ಭಗವದ್ಗೀತೆಯ 15 ಜೀವನ ಪಾಠಗಳು - Life Lessons of Bhagavad Gita in Kannada - Bhagavad Gita in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಭಗವದ್ಗೀತೆಯ 15 ಜೀವನ ಪಾಠಗಳು - Life Lessons of Bhagavad Gita in Kannada - Bhagavad Gita in Kannada

ಭಗವದ್ಗೀತೆಯ 15 ಜೀವನ ಪಾಠಗಳು - Life Lessons of Bhagavad Gita in Kannada

                   ಹಾಯ್ ಗೆಳೆಯರೇ, ಭಗವದ್ಗೀತೆ ನನ್ನ ಮೋಸ್ಟ ಫೇವರೆಟ ಮೋಟಿವೆಷನಲ್ ಬುಕ್ ಆಗಿದೆ. ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದೊಂದು ಬೆಸ್ಟ ಪರ್ಸನಾಲಿಟಿ ಡೆವಲಪ್‌ಮೆಂಟ ಹಾಗೂ ಮೋಟಿವೆಷನಲ್ ಬುಕ್ ಆಗಿದೆ. ಅದರಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರಗಳಿವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ನನ್ನಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಕಡಿಮೆಯಾದಾಗ ನಾನು ಪದೇಪದೇ ಭಗವದ್ಗೀತೆಯನ್ನು ಓದುತ್ತೇನೆ. ಪ್ರತಿಸಲ ಓದಿದಾಗ ನನಗೆ ಒಂದೊಂದು ಹೊಸ ವಿಷಯಗಳು ಹೊಳೆಯುತ್ತವೆ. ಹೊಸ ಶಕ್ತಿ ಸಿಗುತ್ತದೆ. ಆದ್ದರಿಂದ ನೀವು ಸಹ ತಪ್ಪದೆ ಒಂದ್ಸಾರಿ ಭಗವದ್ಗೀತೆಯನ್ನು ಓದಿ. ಖಂಡಿತ ನಿಮ್ಮ ಲೈಫ ಸಕ್ಸೆಸಫುಲ್ಲಾಗುತ್ತದೆ. ನಾನು  ಭಗವದ್ಗೀತೆಯಿಂದ ಕಲಿತ ಕೆಲವು ವಿಷಯಗಳು ಇಂತಿವೆ ;

ಕನ್ನಡದಲ್ಲಿ ಭಗವದ್ಗೀತಾ ಯಥಾರೂಪವನ್ನು ನೀವು ಈ ಪುಸ್ತಕದಲ್ಲಿ ಓದಬಹುದು. 
ಲಿಂಕ್ Click Here - Bhagavad Gita As It Is (Kannada) 


1) ಇಲ್ಲಿ ತನಕ ಆಗಿದ್ದೆಲ್ಲವು ಒಳ್ಳೆಯದೇ, ಸದ್ಯಕ್ಕೆ ಆಗುತ್ತಿರುವುದೆಲ್ಲವು ಒಳ್ಳೆಯದೇ, ಮುಂದೆ ಆಗುವುದೆಲ್ಲವು ಒಳ್ಳೆಯದೇ. ಆದಕಾರಣ ಯಾವುದಕ್ಕೂ ಜಾಸ್ತಿ ಚಿಂತಿಸದಿರಿ, ಜಾಸ್ತಿ ಕೊರಗದಿರಿ. ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ. 


2) ಈ ಜಗತ್ತು ನಶ್ವರವಾಗಿದೆ. ಈ ಭೂಮಿಗೆ ಬಂದಿದ್ದೆಲ್ಲವು ಒಂದಲ್ಲ ಒಂದಿನ ಮರಳಿ ಹೋಗುತ್ತದೆ. ನಮ್ಮ ದೇಹವು ನಶ್ವರವಾಗಿದೆ. ಆದರೆ ನಮ್ಮ ಆತ್ಮ ಅಮರವಾಗಿದೆ. ನಮ್ಮ ಆತ್ಮಕ್ಕೆ ಆದಿ ಅಂತ್ಯವಿಲ್ಲ. ನಮ್ಮ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಸಾವಿಗೆ ಹೆದರಬೇಡಿ. ಏಕೆಂದರೆ ಅದೊಂದು ಪರಿವರ್ತನಾ ಹಂತವಷ್ಟೇ. Its a transitional phase between birth to death and death to birth.



3) ಬರಿಗೈಯಲ್ಲಿ ಬಂದ ನಾವು ಬರಿಗೈಯಲ್ಲಿ ಮರಳಿ ಹೋಗುತ್ತೇವೆ. ಯಾವುದು ಮತ್ತು ಯಾರು ನಿಮ್ಮೊಂದಿಗೆ ಶಾಶ್ವತವಾಗಿರಲ್ಲ. ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಅದಕ್ಕಾಗಿ ನಾವು ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೇ ನಮ್ಮ ಧರ್ಮಕರ್ಮಗಳನ್ನು ಸರಿಯಾಗಿ ಮಾಡಬೇಕು. ಫಲಿತಾಂಶದ ಬಗ್ಗೆ ಹೆಚ್ಚಿಗೆ ಚಿಂತಿಸದೇ ನಾವು ನಮ್ಮ ಕೆಲಸವನ್ನು ನಿಯತ್ತಾಗಿ ಮಾಡಬೇಕು.



4) ನಮ್ಮ ಮನಸ್ಸು ನಮ್ಮ ಅಸಲಿ ಮಿತ್ರ ಹಾಗೂ ಅಸಲಿ ಶತ್ರುವಾಗಿದೆ. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಅದಕ್ಕಿಂತ ಒಳ್ಳೇ ಮಿತ್ರ ಬೇರ್ಯಾರಿಲ್ಲ. ಅದೇ ಮನಸ್ಸು ನಮ್ಮ ನಿಯಂತ್ರಣ ತಪ್ಪಿ ಹೋದರೆ ಅದಕ್ಕಿಂತ ಕೆಟ್ಟ ಶತ್ರು ಬೇರ್ಯಾರಿಲ್ಲ. ನಾವು ನಮ್ಮ ಮನಸ್ಸನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತೆ. 


5) ಬದಲಾವಣೆಗಳಿಗೆ ಹೆದರಬೇಡಿ. ಬದಲಾವಣೆ ನಿಸರ್ಗದ ನಿಯಮವಾಗಿದೆ. ನೀವು ಬದಲಾವಣೆಗಳಿಗೆ ಸದಾಕಾಲ ಸಿದ್ಧರಾಗಿರಬೇಕು. ನೀವು ನಿಮ್ಮ ಕರ್ಮಗಳ ಅನುಸಾರವಾಗಿ ಮುಂದೆ ನೀವು ಬಿಲೆನಿಯರ್ ಆಗಬಹುದು ಅಥವಾ ಭಿಕ್ಷುಕರಾಗಬಹುದು. 


6) ಕಾಮ ಕ್ರೋಧ ಲೋಭಗಳು ನಿಮ್ಮನ್ನು ನಿಮ್ಮಿಂದಲೇ ಹಾಳು ಮಾಡುತ್ತವೆ. ಕಾಮ 
ನಿಮ್ಮನ್ನು ಕರ್ತವ್ಯ ಭ್ರಷ್ಟನನ್ನಾಗಿ ಮಾಡುತ್ತದೆ. 


ಕ್ರೋಧ ನಿಮ್ಮ ಸಂಬಂಧಗಳನ್ನು ಕೆಡಿಸಿ ನಿಮ್ಮನ್ನು ಒಬ್ಬಂಟಿಯಾಗಿಸುತ್ತದೆ. ನಿಮ್ಮ ಕೋಪದ ಜ್ವಾಲೆ ನಿಮ್ಮನ್ನೇ ಸುಡುತ್ತದೆ. 


ಲೋಭ ನಿಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ. 


ಈ ಕಾಮ ಕ್ರೋಧ ಲೋಭಗಳು (Lust, Anger and Greed) ನರಕದ ಬಾಗಿಲುಗಳಿದ್ದಂತೆ. ಆದ್ದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು. ಕಾಮ ಕ್ರೋಧ ಲೋಭಗಳು ಎಂದೂ ಆರದ ಅಗ್ನಿಗಳಾಗಿವೆ. ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಮೂಲಕ ಇವುಗಳನ್ನು ಹಿಡಿತದಲ್ಲಿಡಬಹುದು. 




7) ಎಲ್ಲದಕ್ಕೂ ಅನುಮಾನಪಡುವವರು ಎಂದಿಗೂ ಖುಷಿಯಾಗಿರಲಾರರು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ಯಾವುದರ ಮೇಲೆಯೂ ಫೋಕಸ ಮಾಡಲಾಗದು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ಆದ್ದರಿಂದ ಸಂಶಯದಿಂದ ಹೊರಬನ್ನಿ. ಕೆಟ್ಟ ಆಲೋಚನೆಗಳಿಂದ ಹೊರ ಬನ್ನಿ. ಉಚ್ಛ ಯೋಚನೆಗಳನ್ನು ಮಾಡಿ. ಉಚ್ಛ ಕೆಲಸಗಳನ್ನು ಮಾಡಿ. 


8).ಮನುಷ್ಯ ತಾನು ಮಾಡಿದ ಒಳ್ಳೆ ಕರ್ಮಗಳಿಂದ ಮೇಲಕ್ಕೆರಬಹುದು. ಇಲ್ಲವೇ ತನ್ನ ಕೆಟ್ಟ ಕರ್ಮಗಳಿಂದ ಕೆಳಗೆ ಬೀಳಬಹುದು. ಆದ್ದರಿಂದ ಮನುಷ್ಯನ ನಿಜವಾದ ಮಿತ್ರ ಹಾಗೂ ಶತ್ರು ಮನುಷ್ಯನೇ. ನಿಮ್ಮ ಮಿತ್ರನೂ ನೀವೇ, ಶತ್ರುನೂ ನೀವೇ. 


9) ನಿಮ್ಮ ಮನಸ್ಸಲ್ಲಿ ಸ್ವಾರ್ಥವನ್ನು ಬೆಳೆಯಲು ಬಿಟ್ಟರೆ ನಿಮ್ಮ ಬುದ್ಧಿ ಮಂಕಾಗುತ್ತದೆ. ಮೈಮನಸ್ಸಿನ ತುಂಬ ಸ್ವಾರ್ಥವನ್ನು ತುಂಬಿಕೊಂಡಿರುವ ಜ್ಞಾನಿಯ ವಿದ್ಯೆ ಬುದ್ಧಿ ಪ್ರಯೋಜನಕ್ಕೆ ಬಾರವು. ಸ್ವಾರ್ಥ ತುಂಬಿಕೊಂಡಿರುವ ಜ್ಞಾನಿ ಹಾಗೂ ಧೂಳು ಬಿದ್ದಿರುವ ಕನ್ನಡಿ ಎರಡೂ ಒಂದೇ, ಎರಡೂ ಹೊಳೆಯರಾರವು. 


10) ನಿಮ್ಮ ಕರ್ತವ್ಯದಿಂದ ದೂರ ಓಡಬೇಡಿ. ಅದರ ಪರಿಣಾಮ ಒಳ್ಳೆಯದಾಗಿರದಿದ್ದರೂ ಸಹ ಅದನ್ನು ಪೂರ್ಣಗೊಳಿಸಿ. ನಿಮ್ಮ ಕರ್ತವ್ಯವನ್ನು ನೀವು ಪ್ರಾಮಾಣಿಕವಾಗಿ ಮಾಡಿ. ಫಲಿತಾಂಶವನ್ನು ಭಗವಂತನಿಗೆ ಬಿಟ್ಟು ಬಿಡಿ. ಕೇವಲ ಕರ್ಮ ನಿಮ್ಮ ಕೈಯಲ್ಲಿದೆ, ಫಲ ನಿಮ್ಮ ಕೈಯಲಿಲ್ಲ. 



11) ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು. ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ. 



12) ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ. 


13) ಯಾವುದಾದರೂ ಅತಿಯಾದರೂ ಅಥವಾ ಕಮ್ಮಿಯಾದರೂ ನಿಮ್ಮ ಮನಸ್ಸಿನ ಸಮತೋಲನ ಕೆಡುತ್ತದೆ. ನಿಮ್ಮ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರ, ತೆಗೆದುಕೊಳ್ಳುವ ವಿಶ್ರಾಂತಿ ಅಂದರೆ ನಿದ್ದೆ ಎಲ್ಲವೂ ಸಮತೋಲನದಲ್ಲಿರಬೇಕು. ಯುಕ್ತ ಆಹಾರ, ಯುಕ್ತ ವಿಹಾರ, ಯುಕ್ತ ವಿಚಾರಗಳನ್ನು ರೂಢಿಸಿಕೊಳ್ಳಿ. 


14) ಭಾವನೆಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಭಾವನೆಗಳನ್ನು ಟೆಂಪರರಿ ಆಗಿವೆ. ಅತ್ಯಂತ ಖುಷಿಯಾಗಿದ್ದಾಗ ಅಥವಾ ದು:ಖದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳಲ್ಲಿ ಹೆಚ್ಚಿನವು ತಪ್ಪಾಗಿರುತ್ತವೆ. ಆದ್ದರಿಂದ ನೀವು ನಾರ್ಮಲಾಗಿದ್ದಾಗ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೋಪದಲ್ಲಿ ಅಥವಾ ಪ್ರೀತಿಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಎಮೋಷನಲ್ ಆದಾಗ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 


15) ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ. ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ, ಯಾರಿಗೂ ಹೆದರದೇ ಮುನ್ನುಗ್ಗಿ.


               ಭಗವದ್ಗೀತೆಯಿಂದ ಕಲಿಯಬೇಕಾದ ವಿಷಯಗಳು ಇನ್ನೂ ಸಾಕಷ್ಟಿವೆ. ಭಗವದ್ಗೀತೆ ಸಾಕ್ಷಾತ್ ಭಗವಂತನ ವಾಣಿ.  ಅದನ್ನು ಒಂದು ಅಂಕಣದಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ನೀವು ನಿಮ್ಮ ಲೈಫಲ್ಲಿ ಡಿಸಿಪ್ಲೇನಡ ಆಗಿರಬೇಕೆಂದರೆ, ಸಕ್ಸೆಸಫುಲ್ ಆಗಿರಬೇಕೆಂದರೆ, ಹ್ಯಾಪಿಯಾಗಿರಬೇಕೆಂದರೆ ಒಂದ್ಸಲ ಭಗವದ್ಗೀತೆಯನ್ನು ಓದಿ. I strongly recommend to read it. ನಿಮ್ಮ ಬದುಕು ಬದಲಾಗದಿದ್ದರೆ ನಾನು ಬರೆಯುವುದನ್ನು ಬಿಟ್ಟು ಬಿಡುತ್ತೇನೆ. ನಿಮ್ಮ ಜೀವನವು ಸಹ ಯಾವ ಕುರುಕ್ಷೇತ್ರ ಯುದ್ಧಕ್ಕೂ ಕಡಿಮೆಯಿಲ್ಲ. ನೀವು ಸಹ ಅರ್ಜನನಂತಾಗಿರುವಿರಿ. ನಿಮಗೆ ಏನು ಮಾಡಬೇಕು ಎಂಬುದು ಗೊತ್ತು, ಹೇಗೆ ಮಾಡಬೇಕು ಎಂಬುದು ಗೊತ್ತು, ಏಕೆ ಮಾಡಬೇಕು ಎಂಬುದು ಗೊತ್ತು. ಆದರೆ ಮಾಡುವ ಮನಸ್ಸಿಲ್ಲ. ನಿಮ್ಮಲ್ಲಿ ಮಾಡಲು ಇಚ್ಛಾಶಕ್ತಿಯಿಲ್ಲ. ಆ ಇಚ್ಛಾಶಕ್ತಿ ಬರಬೇಕೆಂದರೆ,  ಪವರಫುಲ್ ಮೋಟಿವೇಷನ ಬರಬೇಕೆಂದರೆ ಭಗವದ್ಗೀತೆಯನ್ನು ತಪ್ಪದೆ ಓದಿ. All the Best and Thanks You...

Special Note : ಕನ್ನಡದಲ್ಲಿ ಭಗವದ್ಗೀತಾ ಯಥಾರೂಪವನ್ನು ನೀವು ಈ ಪುಸ್ತಕದಲ್ಲಿ ಓದಬಹುದು. 
ಲಿಂಕ್ Click HereBhagavad Gita As It Is (Kannada)



ಕನ್ನಡದಲ್ಲಿ ಭಗವದ್ಗೀತಾ ಯಥಾರೂಪವನ್ನು ನೀವು ಈ ಪುಸ್ತಕದಲ್ಲಿ ಓದಬಹುದು. 

Blogger ನಿಂದ ಸಾಮರ್ಥ್ಯಹೊಂದಿದೆ.