ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                 ಹಾಯ್ ಗೆಳೆಯರೇ, ಇವತ್ತಿನ ಈ ಅಂಕಣವನ್ನು ಓದಿದ ನಂತರ ನಿಮಗೆ ಸ್ವಲ್ಪ ಕೋಪ ಬರಬಹುದು. ಬರಲಿ, ನೋ ಪ್ರಾಬ್ಲಮ್. ನೀವು ಮಾಡುವ ಒಂದು ಸಣ್ಣ ತಪ್ಪಿನಿಂದಾಗಿ ನೀವು ನಿಮ್ಮ ಜೀವನದಲ್ಲಿ ಯಾವತ್ತೂ ಉದ್ಧಾರವಾಗಲ್ಲ, ಯಾವತ್ತೂ ಮುಂದೆ ಹೋಗಲ್ಲ, ಯಾವತ್ತೂ ಸಕ್ಸೆಸಫುಲ್ ಆಗಲ್ಲ. ಆ ತಪ್ಪು ಯಾವುದು ಅಂತಾ ನಿಮಗೆ ಚೆನ್ನಾಗಿ ಗೊತ್ತು. ಆದರೆ ನೀವು ಆ ತಪ್ಪನ್ನು ಒಪ್ಪಿಕೊಳ್ಳಲ್ಲ. ಆದ್ದರಿಂದಲೇ ನೀವು ನಿಮ್ಮ ಜೀವನದಲ್ಲಿ ಯಾವತ್ತೂ ಮುಂದೆ ಹೋಗಲ್ಲ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

              ಹೇಗೆ ನಿಮ್ಮ ಬೆನ್ನು ನಿಮಗೆ ಕಾಣಿಸುವುದಿಲ್ಲವೋ ಅದೇ ರೀತಿ ನಿಮ್ಮ ತಪ್ಪುಗಳು ನಿಮಗೆ ಕಾಣಿಸುವುದಿಲ್ಲ. ನೀವು ನಿಮ್ಮ ತಪ್ಪುಗಳನ್ನು ಮುಚ್ಚಾಕಿ ಬೇರೆಯವರ ತಪ್ಪುಗಳನ್ನು ಹುಡುಕಲು ಪ್ರಾರಂಭಿಸುತ್ತೀರಿ. ಬೇರೆಯವರ ತಪ್ಪುಗಳನ್ನು ಹುಡುಕುವುದರಲ್ಲಿ ನೀವು ನಿಮ್ಮ ತಪ್ಪುಗಳನ್ನು ಮರೆತು ಬಿಡುತ್ತೀರಿ. ಮುಂದೊಂದು ದಿನ ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕುವುದೇ ನಿಮ್ಮ ಕೆಟ್ಟ ಚಟವಾಗುತ್ತದೆ. ಆಶಾವಾದಿ ಪ್ರತಿ ಕಠಿಣತೆನಲ್ಲಿ ಅವಕಾಶವನ್ನು ಹುಡುಕುತ್ತಾನೆ. ಆದರೆ ನಿರಾಶಾವಾದಿ ಪ್ರತಿ ಅವಕಾಶದಲ್ಲಿ ಕೊರತೆಯನ್ನು ಹುಡುಕುತ್ತಾನೆ. ಅಂಥ ನಿರಾಶಾವಾದಿಗಳಲ್ಲಿ ನೀವು ಕೂಡ ಒಬ್ಬರು. ನಿಮ್ಮ ಕೆಲಸವನ್ನು ಬಿಟ್ಟು  ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕೋದು ಒಂದು ದೊಡ್ಡ ತಪ್ಪು. ಈ ತಪ್ಪಿನಿಂದಾಗಿ ನೀವು ನಿಮ್ಮ ಜೀವನದಲ್ಲಿ ಯಾವತ್ತೂ ಸಕ್ಸೆಸಫುಲ್ ಆಗಲ್ಲ.
ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                          ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದು, ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕುವುದು ಒಂದು ರೋಗವಾಗಿದೆ. ನೀವು ನಿಮ್ಮ ಕೆಲಸ ಬಿಟ್ಟು ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕುತ್ತಿದ್ದರೆ, ನೀವು ಬೇರೆಯವರ ಬಗ್ಗೆ ಬರೀ ಕೆಟ್ಟದಾಗಿ ಮಾತಾಡುತ್ತಿದ್ದರೆ, ನೀವು ಪ್ರತಿ ಅವಕಾಶದಲ್ಲಿ ಕೊರತೆಯನ್ನು ಹುಡುಕುತ್ತಿದ್ದರೆ, ನೀವು ಒಳ್ಳೆಯದರಲ್ಲಿಯೂ ಕೆಟ್ಟದನ್ನು ಹುಡುಕುತ್ತಿದ್ದರೆ, ನೀವು ಎಲ್ಲದರಲ್ಲಿಯೂ ಏನಾದರೂ ಒಂದು ಕೊರತೆಯನ್ನು ಹುಡುಕುತ್ತಿದ್ದರೆ ನೀವು ಖಂಡಿತ ಮಿಸ್ಸಿಂಗ್ ಟೈಲ್ ಸಿಂಡ್ರೋಮನಿಂದ ಬಳಲುತ್ತಿದ್ದೀರಿ ಎಂದರ್ಥ. If you are searching the missing things in everything, then you are definitely suffering from the Missing Tile Syndrome. ಈ ಮಿಸ್ಸಿಂಗ್ ಟೈಲ್ ಸಿಂಡ್ರೋಮಗೆ ವೈಟ್ ಕರ್ಟನ ಡಾಟ್ ಸಿಂಡ್ರೋಮ್ ಎಂತಲೂ ಕರೆಯುತ್ತಾರೆ. ಈ ಸಿಂಡ್ರೋಮನಿಂದಾಗಿ ನೀವು ನಿಮ್ಮ ಜೀವನದಲ್ಲಿ ಯಾವತ್ತೂ ಮುಂದೆ ಬರಲ್ಲ, ಯಾವತ್ತೂ ಸಕ್ಸೆಸಫುಲ್ಲಾಗಲ್ಲ, ಯಾವತ್ತೂ ಹ್ಯಾಪಿಯಾಗಿರಲ್ಲ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

ಈ ಮಿಸ್ಸಿಂಗ್ ಟೈಲ್ ಸಿಂಡ್ರೋಮಗೆ ಕೆಲವೊಂದಿಷ್ಟು ಉದಾಹರಣೆಗಳು ಇಂತಿವೆ ;

೧) ಯಾವಾಗಲೂ ಕಳೆದುಹೋದ ವಸ್ತುಗಳ, ವ್ಯಕ್ತಿಗಳ ಬಗ್ಗೆ ಚಿಂತಿಸುತ್ತಾ ಕಾಲಹರಣ ಮಾಡುವುದು. ಇರುವುದನ್ನು ಬಿಟ್ಟು ಇಲ್ಲದಿರುವುದಕ್ಕೆ ಕೊರಗುವುದು.

೨) ಸುಂದರತೆಯಲ್ಲಿ ಕುರೂಪತನವನ್ನು ಹುಡುಕುವುದು. ಒಳ್ಳೆಯದರಲ್ಲಿ ಕೆಟ್ಟದನ್ನು ಹುಡುಕುವುದು.

೩) ಬೇರೆಯವರ ತಲೆಯಲ್ಲಿ ನಿಮ್ಮ ಪ್ರಯೋಜನಕ್ಕೆ ಬರುವ ಯಾವ ಅಂಶವಿದೆ ಎಂಬುದನ್ನು ನೋಡುವ ಬದಲು ಅವರ ತಲೆಯಲ್ಲಿ ಕೂದಲಿಲ್ಲ ಎಂದು ಗೇಲಿ ಮಾಡುವುದು.

೪) ಬೇರೆಯವರಲ್ಲಿನ ಒಳ್ಳೆತನವನ್ನು ನೋಡುವ ಬದಲು ಅವರ ಬಡತನವನ್ನು ನೋಡುವುದು. ಇತ್ಯಾದಿ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                        ಒಂದು ಸಮೀಕ್ಷೆಯ ಪ್ರಕಾರ ಬಹಳಷ್ಟು ಜನ ಮಿಸ್ಸಿಂಗ್ ಟೈಲ್ ಸಿಂಡ್ರೋಮನಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ತುಂಬಾ ಜನ ಅನಸಕ್ಸೆಸಫುಲ್ಲಾಗಿದ್ದಾರೆ, ಅನಹ್ಯಾಪಿಯಾಗಿದ್ದಾರೆ. ಇಂಥ ಜನ ನನಗೆ ಆವಾಗಾವಾಗ ಸಿಗುತ್ತಿರುತ್ತಾರೆ. ಕೆಲವೊಂದಿಷ್ಟು ಜನ ನಾನು ಬರೆದ ಮೋಟಿವೇಷನಲ್ ಅಂಕಣಗಳಲ್ಲಿ ಪ್ರಯೋಜನಕ್ಕೆ ಬರುವ ಯಾವ ಟಿಪ್ಸಗಳನ್ನು ಬರೆದಿರುವೆ ಎಂಬುದನ್ನು ನೋಡುವುದನ್ನು ಬಿಟ್ಟು ಸಣ್ಣಸಣ್ಣ ಸ್ಪೆಲ್ಲಿಂಗ್ ಮಿಸ್ಟೇಕಗಳನ್ನು ಹುಡುಕಿ ಹುಡುಕಿ ಕಮೆಂಟ್ ಮಾಡುತ್ತಾರೆ. ಇನ್ನು ಕೆಲವೊಂದಿಷ್ಟು ಜನ ನಾನು ಮಾಡಿರುವ ಮೋಟಿವೇಷನಲ್ ಸೆಮಿನಾರಗಳಲ್ಲಿ ಏನು ಹೇಳಿದೆ ಎಂಬುದನ್ನು ಕೇಳುವುದನ್ನು ಬಿಟ್ಟು ಸರ್ ಈ ಡ್ರೆಸ್ ನಿಮಗೆ ಸೂಟ್ ಆಗಲ್ಲ, ಗಡ್ಡ ತೆಗೆಸಿದರೆ ನೀವು ಚೆನ್ನಾಗಿ ಕಾಣಿಸಲ್ಲ, ಗಡ್ಡ ತೆಗೆಸಬೇಡಿ ಎಂದೆಲ್ಲ ಫೀಡಬ್ಯಾಕ್ ಕೊಡುತ್ತಾರೆ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                     ನಿಮ್ಮೆಲ್ಲರಿಗೂ ಕನೇಕ್ಟ ಆಗುವ ಒಂದು ಉದಾಹರಣೆಯಿದೆ. ಮುಂಬೈಗೆ ಬರುವುದಕ್ಕಿಂತ ಮುಂಚೆ ನಾನೊಂದು ಸಣ್ಣ ಹಳ್ಳಿಯಲ್ಲಿದ್ದೆ. ಆ ಹಳ್ಳಿ ನಮ್ಮೂರು. ನಮ್ಮೂರಲ್ಲಿ ನಾನು ಯಾರಿಗೂ ಪರಿಚಯವಿಲ್ಲ. ಯಾರು ನನ್ನನ್ನು ಗುರ್ತಿಸುವುದಿಲ್ಲ. ನೋ ಫ್ರೆಂಡ್ಸ್, ನೋ ಎನಿಮಿಜ. ಆದರೆ ನಮ್ಮೂರಿನ ಎಲ್ಲ ವಿಚಾರ ನಂಗೊತ್ತು. ನಮ್ಮೂರಲ್ಲಿ ತುಂಬಾ ಜನರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಅವರು ಗಿರಾಕಿಗಳಿಲ್ಲದ ಅಂಗಡಿಗಳ ಮುಂದೆ ಇಲ್ಲಾ ದೇವಸ್ಥಾನಗಳ ಮುಂದೆ ಕುಂತು ಬೇರೆಯವರ ಬಗ್ಗೆ ಬರೀ ಕೆಟ್ಟದಾಗಿ ಮಾತನಾಡುತ್ತಾರೆ. ಬೇರೆಯವರ ಕಾಲೆಳೆಯುತ್ತಾರೆ. ಬೇರೆಯವರನ್ನು ಡಿಸಕರೇಜ್ ಮಾಡುತ್ತಾರೆ. ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕಿ ಅವುಗಳನ್ನು ಎಲ್ಲರಿಗೂ ಹೇಳುತ್ತಾರೆ. ಬೇರೆಯವರ ಬಗ್ಗೆ ಸುಳ್ಳು ಗಾಸಿಪಗಳನ್ನು ಹಬ್ಬಿಸುತ್ತಾರೆ. ಗುಂಪಾಗಿ ಕುಳಿತು ಲುಡೋ ಆಡುತ್ತಾರೆ. ಎಲ್ಲರ ಮೇಲೆ ಮೂಗು ಮುರಿಯುತ್ತಾರೆ. ನಮ್ಮೂರಲ್ಲಿ ಯಾವುದೇ ಕಾರ್ನರಗೆ ಹೋದರೂ ಇಂಥವರು ಸಾಮಾನ್ಯವಾಗಿ ಕಣ್ಣಿಗೆ ಬೀಳುತ್ತಾರೆ. ಇಂಥವರು ಬರೀ ನಮ್ಮೂರಲ್ಲಿ ಮಾತ್ರ ಇದಾರೆ ಅಂತಲ್ಲ. ಇಂಥವರು ಎಲ್ಲ ಊರುಗಳಲ್ಲಿ ಇದ್ದಾರೆ. ಎಲ್ಲ ಊರುಗಳಲ್ಲಿ ಇಂಥ ನಾಲ್ಕ ಜನ ಇದ್ದೇ ಇರುತ್ತಾರೆ. ಇವರೊಂಥರಾ ಫ್ರೀ ಕ್ರೈಮ್ ನ್ಯೂಸ್ ಚಾನೆಲಯಿದ್ದಂಗೆ. ಇವರೆಲ್ಲರೂ ಮಿಸ್ಸಿಂಗ್ ಟೈಲ್ ಸಿಂಡ್ರೋಮಗೆ ಬೆಸ್ಟ್ ಎಕ್ಸಾಮಪಲ್ ಆಗಿದ್ದಾರೆ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                   ಗೆಳೆಯರೇ, ನೀವು ಸಹ ಮಿಸ್ಸಿಂಗ್ ಟೈಲ್ ಸಿಂಡ್ರೋಮಗೆ ತುತ್ತಾಗಿದ್ದರೆ ಬೇಗನೆ ಅದರಿಂದ ಹೊರ ಬನ್ನಿ. ಇಲ್ಲವಾದರೆ ನೀವು ಅತೃಪ್ತ ಆತ್ಮವಾಗುತ್ತೀರಿ. ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕಿ ಹೇಳುವುದರಿಂದ ನಿಮ್ಮ ಮಾನಸಿಕ ಶಾಂತಿ ಹಾಳಾಗುತ್ತದೆ. ನಿಮ್ಮಲ್ಲಿ ನೆಗೆಟಿವಿಟಿ ಹೆಚ್ಚಾಗುತ್ತದೆ. ಆದಕಾರಣ ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕಬೇಡಿ. ಅದರ ಬದಲಾಗಿ ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಬದಲಾಗಿ. ಬೇರೆಯವರಲ್ಲಿನ ತಪ್ಪುಗಳನ್ನು ಹುಡುಕುವ ಬದಲು ಬೇರೆಯವರಲ್ಲಿನ ಪ್ಲಸ್ ಪಾಯಿಂಟಗಳನ್ನು ಹುಡುಕಿ, ಪ್ಲಸ್ ಪಾಯಿಂಟಗಳನ್ನು ಹೇಳಿ. ಆವಾಗ ನೋಡಿ ನಿಮಗೆ ಎಷ್ಟು ಖುಷಿ ಸಿಗುತ್ತೆ, ನಿಮ್ಮ ಸುತ್ತಲೂ ಎಷ್ಟೊಂದು ಖುಷಿ ಇರುತ್ತೆ ಅಂತಾ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                      ಈ ಕಲರಫುಲ್ ಜಗತ್ತಲ್ಲಿ ಎಲ್ಲರೂ ಬ್ಲ್ಯಾಕ್ ಆ್ಯಂಡ್ ವೈಟ್ ಆಗಿದ್ದಾರೆ. ಎಲ್ಲರಲ್ಲೂ ಪ್ಲಸ್ ಮೈನಸಗಳಿವೆ. ನೀವು ಬರೀ ಪ್ಲಸನ್ನು ಆಯ್ಕೆ ಮಾಡಿಕೊಂಡು ಮೈನಸನ್ನು ನೆಗ್ಲೆಕ್ಟ ಮಾಡಿ. ಎಲ್ಲರಲ್ಲಿ ಮತ್ತು ಎಲ್ಲದರಲ್ಲಿ ಒಳ್ಳೆಯದಷ್ಟನ್ನೇ ನೋಡಿ. ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಕೆಟ್ಟದ್ದನ್ನು ರಿಜೇಕ್ಟ ಮಾಡಿ. ಒಳ್ಳೆಯದರಲ್ಲಿ ಕೆಟ್ಟದನ್ನು ಹುಡುಕುವ ಕೆಟ್ಟ ಚಾಳಿಯನ್ನು ಬಿಟ್ಟು ಬಿಡಿ. ಕಳೆದು ಹೋದ ವಸ್ತುಗಳ, ವ್ಯಕ್ತಿಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಡಿ. ಬೇರೆಯವರಲ್ಲಿನ ಕೊರತೆಗಳನ್ನು ನೋಡುವುದಕ್ಕಿಂತ ಅವರ ಸಾಮರ್ಥ್ಯಗಳನ್ನು ನೋಡಿ. ಅವರಲ್ಲಿ ಏನಿಲ್ಲ ಎಂಬುದನ್ನು ಬಿಟ್ಟು ಏನಿದೆ ಎಂಬುದನ್ನು ನೋಡಿ. ಮಿಸ್ಸಿಂಗ್ ಟೈಲನ್ನು ಹುಡುಕುವುದನ್ನು ಬಿಟ್ಟು ಬಿಡಿ. ವೈಟ್ ಕರ್ಟನನಲ್ಲಿ ಬ್ಲ್ಯಾಕ್ ಡಾಟನ್ನು ಹುಡುಕುವುದನ್ನು ನಿಲ್ಲಿಸಿ. ಇಲ್ಲದಿರುವುದಕ್ಕೆ ಕೊರಗಿ ಇರುವುದನ್ನು ಕಳೆದುಕೊಳ್ಳಬೇಡಿ.

ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

                           ಗೆಳೆಯರೇ, ಕೊನೆಯದಾಗಿ ಒಂದು ಮಾತು. ಬದುಕಿರುವಾಗ ನೀವು ಬರೀ ಬೇರೆಯವರ ಬಗ್ಗೆನೇ ಮಾತನಾಡುತ್ತಿದ್ದರೆ, ನೀವು ಸತ್ತಾಗಲೂ ಜನ ಬೇರೆಯವರ ಬಗ್ಗೆಯೇ ಮಾತನಾಡುತ್ತಾರೆ. ಏಕೆಂದರೆ ನೀವು ನಿಮ್ಮ ಬಗ್ಗೆ ಹೆಮ್ಮೆಯಿಂದ ಮಾತನಾಡುವಂಥ ಯಾವುದೇ ಕೆಲಸಗಳನ್ನು ಮಾಡಿರುವುದಿಲ್ಲವಲ್ಲ. ಆದ್ದರಿಂದ ಬೇರೆಯವರ ಬಗ್ಗೆ ಮಾತನಾಡುವ ಬದಲು, ಬೇರೆಯವರ ತಪ್ಪುಗಳನ್ನು ಹುಡುಕುವ ಬದಲು, ಜನ ನಿಮ್ಮ ಬಗ್ಗೆ ಮಾತಾಡಬೇಕು ಅಂಥದ್ದೇನಾದ್ರೂ ಮಾಡಿ. All the Best and Thanks You...ಈ ತಪ್ಪಿನಿಂದಾಗಿ ನೀವು ಯಾವತ್ತೂ ಮುಂದೆ ಹೋಗಲ್ಲ - Missing Tile Syndrome in Kannada - Kannada Life Changing Article

Blogger ನಿಂದ ಸಾಮರ್ಥ್ಯಹೊಂದಿದೆ.