ಒಂಟಿತನದಿಂದ ಹೊರ ಬರುವುದು ಹೇಗೆ? - How to Over come Loneliness in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಒಂಟಿತನದಿಂದ ಹೊರ ಬರುವುದು ಹೇಗೆ? - How to Over come Loneliness in Kannada

ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

                     ಇವತ್ತು ಬಹಳಷ್ಟು ಹದಿಹರೆಯದ ಯುವಕ ಯುವತಿಯರು, ವಿದ್ಯಾರ್ಥಿಗಳು ಒಂಟಿತನದಿಂದ ನರಳುತ್ತಿದ್ದಾರೆ. ಒಂಟಿತನದಿಂದ ಹೊರ ಬರಲಾಗದೆ ಒದ್ದಾಡಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಫೇಸ್ಬುಕನಂಥ ಸೋಸಿಯಲ್ ಮಿಡಿಯಾಗಳಿಗೆ ಅತಿಯಾಗಿ ಅಂಟಿಕೊಳ್ಳುತ್ತಿದ್ದಾರೆ. ಕೇವಲ ಒಂಟಿಯಾಗಿರುವ ವ್ಯಕ್ತಿಗಳು ಮಾತ್ರ ಏನಿಟೈಮ್ ಆನಲೈನನಲ್ಲಿರುತ್ತಾರೆ.  ಏಕಾಂತ ಬೇರೆ, ಒಂಟಿತನ ಬೇರೆ. Solitude (ಏಕಾಂತ) is different and Loneliness (ಒಂಟಿತನ) is different. ಏಕಾಂತದಲ್ಲಿರುವ ವ್ಯಕ್ತಿಯ ಮನಸ್ಸು ಪರಿಶುದ್ಧವಾಗಿರುತ್ತದೆ, ಪೋಜಿಟಿವ ಆಗಿರುತ್ತದೆ. ಆದರೆ ಒಂಟಿಯಾಗಿರುವ ವ್ಯಕ್ತಿಯ ಮನಸ್ಸು ನಿಂತ ನೀರಾಗಿರುತ್ತದೆ, ನೆಗೆಟಿವ್ ಆಗಿರುತ್ತದೆ. ಪರಿಶುದ್ಧ ಏಕಾಂತವೊಂದು ಒಂದು ಸುಂದರ ಸ್ವರ್ಗ. ಆದರೆ ಒಂಟಿತನ ಒಂದು ಭೀಕರ ನರಕ. ಒಂಟಿಯಾಗಿರುವ ಮನುಷ್ಯನ ಮನಸ್ಸು ದೆವ್ವದ ಮನೆಯಂತಾಗಿರುತ್ತದೆ. ಅದಕ್ಕಾಗಿ ನೀವು ಒಂಟಿತನದಿಂದ ಹೊರ ಬರಲೇಬೇಕು.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

                                  ಗಟ್ಟಿ ಸಂಬಂಧಗಳ ಕೊರತೆಯಿಂದಾಗಿ ಇವತ್ತು ಎಷ್ಟೋ ಜನ ಒಂಟಿತನಕ್ಕೆ ಬಲಿಯಾಗುತ್ತಿದ್ದಾರೆ. ಒಂಟಿತನದಿಂದಾಗಿ ನೀವು ಡಿಪ್ರೆಶ್ಶನ ಹಾಗೂ ಸ್ಟ್ರೇಸಗೆ ಒಳಗಾಗುತ್ತೀರಿ. ಒಂಟಿತನ ನಿಮಗೆ ಸದಾಕಾಲ ದು:ಖ ಹಾಗೂ ಕೋಪಿಷ್ಟ ಸ್ವಭಾವವನ್ನು ತಂದು ಕೊಡುತ್ತದೆ. ಒಂಟಿತನದಿಂದಾಗಿ ನಿಮ್ಮಲ್ಲಿ ನೆಗೆಟಿವಿಟಿ ಹಾಗೂ ಅವ್ಯಕ್ತ ಭಯ ಹೆಚ್ಚಾಗುತ್ತದೆ. ಒಂಟಿತನದಿಂದಾಗಿ ನೀವು ಅಶ್ಲೀಲ ಚಿತ್ರಗಳನ್ನು ನೋಡಲು ಪ್ರಾರಂಭಿಸುತ್ತೀರಿ. ಒಂಟಿತನದಿಂದಾಗಿ ನೀವು ನಿಮ್ಮನ್ನು ಕೀಳಾಗಿ ಕಾಣುತ್ತೀರಿ. ಒಂಟಿತನದಿಂದಾಗಿ ನೀವು ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುತ್ತೀರಿ, ಹೆದರುತ್ತೀರಿ. ಒಂಟಿತನದಿಂದಾಗಿ ನಿಮ್ಮ ಮಾನಸಿಕ ಶಾಂತಿ ಹಾಗೂ ಮೆದುಳಿನ ಸ್ಥಿರತೆ ಹಾಳಾಗುತ್ತದೆ. ಒಂಟಿತನದಿಂದಾಗಿ ನೀವು ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಲ್ಲ ಹಾಗೂ ನಿಮ್ಮ ಬೆಳವಣಿಗೆಯಾಗಲ್ಲ. ಒಂಟಿತನದಿಂದಾಗಿ ನೀವು ಸಮಾಜ ಬಾಹೀರ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಒಂಟಿತನದಿಂದಾಗಿ ನೀವು ಆಲ್ಕೋಹಾಲ್ ಹಾಗೂ ಸಿಗರೇಟಗಳ ದಾಸರಾಗುತ್ತೀರಿ. ಒಂಟಿತನದಿಂದಾಗಿ ನಿಮ್ಮ ಲೈಫಸ್ಟೈಲ್ ಅಸ್ತವ್ಯಸ್ತವಾಗುತ್ತದೆ. ಒಂಟಿತನದಿಂದಾಗಿ ನೀವು ನಿದ್ರಾಹೀನತೆಯಿಂದ ಬಳಲುತ್ತೀರಿ. ನೀವು ಅತೀವ ಒಂಟಿತನದಿಂದ ಬಳಲುತ್ತಿದ್ದರೆ ನೀವು ಆತ್ಮಹತ್ಯೆಯಂಥ ಹುಚ್ಚು ಪ್ರಯತ್ನಗಳಿಗೆ ಕೈಹಾಕುತ್ತೀರಿ. 


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

               ಸದ್ಯಕ್ಕೆ ಈ ಒಂಟಿತನ ಎನ್ನುವುದು ಯುವ ಜನಾಂಗವನ್ನು ಕ್ಷಣಕ್ಷಣಕ್ಕೂ ಕಾಡುತ್ತಿದೆ. ಇದರಿಂದ ಹೊರಬರಲಾಗದೆ ಅವರು ಒದ್ದಾಡುತ್ತಿದ್ದಾರೆ. ಒಂಟಿತನದಿಂದ ಹೊರ ಬರುವುದು ಹೇಗೆ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಈ ಅಂಕಣವನ್ನು ಕೊನೆತನಕ ಓದಿ. ಒಂಟಿತನವೇನು ರೋಗವಲ್ಲ. ಅದೊಂದು ಮಾನಸಿಕತೆ ಅಷ್ಟೇ. ನಾವು ಅದನ್ನು ಬದಲಾಯಿಸಬಹುದು. It's just a mental state. We can change it. ಒಂಟಿತನದಿಂದ ಹೊರ ಬರಲು ಕೆಲವು ಸೂಕ್ತ ಸಲಹೆಗಳು ಇಲ್ಲಿವೆ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

1) ಗಟ್ಟಿ ಸಂಬಂಧಗಳನ್ನು ಬೆಳೆಸಿ. ಕ್ವಾಂಟಿಟಿ ಸಂಬಂಧಗಳಿಗಿಂತ ಕ್ವಾಲಿಟಿ ಸಂಬಂಧಗಳನ್ನು ಬೆಳೆಸಿ. ಊರತುಂಬ ಪ್ರಯೋಜನಕ್ಕೆ ಬಾರದ ಗೊಳ್ಳುಪೊಳ್ಳು ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ ಒಬ್ಬ ಆತ್ಮೀಯನನ್ನು ಸಂಪಾದಿಸುವುದು ಒಳ್ಳೆಯದು. ನಿಮ್ಮ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಆತ್ಮೀಯತೆ, ಗಟ್ಟಿತನ ಇಲ್ಲದಿರುವುದರಿಂದಲೇ ನೀವು ಒಂಟಿಯಾಗುತ್ತೀರಿ. ಆದಕಾರಣ ಕ್ವಾಲಿಟಿ ಸಂಬಂಧಗಳನ್ನು ಬೆಳೆಸಿ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

2) ಫೇಸ್ಬುಕನಂಥ ಸಾಮಾಜಿಕ ಜಾಣತಾಣಗಳನ್ನು ಅತಿಯಾಗಿ ಬಳಸುವುದನ್ನು ನಿಲ್ಲಿಸಿ. ಕೇವಲ ಒಂಟಿಯಾಗಿರುವ ವ್ಯಕ್ತಿಗಳು ಮಾತ್ರ ಏನಿಟೈಮ್ ಆನಲೈನನಲ್ಲಿರುತ್ತಾರೆ. ಒಂಟಿಗಳ ಲೋಕದಲ್ಲಿ ಬಿದ್ದು ನೀವು ಮತ್ತಷ್ಟು ಒಂಟಿಯಾಗಬೇಡಿ. ಫೇಸ್ಬುಕ್ ಗೆಳೆಯರಿಗಿಂತ ಲೈಫ್ಬುಕ್ ಗೆಳೆಯರು ತುಂಬಾ ಮುಖ್ಯವಾಗ್ತಾರೆ. ಒಳ್ಳೇ ಗೆಳೆಯರನ್ನು ಬೆಳೆಸಿ. ನಿಮಗೆ ಫೇಸ್ಬುಕನಲ್ಲಿ ಎಷ್ಟು ಜಾಸ್ತಿ ಜನ ಫ್ರೆಂಡ್ಸ್ ಇರ್ತಾರೋ ಅಷ್ಟು ಕಮ್ಮಿ ಜನ ನಿಮಗೆ ರಿಯಲ್ ಲೈಫಲ್ಲಿ ಗೆಳೆಯರಿರುತ್ತಾರೆ. ಉದಾ: ನನಗೆ ಫೇಸ್ಬುಕನಲ್ಲಿ ಸಾವಿರಾರು ಗೆಳೆಯರಿದ್ದಾರೆ, ಆದರೆ ರಿಯಲ್ ಲೈಫಲ್ಲಿ ಒಬ್ಬಳೇ ಒಬ್ಬಳು ರಿಯಲ್ ಗೆಳತಿಯಿದ್ದಾಳೆ.

Number of FaceBook Friends  ~  1 / Number of LifeBook Friends

ಆದ್ದರಿಂದ ಸೋಸಿಯಲ್ ಮಿಡಿಯಾಗಳನ್ನು ಅತಿಯಾಗಿ ಬಳಸುವುದನ್ನು ನಿಲ್ಲಿಸಿ.

ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

3) ಸಾಧ್ಯವಾದಷ್ಟು ನೇರ ಸಂಪರ್ಕವನ್ನು ಸಾಧಿಸಿ. ಸಾಧ್ಯವಾದಷ್ಟು ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಿ. ಈ ಮೊಬೈಲನಿಂದಲೇ ನಿಮ್ಮೆಲ್ಲ ಆತ್ಮೀಯ ಸಂಬಂಧಗಳು ಹಾಳಾಗಿವೆ ಎಂಬುದನ್ನು ಮರೆಯದಿರಿ.

ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

4) ನಿಮ್ಮ ಆತ್ಮೀಯರನ್ನು, ನಿಮ್ಮ ಸ್ನೇಹಿತರನ್ನು ಹಾಗೂ ಒಳ್ಳೇ ಸಂಬಂಧಿಕರನ್ನು ಗೌರವಿಸಿ. ಅವರ ಭಾವನೆಗಳನ್ನು ಗೌರವಿಸಿ. ಕಳೆದುಕೊಂಡು ಕೊರಗುವುದಕ್ಕಿಂತ, ಕಳೆದುಕೊಂಡು ಕಣ್ಣೀರಾಕುವುದಕ್ಕಿಂತ ಇರುವಾಗ ಅವರನ್ನು ಗೌರವಿಸಿ. ಅವರಿಗೆ ಸದಾಕಾಲ ಸಂಗಾತಿಗಳಾಗಿರಿ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

5) ನಿಮ್ಮ ಫ್ಯಾಮಿಲಿ ಮೆಂಬರ್ಸಗೆ ಹಾಗೂ ಜೀವನ ಸಂಗಾತಿಗೆ ಸಾಧ್ಯವಾದಷ್ಟು ಸಮಯವನ್ನು ನೀಡಿ. ಅನಾವಶ್ಯಕ ವ್ಯಕ್ತಿಗಳೊಂದಿಗೆ ಒಣಹರಟೆ ಹೊಡೆಯುವುದಕ್ಕಿಂತ ನಿಮ್ಮ ಫ್ಯಾಮಿಲಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ.

ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

6) ಮಧ್ಯರಾತ್ರಿ ತನಕ ಮೊಬೈಲ್ ಬಳಸುವುದನ್ನು ಬಿಟ್ಟು ಚೆನ್ನಾಗಿ ನಿದ್ದೆ ಮಾಡಿ. ಧ್ಯಾನ ಮಾಡಿ. ಎಕ್ಸರಸೈಜ ಮಾಡಿ. ನಿಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿ.  ಆರೋಗ್ಯಕರ ದೇಹದ ಜೊತೆಗೆ ಆರೋಗ್ಯಕರವಾದ ಮೈಂಡಸೆಟನ್ನು ಬೆಳೆಸಿಕೊಳ್ಳಿ. ಯಾವಾಗಲೂ ಫೊಕಸ್ಡ ಆಗಿರಿ. ಯಾವಾಗಲೂ ಪೊಜಿಟಿವ್ ಆಗಿರಿ. ಅಟ್ರಾಕ್ಟೀವ್ ಪರ್ಸನಾಲಿಟಿಯನ್ನು ಬೆಳೆಸಿಕೊಳ್ಳಿ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

7) Work, Work and Work. ಕೆಲಸ ಮಾಡಿ. ಟೀಮ್ ವರ್ಕ್ ಮಾಡಿ. ನಿಮ್ಮನ್ನು ನೀವು ಸದಾ ಕ್ರಿಯೇಟಿವ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ದಿನಾ ನಿಮ್ಮ ಕೆಲಸಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ವ್ಯಕ್ತಿಗಳೊಂದಿಗೆ ಮಾತನಾಡಿ. ಹೊಸ ಹೊಸ ವ್ಯಕ್ತಿಗಳನ್ನು ಭೇಟಿಯಾಗಿ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

8) ನಿಮ್ಮ ಖಾಲಿ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಹೊಸಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ನಮ್ಮ ದೇಶ ಸುಂದರವಾಗಿದೆ. ಸಾಧ್ಯವಾದರೆ ಫ್ರಿಯಾಗಿರೋವಾಗ ಟ್ರಾವೆಲ್ ಮಾಡಿ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

9) ನಿಮ್ಮ ಪೆದ್ದು ನಂಬಿಕೆಗಳನ್ನು ಬಿಟ್ಟು ಬಿಡಿ. ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿ. ಜಗತ್ತಿನಲ್ಲಿ ಕೆಟ್ಟದ್ದಕ್ಕಿಂತ ಹೆಚ್ಚಾಗಿ ಒಳ್ಳೆಯದಿದೆ. ಆದರೆ ಅದು ನಿಮಗೆ ಸಹಜವಾಗಿ ಕಾಣಿಸಲ್ಲ. ಅದಕ್ಕಾಗಿ ನಿಮ್ಮ ದೃಷ್ಟಿಕೋನವನ್ನು ಸ್ವಲ್ಪ ಬದಲಾಯಿಸಿ. ಸಾಧ್ಯವಾದರೆ ಸಾಮಾಜಿಕ ಚಟುವಟಿಕೆಗಳಲ್ಲಿ, ಸಮಾಜಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಒಳ್ಳೆ ಕೆಲಸಗಳಿಗೆ ಶ್ರಮದಾನ ಮಾಡಿ.


ಒಂಟಿತನದಿಂದ ಹೊರ ಬರುವುದು ಹೇಗೆ? How to Over come Loneliness in Kannada

                ಇವೀಷ್ಟು ಸಲಹೆಗಳು ಒಂಟಿತನದಿಂದ ಹೊರಬರಲು ಸಾಕೆನಿಸುತ್ತವೆ. ಒಂದು ಕಾಲದಲ್ಲಿ ನಾನು ಸಹ ಈ ಒಂಟಿತನಕ್ಕೆ ತುತ್ತಾಗಿದ್ದೆ. ಆದರೆ ಈಗ ಅದನ್ನು ಸಾಯಿಸಿ ಸೂಪರಾಗಿರುವೆ. ನಾನು ಬ್ಯುಸಿನೆಸ್ ಮೀಟಿಂಗ್ಸ, ಮೋಟಿವೇಷನಲ್ ಸೆಮಿನಾರ್ ಅಂತೆಲ್ಲ ದೇಶದ ತುಂಬೆಲ್ಲ ಸುತ್ತುತ್ತಿರುತ್ತೇನೆ. ದಿನಾಲು ನೂರಾರು ಹೊಸ ವ್ಯಕ್ತಿಗಳೊಂದಿಗೆ ಮಾತನಾಡುತ್ತೇನೆ. ದಿನಾಲು ಹೊಸಹೊಸ ಜಾಗಗಳಿಗೆ ಭೇಟಿ ಕೊಡುತ್ತೇನೆ. ಹೀಗಾಗಿ ಈ ಒಂಟಿತನ ನನ್ನ ಬಳಿ ಈಗ ಸುಳಿಯುವುದಿಲ್ಲ. ನೀವು ಒಂಟಿಯಾಗಿದ್ದರೆ ಒಂಟಿತನವನ್ನು ನಿರ್ಲಕ್ಷಿಸಬೇಡಿ. ಅದರಿಂದ ಹೊರಬಂದು ಸೋಸಿಯಲ್ಲಾಗಿ, ಫ್ರೆಂಡ್ಲಿಯಾಗಿ ನಗುನಗುತ್ತಾ ಬದುಕಿ. All the Best and Thanks you...
Blogger ನಿಂದ ಸಾಮರ್ಥ್ಯಹೊಂದಿದೆ.