ಹಾಯ್ ಗೆಳೆಯರೇ, ನಾವು ನಮ್ಮ ಜೀವನದಲ್ಲಿ ಸದಾ ಕಾಲ ಸಂತೋಷವಾಗಿರಬೇಕೆಂದರೆ, ಏನಾದರೂ ಒಂದನ್ನು ಸಾಧಿಸಬೇಕೆಂದರೆ ಕೆಲವೊಂದಿಷ್ಟು ವಿಷಯಗಳನ್ನು ಮುಚ್ಚಿಡಬೇಕು. ಈ ವಿಷಯಗಳನ್ನು ನಾವು ಮುಚ್ಚಿಡದಿದ್ದರೆ ಅನಾವಶ್ಯಕ ಸಮಸ್ಯೆಗಳು, ನೋವುಗಳು, ನಷ್ಟಗಳು ಎದುರಾಗುತ್ತವೆ. ಆದ್ದರಿಂದ ಕೆಲವೊಂದಿಷ್ಟು ವಿಷಯಗಳನ್ನು ಮುಚ್ಚಿಡಬೇಕಾಗುತ್ತದೆ. ಈ ವಿಷಯಗಳನ್ನು ಮುಚ್ಚಿಡಿ.
ಈ 8 ವಿಷಯಗಳನ್ನು ಮುಚ್ಚಿಡಿ - Keep these things as Secret in Kannada
1) ಪಬ್ಲಿಕ್ ವಸ್ತುಗಳ, ವ್ಯಕ್ತಿಗಳ ಬಗ್ಗೆ ನಿಮಗಿರುವ ಪರ್ಸನಲ್ ಅಭಿಪ್ರಾಯಗಳನ್ನು ಮುಚ್ಚಿಡಿ. ರಾಜಕೀಯ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಮುಚ್ಚಿಡಿ. ನಿಮ್ಮ ಆಂತರಿಕ ನಂಬಿಕೆಗಳನ್ನು, ಧಾರ್ಮಿಕ ನಂಬಿಕೆಗಳನ್ನು ಮುಚ್ಚಿಡಿ. ಇಲ್ಲವಾದರೆ ಈ ಅಭಿಪ್ರಾಯಗಳು ಅನಾವಶ್ಯಕವಾಗಿ ಒಣ ವಿವಾದಕ್ಕೆ ಕಾರಣವಾಗುತ್ತವೆ. ಜೊತೆಗೆ ನಿಮ್ಮ ಮಾನಸಿಕ ನೆಮ್ಮದಿಯನ್ನು ಕಿತ್ತುಕೊಳ್ಳುತ್ತವೆ.

2) ನೀವು ಮಾಡಿದ ದಾನ ಅಥವಾ ಸಹಾಯವನ್ನು, ಒಳ್ಳೆ ಕಾರ್ಯಗಳನ್ನು ಸಾಧ್ಯವಾದಷ್ಟು ಮುಚ್ಚಿಡಿ. ಇಲ್ಲವಾದರೆ ಕೆಲವು ಜನ ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ನಿಂದಿಸಲು ಪ್ರಾರಂಭಿಸುತ್ತಾರೆ.

3) ನಿಮ್ಮ ಫ್ಯುಚರ್ ಪ್ಲ್ಯಾನಗಳನ್ನು, ಗುರಿಗಳನ್ನು ಮುಚ್ಚಿಡಿ. ವಿಶೇಷವಾಗಿ ನಿಮ್ಮ ಸಂಬಂಧಿಕರಿಂದ ಹಾಗೂ ನಿಮ್ಮ ಪಕ್ಕದ ಮನೆಯವರಿಂದ ನಿಮ್ಮ ಮುಂದಿನ ಗುರಿಗಳನ್ನು ಮುಚ್ಚಿಡಿ. ನಿಮ್ಮ ಭವಿಷ್ಯದ ಗುರಿಗಳು ಗೊತ್ತಾದಾಗ ಹೊಟ್ಟೆ ಉರಿದುಕೊಂಡು ನಿಮ್ಮ ದಾರಿಗೆ ಕಲ್ಲಾಕುವ ಜನರಿಗೇನು ಕೊರತೆಯಿಲ್ಲ. ಅಲ್ಲದೇ ನಿಮ್ಮ ಕನಸುಗಳು, ಗುರಿಗಳು ದೊಡ್ಡದಾಗಿದ್ದರೆ ಜನ ನಿಮ್ಮನ್ನು ನೋಡಿ ಗೇಲಿ ಮಾಡಿಕೊಂಡು ನಗುತ್ತಾರೆ. ಇದರಿಂದ ನಿಮ್ಮ ಕಾನ್ಫಿಡೆನ್ಸ ಕಡಿಮೆಯಾಗುತ್ತದೆ.

4) ನಿಮ್ಮ ಪರ್ಸನಲ ಸಮಸ್ಯೆಗಳನ್ನು, ಫ್ಯಾಮಿಲಿ ಸಮಸ್ಯೆಗಳನ್ನು, ವಿಕನೆಸಗಳನ್ನು, ಸೆಕ್ರೆಟ್ಸಗಳನ್ನು ಮುಚ್ಚಿಡಿ. ನಿಮ್ಮ ಸಮಸ್ಯೆಗಳನ್ನು, ನೋವುಗಳನ್ನು ಬೇರೆಯವರೊಂದಿಗೆ ಶೇರ್ ಮಾಡುವುದರಿಂದ ನಿಮಗೆ ಪರಿಹಾರ ಸಿಗಲ್ಲ. ಅದರ ಬದಲಾಗಿ ತಿರಸ್ಕಾರ, ಕೊಂಕು ನಗೆ ಹಾಗೂ ಅವಮಾನ ಸಿಗುತ್ತದೆ. ನಿಮ್ಮ ವಿಕನೆಸಗಳು ಬೇರೆಯವರಿಗೆ ಗೊತ್ತಾದಾಗ ಜನ ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗುತ್ತಾರೆ. ನಿಮ್ಮನ್ನು ತುಳಿಯಲು ಪ್ರಯತ್ನಿಸುತ್ತಾರೆ.

5) ನಿಮ್ಮ ಪರ್ಸನಲ ಲೈಫನ್ನು, ಸೆ** ಲೈಫನ್ನು, ಲವ್ ಲೈಫನ್ನು, ಪಾಸ್ಟ ಲೈಫನ್ನು ಮುಚ್ಚಿಡಿ. ನಿಮ್ಮ ಹಳೇ ಕಹಿ ನೆನಪುಗಳನ್ನು, ಅನುಭವಗಳನ್ನು ಮುಚ್ಚಿಡಿ. ನಿಮ್ಮ ಮಾಜಿ ಪ್ರೇಯಸಿ ಅಥವಾ ಸದ್ಯದ ಜೀವನ ಸಂಗಾತಿಯ ವೈಯಕ್ತಿಕ ಆಸಕ್ತಿಗಳನ್ನು, ವಿಷಯಗಳನ್ನು ಮುಚ್ಚಿಡಿ. ಏಕೆಂದರೆ ಬೆಡರೂಮಿನ ರಹಸ್ಯಗಳನ್ನು ಬೀದಿಗೆ ತರುವುದು ಸರಿಯಲ್ಲ. ನಿಮ್ಮ ಪರ್ಸನಲ್ ಲೈಫಿಗೆ ಅನಾವಶ್ಯಕ ಪಬ್ಲಿಸಿಟಿ ಕೊಟ್ಟು ಬೇಡದ ಆಪತ್ತುಗಳನ್ನು ಆಹ್ವಾನಿಸುವ ಅವಶ್ಯಕತೆ ಏನಿಲ್ಲ.

6) ನಿಮ್ಮ ಸೋಸಿಯಲ್ ಮೇಡಿಯಾ ಪಾಸವರ್ಡಗಳನ್ನು, ಬ್ಯಾಂಕಿಂಗ್ ಡಿಟೇಲ್ಸನ್ನು ಮುಚ್ಚಿಡಿ. ನಿಮ್ಮ ಆದಾಯ ಹಾಗೂ ಆಸ್ತಿಯ ಒಟ್ಟು ಮೊತ್ತವನ್ನು ಗುಟ್ಟಾಗಿಡಿ. ಇಲ್ಲವಾದರೆ ಗೊಳ್ಳು ವಿಮಾ ಪಾಲಿಸಿ ಮಾರುವವರು ಸುಮ್ಮನೆ ಬೆನ್ನು ಬಿದ್ದು ಕಾಟ ಕೊಡುತ್ತಾರೆ. ನಿಮ್ಮ ಬಳಿ ಜಾಸ್ತಿ ದುಡ್ಡಿದೆ ಎಂದು ಗೊತ್ತಾದಾಗ ನಿಮ್ಮನ್ನು ಯಾಮಾರಿಸಲು ಯತ್ನಿಸುತ್ತಾರೆ. ನಿಮ್ಮ ಬಳಿ ಸಾಕಷ್ಟು ದುಡ್ಡಿದೆ ಎಂದಾಗ ಪರ್ಸ್ ನೋಡಿ ಪ್ರೀತಿಸುವವರು ನಿಮ್ಮೊಂದಿಗೆ ಪ್ರೀತಿ ನಾಟಕವಾಡಿ ನಿಮ್ಮನ್ನು ದೋಚಿಕೊಂಡು ಫರಾರಿಯಾಗುತ್ತಾರೆ. ನಿಮ್ಮನ್ನು ಇಷ್ಟಪಡದವರಿಗೆ ನಿಮ್ಮ ಬಳಿ ಅಪಾರ ಹಣ, ಆಸ್ತಿ ಅಂತಸ್ತಿದೆ ಎಂಬುದು ಗೊತ್ತಾದಾಗ ಅವರು ಹೊಟ್ಟೆ ಉರಿದುಕೊಂಡು ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್, ಮಾಟ ಪ್ರಯೋಗ ಇತ್ಯಾದಿಗಳನ್ನು ಮಾಡುವ ಸಾಧ್ಯತೆ ಅಧಿಕವಾಗಿದೆ. ಆದ್ದರಿಂದ ನಿಮ್ಮ ಆದಾಯ ಹಾಗೂ ಆಸ್ತಿಯ ನಿಜವಾದ ಮೌಲ್ಯವನ್ನು ಮುಚ್ಚಿಡಿ.

7) ಬೇರೆಯವರ ವಿಕನೇಸಗಳು ಅಥವಾ ಡಾರ್ಕ ಸೆಕ್ರೆಟ್ಸಗಳು ಅಥವಾ ನೆಗೆಟಿವ್ ವಿಚಾರಗಳು ನಿಮಗೆ ಗೊತ್ತಾದರೆ ಅದನ್ನು ಮುಚ್ಚಿಡಿ. ಅವುಗಳನ್ನು ಯಾವುದೇ ಕಾರಣಕ್ಕೂ ಬೇರೆ ಯಾರೊಂದಿಗೂ ಶೇರ್ ಮಾಡಬೇಡಿ. ನಾಲಿಗೆ ಚಪಲಕ್ಕೆ ಏನೇನೋ ಹೇಳದೆ ಒಬ್ಬ ಸೃಜನಶೀಲ ವ್ಯಕ್ತಿಯಾಗಿ. ಬೇರೆಯವರು ನಿಮ್ಮ ಮೇಲೆ ನಂಬಿಕೆ ಇಟ್ಟು ಹೇಳಿದ ರಹಸ್ಯಗಳನ್ನು ರಹಸ್ಯವಾಗಿಡಿ. ನಂಬಿಕೆ ದ್ರೋಹ ಮಾಡಬೇಡಿ.

8) ನೀವು ನಿಮ್ಮ ಬಿಜನೆಸ್ಸಲ್ಲಿ ಸಕ್ಸೆಸಫುಲ್ಲಾಗಿರಬೇಕೆಂದರೆ ನಿಮ್ಮ ಸಕ್ಸೆಸ್ ಟ್ರಿಕ್ಸಗಳನ್ನು ಮುಚ್ಚಿಡಿ. ಯಾವುದೇ ಸಕ್ಸೆಸಫುಲ್ ವ್ಯಕ್ತಿಗಳು, ಬಿಜನೆಸಮ್ಯಾನಗಳು ತಮ್ಮ ಸಕ್ಸೆಸ್ ಸೆಕ್ರೆಟ್ಸಗಳನ್ನು ಬಿಟ್ಟುಕೊಡಲ್ಲ.
ಉದಾಹರಣೆಗಾಗಿ : KFCಯ ರೇಸಿಪಿ ಬರೀ KFCಗೆ ಮಾತ್ರ ಗೊತ್ತಿದೆ. ಕೋಕೋ ಕೋಲಾದ ರೇಸಿಪಿ ಬರೀ ಕೋಕೋ ಕೊಲಾಗೆ ಮಾತ್ರ ಗೊತ್ತಿದೆ. ತಿರುಪತಿ ಲಡ್ಡುವಿನ ರೇಸಿಪಿ ಬರೀ ಟಿಟಿಡಿಗೆ ಮಾತ್ರ ಗೊತ್ತಿದೆ.

ಓಕೆ ಗೆಳೆಯರೇ, ನೀವು ನಿಮ್ಮ ಜೀವನದಲ್ಲಿ ಸದಾಕಾಲ ಸಂತೋಷವಾಗಿರಬೇಕೆಂದರೆ, ಸಕ್ಸೆಸಫುಲ್ಲಾಗಿರಬೇಕೆಂದರೆ ಇವಿಷ್ಟು ಸಂಗತಿಗಳನ್ನು ಮುಚ್ಚಿಡಿ. ಒಂದು ವೇಳೆ ನಿಮ್ಮ ಬೆನ್ನ ಹಿಂದೆಯೂ ಜನ ನಿಮ್ಮ ಬಗ್ಗೆ ಒಳ್ಳೆಯದನ್ನಾ ಮಾತನಾಡಬೇಕೆಂದರೆ ಒಂದು ಕೆಲಸ ಮಾಡಿ. ಯಾರನ್ನಾದರೂ ಹೊಗಳಬೇಕೆಂದರೆ ಬಹಿರಂಗವಾಗಿ ಹೊಗಳಿ. ಆದರೆ ಯಾರನ್ನಾದರೂ ತೆಗಳಬೇಕೆಂದರೆ ಗುಟ್ಟಾಗಿ ತೆಗಳಿ. ಯಾರಿಗಾದರೂ ಸಲಹೆಗಳನ್ನು ಕೊಡಬೇಕೆಂದರೆ ಗುಟ್ಟಾಗಿ ಕೊಡಿ. All the Best and Thanks you...