ನೀನೇನು ಮಾಡುತ್ತಿರುವೆ? ಸ್ಫೂರ್ತಿದಾಯಕ ಅಂಕಣ - What You are doing? Motivation to Lose Laziness and Stop Time Waste in Kannada - self motivation in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೀನೇನು ಮಾಡುತ್ತಿರುವೆ? ಸ್ಫೂರ್ತಿದಾಯಕ ಅಂಕಣ - What You are doing? Motivation to Lose Laziness and Stop Time Waste in Kannada - self motivation in kannada

ನೀನೇನು ಮಾಡುತ್ತಿರುವೆ? What You are doing? Motivation to Lose Laziness and Stop Time Waste

              ಈಲಾನ ಮಸ್ಕ್ ಮಂಗಳನ ಮೇಲೆ ಕಾಲಿಡಲು ತಯಾರಿ ಮಾಡುತ್ತಿದ್ದಾರೆ. ಜೇಮ್ಸ ಕ್ಯಾಮರಾನ ಜಗತ್ತಿನ ಮೋಸ್ಟ ಅವೇಟೆಡ ಫಿಲ್ಮ ಅವತಾರ-2ವನ್ನು ತಯಾರಿಸುತ್ತಿದ್ದಾರೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಈಗಲೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಇಸ್ರೋ ಚಂದ್ರಯಾನ-2ಗಾಗಿ ಬಾಹುಬಲಿಯನ್ನು ಚಂದ್ರನ ಕಕ್ಷೆಗೆ ಉಡಾಯಿಸಿದೆ. ಆದರೆ ನೀನೇನು ಮಾಡುತ್ತಿರುವೆ? ಅಲ್ಲಿ ಇಲ್ಲಿ ಅಕ್ಕಪಕ್ಕ ನೋಡಬೇಡ. ನಾನು ನಿನ್ನನ್ನೇ ಕೇಳುತ್ತಿರುವೆ. ನೀನೇನು ಮಾಡುತ್ತಿರುವೆ?

ನೀನೇನು ಮಾಡುತ್ತಿರುವೆ? What You are doing? Motivation to Lose Laziness and Stop Time Waste

                ಮನೆ ಎದುರಿನ ಹುಡುಗಿ IAS ಎಕ್ಸಾಮಲ್ಲಿ ಟಾಪ್ ಮಾಡುವುದಕ್ಕಾಗಿ ದಿನದಲ್ಲಿ 10 ರಿಂದ 12 ಗಂಟೆ ಸ್ಟಡಿ ಮಾಡುತ್ತಿದ್ದಾಳೆ. ಪಕ್ಕದ್ಮನೆ ಹುಡುಗ ಆರ್ಮಿ ಸೇರಲು ದಿನಾ ಮುಂಜಾನೆ 4 ಗಂಟೆಗೆ ಜಿಮ್ಮಿಗೆ ಹೋಗುತ್ತಿದ್ದಾನೆ. ನಿಮ್ಮನೆಯವರು ನಿನ್ನ ಫ್ಯುಚರಗಾಗಿ ತಮ್ಮ ಹ್ಯಾಪಿನೆಸ್ಸನ್ನು ತ್ಯಾಗ ಮಾಡುತ್ತಿದ್ದಾರೆ. ನಿನ್ನ ಸಂಬಂಧಿಕರು ನಿನ್ನ ನೋಡಿ ನಗಲು ಕಾಯುತ್ತಿದ್ದಾರೆ. ನಿನ್ನೆಲ್ಲ ಗೆಳೆಯರು ಲೈಫಲ್ಲಿ ಬೇಗನೆ ಸೆಟ್ಲಾಗಲು ಹಗಲುರಾತ್ರಿ ಸ್ಟ್ರಗಲ್ ಮಾಡುತ್ತಿದ್ದಾರೆ. ಆದರೆ ನೀನೇನು ಮಾಡುತ್ತಿರುವೆ?. ನೀನೇನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿಲ್ಲ. ಆದರೆ ನನಗೆಲ್ಲವು ಗೊತ್ತು...


ನೀನೇನು ಮಾಡುತ್ತಿರುವೆ? What You are doing? Motivation to Lose Laziness and Stop Time Waste

           ಯಾರೋ ಒಬ್ಬ ಜಾಬಗಾಗಿ ತಯಾರಿ ಮಾಡುತ್ತಿದ್ದಾನೆ. ಯಾರೋ ಒಬ್ಬ ಹೊಸ ಬಿಜನೆಸ್ ಇಲ್ಲ ಸ್ಟಾರ್ಟಪನ್ನು ಪ್ರಾರಂಭಿಸಲು ಯೋಚಿಸುತ್ತಿದ್ದಾನೆ. ಯಾರೋ ಒಬ್ಬ ಸ್ಪೋರ್ಟ್ಸನಲ್ಲಿ ಭಾರತವನ್ನು ರಿಪ್ರಸೆಂಟ ಮಾಡಲು ಪ್ರ್ಯಾಕ್ಟೀಸ್ ಮಾಡುತ್ತಿದ್ದಾನೆ. ಯಾರೋ ಒಬ್ಬ ರಾತ್ರಿ ನಿದ್ದೆ ಮಾಡುವುದನ್ನು ಬಿಟ್ಟು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದಾನೆ. ಸದ್ಯಕ್ಕೆ ನಿನ್ನೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ತನ್ನ ಕಂಪನಿಯನ್ನು ಜಗತ್ತಿನ ಬೆಸ್ಟ್ ವಿಡಿಯೋ ಪ್ರೋಡಕ್ಷನ್ ಕಂಪನಿಯನ್ನಾಗಿಸಲು ದಿನದ 15 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾನೆ. ಆದರೆ ನೀನೇನು ಮಾಡುತ್ತಿರುವೆ? 


ನೀನೇನು ಮಾಡುತ್ತಿರುವೆ? What You are doing? Motivation to Lose Laziness and Stop Time Waste

ಕೇಳು ಓ ನನ್ನ ಪ್ರೀತಿಯ ಗೆಳೆಯ, ಫೇಸ್ಬುಕ್ ಮತ್ತು ಇನಸ್ಟಾಗ್ರಾಮಲ್ಲಿ ಹುಡುಗಿಯರ ಫೋಟೋಗಳಿಗೆ ಲೈಕ್ ಮತ್ತು ಕಮೆಂಟ್ ಮಾಡುವುದರಿಂದ ಏನು ಪ್ರಯೋಜನವಾಗಲ್ಲ. 

ರಾತ್ರಿಯೆಲ್ಲ ಸೆಕ್ರೆಟ್ ಸಿನಿಮಾಗಳನ್ನು ನೋಡಿ ದಿನವೆಲ್ಲ ಅಲ್ಲಾಡಿಸುವುದರಿಂದ ಏನು ಪ್ರಯೋಜನವಾಗಲ್ಲ. 

ನಿರುದ್ಯೋಗಿ ಮಿತ್ರರೊಂದಿಗೆ ಬೀದಿಬೀದಿ ಸುತ್ತುವುದರಿಂದ ಏನು ಪ್ರಯೋಜನವಾಗಲ್ಲ.

ಸಿಗದವಳಿಗೆ, ಮರಳಿ ಬರದವಳಿಗೆ ಕಾಯುತ್ತಾ ಕುಳಿತುಕೊಳ್ಳುವುದರಿಂದ ಏನು ಪ್ರಯೋಜನವಾಗಲ್ಲ. 

ಕಾಯುತ್ತಾ ಕುಳಿತರೆ ಅವಕಾಶ ನಿನ್ನನ್ನು ಹುಡುಕಿಕೊಂಡು ಬರಲ್ಲ. 

ಫೇಸ್ಬುಕ್, ವಾಟ್ಸಾಪ್, ಇನಸ್ಟಾಗ್ರಾಮ, ಟಿಕಟಾಕ್ ಇವೆಲ್ಲ ಡಿಸ್ಟ್ರ್ಯಾಕ್ಷನಗಳನ್ನು ಬಿಟ್ಟು ಬಿಡು. 

ಆಲಸಿತನ, ಜಲಸಿ, ಮೈಗಳ್ಳತನ, ಕೀಳು ಮಟ್ಟದ ಬುದ್ಧಿ ಇವುಗಳನ್ನೆಲ್ಲ ಮುರಿದು ಬಿಡು. 

ಜಗತ್ತು ಬದಲಾಗುತ್ತಿದೆ ಹಾಗೂ ಸ್ಪೀಡಾಗಿ ಮುಂದೆ ಸಾಗುತ್ತಿದೆ. ಗೆಳೆಯ, ನೀನೂ ಬದಲಾಗು. ಇಲ್ಲವಾದರೆ ಈ ಜಗತ್ತು ನಿನ್ನನ್ನು ಶಾಶ್ವತವಾಗಿ ಮರೆತು ಬಿಡುತ್ತದೆ...


ನೀನೇನು ಮಾಡುತ್ತಿರುವೆ? What You are doing? Motivation to Lose Laziness and Stop Time Waste




Blogger ನಿಂದ ಸಾಮರ್ಥ್ಯಹೊಂದಿದೆ.