ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : 16 Powerful Motivation Quotes in Kannada Part 2 - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : 16 Powerful Motivation Quotes in Kannada Part 2

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

                 ಹಾಯ್ ಗೆಳೆಯರೇ, ಮೋಟಿವೇಷನ್ ಮಂತ್ರಗಳು ಭಾಗ - 1ಕ್ಕೆ ನೀವು ಕೊಟ್ಟ ಪ್ರತಿಕ್ರಿಯೆಗೆ ಧನ್ಯವಾದಗಳು. ಭಾಗ 1ನ್ನು ಓದದವರು ನಮ್ಮ ಆಫೀಸಿಯಲ್ ವೆಬಸೈಟ್ www.Skkannada.comಗೆ ವಿಸಿಟ್ ಮಾಡಿ ಫ್ರೀಯಾಗಿ ಓದಬಹುದು. ಈಗ ಮೋಟಿವೇಷನ ಮಂತ್ರಗಳು ಭಾಗ - 2ರಲ್ಲಿ ಕೆಲವೊಂದು ಪವರಫುಲ್ ಮೋಟಿವೇಷನ್ ಮಾತುಗಳು ಇಲ್ಲಿವೆ ;

1) ರೋಡ ರೋಡ ಅಲೆದವರೆಲ್ಲ ರೋಲ ಮಾಡೆಲಗಳಾಗಿದ್ದಾರೆ. ಬೀದಿ ಬೀದಿ ಅಲೆದವರೆಲ್ಲ ಬಿಲೆನಿಯರಗಳಾಗಿದ್ದಾರೆ. ಆದಕಾರಣ ಯಾವುದೇ ಕಾರಣಕ್ಕೂ ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

2) ಹೊಗಳಿಕೆಯ ಮಾತುಗಳಿಂದ ಹೊಟ್ಟೆ ತುಂಬಲ್ಲ. ಮಂಜಿನ ಹನಿಗಳಿಂದ ಬೆಳೆ ಬೆಳೆಯಕ್ಕಾಗಲ್ಲ. ಕಣ್ಣೀರ ಕಹಾನಿಗಳಿಂದ ಕೀರ್ತಿ ಲಭಿಸಲ್ಲ. ಪ್ರೀತಿಸಿದವರು ಸಿಗದಿದ್ರೆ ನಮ್ಮ ಬಾಳೇನು ಕತ್ತಲಾಗಲ್ಲ. ಪ್ರೀತಿಸಿದವಳು ಸಿಗದಿದ್ರೆ ನಾನು ಬದುಕಲ್ಲ ಅನ್ನೋಕೆ ಅವಳೇನು ಆಕ್ಸಿಜನ್ ಅಲ್ಲಲ್ವಾ? ರಾಜನಾಗೋಕೆ ರಾಜ್ಯ ಬೇಕು, ರಾಜ್ಯವಾಳೋ ತಾಕತ್ತು ಬೇಕೇ ಹೊರತು ರಾಣಿ ಮತ್ತು ರಾಣಿಯ ಪ್ರೀತಿಯಲ್ಲ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

3) ಬರೀ ದುಡ್ಡಿಗಾಗಿ ಕೆಲಸ ಮಾಡಬೇಡಿ. ಆತ್ಮತೃಪ್ತಿಗಾಗಿ ಕೆಲಸ ಮಾಡಿ. ಬರೀ ದುಡ್ಡಿಗಾಗಿ ನೀವು ಮಾಡುವ ಯಾವುದೇ ಕೆಲಸ ನಿಮ್ಮನ್ನು ದಡ ಸೇರಿಸಲ್ಲ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

4) ಜನಿಸಿದ ಮೇಲೆ ಸಾಧಿಸಲೇಬೇಕು ಎಂಬ ನಿಯಮವೇನಿಲ್ಲ. ಆದರೆ ಸತ್ಮೇಲು ಬದುಕಿರಬೇಕೆಂದರೆ ಏನಾದರೂ ಒಂದನ್ನು ಸಾಧಿಸಲೇಬೇಕಲ್ಲ. ಆದ್ದರಿಂದ ಏನಾದರೂ ಒಂದನ್ನು ಸಾಧಿಸಿ. ಏನಾದರೂ ಸಾಧಿಸದೇ ಸಾಯದಿರಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

5) ನಿಮಗೆ ನಿಮ್ಮ ಜೀವನದಲ್ಲಿ ಸಕ್ಸೆಸಫುಲ್ ಆಗೋ ಆಸೆಯಿದ್ದರೆ ಶಕುನಿ, ಮಂಥರೆಯಂಥವರಿಂದ ಸಲಹೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಶ್ರೀಕೃಷ್ಣರಂಥವರ ಸ್ನೇಹ ಬೆಳೆಸಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

6)  ನಿಮ್ಮ ಹಣೆಬರಹವನ್ನು ಬರೆಯುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ. ಅದು ನಿಮ್ಮ ಮೇಲೆಯೇ ಇದೆ. ಬ್ರಹ್ಮ ಬರೆದಿರೋ ಹಣೆಬರಹವನ್ನು ಅಮ್ಮ ಬರೆದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಕೊರಗುವ ಬದಲು ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

7) ಆರ್ಡಿನರಿ ಮನೆ ಕಟ್ಟೋಕೆ ಒಂದು ತಿಂಗಳು ಸಾಕು. ಆದ್ರೆ ಅರಮನೆ ಕಟ್ಟೋಕೆ ಸ್ವಲ್ಪ ಜಾಸ್ತಿ ಟೈಮ ಬೇಕು. ತಡವಾದರೂ ಪರವಾಗಿಲ್ಲ. ನಿಮ್ಮ ಕೆಲಸವನ್ನು ಎಕ್ಸಲೆಂಟಾಗಿ ಮಾಡಿ. ಲೇಟ್ ಆದರೂ ಲೇಟೆಸ್ಟಾಗಿ ಬನ್ನಿ.
ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2
8)  ನೀವು ಏನೇ ಮಾಡಿದರೂ, ಮಾಡದಿದ್ದರೂ ಜನ ನಿಮ್ಮ ಬಗ್ಗೆ ಮಾತಾಡ್ತಾರೆ, ನಿಮ್ಮ ಬಗ್ಗೆ ಕಮೆಂಟ್ ಮಾಡ್ತಾರೆ, ಕ್ರಿಟಿಸೈಜ್ ಮಾಡ್ತಾರೆ. ನಿಮ್ಮ ಸಕ್ಸೆಸನ ಮೂಲಕ ನಿಮ್ಮನ್ನು ನಿಂದಿಸುವವರ ಬಾಯಿಗೆ ಬೀಗ ಜಡೆಯಿರಿ. ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ನಿಮ್ಮ ಫ್ಯಾನ್ಸಗಳು ಉತ್ತರ ನೀಡಬೇಕು. ಆ ಮಟ್ಟಿಗೆ ನೀವು ಬೆಳೆದು ನಿಲ್ಲಬೇಕು.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

9) ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ. ಜನಿಸುವ ಮೊದಲು 300 ಮಿಲಿಯನ್ ಜನರೊಂದಿಗೆ ಸ್ಪರ್ಧಿಸಿ ಗೆದ್ದವರಿಗೆ ಈಗ ಜನಿಸಿದ ನಂತರ ಕೆಲವೊಂದಿಷ್ಟು ಜನರೊಂದಿಗೆ, ಸಮಸ್ಯೆಗಳೊಂದಿಗೆ ಸ್ಪರ್ಧಿಸಿ ಗೆಲ್ಲುವುದು ದೊಡ್ಡ ವಿಷಯವೇ? ಸತ್ತ ವೀರ್ಯಾಣುವಿಗೂ (Sperm) ಸಹ ಜನ್ಮ ನೀಡುವ ಸಾಮರ್ಥ್ಯವಿರುವಾಗ ಜೀವಂತವಾಗಿರುವ ನಿಮಗೇನಾಗಿದೆ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

10)  ನೀವು ನಿಮ್ಮ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲು ಹೊರಟಾಗ ಜನ ನಿಮ್ಮನ್ನು ನೋಡಿ ನಗುತ್ತಾರೆ, ನಿಮ್ಮನ್ನು ಹುಚ್ಚನೆಂದು ಕರೆಯುತ್ತಾರೆ. ನಿಮಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ನಿಮ್ಮ ಸಂಬಂಧಿಕರು ನಿಮ್ಮ ಮೇಲೆ ಉರಿದುಕೊಳ್ಳುತ್ತಾರೆ. ಇವರಿಗೆ ಹೆದರಿ ನೀವು ಹಿಂದೆ ಸರಿಯಬೇಡಿ. ನಗುವವರು ನಾಶವಾಗುತ್ತಾರೆ. ಉರಿಯುವವರು ಸುಟ್ಟು ಬೂದಿಯಾಗುತ್ತಾರೆ. ನೀವು ನಿಮ್ಮ ಗುರಿಯೆಡೆಗೆ ಧೈರ್ಯವಾಗಿ ಸಾಗಿ.
ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

11) ನಿಮ್ಮ ಮೇಲೆ ನಿಮಗೇ ವಿಶ್ವಾಸವಿಲ್ಲವೆಂದ್ಮಲೇ ನಿಮ್ಮ ಶ್ವಾಸಕ್ಕೆ ಬೆಲೆಯೇನು? ಮೊದಲು ನಿಮ್ಮನ್ನು ನೀವು ನಂಬಿ. ಆಮೇಲೆ ಈ ಜಗತ್ತು ತಾನಾಗಿಯೇ ನಿಮ್ಮನ್ನು ನಂಬುತ್ತದೆ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

12)  ನಿಮ್ಮ ಯಶಸ್ಸು ನಿಮ್ಮ ಕೆಲಸದ ಮೇಲೆ ನಿರ್ಧಾರಿತವಾಗುತ್ತದೆಯೇ ಹೊರತು ನಿಮ್ಮ ಸೌಂದರ್ಯದ ಮೇಲಲ್ಲ. ಸಾಧಿಸೋಕೆ ಸೌಂದರ್ಯ, ಸಂಪತ್ತು, ಸ್ನೇಹಿತರ ಸಹಾಯ, ಸಂಬಂಧಿಕರ ಸಲಹೆಗಳಾವುವು ಬೇಕಾಗಿಲ್ಲ. ಸಾಧಿಸೋಕೆ ಬೇಕಾಗಿರುವುದು ಛಲ ಮತ್ತು ಮನೋಬಲ ಮಾತ್ರ. ಅದಕ್ಕಾಗಿ ನಿಮ್ಮ ಕೀಳರಿಮೆಯನ್ನು ಬಿಟ್ಟು ಕೆಲಸ ಮಾಡಲು ಪ್ರಾರಂಭಿಸಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

13)  ಕಾಲೆಳೆಯುವ ಜನರಿಗೆ ಕೇರ್ ಮಾಡಬೇಡಿ. 100 ನಾಯಿಗಳು ಒಟ್ಟಿಗೆ ಸೇರಿ ಬೊಗಳಿದರೆ ಅದು ಸಿಂಹ ಘರ್ಜನೆಯಾಗುವುದಿಲ್ಲ. 10 ಹಂದಿಗಳು ಸೇರಿ ಸಿಂಹವನ್ನು ಬೇಟೆಯಾಡಲು ಸಾಧ್ಯವಿಲ್ಲ. ನೀವು ಧೈರ್ಯವಾಗಿ ಮುಂದೆ ಸಾಗಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

14) ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲ್ಲ. ನೀವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಈ ಜಗತ್ತಿನಲ್ಲಿ ಯಾರು ನಿಮ್ಮ ಆಸೆಗಳನ್ನು ಈಡೇರಿಸಲು ಖಾಲಿ ಕುಂತಿಲ್ಲ. ನಿಮ್ಮ ಆಸೆಗಳನ್ನು ನೀವೇ ಈಡೇರಿಸಿಕೊಳ್ಳಬೇಕು.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

15) ನೀವು ಬಯಸಿದ್ದು ನಿಮಗೆ ಸಿಗಲ್ಲ. ನೀವು ಯಾವುದಕ್ಕಾಗಿ ಅರ್ಹರಾಗಿರುತ್ತಿರೋ ಅದು ನಿಮಗೆ ಸಿಗುತ್ತದೆ. ಅದಕ್ಕಾಗಿ ನಿಮ್ಮ ಅರ್ಹತೆಯನ್ನು ಹೆಚ್ಚಿಸಿಕೊಳ್ಳಿ. Sorry, ಅರ್ಹತೆಯೆಂದರೆ ನಿಮಗೆ ಮೋಟಿವೇಷನ್ ಬರಲ್ಲ. ನಿಮ್ಮ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳಿ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2

16) ನಿಮ್ಮ ಜೇವನದಲ್ಲಿ ಕಷ್ಟ ಬಂದಾಗ ನೀವು ನಿಂತ್ರೆ ನಿಮ್ಮ ಜೀವನ ಫುಲ್ ಸ್ಟಾಪ್ (⧭) ಆಗುತ್ತೆ. ಅದೇ ನೀವು ಕಷ್ಟಗಳ ಮೇಲೆ ಕಷ್ಟಗಳನ್ನು ಎದುರಿಸಿ ಮುನ್ನುಗ್ಗಿದರೆ ನಿಮ್ಮ ಲೈಫ್ ಕಂಟಿನ್ಯೂಇಟಿ (⋯⋯) ಆಗುತ್ತದೆ. ನಿಮ್ಮ ಲೈಫಲ್ಲಿ ಏಳುಬೀಳುಗಳು ಬರದಿದ್ದರೆ ನೀವು ಜೀವಂತ ಶವವಾಗಿದ್ದೀರಿ ಎಂದರ್ಥ. ಏಳುಬೀಳುಗಳು ಬಂದರೆ ನೀವು ಇನ್ನು ಜೀವಂತವಾಗಿದ್ದಿರಿ ಎಂದರ್ಥ.

ಪವರಫುಲ್ ಮೋಟಿವೇಷನ ಮಂತ್ರಗಳು ಭಾಗ - 2 : Powerful Motivation Mantras in Kannada - Part 2
                                  
                     ಈ ಮೋಟಿವೇಶನಲ್ ಮಂತ್ರಗಳು ನಿಮ್ಮ ಪ್ರಯೋಜನಕ್ಕೆ ಬಂದಿದ್ದರೆ ಈ ಅಂಕಣವನ್ನು ಲೈಕ್ ಮಾಡಿ ಮತ್ತು ನಿಮ್ಮ ಆತ್ಮೀಯರೊಂದಿಗೆ ಫೇಸ್ಬುಕ್ ಹಾಗೂ ವಾಟ್ಸಾಪಗಳಲ್ಲಿ ಶೇರ್ ಮಾಡಿ.

Blogger ನಿಂದ ಸಾಮರ್ಥ್ಯಹೊಂದಿದೆ.