ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

                          ನಿಮ್ಮೆಲ್ಲರಿಗೂ ಬೆಳಿಗ್ಗೆ ಬೇಗನೆ ಎದ್ದೇಳಬೇಕು, ನಿಮ್ಮ ದಿನವನ್ನು ಸಕ್ಸೆಸಫುಲ್ಲಾಗಿ ಪ್ರಾರಂಭಿಸಬೇಕು, ಹೆಚ್ಚು ಪ್ರೋಡಕ್ಟಿವ ಆಗಿ ಕೆಲಸ ಮಾಡಿ ರೀಚ್ ಆಗಬೇಕು ಎಂಬೆಲ್ಲ ಆಸೆಗಳಿವೆ. ಆದರೆ ನಿಮಗೆ ಬೆಳಿಗ್ಗೆ ಬೇಗನೆ ಎದ್ದೇಳೊಕ್ಕಾಗ್ತಿಲ್ಲ. ಏಕೆಂದರೆ ರಾತ್ರಿ ನಿಮಗೆ ನಿದ್ದೆ ಬರಲ್ಲ, ಬೆಳಿಗ್ಗೆ ಬೇಗನೆ ಎಚ್ಚರವಾಗಲ್ಲ. ಆದರೂ ನೀವು ಬೆಳಿಗ್ಗೆ ಬೇಗನೆ ಎದ್ದೇಳಲು ತೀರ್ಮಾನಿಸುತ್ತೀರಿ. ಅಲಾರಾಮ್ ಸೆಟ್ ಮಾಡುತ್ತೀರಿ. ಆದರೂ ನೀವು ಎದ್ದೇಳಲ್ಲ. ಏಕೆಂದರೆ ನಿಮ್ಮಲ್ಲಿ ಪ್ರಬಲವಾದ ಇಚ್ಛಾಶಕ್ತಿಯಿಲ್ಲ, ದೃಢ ಸಂಕಲ್ಪವಿಲ್ಲ. ನಮಗೆಲ್ಲರಿಗೂ ಓತಿಕ್ಯಾತದ ಬುದ್ಧಿಯಿದೆ. ಚಳಿಯಾದಾಗ ಕಂಬಳಿ ಹೊಲೆಯುವ ಯೋಚನೆ ಬರುತ್ತದೆ, ಬಿಸಿಲು ಬಿದ್ದಾಗ ಎಲ್ಲ ಮರೆತೋಗುತ್ತದೆ. ಓಕೆ ಏನಿ ವೇ, ಬೆಳಿಗ್ಗೆ ಬೇಗನೆ ಎದ್ದೇಳಲು ಕೆಲವೊಂದಿಷ್ಟು ಈಜೀ ಉಪಾಯಗಳು ಇಲ್ಲಿವೆ ; 

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

1) ಮೊದಲು "ನೀವು ಯಾಕೆ ಬೆಳಿಗ್ಗೆ ಬೇಗನೆ ಎದ್ದೇಳಬೇಕು? ಎದ್ದು ಯಾವ ಇಂಪಾರಟಂಟ್ ಕೆಲಸ ಮಾಡೋದಿದೆ?" ಎಂಬುದನ್ನು ನಿಮ್ಮನ್ನು ನೀವು ಕೇಳಿಕೊಳ್ಳಿ. Ask yourself, Why should I wake up early in the morning?. ಮೊದಲು Why ಕ್ಲಿಯರ ಮಾಡಿಕೊಳ್ಳಿ, ಆಮೇಲೆ How ತಂತಾನೇ ಕ್ಲಿಯರಾಗುತ್ತದೆ. ಮೊದಲು ಮೆಂಟಲಿ ಪ್ರೀಪೇರಾಗಿ, ನಿಮ್ಮ ಮೆದುಳು ನಿಮ್ಮನ್ನು ಫಿಜಿಕಲಿ ಪ್ರೀಪೇರ್ ಮಾಡುತ್ತದೆ. 

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

2) ತಡರಾತ್ರಿ ಮಲಗುವ ಮುನ್ನ ಮೊಬೈಲ ಫೋನನ್ನು ಇಲ್ಲವೇ ಲ್ಯಾಪಟಾಪನ್ನು ಅತಿಯಾಗಿ ಬಳಸಬೇಡಿ. ಒಂದು ವೇಳೆ ಬಳಸಲೇಬೇಕಾದ ಅವಶ್ಯಕತೆಯಿದ್ದರೆ ನೈಟ್ ಮೋಡಲ್ಲಿಟ್ಟು ಬಳಸಿ. ಏಕೆಂದರೆ ನಿಮ್ಮ ಮೊಬೈಲ್ ಸ್ಕ್ರೀನನಿಂದ ಹೊರ ಹೊಮ್ಮುವ ನೀಲಿ ಬೆಳಕು ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ. ಇದರಿಂದಾಗಿ ನಿಮಗೆ ರಾತ್ರಿ ಬೇಗನೆ ನಿದ್ರೆ ಬರಲ್ಲ. ಅದಕ್ಕಾಗಿ ರಾತ್ರಿ ಮೊಬೈಲನಲ್ಲಿ ಟೈಮವೇಸ್ಟ ಮಾಡುವ ಬದಲು ಬೇಗನೆ ಮಲಗಿ, ಬೇಗನೆ ಎದ್ದೇಳಿ. 

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

3) ಎಲ್ಲದ್ದಕ್ಕಿಂತ ಮುಖ್ಯವಾಗಿ ಪ್ರಬಲವಾದ ಇಚ್ಛಾಶಕ್ತಿಯನ್ನು ಹಾಗೂ ದೃಢ ಸಂಕಲ್ಪವನ್ನು ಬೆಳೆಸಿಕೊಳ್ಳಿ. Develop a strong determination and will power. ಬೆಳಿಗ್ಗೆ ಬೇಗನೆ ಎದ್ದೇಳುತ್ತೇನೆ ಎಂದು ನೀವು ಡಿಸೈಡ್ ಮಾಡಿದರೆ ಏನಾದರೂ ನೀವು ಬೆಳಿಗ್ಗೆ ಬೇಗನೆ ಎದ್ದೇಳಲೇಬೇಕು. ಇಲ್ಲಸಲ್ಲದ ನೆಪಗಳನ್ನು ಹೇಳುವುದನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು.

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

4) ರಾತ್ರಿ ಸಾಧ್ಯವಾದಷ್ಟು ಕಡಿಮೆ ಆಹಾರವನ್ನು ಸೇವಿಸಿ. ಮಲಗುವ ಮುಂಚೆ ಒಂದು ಗ್ಲಾಸ್ ಇಲ್ಲವೇ ಎರಡು ಗ್ಲಾಸ್ ನೀರನ್ನು ಕುಡಿದು ಮಲಗಿಕೊಳ್ಳಿ. 

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

5) ನಿಮ್ಮ ಅಲಾರಾಮನ್ನು ಅಥವಾ ಮೊಬೈಲನ್ನು ಹಾಸಿಗೆಯಿಂದ ಸಾಧ್ಯವಾದಷ್ಟು ದೂರದಲ್ಲಿಡಿ. ಒಂದು ವೇಳೆ ಅಲಾರಾಮ ನಿಮ್ಮ ಪಕ್ಕದಲ್ಲಿದ್ದರೆ ನೀವದನ್ನು ಆಫ್ ಮಾಡಿ ಮತ್ತೆ ಮಲಗಿಕೊಳ್ತೀರಿ. 5 ನಿಮಿಷದಲ್ಲಿ ಎದ್ದೇಳತ್ತೀನಿ ಅಂತಾ 2 ಗಂಟೆ ಮಲಗುತ್ತೀರಿ. ಅದಕ್ಕಾಗಿ ಅಲಾರಾಮನ್ನು ನಿಮ್ಮ ಹಾಸಿಗೆಯಿಂದ ದೂರದಲ್ಲಿಡಿ. ಯಾವತ್ತು ನೀವು ಅಲಾರಾಮ ಇಲ್ಲದೇ ಎದ್ದೇಳುತ್ತಿರೋ ಅವತ್ತು ನೀವು ಅಲರ್ಟಾಗಿದ್ದೀರಿ ಎಂದರ್ಥ. ನಿಮಗೆ ಜವಾಬ್ದಾರಿ ಬಂದಿದೆ ಎಂದರ್ಥ.

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

                               ಗೆಳೆಯರೇ, ಇವೀಷ್ಟು ಉಪಾಯಗಳು ನಿಮಗೆ ಬೆಳಿಗ್ಗೆ ಬೇಗನೇ ಎದ್ದೇಳಲು ಸಹಾಯ ಮಾಡುತ್ತವೆ. ಬೆಳಿಗ್ಗೆ ಎದ್ದೇಳುವುದೇನು ಮಹಾನ್ ಕಾರ್ಯವಲ್ಲ. ಆದರೆ ನೀವು ದಿನಾಲು ಬೇಗನೆ ಎದ್ದರೆ ನಿಮ್ಮಿಂದ ಮಹಾನ್ ಕಾರ್ಯಗಳಾಗುತ್ತವೆ. All the Best and Thanks you...

ಬೆಳಿಗ್ಗೆ ಬೇಗನೆ ಎದ್ದೇಳಲು 5 ಟಿಪ್ಸಗಳು : 5 Tips to Wake Up Early in the Morning in Kannada

Blogger ನಿಂದ ಸಾಮರ್ಥ್ಯಹೊಂದಿದೆ.