ಸ್ಟೀವ್ ಜಾಬ್ಸರವರ 4 ಸಕ್ಸೆಸ್ ಸೂತ್ರಗಳು - Success Tips of Steve Jobs iKannada - Steve Jobs in Quotes in Kannada
ವಲ್ಡ ಫೇಮಸ್ ಬಿಜನೆಸಮ್ಯಾನ್ ಸ್ಟೀವ್ ಜಾಬ್ಸರವರ ಬಗ್ಗೆ ನಿಮಗೆಲ್ಲ ಗೊತ್ತಿದೆ ಅನ್ಕೋತ್ತೀನಿ. ಒಂದು ವೇಳೆ ಗೊತ್ತಿಲ್ಲದಿದ್ದರೆ ನೀವು ಅವರ ಜೀವನ ಕಥೆಯನ್ನು ನನ್ನ ಆಫೀಸಿಯಲ್ ವೆಬಸೈಟ್ www.Skkannada.comಗೆ ವಿಸಿಟ್ ಮಾಡಿ ಫ್ರೀಯಾಗಿ ಓದಬಹುದು. ಇಲ್ಲವೇ ನಮ್ಮ ಯ್ಯುಟ್ಯೂಬ ಚಾನೆಲ್ Roaring Creations Kannadaಗೆ ಭೇಟಿ ನೀಡಿ ನೋಡಬಹುದು. ಸ್ಟೀವ್ ಜಾಬ್ಸ ಬರೀ ಒಬ್ಬ ಸಕ್ಸೆಸಫುಲ್ ಬಿಜನೆಸಮ್ಯಾನ ಆಗಿ ಮಾತ್ರವಲ್ಲ, ಒಬ್ಬ ಮೊಟಿವೇಷನಲ್ ಸ್ಪೀಕರಾಗಿ ಕೂಡ ಜಗತ್ತಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಅವರು ಎಷ್ಟೋ ಜನ ಬಿಜನೆಸಮ್ಯಾನಗಳಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಕೆಲವು ಸಕ್ಸೆಸ್ ಸೂತ್ರಗಳು ಮತ್ತು ಬಿಜನೆಸ್ ಸೂತ್ರಗಳು ಇಲ್ಲಿವೆ ;
1) ನಾಳೆ ಇಲ್ಲವೆಂಬಂತೆ ಕೆಲಸ ಮಾಡಿ : Work such that there is no Tomorrow :
ತಾವೇ ಕಟ್ಟಿದ ಆ್ಯಪಲ್ ಕಂಪನಿಯಿಂದ ಉಚ್ಛಾಟಿತರಾಗಿ ಹೊರ ಬಂದಾಗ ಸ್ಟೀವ್ ಜಾಬ್ಸ NeXt ಎಂಬ Computer Platform Developing Companyಯನ್ನು ಪ್ರಾರಂಭಿಸಿದರು. ಆಗ ಅವರು ತಮ್ಮ ಸಾವಿನ ಬಗ್ಗೆ ಯೋಚಿಸಿದಾಗ ಅವರಲ್ಲಿದ್ದ ಬಯಕೆಗಳು, ಸೋಲಿನ ಭಯ, ಅಹಂಕಾರ ಎಲ್ಲವೂ ಮಾಯವಾಗಿ ಸದ್ಯಕ್ಕೆ ಅತ್ಯವಶ್ಯಕವಿರುವ ಕೆಲಸಗಳು ಮಾತ್ರ ಅವರ ಕಣ್ಣಿಗೆ ಕಾಣಿಸಿದವು. ಅವರು ನಾಳೆ ಇಲ್ಲವೆಂಬಂತೆ ಕೆಲಸ ಮಾಡಿದರು. ಅವರು ಅವತ್ತಿನ ಕೆಲಸವನ್ನು ಏನಾದರೂ ಅವತ್ತೇ ಮಾಡಿ ಮುಗಿಸುತ್ತಿದ್ದರು. ನಿಮಗೂ ಸಕ್ಸೆಸಫುಲ್ ವ್ಯಕ್ತಿಯಾಗಬೇಕೆಂಬ ಆಸೆಯಿದ್ದರೆ ನಾಳೆ ಇಲ್ಲವೆಂಬಂತೆ ಕೆಲಸ ಮಾಡಿ. ಇವತ್ತಿನ ಕೆಲಸವನ್ನು ಇವತ್ತೇ ಮಾಡಿ.

2) ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂಬುದನ್ನು ನೆನಪಿಡಿ : Remember that Quality is More important than Quantity :
ಸ್ಟೀವ್ ಜಾಬ್ಸ ಮತ್ತೆ ಆ್ಯಪಲ್ ಕಂಪನಿಯ CEO ಆದಾಗ ಅವರು ಆ್ಯಪಲ್ ಕಂಪನಿಯಲ್ಲಿ ತಯಾರಾಗುತ್ತಿದ್ದ ಪ್ರೋಡಕ್ಟಗಳ ಸಂಖ್ಯೆಯನ್ನು 250ರಿಂದ ಕೇವಲ 10ಕ್ಕೆ ಇಳಿಸಿದರು. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂಬುದು ಅವರ ಸಿದ್ಧಾಂತವಾಗಿತ್ತು. ನೀವು ದಿನದಲ್ಲಿ ಎಷ್ಟು ಗಂಟೆಗಳ ಕಾಲ ಕತ್ತೆಯಂತೆ ಕೆಲಸ ಮಾಡಿರುವಿರಿ ಎನ್ನುವುದಕ್ಕಿಂತ ಎಷ್ಟು ಗಂಟೆ ಫುಲ್ಲಿ ಆ್ಯಕ್ಟೀವ ಆಗಿ ಕೆಲಸ ಮಾಡಿರುವಿರಿ, ಎಷ್ಟು ಎಕ್ಸಲೆಂಟಾಗಿ ಕೆಲಸ ಮಾಡಿರುವಿರಿ ಎಂಬುದು ಮಾತ್ರ ಮುಖ್ಯವಾಗುತ್ತದೆ. ಆದ್ದರಿಂದ ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂಬುದನ್ನು ನೆನಪಲ್ಲಿಡಿ. ಕ್ವಾಲಿಟಿ ಪ್ರೊಡಕ್ಟ ತಯಾರಿಸಿ, ಕ್ವಾಲಿಟಿ ಸರ್ವಿಸ್ ನೀಡಿ ಇಲ್ಲವಾದರೆ ಕಸ್ಟಮರ್ಸ ನಿಮ್ಮ ಕೈಬಿಡುತ್ತಾರೆ. ಗ್ರೇಟ್ ಪ್ರೋಡಕ್ಟಗಳನ್ನು ತಯಾರಿಸಿ.
ಉದಾಹರಣೆಗಾಗಿ : ಇಂದಿಗೂ ಐಫೋನ್ ತೆಗೆದುಕೊಳ್ಳುವುದು ಎಷ್ಟೋ ಜನರ ಕನಸಾಗಿದೆ. ನನ್ನ ಕನಸು ಕೂಡ ಆಗಿತ್ತು. ಆದರೆ ಅದೀಗ ನನಸಾಗಿದೆ. ಕಾಸ್ಟ್ಲಿ ಆದರೂ ಪರವಾಗಿಲ್ಲ ಕ್ವಾಲಿಟಿ ಪ್ರೋಡಕ್ಟಗಳನ್ನು ತಯಾರಿಸಿ. ಜನ ಖಂಡಿತವಾಗಿಯೂ ಖರೀದಿಸುತ್ತಾರೆ. ದುಡ್ಡಿಲ್ಲದಿದ್ದರೆ ಜನ ಕಾದು ಖರೀದಿಸುತ್ತಾರೆ ಇಲ್ಲವೇ ಸಾಲ ಮಾಡಿ ಖರೀದಿಸುತ್ತಾರೆ.

3) Think Different - ವಿಭಿನ್ನವಾಗಿ ಯೋಚಿಸಿ :
ಸ್ಟೀವ್ ಜಾಬ್ಸ ಎಲ್ಲರಂತೆ ಆರ್ಡಿನರಿಯಾಗಿ ಯೋಚಿಸುತ್ತಿರಲಿಲ್ಲ. ಅವರು ಎಲ್ಲರಿಗಿಂತ ಡಿಫರೆಂಟಾಗಿ ಯೋಚಿಸುತ್ತಿದ್ದರು. ಹೊಸದನ್ನು ಮಾಡಲು ಹಂಬಲಿಸುತ್ತಿದ್ದರು. ಅವರು ಆ್ಯಪಲ್ ಕಂಪನಿಯ ಪ್ರೊಡಕ್ಟಗಳ ಮಾರಾಟಕ್ಕಾಗಿ "Think Different" ಎಂಬ ಕ್ಯಾಂಪೇನನ್ನು ಪ್ರಾರಂಭಿಸಿದ್ದರು. ಇದರಿಂದ ದಿವಾಳಿಯಾಗುವ ಭೀತಿಯಲ್ಲಿದ್ದ ಆ್ಯಪಲ್ ಕಂಪನಿ ಜಗತ್ತಿನ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಸೋ ನಿಮಗೂ ಟಾಪ್ ಸ್ಥಾನಕ್ಕೇರಬೇಕೆಂಬ ಆಸೆಯಿದ್ದರೆ ಸ್ವಲ್ಪ ಡಿಫರೆಂಟಾಗಿ ಯೋಚಿಸಿ. Think Different.

4) ಸ್ಟೇ ಹಂಗ್ರಿ, ಸ್ಟೇ ಫೂಲಿಷ್ - Stay Hungry and Stay Foolish :
ನಿಮ್ಮ ಕನಸುಗಳಿಗಾಗಿ, ಗುರಿಗಳಿಗಾಗಿ ಯಾವಾಗಲೂ ಉತ್ಸುಕರಾಗಿರಿ. ನಿಮ್ಮ ಕನಸುಗಳಿಗಾಗಿ, ಗುರಿಗಳಿಗಾಗಿ ಹುಚ್ಚರಾಗಿರಿ. ಸಾಧಿಸಿಯೇ ಸಾಧಿಸುತ್ತೇನೆ ಎಂಬ ಹುಚ್ತನವನ್ನು ಬೆಳೆಸಿಕೊಳ್ಳಿ. ನಿಮ್ಮಲ್ಲಿ ಯಾವಾಗಲೂ ಏನಾದರೂ ಒಂದನ್ನು ಕಲಿಯುತ್ತೇನೆ, ಏನಾದರೂ ಒಂದನ್ನು ಸಾಧಿಸುತ್ತೇನೆ, ಏನಾದರೂ ಒಂದನ್ನು ಗಳಿಸುತ್ತೇನೆ ಎಂಬ ಹಸಿವು, ಹುಚ್ತನ ಇರಲೇಬೇಕು. ನೀವು ಬಯಸಿದ್ದು ನಿಮಗೆ ಸಿಗಬೇಕೆಂದರೆ Stay Hungry and Stay Foolish.

ಇವೀಷ್ಟು ಸ್ಟೀವ್ ಜಾಬ್ಸರವರ ಸಕ್ಸೆಸ್ ಸೂತ್ರಗಳು. ಇವು ನಿಮಗಿಷ್ಟವಾದರೆ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬನ್ನಿ. ಮತ್ತೊಂದು ಅಂಕಣದಲ್ಲಿ ಮತ್ತೊಬ್ಬ ಸಕ್ಸೆಸಫುಲ್ ವ್ಯಕ್ತಿಯ ಸಕ್ಸೆಸ್ ಸೂತ್ರಗಳೊಂದಿಗೆ ಸಿಗ್ತೀನಿ. ಅಲ್ಲಿ ತನಕ All the Best and Thanks you...