ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs in Kannada

ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

                       ಹಾಯ್ ಗೆಳೆಯರೇ, ಮೋಟಿವೆಷನಲ್ ವಿಡಿಯೋಗಳನ್ನು ನೋಡುವುದರಿಂದ ಬರೀ ಮೋಟಿವೆಷನ ಸಿಗುತ್ತದೆ. ಆದರೆ ನಿಮಗೆ ಕೆಲಸ ಸಿಗಲ್ಲ. I mean JOB ಸಿಗಲ್ಲ. ಜಾಬ್ ಸಿಗದಿದ್ರೆ ನಿಮಗೆ ಮದುವೆಯಾಗಲು ಯಾರು ಹೆಣ್ಣು ಕೊಡಲು ಮುಂದಾಗುವುದಿಲ್ಲ. ಆಗ ನೀವು ಮದುವೆಯಾಗುವ ಅವಸರದಲ್ಲಿ ಇಲ್ಲವೇ ಮನೆಯ ಪರಿಸ್ಥಿತಿಗೆ ಹೆದರಿ ಯೋಗ್ಯವಲ್ಲದ ಕೆಲಸ ಮಾಡುತ್ತೀರಿ.

ಉದಾಹರಣೆಗೆ ; PG, PhD ಮಾಡಿ ಪಿವ್ಯುನ ನೌಕರಿ ಮಾಡಲು ತಯಾರಾಗುತ್ತೀರಿ. ನಾನು ಜೋಕ ಮಾಡುತ್ತಿಲ್ಲ. ಇದು ರಿಯಾಲಿಟಿ. 10 ಲಕ್ಷ ಖರ್ಚು ಮಾಡಿ ಇಂಜಿನಿಯರಿಂಗ್ ಮಾಡಿ ಆನಂತರ 10 ಸಾವಿರಕ್ಕೆ MIDCಗಳಲ್ಲಿ ಕೆಲಸ ಮಾಡುವವರನ್ನು ನಾನು ನೋಡಿರುವೆ. MBA ಮಾಡಿ ಕ್ಲರ್ಕ್ ಕೆಲಸ ಮಾಡುತ್ತಿರುವವರನ್ನು ನಾನು ನೋಡಿರುವೆ.


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

            ದಿನಾಲು ನಮ್ಮ ಪುಣೆಗೆ ಕೆಲಸ ಹುಡುಕಿಕೊಂಡು ಸಾವಿರಾರು ಯುವಕ ಯುವತಿಯರು ಬರುತ್ತಾರೆ. In general ಆಗಿ ಉತ್ತರ ಕರ್ನಾಟಕದವರು ಅಂದರೆ ಬೆಳಗಾವಿ, ವಿಜಯಪುರ, ಗುಲ್ಬರ್ಗಾದವರು ಕೆಲಸ ಹುಡುಕಿಕೊಂಡು ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ಸಾತಾರಾ, ಪುಣೆ, ಮುಂಬೈ, ನಾಸಿಕ ನಗರಗಳಿಗೆ ಬರುತ್ತಾರೆ. ಹುಬ್ಬಳ್ಳಿಯಿಂದ ಕೆಳಗಿರುವವರು ಅಂದರೆ ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರು ಇತ್ಯಾದಿ ಜಿಲ್ಲೆಯವರು ಕೆಲಸ ಹುಡುಕಿಕೊಂಡು ಬೆಂಗಳೂರು ಇಲ್ಲವೆ ಹೈದರಾಬಾದ ನಗರಗಳಿಗೆ ಹೋಗುತ್ತಾರೆ. UP, ಬಿಹಾರ, MP, ಝಾರ್ಖಂಡ, ಛತ್ತಿಸಗರ, ರಾಜಸ್ತಾನದವರು ಗುಜರಾತಿನ ಅಹಮದಾಬಾದ, ಸೂರತ, ಗಾಂಧಿನಗರಗೆ ಮತ್ತು ಮಹಾರಾಷ್ಟ್ರದ ಪುಣೆ, ನಾಶಿಕ, ಮುಂಬೈ ನಗರಗಳಿಗೆ ಬರುತ್ತಾರೆ. ಪಂಜಾಬ್, ಹರ್ಯಾಣ, ಉತ್ತರಾಖಂಡದವರು ದೆಹಲಿಗೆ ಹೋಗುತ್ತಾರೆ. ಇನ್ನೂ ಯಾರ್ಯಾರೋ ಯಾವುದ್ಯಾವುದೋ ನಗರಗಳಿಗೆ ಹೋಗುತ್ತಾರೆ. ಆದರೆ ಅವರೆಲ್ಲರಿಗೂ ಕೆಲಸ ಸಿಗಲ್ಲ. ಎಷ್ಟೋ ಜನರಿಗೆ ಕೆಲಸ ಸಿಗುವುದಿಲ್ಲ, ಬಹಳಷ್ಟು ಜನರಿಗೆ ಸರಿಯಾದ ಕೆಲಸ ಸಿಗುವುದಿಲ್ಲ.


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs
                ಈ ಮುಂಚೆ ಹೇಳಿದಂತೆ PG, PhD ಮಾಡಿ ಪಿವ್ಯುನ ನೌಕರಿ ಮಾಡುತ್ತಾರೆ, ಇಂಜಿನಿಯರಿಂಗ್ ಮಾಡಿ MIDCಗಳಲ್ಲಿ ಕೆಲಸ ಮಾಡುತ್ತಾರೆ, MBA ಮಾಡಿ ಕ್ಲರ್ಕ್ ಆಗುತ್ತಾರೆ. ಪಿವ್ಯುನ ನೌಕರಿಗೆ PG, PhD, MSc ಬೇಕಿಲ್ಲ, ಕ್ಲರ್ಕ್ ಕೆಲ್ಸಕ್ಕೆ MBA ಬೇಕಿಲ್ಲ, MIDC ಕೆಲ್ಸಕ್ಕೆ ಇಂಜಿನಿಯರಿಂಗ್ ಬೇಕಿಲ್ಲ. ಆದರೂ ಇವರೆಲ್ಲ ತಮಗೆ ಯೋಗ್ಯವಲ್ಲದ ಕೆಲಸ ಮಾಡುತ್ತಾರೆ. ಯಾಕೆ ಇವರೆಲ್ಲ ತಮಗೆ ಯೋಗ್ಯವಲ್ಲದ, ತಮಗಿಷ್ಟವಿಲ್ಲದ ಕೆಲಸವನ್ನು ಮಾಡುತ್ತಿದ್ದಾರೆ? ಯಾಕೆ ಬಹಳಷ್ಟು ಜನರಿಗೆ ಕೆಲಸ ಸಿಗ್ತಿಲ್ಲ? ಎಂಬುದನ್ನು ಈ ಎಪಿಸೋಡನಲ್ಲಿ ನೋಡೋಣಾ. ಎಲ್ಲಿ ತನಕ ನಿಮಗೆ ಪ್ರಾಬ್ಲೆಮ್ಸಗಳ ಕಾರಣ ಗೊತ್ತಾಗುವುದಿಲ್ಲವೋ ಅಲ್ಲಿ ತನಕ ನಿಮಗೆ ಸೋಲುಷನ್ಸ ಸಿಗಲ್ಲ. ನಿಮಗೆ ಕೆಲಸ ಸಿಗದಿರುವುದಕ್ಕೆ ಕಾರಣಗಳು ಇಂತಿವೆ ;


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

1) ಬೇಜಾವಬ್ದಾರಿ ಸರ್ಕಾರಗಳು : Irresponsible Governments

             ನಿಮಗೆ ಜಾಬ್ ಎಂದಾಕ್ಷಣ ಥಟ್ಟನೆ ತಲೆಯಲ್ಲಿ ಬರುವುದೇ ಗವರ್ನಮೆಂಟ ಜಾಬ್. ಕೋಟ್ಯಾಂತರ ಜನ ಗವರ್ನಮೆಂಟ್ ಜಾಬಗಾಗಿ ಕಾಯುತ್ತಾ ಕುಳಿತ್ತಿದ್ದಾರೆ. ಹೀಗಾಗಿ ಕಾಂಪಿಟೇಷನ ಹೆಚ್ಚಿದೆ. ಸರ್ಕಾರಗಳು ಸರಿಯಾಗಿ ಕೆಲಸ ಮಾಡಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು. ನಾವು ಎಲೆಕ್ಷನ್‌ನಲ್ಲಿ ಮಾಡುವ ತಪ್ಪಿನಿಂದಾಗಿ ಮುಂದೆ ಪ್ರತಿ ಹೆಜ್ಜೆಯಲ್ಲಿಯೂ ತೊಂದರೆಯನ್ನು ಎದುರಿಸುತ್ತೇವೆ. ನಾವು ಒಳ್ಳೆ ವಿದ್ಯಾವಂತರನ್ನು ಗೆಲ್ಲಿಸಿ ಕಳುಹಿಸುವ ಬದಲು ಕ್ರಿಮಿನಲಗಳನ್ನು, ಅನಎಜುಕೇಟೆಡ ಮೂರ್ಖರನ್ನು, ಗೂಂಡಾಗಳನ್ನು, ಮತಾಂಧರನ್ನು ಆರಿಸಿ ಕಳುಹಿಸುತ್ತೇವೆ. ಇವರು ಕೆಲಸ ಮಾಡುವ ಬದಲು ಪ್ರತಿದಿನ ದೇಶದಲ್ಲಿ ಹೊಸಹೊಸ ಹಾವಳಿಗಳನ್ನು ಎಬ್ಬಿಸುತ್ತಾರೆಯೇ ಹೊರತು ನಮಗಾಗಿ ಹೊಸಹೊಸ ಕೆಲಸಗಳನ್ನು ಸೃಷ್ಟಿಸುವುದಿಲ್ಲ. ವ್ಯಾಕನ್ಸಿ ಇರುವ ಕೆಲಸಗಳನ್ನು ಭರ್ತಿ ಮಾಡುವುದಿಲ್ಲ. ವರ್ಷವರ್ಷಕ್ಕೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಅನುಮತಿ ಕೊಡುವುದಿಲ್ಲ. ಯುವಕರು ಎಕ್ಸಾಮ ಬರೆದು ಎರಡ್ಮೂರು ವರ್ಷವಾದರೂ ಅದರ ರಿಸಲ್ಟ ಬರಲ್ಲ. ಎಷ್ಟೋ ಸಂದರ್ಭಗಳಲ್ಲಿ ರಿಸಲ್ಟ ಬರುವುದಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಹೆಚ್ಚು ಹೆಚ್ಚು ಸರ್ಕಾರಿ ಕಂಪನಿಗಳನ್ನು, ಕಾರ್ಖಾನೆಗಳನ್ನು ತೆರೆದು ಎಲ್ಲರಿಗೂ ಕೆಲಸ ಕೊಡಬಹುದು. ಆದರೆ ಸರ್ಕಾರಗಳು ಅದನ್ನು ಮಾಡುವುದನ್ನು ಬಿಟ್ಟು ಏನೇನೋ ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡು ಇರುವ ಕೆಲಸಗಳನ್ನು ಕೊಲೆ ಮಾಡುತ್ತವೆ. ಇರೋ ಸರ್ಕಾರಿ ಕಂಪನಿಗಳನ್ನು ಮಾರಿ ಇರೋ ಕೆಲಸವನ್ನು ಕಿತ್ತುಕೊಳ್ಳುತ್ತವೆ. ಮಾಡಬೇಕಾದ, ಅವಶ್ಯಕವಿರುವ ಯಾವುದೇ ಕೆಲಸಗಳನ್ನು ಸರ್ಕಾರಗಳು ಬೇಗನೆ ಮಾಡಲ್ಲ. ಬೇಡದ ಕೆಲಸಗಳನ್ನು ಅರ್ಜೆಂಟಾಗಿ ಮಾಡುತ್ತವೆ. ಸೋ ಎಲ್ಲಿತನಕ ಕ್ರಿಮಿನಲಗಳಿಂದ ಕೂಡಿದ ಸರ್ಕಾರವಿರುತ್ತೋ ಅಲ್ಲಿ ತನಕ ನಿಮಗೆಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ. 


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

2) ಸ್ಕೀಲ ಹಾಗೂ ಶಿಕ್ಷಣದ ಕೊರತೆ : Lack of Education and Skills.

          ಸರ್ಕಾರಿ ಕೆಲಸ ಹಾಳಾಗೋದ್ರೇ ಹೋಗಲಿ ಪ್ರೈವೇಟ್ ಕೆಲಸಗಳನ್ನು ಮಾಡೋಣವೆಂದರೆ ಅಲ್ಲೂ ಹಲವಾರು ಚಾಲೆಂಜಸಗಳಿವೆ.

ಉದಾಹರಣೆಗಾಗಿ : ಸ್ಕಿಲ್ಸಗಳ ಕೊರತೆ, ಸರಿಯಾದ ಎಜುಕೇಶನಿನ ಕೊರತೆ. ನೀವು ಶಾಲೆಯಲ್ಲಿ ಕಲಿತದ್ದು ನಿಮ್ಮ ನಿಜಜೀವನದಲ್ಲಿ ಎಲ್ಲಿಯೂ ಪ್ರಯೋಜನಕ್ಕೆ ಬರುವುದಿಲ್ಲ. ಸದ್ಯಕ್ಕೆ ಕಾರ್ಪೊರೆಟ ಜಗತ್ತು ಡಿಜಿಟಲಿ ಅಪಡೇಟ ಆಗಿದೆ. ಆದರೆ ನಮ್ಮ ಎಜುಕೇಶನ್ ಸಿಸ್ಟಮ್ ಇನ್ನೂ ಹಳೇ ಯುಜಲೆಸ ವಿಷಯಗಳನ್ನು ಕಲಿಸುತ್ತಿದೆ. ನಮ್ಮ ಎಜುಕೇಶನ್ ಸಿಸ್ಟಮ್ ಇನ್ನೂ ಅಪ್ಡೇಟ್ ಆಗಿಲ್ಲ. ಕಂಪನಿಗಳಿಗೆ ಬೇಕಾದ ಕೌಶಲ್ಯಗಳನ್ನು ನಮ್ಮ ಎಜುಕೇಶನ್ ಸಿಸ್ಟಮ್ ಕಲಿಸುತ್ತಿಲ್ಲ. ಹೀಗಾಗಿ MBA, MSc, ಇಂಜಿನಿಯರಿಂಗ್ ಮಾಡಿದರೂ ಯುವಕರಿಗೆ ಕೆಲಸ ಸಿಗ್ತಿಲ್ಲ. ಏಕೆಂದರೆ ಇವರತ್ರ ಯಾವುದೇ ಸ್ಪೆಷಲ್ ಸ್ಕಿಲ್ಸಗಳಿಲ್ಲ. ಬರೀ ಡಿಗ್ರಿಗಳಿವೆ. ಇವರತ್ರ ಕೌಶಲ್ಯಗಳ ಕೊರತೆಯಿದೆ, ಜ್ಞಾನದ ಕೊರತೆಯಿದೆ. ಖಾಲಿ ಡಿಗ್ರಿಗಳಿಗೆ ಬೆಲೆಯಿಲ್ಲ. ಕೌಶಲ್ಯಗಳಿಗೆ ಬೆಲೆಯಿದೆ. ದೇಶದಲ್ಲಿ ವಿದ್ಯಾವಂತರ ಕೊರತೆಯಿಲ್ಲ, ಬುದ್ಧಿವಂತರ ಕೊರತೆಯಿದೆ.


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

3) ರಾಂಗ್ ಅಪ್ರೋಚ್ ವಿಥ ರಾಂಗ್ ಪೋರ್ಟಫೋಲಿಯೋ : Wrong approach with wrong portfolio.

           ಎಷ್ಟೋ ಜನ ಯುವಕರು ಕೆಲಸ ಹುಡುಕುವಾಗ ಈ ತಪ್ಪನ್ನು ಮಾಡುತ್ತಾರೆ. ಎಲ್ಲ ಕೆಲಸಗಳಿಗೆ ರಾಂಗ್ ಅಪ್ರೋಚ ಮಾಡುತ್ತಾರೆ. ಅವರಿಗೆ ಇಂಥದ್ದೇ ಕೆಲಸ ಮಾಡಬೇಕು ಎಂಬ ಗುರಿಯಿರುವುದಿಲ್ಲ. ಅವರಿಗೆ ಡ್ರೀಮ ಜಾಬ್ ಇರುವುದಿಲ್ಲ. ಹೀಗಾಗಿ ಅವರು ಕಣ್ಣಿಗೆ ಕಾಣುವ ಎಲ್ಲ ಕೆಲಸಗಳಿಗೆ Random ಆಗಿ ಅಪ್ಲಾಯ್ ಮಾಡುತ್ತಾರೆ. ಯಾವುದೋ ಏಜೆಂಟಗೆ ಕೆಲಸ ಕೊಡಿಸಲು ದುಡ್ಡು ಕೊಡುತ್ತಾರೆ. ತಮ್ಮ ಫ್ರೆಂಡ್ಸಗಳಿಗೆ ಕೆಲಸ ಹುಡುಕಲು ಹೇಳುತ್ತಾರೆ. ಆದರೆ ಇವರು ಸ್ವತಃ ತಮಗೆ ಬೇಕಾಗಿರುವ ಕೆಲಸವನ್ನು ಹುಡುಕುವುದಿಲ್ಲ. ತಮ್ಮ CVಯನ್ನು ತಾವು ತಯಾರಿಸಲ್ಲ. ಸರಿಯಾಗಿ ಪ್ರಿಪರೇಷನ ಮಾಡಲ್ಲ. ಬರೀ ದೇವರ ಪೂಜೆ ಮಾಡುತ್ತಾರೆ. ಕೆಲ್ಸಕ್ಕೆ ಬೇಕಾದ ಮೈಂಡಸೆಟ್ ಹಾಗೂ ಸ್ಕಿಲಸೆಟಗಳನ್ನು ಇವರು ಡೆವಲಪ ಮಾಡಿಕೊಳ್ಳಲ್ಲ. ಅಟ್ರ್ಯಾಕ್ಟಿವ ಪರ್ಸನಾಲಿಟಿ ಹಾಗೂ ಕಮ್ಯುನಿಕೆಷನ ಸ್ಕಿಲಗಳನ್ನು ಬೆಳೆಸಿಕೊಳ್ಳಲ್ಲ. ಪೋರ್ಟಫೋಲಿಯೋ ಬಿಲ್ಡ ಮಾಡಲ್ಲ, ನೆಟವರ್ಕ ಬೆಳೆಸಲ್ಲ. ಹೀಗಾಗಿ ಬಹಳಷ್ಟು ಜನರಿಗೆ ಬೇಗನೆ ಕೆಲಸ ಸಿಗಲ್ಲ.


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

4) ಈಗೋ : Ego

                 ಬಹಳಷ್ಟು ಜನ ಯುವಕರಿಗೆ ನಾನು ಕಲಿತಿರುವೆ ಎಂಬ ಈಗೋ ಇದೆ. ಒಣ ಅಹಂಕಾರವಿದೆ. ನಾನು ಬುದ್ಧಿವಂತ, ಸರ್ಕಾರಿ ಕೆಲಸ ನನ್ನನ್ನು ಹುಡುಕಿಕೊಂಡು ಬರುತ್ತೆ ಎಂಬ ಭ್ರಮೆಯಿದೆ. ಇವರಿಗೆ ತಮ್ಮ ಮೇಲೆ ನಂಬಿಕೆಯಿಲ್ಲ, ಲಕ್ ಮೇಲೆ ನಂಬಿಕೆಯಿದೆ. ಇವರು ಸ್ಟಡಿ ಮಾಡುವ ಬದಲು ಹೆಚ್ಚಿಗೆ ಪೂಜೆ ಮಾಡುತ್ತಾರೆ, ಕಂಡಕಂಡ ಸ್ವಾಮಿಜಿಗಳತ್ರ ಬೇಡಿಕೊಳ್ಳುತ್ತಾರೆ. ಇವರು ಹೆಚ್ಚಿಗೆ ಸ್ಟಡಿ ಮಾಡಲು ತಯಾರಿರಲ್ಲ. ಆದರೆ ಇವರು ಹಾಯ್ ಸ್ಯಾಲರಿಯನ್ನು ಎಕ್ಸಪೆಕ್ಟ ಮಾಡುತ್ತಾರೆ. ವಿದ್ಯೆಯ ಅಹಂಕಾರ ಇರೋ ಇಂಥ ಯುವಕರು ಒಂದು ಬ್ಯಾಡ ಆ್ಯಟಿಟುಡನ್ನು ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಇವರಿಗೆ ಮನೆಯಲ್ಲಿ, ಊರಲ್ಲಿ ಕೆಲಸ ಮಾಡಲು ನಾಚಿಕೆ ಬರುತ್ತದೆ. ಅದಕ್ಕಾಗಿ ಇವರು ಸರಿಯಾಗಿ ಕೆಲಸ ಹುಡುಕುವುದಿಲ್ಲ. ಯಾವಾಗಲೂ ಸೋಸಿಯಲ್ ಮೀಡಿಯಾಗಳಲ್ಲಿ ಟೈಮವೆಸ್ಟ ಮಾಡುತ್ತಾ ಬಿದ್ದಿರುತ್ತಾರೆ. ಎರಡೆರಡು ಫೇಕ್ ಫೇಸ್ಬುಕ್ ಅಕೌಂಟಗಳನ್ನು ಮಾಡುತ್ತಾರೆ, ಆದರೆ ತಪ್ಪಿಯೂ LinkedIn ಅಕೌಂಟ್ ಮಾಡುವುದಿಲ್ಲ. ಯುಟ್ಯೂಬನಲ್ಲಿ ಎಜುಕೇಶನಲ ವಿಡಿಯೋಗಳನ್ನು ನೋಡುವುದಿಲ್ಲ. ಈಗೋ ಹಾಗೂ ಮೂರ್ಖತನದಿಂದಾಗಿ ಇವರಿಗೆ ಕೆಲಸ ಸಿಗುವುದಿಲ್ಲ.


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs

                            ಗೆಳೆಯರೇ, ಇವಿಷ್ಟು ಕಾರಣಗಳಿಂದ ನಿಮಗೆ ಕೆಲಸ ಸಿಗುತ್ತಿಲ್ಲ.  ನೀವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಸರಿಯಾಗಿ ಟ್ರಾಯ ಮಾಡಿ, ನಿಮಗೆ ಕೆಲಸ ಸಿಕ್ಕೆ ಸಿಗುತ್ತದೆ. ಅಷ್ಟಾದರೂ ನಿಮಗೆ ಕೆಲಸ ಸಿಗದಿದ್ದರೆ ನಿಮ್ಮನ್ನು ನೀವು ಕೇಳಿಕೊಳ್ಳಿ, ನಿಮಗೆ ಯಾಕೆ ಕೆಲಸ ಸಿಗ್ತಿಲ್ಲ ಎಂಬುದಕ್ಕೆ ಅಸಲಿ ಕಾರಣ ಗೊತ್ತಾಗುತ್ತದೆ. Well, ಮುಂದಿನ ಎಪಿಸೋಡನಲ್ಲಿ ಬೇಗನೆ ಕೆಲಸ ಸಿಗಬೇಕೆಂದರೆ ಯಾವ ಸ್ಕಿಲಗಳನ್ನು ಬೆಳೆಸಿಕೊಳ್ಳಬೇಕು, ಹೇಗೆ ಕೆಲಸವನ್ನು ಹುಡುಕಬೇಕು ಎಂಬುದರ ಬಗ್ಗೆ ನೋಡೊಣಾ. All the best and thanks you.


ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs




Blogger ನಿಂದ ಸಾಮರ್ಥ್ಯಹೊಂದಿದೆ.