ಕನ್ನಡ ಕೋಟ್ಸ್ - ಕನ್ನಡ ಸ್ಟೇಟಸ್ - Kannada Quotes - Kannada Status - Life Quotes in Kannada

ಕನ್ನಡ ಕೋಟ್ಸ್ - ಕನ್ನಡ ಸ್ಟೇಟಸ್ - Kannada Quotes - Kannada Status - Life Quotes in Kannada

1) ಬಿಸಿಲು ಬಿದ್ಮೇಲೆ ಮಳೆ ಬರುವಂತೆ, ರಾತ್ರಿಯಾದ್ಮೇಲೆ ಬೆಳಕಾಗುವಂತೆ, ದುಃಖವಾದ್ಮೇಲೆ ಸುಖ ಸಿಗುತ್ತದೆ, ನಷ್ಟವಾದ್ಮೇಲೆ ಲಾಭವಾಗುತ್ತೆ, ನೋವಾದ್ಮೇಲೆ ನಲಿವು ನಿಮ್ಮದಾಗುತ್ತೆ... 

2) ನೋವಿನಲ್ಲೂ ನಗುವುದನ್ನು ಕಲಿತರೆ ನಿಮ್ಮನ್ನು ಅಳಿಸಲು ಯಾರಿಗೂ ಸಾಧ್ಯವಿಲ್ಲ. ಸೋಲಿನಲ್ಲೂ ಶಾಂತವಾಗಿರುವುದನ್ನು ಕಲಿತರೆ ನಿಮ್ಮನ್ನು ಸೋಲಿಸಲು ನಿಮಗೂ ಸಾಧ್ಯವಿಲ್ಲ... 

3) ಕೆಲಸ ಮಾಡದವರು ನಿನ್ನೆ ಮತ್ತು ನಾಳೆಯ ಬಗ್ಗೆ ಯೋಚಿಸಿ ಕಾಲಹರಣ ಮಾಡುತ್ತಾರೆ. ಕೆಲಸ ಮಾಡುವವರು ಸದ್ಯಕ್ಕೆ ಕೈಯಲ್ಲಿರುವುದನ್ನಷ್ಟೇ ಮಾಡುತ್ತಾರೆ... 

4) ಬಡವರು ದುಡ್ಡಿಗಾಗಿ ದುಡಿಯುತ್ತಾರೆ, ಆದರೆ ಶ್ರೀಮಂತರು ದುಡ್ಡನ್ನು ದುಡಿಸುತ್ತಾರೆ... 

5) ಬೇರೆಯವರು ನನ್ನ ಸ್ಟೇಟಸ್ ನೋಡಲಿ ಅಂತಾ ಸ್ಟೇಟಸ್ ಇಡುವವನು ಮೂರ್ಖ, ಅದನ್ನು ನೋಡುವವನು ಶತಮೂರ್ಖ... 

6) ಫೇಸ್ಬುಕ್, ವಾಟ್ಸಾಪಗಳಲ್ಲಿ ದಿನಕ್ಕೆ 4 ಸ್ಟೇಟಸ್ ಇಡುವುದರಿಂದ ಬದುಕು ಬದಲಾಗಲ್ಲ, ನೀವು ಶ್ರೀಮಂತರಾಗಲ್ಲ. ನಿಯತ್ತಾಗಿ ಮೈಮುರಿದು ಕೆಲಸ ಮಾಡಿದಾಗಲೇ ನಿಮ್ಮ ಬದುಕು ಬದಲಾಗುತ್ತದೆ... 

7) "ಸಿಂಪಲ್ ಲಿವಿಂಗ್ - ಹೈ ಥಿಂಕಿಂಗ್" ಅಂತಾ ಸ್ಟೇಟಸ್ ಹಾಕಿ ಸಾಲ ಮಾಡಿ ಶೋಕಿ ಮಾಡುವವರೇ ಹೆಚ್ಚಾಗಿದ್ದಾರೆ... 

8) ಯಾವತ್ತೂ ನೀವು ನಿಮ್ಮನ್ನು ಪ್ರೀತಿಸುತ್ತೀರೋ, ನಿಮ್ಮ ಕೆಲಸವನ್ನು ಪ್ರೀತಿಸುತ್ತೀರೋ ಆವತ್ತು ಎಲ್ಲರೂ ನಿಮ್ಮನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ.

9) ಮೊದಲು ಸುಂದರ ಚೋಕರಿಗಾಗಿ ಸರ್ಕಾರಿ ನೌಕರಿ, ಆಮೇಲೆ ಜೀವನಪೂರ್ತಿ ಎಲ್ಲರ ಚಾಕರಿ... 

                                           To be Continued Soon...ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಕನ್ನಡ ಕೋಟ್ಸ್ - ಕನ್ನಡ ಸ್ಟೇಟಸ್ - Kannada Quotes - Kannada Status - Life Quotes in Kannada ಕನ್ನಡ ಕೋಟ್ಸ್ - ಕನ್ನಡ ಸ್ಟೇಟಸ್ - Kannada Quotes - Kannada Status - Life Quotes in Kannada Reviewed by Director Satishkumar on November 22, 2019 Rating: 4.5
Powered by Blogger.
close
skkkannada.com