ಅವಮಾನ ಮಾಡುತ್ತಿದ್ದ ನಿಮ್ಮ ಕ್ಲಾಸ್ ಟಾಪರ್ಸ್ ಇವತ್ತು ಎಷ್ಟು ಕೋಟಿಗಳನ್ನು ಸಂಪಾದಿಸಿದ್ದಾರೆ ಎಂಬುದನ್ನು ಕೇಳಿ. ಓದು ಬದುಕನ್ನು ರೂಪಿಸಬೇಕೇ ಹೊರತು ಓದೋದ್ರಲ್ಲೇ ಜೀವನ ಮುಗಿಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಿ ಮತ್ತು ನಿಮ್ಮ ಆತ್ಮೀಯರಿಗೂ ಅರ್ಥ ಮಾಡಿಸಿ. Thanks You... 

ಪಾಲಕರಿಗೊಂದು ಪತ್ರ : A Open Letter to Parents in Kannada

Blogger ನಿಂದ ಸಾಮರ್ಥ್ಯಹೊಂದಿದೆ.