ಹಾಯ್ ಗೆಳೆಯರೇ, ಈ ಮೋಟಿವೇಶನ ಅನ್ನೋದು ನೀರ ಮೇಲಿರುವ ಗುಳ್ಳೆಯಿದ್ದಂತೆ. ಬೇಗನೆ ಒಡೆದೋಗುತ್ತದೆ. ಅದೇ ರೀತಿ ಈ ಮೋಟಿವೇಶನ ಕೂಡ ಬೇಗನೆ ಮಾಯವಾಗುತ್ತದೆ. ನೀವು ಯಾವಾಗಲೂ ಮೋಟಿವೇಟ್ ಆಗಿರಲು ಸಾಧ್ಯವಿಲ್ಲ. ನಿಮ್ಮಲ್ಲಿ ತುಂಬಾ ಜನ ಮೋಟಿವೇಶನ ಮಾತುಗಳ ಮೇಲೆ ಅಂಕಣ ಬರೆಯಿರಿ ಅಂತಾ ರಿಕ್ವೆಸ್ಟ್ ಮಾಡಿಕೊಂಡಿದ್ದೀರಿ. ಅದಕ್ಕಾಗಿ ಈ ಮೋಟಿವೇಶನ ಮಂತ್ರಗಳನ್ನು ಬರೆಯುತ್ತಿರುವೆ. ಇವು ಬಹಳಷ್ಟು ಜನರಿಗೆ ಅರ್ಥ ಆಗಲ್ಲ. ಅರ್ಥ ಮಾಡಿಕೊಂಡವರು ಆರ್ಡಿನರಿಯಾಗಿ ಉಳಿಯುವುದಿಲ್ಲ.
1) ಈ ನಮ್ಮ ಜೀವನ ಒಂಥರಾ ಒನ ವೇ ರೋಡ್ ಇದ್ದಂಗೆ. ಮತ್ತೆ ಅದೇ ರೋಡಲ್ಲಿ ವಾಪಸ ಬರೋಕ್ಕಾಗಲ್ಲ, ಬಂದ್ರು ಜಾಸ್ತಿ ದಿನ ಬದುಕ್ಕಾಗಲ್ಲ. ಅದಕ್ಕಾಗಿ ಟೈಮ್ ವೇಸ್ಟ ಮಾಡದೇ ಸಿಕ್ಕಿರೋ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮುಂದೆ ಸಾಗಿ.
2) ಒಮ್ಮೆಯಾದರೂ ಅವಮಾನ ಆಗಲೇಬೇಕು. ಅವಮಾನ ಆದಾಗಲೇ ಸನ್ಮಾನ ಮಾಡಿಸಿಕೊಳ್ಳಬೇಕು ಎಂಬ ಛಲ ಹುಟ್ಟೋದು. ಒಮ್ಮೆಯಾದರೂ ಸೋಲು ಎದುರಾಗಬೇಕು. ಸೋಲು ಎದುರಾಗಲೇ ಸಾಧಿಸೋಕೆ ಬಲ ಸಿಗೋದು.
3) ಒಂದ್ಸಲ ಚಪ್ಪಲಿ ಕಿತ್ತೊದ್ರೆ ಹೊಲಿಗೆ ಹಾಕಿಸಿಕೊಂಡು ಮತ್ತೆ ಕಾಲಿಗೆ ಮೆಟ್ಟಿಕೊಳ್ಳಬಹುದು. ಅದೇ ಚಪ್ಪಲಿ ಎರಡನೇ ಸಲ ಕಿತ್ತೊದ್ರೆ ಇರಲಿ ಅಂತಾ ಮತ್ತೊಮ್ಮೆ ಹೊಲಿಗೆ ಹಾಕಿಸಿಕೊಂಡು ಬಳಸಬಹುದು. ಆದ್ರೆ ಅದೇ ಚಪ್ಪಲಿ ಪದೇಪದೇ ಕಿತ್ತೊದ್ರೆ ನಾವು ಬೇಸತ್ತು ಅದನ್ನು ಬೀಸಾಕಲೇ ಬೇಕಾಗುತ್ತದೆ. ನಮ್ಮ ಸ್ನೇಹ ಪ್ರೀತಿ ಸೇರಿ ಎಲ್ಲ ಸಂಬಂಧಗಳು ಒಂಥರಾ ಚಪ್ಪಲಿಗಳಿದ್ದಂತೆ. ಪ್ರಯೋಜನಕ್ಕೆ ಬರದಿದ್ರೆ ಅವುಗಳನ್ನು ಬದಲಾಯಿಸಲೇಬೇಕು.
4) ರಸ್ತೆ ಬದಿಯಲ್ಲಿರುವ ಭಿಕ್ಷುಕನಿಂದ ಹಿಡಿದು ಸಿಲಿಕಾನ್ ವ್ಯಾಲಿಯ ಬಿಲಗೇಟ್ಸವರೆಗೂ ಎಲ್ಲರು ಕಷ್ಟಪಡುತ್ತಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಕಷ್ಟಗಳಿವೆ, ನೋವುಗಳಿವೆ. ಕಷ್ಟಗಳು ನೋವುಗಳು ಬರೀ ನಿಮಗಷ್ಟೇ ಇಲ್ಲ. ಅವು ಎಲ್ಲರಿಗಿವೆ. ಆದ್ದರಿಂದ ಕೊರಗದೇ, ಕಷ್ಟಗಳಿಗೆ ಕಲ್ಲಾಗಿ, ಚುಚ್ಚು ಮಾತುಗಳಿಗೆ ಮುಳ್ಳಾಗಿ ಮುಂದೆ ಸಾಗಿ.
5) ಲವ್ವಲ್ಲಿ ಫೇಲಾದ ನಂತರ ನಾವು ಲೈಫಲ್ಲಿ ಗೆದ್ದು ತೋರಿಸಲೇಬೇಕು. ನಮ್ಮನ್ನು ಕಳೆದುಕೊಂಡಿದ್ದಕ್ಕಾಗಿ ನಮ್ಮ X ಲವರ್ ಕೊನೆತನಕ ಕೊರಗಬೇಕು. ಆ ಮಟ್ಟಿಗೆ ನಾವು ಬೆಳೆಯಬೇಕು. ಲೈಫಲ್ಲಿ ಸಕ್ಸೆಸಫುಲ್ ಆಗಲು ಲವ್ ಫೇಲಿವರಗಿಂತ ಒಳ್ಳೆ ಮೋಟಿವೇಷನ ಬೇಕಿಲ್ಲ.
6) ಕಷ್ಟ ಬಂತು ಅಂತಾ ಇಷ್ಟಪಟ್ಟಿದ್ದನ್ನು ಬಿಡಬೇಡಿ. ಇಷ್ಟಪಟ್ಟಿದ್ದನ್ನು ಕಷ್ಟಪಟ್ಟು ಪಡೆದುಕೊಳ್ಳಿ. ಕಷ್ಟಗಳು ಬಂದಾಗ ಕಣ್ಣೀರು ಸುರಿಸೋ ಬದಲು, ಬೆವರು ಸುರಿಸಿ. ಇಷ್ಟಪಟ್ಟಿದ್ದು ಸಿಗಬೇಕೆಂದರೆ ಕಷ್ಟಪಡಲೇಬೇಕು. ಕಷ್ಟಪಡದೇ ಇಷ್ಟಪಟ್ಟಿದ್ದು ಸಿಗಲ್ಲ.
7) ಯಾರಾದರೂ ನಿಮ್ಮಿಂದ ದೂರಾದಾಗ ಕೊರಗುವ ಬದಲು ಖುಷಿಪಡಿ. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲರೂ ನಿಮ್ಮನ್ನು ಮೆಡಿಸಿನ್ ತರಹ ಬಳಸುತ್ತಾರೆ. ಕಷ್ಟ ಬಂದಾಗ ಬೇಕು ಅಂತಾರೆ, ಸುಖ ಬಂದಾಗ ಬೇಡ ಅಂತಾ ಬಿಟ್ಟೋಗತ್ತಾರೆ.
8) ಸಕ್ಸೆಸ್ ಮತ್ತು ಸೆ* ಅಂದುಕೊಂಡಷ್ಟು ಸುಲಭವಾಗಿ ಸಿಗುವುದಿಲ್ಲ. ಎರಡಕ್ಕೂ ಸಿಕ್ಕಾಪಟ್ಟೆ ಬೆವರು ಸುರಿಸಬೇಕಾಗುತ್ತದೆ.
9) ಪ್ರತಿಸಲ ಶತ್ರುಗಳನ್ನು ಗೆಲ್ಲೊಕ್ಕಾಗಲ್ಲ, ಕೆಲವು ಸಲ ಕೊಲ್ಲಲೇಬೇಕಾಗುತ್ತದೆ. ಶತ್ರುಗಳನ್ನು ಮಿತ್ರರಂತೆ ನೋಡುವ ಅವಶ್ಯಕತೆ ಏನಿಲ್ಲ. ಜೊತೆಗೆ ಬಂದ್ರೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗಿ. ತುಳಿಯೋಕೆ ಬಂದ್ರೆ ತುಳಿದು ಹೋಗಿ.
10) ಎಲ್ಲ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಹುಡುಕುವ ಅವಶ್ಯಕತೆಯಿಲ್ಲ. ಕೆಲವು ಸಮಸ್ಯೆಗಳನ್ನು ನೆಗಡಿಯೆಂದು ತಿಳಿದು ಸುಮ್ಮನಿರಬೇಕು. ಏಕೆಂದರೆ ಯಾವುದೇ ಟ್ರಿಟಮೆಂಟ ತಗೊಳದಿದ್ರು ನೆಗಡಿ ತಂತಾನೇ ವಾಸಿಯಾಗುತ್ತದೆ.
11) ಜಗ ಬೆಳಗೋ ಸೂರ್ಯನೆದೆಯಲ್ಲಿಯೂ ನೋವಿದೆ. ಕಿಲಕಿಲನೆ ನಗುವ ಚಂದ್ರನ ಮುಖದಲ್ಲಿಯೂ ಕಪ್ಪು ಕಲೆಗಳಿವೆ. ಸೋ ನಿಮ್ಮ ವಿಕನೆಸಗಳಿಗೆ ಭಯಪಡಬೇಡಿ. ನಿಮ್ಮ ವಿಕನೆಸಗಳನ್ನೇ ನಿಮ್ಮ ಸ್ಟ್ರೆಂಥ ಮಾಡಿಕೊಂಡು ಮುನ್ನುಗ್ಗಿ.
12) ನಿಮ್ಮ ಸಕ್ಸೆಸಗೆ ಮತ್ತು ಸೋಲಿಗೆ ನೀವೇ ಕಾರಣ ಹೊರತು ಬೇರೆಯವರಲ್ಲ. ನಿಮ್ಮ ಸೋಲು ಗೆಲುವುಗಳೆರಡು ನಿಮ್ಮ ಮೇಲೆಯೇ ನಿರ್ಧಾರಿತವಾಗಿವೆ. U are important in your SUCCESS.
13) ಅದೃಷ್ಟವನ್ನು ನಂಬಿ ಕುಂತರೇ ನಿಮ್ಮ ತಲೆ ಕೂದಲುಗಳು ಬೆಳ್ಳಗಾಗುತ್ತವೆ ಅಷ್ಟೇ. ಒಳ್ಳೇ ಕಾಲ, ಕೆಟ್ಟ ಕಾಲ ಅಂತೇನು ಇರಲ್ಲ. ಎಲ್ಲ ಒಳ್ಳೇ ಕೆಲಸಗಳಿಗೆ ಎಲ್ಲ ಕಾಲ ಒಳ್ಳೆಯದೇ. ನೆಪಗಳನ್ನು ಹೇಳುವುದನ್ನು ನಿಲ್ಲಿಸಿ, ನಿಯತ್ತಾಗಿ ಕೆಲಸ ಮಾಡಲು ಪ್ರಾರಂಭಿಸಿ.
14) ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಒದ್ದಾಡುವ ಬದಲು ನಿಮ್ಮ ಹಾಸಿಗೆಯನ್ನು ಬೇಕಾದಷ್ಟು ಉದ್ದ ಮಾಡಲು ಪ್ರಯತ್ನಿಸಿ. ಖರ್ಚುಗಳನ್ನು ಕಡಿಮೆ ಮಾಡಿ ಕೊರಗುವುದಕ್ಕಿಂತ, ನಿಮ್ಮ ಆದಾಯವನ್ನು ಹೆಚ್ಚಿಸಿ. ನೀವು ಕತ್ತೆಯಂತೆ ದುಡಿಯುವ ಬದಲು ನಿಮ್ಮ ಬಳಿಯಿರುವ ದುಡ್ಡನ್ನು ದುಡಿಸಿ.
15) ಪ್ರಯತ್ನವಿಲ್ಲದೇ ಪ್ರತಿಫಲ ಸಿಗಲ್ಲ, ಆಸೆಪಡುವ ತನಕ ಅಂತಸ್ತು ಸಿಗಲ್ಲ. ಮನಸ್ಸಲ್ಲಿ ನಿಯತ್ತು, ತೋಳಲ್ಲಿ ತಾಕತ್ತಿರುವಾಗ ಕನಸುಗಳನ್ನು ಕಾಣಲು ಭಯವೇಕೆ? ಧೈರ್ಯವಾಗಿ ಕನಸುಗಳನ್ನು ಕಾಣಿ. ನಿಮ್ಮ ಸತತ ಪರಿಶ್ರಮವಿದ್ದರೆ ನಿಮ್ಮ ಕನಸುಗಳು ಖಂಡಿತ ನನಸಾಗುತ್ತವೆ.
16) 100ಕ್ಕೆ 100% ಜನ ಸೋಲುತ್ತಾರೆ. ಆದರೆ 1% ಜನ ಮಾತ್ರ ಬೌನ್ಸ್ ಬ್ಯಾಕ್ ಮಾಡುತ್ತಾರೆ. ಅವರಲ್ಲಿ ನೀವು ಒಬ್ಬರಾಗಿ...
ಗೆಳೆಯರೇ, ಈ ಮೋಟಿವೇಶನ ಮಂತ್ರಗಳು ನಿಮ್ಮ ಪ್ರಯೋಜನಕ್ಕೆ ಬಂದಿದ್ದರೆ ಈ ಅಂಕಣವನ್ನು ಲೈಕ್ ಮತ್ತು ಶೇರ್ ಮಾಡಿ. ಒಂದು ವೇಳೆ ಈ ಅಂಕಣಕ್ಕೆ 100 ಲೈಕ್ ಮತ್ತು 100 ಶೇರಗಳು ಬಂದರೆ ಮಾತ್ರ ಈ ಅಂಕಣದ ಪಾರ್ಟ್ - 2 ಬರೆಯುವೆ. Continued...