ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation - How to Become Rich in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation - How to Become Rich in Kannada

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation

ಎಷ್ಟು ದಿನ ಅಂತಾ ಅದೇ ನಗರ ಪಾಲಿಕೆಯ ಬಸ್ಸಲ್ಲಿ ಪ್ರಯಾಣ ಮಾಡುವಿರಿ?

ಎಷ್ಟು ದಿನ ಅಂತಾ  ಲೋಕಲ್ ಟ್ರೇನನಲ್ಲಿ ಒದ್ದಾಡುವಿರಿ?

ಎಷ್ಟು ದಿನ ಅಂತಾ ಬೇರೆಯವರ ಕಾರನ್ನು ನೋಡಿ ಕೆಂಡಕಾರುವಿರಿ?

ಎಷ್ಟು ದಿನ ಅಂತಾ ಪಕ್ಕದ್ಮನೆಯವರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವಿರಿ?

ಎಷ್ಟು ದಿನ ಅಂತಾ ಬಾಡಿಗೆ ಮನೆಯಲ್ಲಿ ಸಾಯುವಿರಿ?

ಎಷ್ಟು ದಿನ ಅಂತಾ ಬಡತನದಲ್ಲಿ ಬಿದ್ದು ಕೊಳೆಯುವಿರಿ?

ಇನ್ನು ಎಷ್ಟು ದಿನ ಅಂತಾ ಇಷ್ಟವಿಲ್ಲದ ಕೆಲಸವನ್ನು ಮಾಡುವಿರಿ?

ಒಂದು ವೇಳೆ ಇವೆಲ್ಲ ಪ್ರಶೆಗಳನ್ನು ನಿಮಗೆ ನೀವು ಕೇಳಿಕೊಂಡಿದ್ದರೆ, ನಿಮಗೆ ಈ ಅಂಕಣವನ್ನು ಮುಂದೆ ಓದುವ ಅವಶ್ಯಕತೆಯಿಲ್ಲ. ಒಂದು ವೇಳೆ ಈ ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಂಡಿರದಿದ್ದರೆ ಈ ಅಂಕಣವನ್ನು ಕೊನೆ ತನಕ ಓದಿ... 

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation

"ಬಡತನವೊಂದು ಶಾಪ. 
ಬಡವರಾಗಿ ಸಾಯುವುದು ಒಂದು ಪಾಪ. 

ಬಡತನವೊಂದು ಶಾಪ. 
ಬಡವರಾಗಿ ಸಾಯುವುದು ಒಂದು ಪಾಪ."

ನಾನು ಸಹ ನಿಮ್ಮಂತೆ ಬಡತನವನ್ನು ದ್ವೇಷಿಸುತ್ತೇನೆ. ಏಕೆಂದರೆ ನಾನು ಕೂಡ ನಿಮ್ಮಂತೆ ಬಡತನದಲ್ಲಿ ಬೆಂದು ಈಗ ಸ್ವಲ್ಪ ಸಿರಿತನವನ್ನು ನೋಡುತ್ತಿರುವೆ. ನಾನು ಬಡತನವನ್ನು ದ್ವೇಷಿಸುತ್ತೇನೆ. ಆದರೆ ನಾನದನ್ನು ಗೌರವಿಸುತ್ತೇನೆ, ಆದರಿಸುತ್ತೇನೆ. ಏಕೆಂದರೆ ಬಡತನ ನನಗೊಂಥರಾ ಗುರುವಿದ್ದಂತೆ. ಬಡತನದಿಂದ ನಾನು ಸಮಸ್ಯೆಗಳನ್ನು ಸಾಲ್ವ ಮಾಡುವುದನ್ನು ಕಲಿತಿರುವೆ. ವಸ್ತುಗಳನ್ನು ಮಾರಾಟ ಮಾಡುವುದನ್ನು ಕಲಿತಿರುವೆ. ಧೈರ್ಯದಿಂದ ಹೋರಾಡುವುದನ್ನು ಕಲಿತಿರುವೆ. ನೋವಿನಲ್ಲೂ ನಗುವುದನ್ನು ಕಲಿತಿರುವೆ. ಲಿಮಿಟೆಡ್ ಬಜೆಟನಲ್ಲಿ ಬಿಜನೆಸ್ ಮಾಡುವುದನ್ನು ಕಲಿತಿರುವೆ. ಬಡತನದಿಂದ ನನಗೆ ನನ್ನ ಅಸಲಿ ಸಾಮರ್ಥ್ಯ ಗೊತ್ತಾಗಿದೆ. ಬಡತನ ನನಗೆ ನಿಜವಾದ ಸ್ನೇಹ ಪ್ರೀತಿಗಳನ್ನು ತೋರಿಸಿದೆ. ಆದ್ದರಿಂದ ಬಡತನ ನನ್ನ ಪಾಲಿಗೆ ಗುರುವಾಗಿದೆ. 


ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation

                           ನರೇಂದ್ರ ಮೋದಿ ಮತ್ತೊಮ್ಮೆ ಪಿಎಂ ಆಗುವುದರಿಂದ ನೀವು 5 ವರ್ಷಗಳಲ್ಲಿ ಅಂಬಾನಿಯಾಗುತ್ತೀರಿ ಎಂದು ನೀವು ಯೋಚಿಸುತ್ತಿದ್ದರೆ, ಅದು ನಿಮ್ಮ ಮೂರ್ಖತನ. ಏಕೆಂದರೆ ನಿಮ್ಮ ಕನಸುಗಳನ್ನು ಈಡೇರಿಸಲು ಈ ಜಗತ್ತಿನಲ್ಲಿ ಯಾರೂ ಕುಳಿತುಕೊಂಡಿಲ್ಲ. ಆ ಜನ ಅವರಿಗಾಗಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಬಡತನವನ್ನು ನಿರ್ಮೂಲನೆ ಮಾಡಲು ಯಾರೂ ಬರುವುದಿಲ್ಲ. ಬಡತನ ನಿಮ್ಮ ಹೋರಾಟ. ಅದನ್ನು ನೀವೇ ಹೋರಾಡಿ ಗೆಲ್ಲಬೇಕು. ನಿಮಗೇನು ಬೇಕೋ ಅದನ್ನು ನೀವೇ ಕಷ್ಟಪಟ್ಟು ಪಡೆದುಕೊಳ್ಳಬೇಕು. ಅದೇ ಜೀವನ. ನಿಮ್ಮ ಅದೃಷ್ಟದ ಲೇಖಕರು ನೀವೇ. ನಿಮ್ಮ ಹಣೆಬರಹದ ಲೇಖಕರು ನೀವೇ. ಸೋ ನಿಮ್ಮ ಬಡತನಕ್ಕೆ ನೀವೇ ಕಾರಣ.

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation

                             ಬಡತನ ರಿಯಾಲಿಟಿಯಲ್ಲಿಲ್ಲ, ಅದು ನಿಮ್ಮ ಮೆಂಟ್ಯಾಲಿಟಿಯಲ್ಲಿದೆ. ಬಡತನ ನಿಮ್ಮ ಮನಸ್ಥಿತಿಯಲ್ಲಿದೆ, ವಾಸ್ತವದಲ್ಲಿಲ್ಲ. ಈ ಜಗತ್ತಿನಲ್ಲಿ ಯಾರೂ ಸಹ ನಿಮ್ಮನ್ನು ಶ್ರೀಮಂತರನ್ನಾಗಿ ನೋಡಲು ಬಯಸುವುದಿಲ್ಲ. ಏಕೆಂದರೆ ನಿಮ್ಮಂಥ ಬಡವರ ಮೇಲೆಯೇ ಎಲ್ಲ ಶ್ರೀಮಂತರ ಬಿಜನೆಸ್ ನಿಂತಿದೆ. ಉದಾಹರಣೆಗಾಗಿ, ರಾಜಕೀಯ, ಶಿಕ್ಷಣ ವ್ಯವಸ್ಥೆ, ಕಾರ್ಪೊರೇಟ್ ಜಗತ್ತು, ಚಲನಚಿತ್ರೋದ್ಯಮ, ಆಸ್ಪತ್ರೆಗಳು, ಸೋಷಿಯಲ್ ಮೀಡಿಯಾಗಳೆಲ್ಲವೂ ಬಡವರ ಮೇಲೆಯೇ ಅವಲಂಬಿತವಾಗಿವೆ. ಜಗತ್ತಿನ ಎಲ್ಲ  ಬಿಲೇನಿಯರಗಳು ಕೋಟ್ಯಾಂತರ ಬಡವರ ಚಿಲ್ಲರೆ ದುಡ್ಡಿನ ಮೇಲೆ ಬದುಕುತ್ತಿದ್ದಾರೆ.  ಒಂದು ವೇಳೆ ನೀವೆಲ್ಲರೂ ದಿಢೀರನೆ ಶ್ರೀಮಂತರಾದರೆ ಅವರ ಬಿಜನೆಸ್ ಬೀದಿಪಾಲಾಗುತ್ತದೆ. ಆದ್ದರಿಂದ ಅವರು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ. ನಮ್ಮ ಪಾಲಿಟಿಕ್ಸ್, ಎಜುಕೇಶನ್ ಸಿಸ್ಟಮ್ ಮತ್ತು ಕಾರ್ಪೊರೇಟ್ ಜಗತ್ತುಗಳೆಲ್ಲವೂ ನಿಮ್ಮನ್ನು ಮತ್ತಷ್ಟು ಬಡವರನ್ನಾಗಿ ಮಾಡಲು ಪ್ರತಿ ಕ್ಷಣ ಸಂಚು ರೂಪಿಸುತ್ತವೆ. ಇದರ ಹೊರತಾಗಿಯೂ, ನೀವು ಶ್ರೀಮಂತರಾಗಿರಬೇಕು. ಇದೇ ನಿಮಗೆ ಅತಿದೊಡ್ಡ ಮೋಟಿವೇಶನ ಆಗಿದೆ. 

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation

             ನನ್ನಂತಹ ಸಾವಿರಾರು ಮೋಟಿವೇಶನಲ್ ಸ್ಪೀಕರಗಳು ನಿಮಗೆ ಕನಸುಗಳನ್ನು ಮಾರಲು ಪ್ರಯತ್ನಿಸುತ್ತಾರೆ. ಆದರೆ ನೀವು ಅವುಗಳನ್ನು ಖರೀದಿಸಬೇಕಾಗಿಲ್ಲ. ಏಕೆಂದರೆ ಈಗಾಗಲೇ ನಿಮ್ಮ ಬಳಿ ಕನಸುಗಳಿವೆ. ನಿಮ್ಮ ಹಸಿದ ಹೊಟ್ಟೆ, ಖಾಲಿ ಜೇಬು, ಸೆಕೆಂಡ್ ಹ್ಯಾಂಡ್ ಬೈಕ್, ಬಾಡಿಗೆ ಮನೆ, ನೆಗೆಟಿವ್ ಬ್ಯಾಂಕ್ ಬ್ಯಾಲೆನ್ಸ್, ಅವಮಾನ, ತಿರಸ್ಕಾರ ಇವೇ ನಿಮಗೆ ನಿಜವಾದ ಮೋಟಿವೇಶನಗಳಾಗಿವೆ. ಇವೆ ನಿಮಗೆ ನಿಜವಾದ ಪ್ರೇರಣೆಯಾಗಿವೆ. 

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation

ಸದ್ಯಕ್ಕೆ ನಿಮ್ಮ ಬಳಿ ಕಳೆದುಕೊಳ್ಳಲು ಏನು ಉಳಿದಿಲ್ಲ. ನಿಮ್ಮ ಬಳಿ ಕೇವಲ ಒಂದು ಸಾಧನ ಉಳಿದಿದೆ. ಅದು ನಿಮ್ಮ ಧೈರ್ಯ. ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ. 

ನಿಮ್ಮ ಕನಸುಗಳ ಮಾತನ್ನು ಕೇಳಿ,

ನಿಮ್ಮ ಗುರಿಗಳನ್ನು ಸೆಟ್ ಮಾಡಿ. 

ಆ ಗುರಿಗಳನ್ನು ಒಂದು ಬೋರ್ಡ್ ಮೇಲೆ ಬರೆಯಿರಿ,

ಕೇವಲ ಬಯಸುವುದರಿಂದ ಏನು ಸಿಗುವುದಿಲ್ಲ. 

ಅದಕ್ಕಾಗಿ ಸಮರ್ಥವಾಗಿ ಕೆಲಸ ಮಾಡಬೇಕಾಗುತ್ತದೆ. 

ನಿಮ್ಮಲ್ಲಿ ಹೇಳಿಕೊಳ್ಳುವಂಥ ಯಾವ ವಿಶೇಷ ಗುಣ ಅಥವಾ ಕೌಶಲ್ಯವಿದೆ? ಅದನ್ನು ಹುಡುಕಿ, ಅದರ ಮೇಲೆ ಕೆಲಸ ಮಾಡಿ. ಮೊದಲು ನಿಮ್ಮ ಮೇಲೆ ನಂಬಿಕೆ ಇಡಿ. ನಿಮ್ಮನ್ನು ನೀವು ನಂಬಿದರೆ ಅರ್ಧ ಕೆಲಸ ಆದಂತೆ. ಹೆಚ್ಚು ಹೆಚ್ಚು ಕೆಲಸ ಮಾಡಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ. ನಂತರ ಹಿಂತಿರುಗಿ ಬಂದು ಈ ಅಂಕಣವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಆಲ್ ದಿ ಬೆಸ್ಟ್ ಮತ್ತು ಧನ್ಯವಾದಗಳು...

ಶ್ರೀಮಂತರಾಗುವ ಆಸೆಯಿದ್ದರೆ ಇದನ್ನು ಓದಿ - ಶ್ರೀಮಂತರಾಗಲು Motivation
Blogger ನಿಂದ ಸಾಮರ್ಥ್ಯಹೊಂದಿದೆ.