ಹಾಯ್ ಗೆಳೆಯರೇ, ಇವತ್ತಿನ ಅಂಕಣದ ವಿಷಯ ಸ್ವಲ್ಪ ಸೀರಿಯಸ್ಸಾಗಿದೆ. ಜೊತೆಗೆ ಅಷ್ಟೇ ಕಾಂಪ್ಲಿಕೆಟೆಡ ಆಗಿದೆ. ಅದಕ್ಕಾಗಿ ಕೇರಫುಲ್ಲಾಗಿ ಈ ಅಂಕಣವನ್ನು ಓದಿ. ಬಹುಷಃ ನೀವು ಮೈಂಡ್ ಡಾಯಟ್ ಎಂಬ ಪದವನ್ನು ಕೇಳಿರಲಕ್ಕಿಲ್ಲ. ಆದರೆ ಮೈಂಡ್ ಡಾಯಟ್ ಅತಿ ಮುಖ್ಯವಾಗಿದೆ. ಬನ್ನಿ ಈ ಅಂಕಣದಲ್ಲಿ ಮೈಂಡ ಡಾಯಟ ಬಗ್ಗೆ ಡಿಟೇಲಾಗಿ ತಿಳಿದುಕೊಳ್ಳೋಣಾ.
ಗೆಳೆಯರೇ, ನಾವೆನೆಂದುಕೊಳ್ಳುತ್ತೇವೆಯೋ ಅದೇ ರೀತಿ ನಾವಾಗುತ್ತೇವೆ. ಅಂದರೆ ನಮ್ಮ ಯೋಚನೆಗಳ ಮೇಲೆ ನಮ್ಮ ಬದುಕು ನಿರ್ಧಾರಿತವಾಗುತ್ತದೆ. ಹೀಗಾಗಿ ನಾವು ನಮ್ಮ ಯೋಚನೆಗಳ ಮೇಲೆ ಹಿಡಿತ ಸಾಧಿಸಲೇಬೇಕು. ಇಲ್ಲವಾದರೆ ನಮ್ಮ ಬದುಕು ಸೂತ್ರಧಾರವಿಲ್ಲದ ಗಾಳಿಪಟವಾಗುತ್ತದೆ. ಅದಕ್ಕಾಗಿ ನಾವು ನಮ್ಮ ತಲೆಯಲ್ಲಿರುವ ಕೆಟ್ಟ ವಿಚಾರಗಳನ್ನು ಹೊಡೆದೊಡಿಸಿ ಒಳ್ಳೇ ವಿಚಾರಗಳನ್ನು ತುಂಬಬೇಕು. ಇದಕ್ಕೆ ನಾವು ಮೈಂಡ್ ಡಾಯಟ್ (Mind Diet) ಎನ್ನುತ್ತೇವೆ. ಹೇಗೆ ನಾವು ಆರೋಗ್ಯಕರ ಶರೀರಕ್ಕಾಗಿ ಡಾಯಟ ಮಾಡುತ್ತೇವೆಯೋ ಅದೇ ರೀತಿ ಬ್ಯಾಲನ್ಸ್ಡ ಮೈಂಡಗಾಗಿ ನಾವು ಡಾಯಟ್ ಮಾಡಬೇಕು. ನಮ್ಮ ಮೆದುಳಿನಲ್ಲಿ ಒಳ್ಳೇ ವಿಚಾರಗಳನ್ನು ತುಂಬಬೇಕು.
ಪ್ರತಿದಿನ ಪ್ರತಿಕ್ಷಣ ನಿಮ್ಮ ಬ್ರೇನ್ ನೆಗೆಟಿವ್ ರೀತಿಯಲ್ಲಿ ವಾಶ್ ಆಗುತ್ತಿದೆ. ನಿಮ್ಮ ಮೆದುಳು ಕಸದ ತೊಟ್ಟಿಯಾಗುತ್ತಿದೆ. ನೀವು ಶಾಲೆಯಲ್ಲಿದ್ದಾಗ ನಿಮ್ಮ ತಲೆಯಲ್ಲಿ ಯ್ಯುಜಲೆಸ್ ವಿಷಯಗಳನ್ನು ತುರುಕಿದ್ದಾರೆ, ಮೂಢ ನಂಬಿಕೆಗಳನ್ನು, ಮೂರ್ಖ ವಿಚಾರಗಳನ್ನು ನಿಮ್ಮ ತಲೆಯೊಳಗೆ ತುಂಬಿ ನೆಗೆಟಿವ್ ಬ್ರೇನ್ ವಾಶ್ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ, ಈಗ ನೀವು ಅಲರ್ಟ ಆಗದಿದ್ದರೆ ಮುಂದೇನು ಮಾಡುತ್ತಾರೆ. ಹೌದು ಗೆಳೆಯರೇ, ಬೇರೆಯವರು ನಿಮ್ಮ ತಲೆಯಲ್ಲಿ ನಿಮಗೆ ಬೇಡದಿರುವುದನ್ನು ತಂದು ಸುರಿಯುತ್ತಿದ್ದಾರೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ.
ಉದಾಹರಣೆಗೆ : ರಾಜಕಾರಣಿಗಳು ನಿಮ್ಮನ್ನು ವೋಟಿಗಾಗಿ ಬಳಸಿಕೊಳ್ಳುತ್ತಿದ್ದಾರೆ, ಸೆಲೆಬ್ರಿಟಿಗಳು ನಿಮ್ಮನ್ನು ನೋಟಿಗಾಗಿ ಬಳಸಿಕೊಳ್ಳುತ್ತಿದ್ದಾರೆ, ನ್ಯೂಸ್ ಚಾನೆಲನವರು ನಿಮ್ಮನ್ನು TRPಗಾಗಿ ಬಳಸಿಕೊಳ್ಳುತ್ತಿದ್ದಾರೆ, ಸೋಸಿಯಲ್ ಮಿಡಿಯಾಗಳು ನಿಮ್ಮನ್ನು ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿವೆ. ಇವರೆಲ್ಲರು ನಿಮ್ಮ ಮೆದುಳಲ್ಲಿ ಕಸವನ್ನು ತುಂಬಿ ನಿಮ್ಮನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಮೆದುಳನ್ನು ಬೇರೆಯವರು ಕಂಟ್ರೋಲ್ ಮಾಡುತ್ತಿದ್ದಾರೆ. ನಿಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ, ನಿಮಗೆ ಖರಾಬ್ ಪ್ರೋಡಕ್ಟಗಳನ್ನು ಮಾರುತ್ತಿದ್ದಾರೆ. ಅದಕ್ಕಾಗಿ ನಿಮಗೆ ಮೈಂಡ್ ಡಾಯಟ್ ತುಂಬಾನೇ ಮುಖ್ಯವಾಗಿದೆ.
ಹೇಗೆ ಹೊಲದಲ್ಲಿ ಬಿತ್ತಿದ್ದೇ ಬೆಳೆಯುತ್ತದೆಯೋ ಅದೇ ರೀತಿ ನೀವು ಬಯಸಿದ್ದೇ ನಿಮಗೆ ಸಿಗುತ್ತದೆ. ನೀವು ಯೋಚಿಸಿದ್ದೆ ನಿಮಗೆ ಸಿಗುತ್ತದೆ. ಅದಕ್ಕಾಗಿ ನಿಮ್ಮ ಮೆದುಳಲ್ಲಿ ಸಿಕ್ಕಸಿಕ್ಕದನ್ನೆಲ್ಲ ತುಂಬಿಕೊಳ್ಳಬೇಡಿ. ನಿಮಗೆ ಸಿಗುವ ಪ್ರತಿ ಇನಫಾರ್ಮೆಷನನ್ನು ಫಿಲ್ಟರ್ ಮಾಡಿ ಮೆದುಳಿನೊಳಗೆ ಬಿಟ್ಟುಕೊಳ್ಳಿ. ನಿಮ್ಮ ಮೆದುಳಿನೊಳಿಗೆ ಹೋಗುತ್ತಿರುವ ವಿಷಯ ನಿಮಗೆ ಪ್ರಯೋಜನಕ್ಕೆ ಬರುತ್ತದೆಯಾ ಎಂಬುದನ್ನು ನೋಡಿ. ಆಮೇಲೆ ಅದನ್ನು ಫೀಡ್ ಮಾಡಿಕೊಳ್ಳಿ. ಈಗಾಗಲೇ ಬೇಡದಿರುವುದನ್ನೆಲ್ಲ ತುಂಬಿಕೊಂಡು ನಿಮ್ಮ ತಲೆ ಕಸದ ತೊಟ್ಟಿಯಾಗಿದೆ. ಅದನ್ನೇ ಇನ್ನು ನೀವು ಕ್ಲಿಯನ್ ಮಾಡಿಲ್ಲ. ಹೀಗಿರುವಾಗ ಹೊಸ ಕಸ ಯಾಕೆ? ನಿಮ್ಮ ಮೆದುಳಲ್ಲಿರುವ ಈ ಕಸದಿಂದಾಗಿ ನೀವು ಅನಾವಶ್ಯಕ ನೋವುಗಳನ್ನು, ಸಮಸ್ಯೆಗಳನ್ನು, ದು:ಖವನ್ನು, ನಷ್ಟವನ್ನು, ಒಂಟಿತನವನ್ನು ಅನುಭವಿಸುತ್ತಿದ್ದೀರಿ.
ನೀವು ಫಿಲ್ಟರ್ ನೀರನ್ನು ಕುಡಿಯುತ್ತೀರಿ ಅಂದರೆ ನಿಮ್ಮ ಯೋಚನೆಗಳಿಗೆ ಫಿಲ್ಟರ್ ಯಾಕೆ ಬೇಡ? ಬರೀ ವಾತಾವರಣ ಅಷ್ಟೇ ಅಲ್ಲ, ಅನ್ನ ನೀರು ಗಾಳಿಯಷ್ಟೇ ಅಲ್ಲ. ನಮ್ಮ ಮನಸ್ಸು, ಮೆದುಳುಗಳು ಸಹ ಕಲುಷಿತವಾಗಿವೆ. Yes our thoughts are polluted. These should be cleaned. ನೀವು ನಿಮ್ಮ ಮೆದುಳಿಗೆ ಏನು ಫೀಡ್ ಮಾಡುತ್ತಿದ್ದೀರಿ ಎಂಬುದನ್ನು ನೋಡಿ. ನಿಮ್ಮ ಮೆದುಳಲ್ಲಿರುವ ಎಲ್ಲ ಯುಜಲೆಸ್ ಡಾಟಾವನ್ನು ಡಿಲೀಟ್ ಮಾಡಿ. ಒಳ್ಳೇ ಡಾಟಾವನ್ನು ಮಾತ್ರ ಸ್ಟೋರ್ ಮಾಡಿ. ಹೊಸ ಮಾಹಿತಿಯನ್ನು ಫೀಡ್ ಮಾಡಿಕೊಳ್ಳುವಾಗ ಫಿಲ್ಟರ್ ಮಾಡಿಕೊಂಡು ಆಮೇಲೆ ಫೀಡ್ ಮಾಡಿ.
ಸದ್ಯಕ್ಕೆ ನಿಮಗೆ ಮೈಂಡ್ ಡಯಟ ಎಂದರೇನು? ಅದರ ಪ್ರಾಮುಖ್ಯತೆ ಏನು? ಎಂಬುದು ಅರ್ಥವಾಗಿದೆ. ಆದರೆ "ಮೈಂಡ್ ಡಾಯಟನ್ನು ಮಾಡುವುದು ಹೇಗೆ?" ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು. ಸೋ ಅದಕ್ಕೆ ಕೆಲವು ಉಪಾಯಗಳು ಇಲ್ಲಿವೆ.
1) ಸಾಧ್ಯವಾದಷ್ಟು ಒಳ್ಳೆ ಬುಕ್ಸಗಳನ್ನು ಓದಿ. ಬುಕ್ಸ್ ಓದುವುದರಿಂದ ನಿಮ್ಮ ಮೆದುಳಿಗೆ ಎಕ್ಸರಸೈಜ ಆಗುತ್ತೆ.
2) FMಗಳಿಂದ ಅಂದರೆ ಫಿಟ್ಟಿಂಗ್ ಮಾಸ್ಟರಗಳಿಂದ ದೂರವಿರಿ. ಗಾಸಿಪ್ ಕ್ವೀನಗಳಿಂದ ಸಾಧ್ಯವಾದಷ್ಟು ದೂರವಿರಿ. ಯಾರ ಮನೆ ದೋಸೆಗೆ ತೂತು ಬಿದ್ರೆ ನಿಮಗೇನಂತೆ? ಯಾರ ಮನೆ ಬೆಕ್ಕು ಬಸರಾದ್ರೆ ನಿಮಗೇನಾಗಬೇಕಿದೆ? ಶಕುನಿ, ಮಂಥರೆಯಂಥ ರಾಂಗ್ ಅಡ್ವೈಜರಗಳಿಂದ ದೂರವಿರಿ.
3) TV ನೋಡುವುದನ್ನು, ನ್ಯೂಸ್ ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಮೂರ್ಖರು ಮಾತ್ರ ಟಿವಿ ನೋಡುತ್ತಾರೆ. ಸೋಸಿಯಲ್ ಮಿಡಿಯಾಗಳಲ್ಲಿ, ರಿಯಲ್ ಲೈಫಲ್ಲಿ ಮೂರ್ಖರಂತೆ ವರ್ತಿಸುವುದನ್ನು ನಿಲ್ಲಿಸಿ.
4) ನಿಮಗೆ ಯಾವುದೇ ಮಾಹಿತಿ ಬಂದರೂ ಅದನ್ನು ಫಿಲ್ಟರ್ ಮಾಡದೇ ನಿಮ್ಮ ಮೆದುಳಿಗೆ ಫೀಡ್ ಮಾಡಬೇಡಿ. ಏಕೆಂದರೆ ಎಲ್ಲೆಡೆಗೆ ಸುಳ್ಳು ಸುದ್ದಿಗಳ ಸಂತೆಯಿದೆ. ನಿಮ್ಮ ಮೆದುಳಿನೊಳಗೆ ನಿಮಗೆ ಯುಜಫುಲ್ಲಾಗಿರುವ ವಿಷಯಗಳನ್ನು ಮಾತ್ರ ಅಲೋ ಮಾಡಿ.
ಓಕೆ ಗೆಳೆಯರೇ, ಇದಿಷ್ಟು ಮೈಂಡ್ ಡಯಟ್. ಈಗಲೇ, ಈ ಕ್ಷಣದಿಂದಲೇ ಮೈಂಡ್ ಡಯಟ್ ಮಾಡಲು ಪ್ರಾರಂಭಿಸಿ. ನೆಗ್ಲೆಕ್ಟ ಮಾಡಿದರೆ ಖಂಡಿತ ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತೀರಿ. All the Best and Thanks You...