ಹಾಯ್ ಗೆಳೆಯರೇ, ನಾನು ಬರೆದ "ಚಾಣಕ್ಯ ನೀತಿಗಳು" ಅಂಕಣವನ್ನು ಓದಿದ ನಂತರ ತುಂಬಾ ಜನರಿಗೆ ಒಂದು ಕಾಮನ್ ಪ್ರಶ್ನೆ ಬಂದಿದೆ. ಅದೇನೆಂದರೆ "ಕೆಟ್ಟವರಾದರೆ ಬೇಗನೆ ಯಶಸ್ಸು ಸಿಗುತ್ತಾ?" ಅಂತ. ಬನ್ನಿ ಗೆಳೆಯರೇ, ಇವತ್ತಿನ ಅಂಕಣದಲ್ಲಿ ಕೆಟ್ಟವರಾದರೆ ಬೇಗನೆ ಯಶಸ್ಸು ಸಿಗುತ್ತಾ? ಎಂಬ ಟಾಪಿಕ ಮೇಲೆ ಡಿಸ್ಕಸ್ ಮಾಡೋಣ.
ಗೆಳೆಯರೇ, ಯಾರು ಹೇಳಿದ್ದು ನಿಮಗೆ ಕೆಟ್ಟವರಾದರೆ ಬೇಗನೆ ಯಶಸ್ಸು ಸಿಗುತ್ತೆ ಅಂತಾ? ಚಾಣಕ್ಯ ಅತಿಯಾಗಿ ಪ್ರಾಮಾಣಿಕರಾಗಬೇಡಿ, ಅತಿಯಾಗಿ ಮುಗ್ಧರಾಗಬೇಡಿ ಎಂದೇಳಿದ್ದಾರೆಯೇ ಹೊರತು ಕೆಟ್ಟವರಾಗಿ, ಭ್ರಷ್ಟರಾಗಿ, ಸುಳ್ಳುಬುರುಕರಾಗಿ, ಮೋಸಗಾರರಾಗಿ ಅಂತಲ್ಲ. ಚಾಣಕ್ಯ ಹೇಳಿದಂತೆ ಅವಶ್ಯಕತೆಗಿಂತ ಅತಿಯಾಗಿ ಪ್ರಾಮಾಣಿಕರಾಗುವ ಅವಶ್ಯಕತೆಯಿಲ್ಲ. ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನು ಮೊದಲು ಕಡಿಯುತ್ತಾರೆ. ಆದರೆ ಇದರರ್ಥ ಕೆಟ್ಟವರಾಗಿ, ಭ್ರಷ್ಟರಾಗಿ ಅಂತಲ್ಲ. ಇದರರ್ಥ ಏನಪ್ಪ ಅಂದ್ರೆ ಪ್ರಾಮಾಣಿಕರಾಗಿ, ಬಲಿಷ್ಟರಾಗಿ, ಕರುಣಾಮಯಿಗಳಾಗಿ. ಆದರೆ ಮೂರ್ಖರಾಗಬೇಡಿ ಅಂತಾ. ನಿಮ್ಮೊಂದಿಗೆ ಅನ್ಯಾಯವಾಗುತ್ತಿರುವಾಗ ಸಹಿಸಿಕೊಂಡು ಸುಮ್ಮನಿರಬೇಡಿ ಅಂತಾ.
ಕೆಟ್ಟವರಾದರೆ, ಭ್ರಷ್ಟರಾದರೆ, ಬೇರೆಯವರ ಚಮಚಾಗಿರಿ ಮಾಡಿದರೆ ನಿಮಗೆ ಬೇಗನೆ ಯಶಸ್ಸು, ಹಣ, ಪದವಿ, ಪುರಸ್ಕಾರ ಸಿಗಬಹುದು. ಸಿಗದೇನು ಇರಬಹುದು. ಒಂದು ವೇಳೆ ಸಿಕ್ಕರೂ ಅದು ಬಹಳ ದಿನ ಇರುವುದಿಲ್ಲ. ಏಕೆಂದರೆ ಅಕ್ರಮವಾಗಿ ಗಳಿಸಿದ್ದೆಲ್ಲವು ಆಸ್ಪತ್ರೆ ಪಾಲಾಗುತ್ತವೆ ಅಷ್ಟೇ. ತಡವಾದರೂ ಸತ್ಯ ಗೆಲ್ಲುತ್ತದೆ. ಸುಳ್ಳು, ಮೋಸಗಳು ಮರ್ಯಾದೆ ಕಳೆದುಕೊಂಡು ಮಣ್ಣು ಪಾಲಾಗುತ್ತದೆ. ಅಕ್ರಮವಾಗಿ ಹಣ ಸಂಪಾದಿಸಿ ಆಸ್ಪತ್ರೆ ಪಾಲಾದವರನ್ನು, ಅವರಿವರ ಚಮಚಾಗಿರಿ ಮಾಡಿ ಹಣ, ಪದವಿ, ಪುರಸ್ಕಾರಗಳನ್ನು ಪಡೆದುಕೊಂಡು ನಡುಬೀದಿಯಲ್ಲಿ ಬೆತ್ತಲಾದವರನ್ನು ನೀವು ಬಹಳಷ್ಟು ನೋಡಿದ್ದೀರಿ.
ಕೆಟ್ಟವರಾಗುವುದರಿಂದ ನಿಮ್ಮಲ್ಲಿ ಕೆಟ್ಟತನ, ಭ್ರಷ್ಟಬುದ್ಧಿ, ನೆಗೆಟಿವ್ ಆಲೋಚನೆಗಳು, ನೀಚ ಬುದ್ಧಿ, ಕ್ರೂರತನ ಎಲ್ಲವೂ ಬೆಳೆಯುತ್ತವೆ. ಇಂಥ ಸಂದರ್ಭದಲ್ಲಿ ನಿಮ್ಮ ಬಳಿ ಬರುವ ಹಣ ನಿಮ್ಮನ್ನು ಹಾಳು ಮಾಡುತ್ತದೆ.
ಉದಾಹರಣೆಗಾಗಿ ; ನಿಮ್ಮ ಬಳಿ ಹರಾಮಿ ಹಣ ಬಂದಾಗ ನಿಮಗೆ ಸಿಗರೇಟ್, ಸೆ**, ವಿ**, ಡ್ರ**, ಜೂಜು ಮುಂತಾದ ದುಶ್ಚಟಗಳು ಅಂಟಿಕೊಳ್ಳುತ್ತವೆ. ನೀವು ನಿಮ್ಮ ಅವನತಿಯ ಹಾದಿ ಹಿಡಿಯುತ್ತೀರಿ. ಈಗ ನಿಮಗೆ ಸಕ್ಸೆಸ್ ಸಿಕ್ಕೇನು ಫಲ? ಸ್ಮಶಾನಕ್ಕೆ ಹೊರಟಿರೋ ಹೆಣಕ್ಕೆ ಸಿಂಗಾರ ಸಿಗೋದು, ಸಾಯೋನಿಗೆ ಸಕ್ಸೆಸ್ ಸಿಗೋದು ಎರಡು ಒಂದೇ. ಎರಡು ಯ್ಯುಜಲೆಸ್. ಸೋ ಬೇಗನೆ ಸಕ್ಸೆಸ್ ಸಿಗುತ್ತೆ, ಹಣ ಸಿಗುತ್ತೆ, ಪ್ರಶಸ್ತಿ ಸಿಗುತ್ತೆ ಅಂತಾ ಕೆಟ್ಟವರಾಗಬೇಡಿ, ಕೆಟ್ಟವರ ಚಮಚಾಗಿರಿ ಮಾಡಬೇಡಿ. ಕೆಟ್ಟ ದಾರಿ ಹಿಡಿಯಬೇಡಿ. ಕೆಟ್ಟವರಾಗಿ ಹಾಳಾಗಬೇಡಿ.
ಕೆಟ್ಟವರಾದರೆ ಬೇಗನೆ ಯಶಸ್ಸು ಸಿಗುತ್ತೆ ಎಂಬ ಕೆಟ್ಟ ಯೋಚನೆಯನ್ನು ನಿಮ್ಮ ತಲೆಯಿಂದ ಮೊದಲು ಡಿಲೀಟ್ ಮಾಡಿ. ನಿಯತ್ತಾಗಿ ಪರಿಶ್ರಮದ ಹಾದಿಯಲ್ಲಿ ಮುನ್ನಡೆಯಿರಿ. ಲೇಟಾದ್ರು ನಿಮಗೆ ಸಕ್ಸೆಸ್ ಸಿಕ್ಕೇ ಸಿಗುತ್ತದೆ. ವಿಚಲಿತರಾಗಬೇಡಿ, ಭಯಪಡಬೇಡಿ.
ನಾನು ನಿಮಗೆ ಸ್ಟ್ರಾಂಗ್ ಆಗಬೇಡಿ, ಶ್ರೀಮಂತರಾಗಬೇಡಿ ಎನ್ನುತ್ತಿಲ್ಲ. Strong ಆಗಿ, Rich ಆಗಿ. ಏಕೆಂದರೆ ಈ ಜಗತ್ತಿನಲ್ಲಿ ದುರ್ಬಲರಿಗೆ ಬೆಲೆಯಿಲ್ಲ. Survival of the fittest. ಸರ್ವಶಕ್ತರಾದವರು ಮಾತ್ರ ಬದುಕುಳಿಯುತ್ತಾರೆ. ಸೋ ಸ್ಟ್ರಾಂಗ್ ಆಗಿ, ರೀಚ್ ಆಗಿ. ಸಕ್ಸೆಸಫುಲ್ ಆಗಿ. ಆದರೆ ಕೆಟ್ಟವರಾಗಬೇಡಿ, ಭ್ರಷ್ಟರಾಗಬೇಡಿ. ನಿಮ್ಮನ್ನು ಯಾರು ತುಳಿಯಬಾರದೆಂದರೆ ನೀವು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಬಲಿಷ್ಟರಾಗಲೇಬೇಕು. ಬಲಿಷ್ಟರಾಗಿ, ಆದರೆ ಬೇರೆಯವರನ್ನು ತುಳಿಯಬೇಡಿ ಮತ್ತು ಬೇರೆಯವರಿಂದ ತುಳಿಸಿಕೊಳ್ಳಬೇಡಿ.
ನಿಯತ್ತಾಗಿರಿ, ಒಳ್ಳೆಯವರಾಗಿರಿ, ಕರುಣಾಮಯಿಗಳಾಗಿ, ಗುಡ್ ಹ್ಯುಮನ್ ಬಿಯಿಂಗಗಳಾಗಿ, ಇನ್ನೊಸೆಂಟಾಗಿರಿ. ಆದರೆ ಮೂರ್ಖರಾಗಿರಬೇಡಿ. ಒಳ್ಳೆಯವರಿಗೆ ಬೆಳಕು ಕೋಡೋ ಸೂರ್ಯನಾಗಿ, ಕೆಟ್ಟವರಿಗೆ ಬಿಸಿ ಮುಟ್ಟಿಸೋ ಸೂರ್ಯನಾಗಿ. ಜೊತೆಗೆ ಬಂದ್ರೆ ಹೆಗಲು ಕೊಡಿ. ಬೆನ್ನಿಗೆ ಚೂರಿ ಹಾಕಲು ಬಂದ್ರೆ, ತುಳಿಯಲು ಬಂದ್ರೆ ಇಟ್ಟಿಗೆಯ ಏಟಿಗೆ ಕಲ್ಲಿನಿಂದ ಉತ್ತರ ಕೊಡಿ. Be Good, Do Good. All the Best and Thanks You...