ಬಯಸಿದ್ದೆಲ್ಲವನ್ನು ಪಡೆದುಕೊಳ್ಳುವುದಕ್ಕೆ ಗೋಲ್ಡನ ಫಾರ್ಮುಲಾ : "ನಾನು"ಗೆ ಕೇಳಿ - Ask Yourself - Kannada Motivational Article
ಹಾಯ್ ಗೆಳೆಯರೇ, ನೀವು ಬಯಸಿದ್ದೆಲ್ಲವನ್ನು ಪಡೆದುಕೊಳ್ಳುವುದಕ್ಕೆ ಒಂದು ಗೋಲ್ಡನ ಫಾರ್ಮುಲಾ ಇದೆ. ಈ ಸೂತ್ರದಿಂದ ನೀವು ಬಯಸಿದ್ದೆಲ್ಲವನ್ನು ನೀವು ಪಡೆದುಕೊಳ್ಳಬಹುದು. ಇದರಿಂದ ನೀವು ಏನು ಬೇಕಾದರೂ ಪಡೆದುಕೊಳ್ಳಬಹುದು. ಆ ಸೂತ್ರ ಏನಪ್ಪ ಅಂದ್ರೆ Ask Yourself. Yes Ask Yourself ಅಂದರೆ ನಿಮ್ಮನ್ನು ನೀವು ಕೇಳಿ. ನಿಮ್ಮೊಳಗೊಬ್ಬ ನಾನು ಇದ್ದಾನೆ. ಅವನನ್ನು ಕೇಳಿ, ಅವನಿಗೆ ಆರ್ಡರ್ ಮಾಡಿ, ನೀವು ಬಯಸಿದ್ದೆಲ್ಲವು ನಿಮಗೆ ಸಿಗುತ್ತದೆ. There is one "I'' inside you. Ask him and order him. Then you will get whatever you want.
ನಿಮಗೆ ಬೇಕಾಗಿರುವುದನ್ನು ಬೇರೆಯವರಿಗೆ ಕೇಳಬೇಡಿ, ಬೇರೆಯವರತ್ರ ಕೈ ಚಾಚಬೇಡಿ. ಏಕೆಂದರೆ ನಿಮಗೆ ಬೇಕಾಗಿರುವುದನ್ನೆಲ್ಲ ಕೊಡಲು ಯಾರು ಇಲ್ಲಿ ಖಾಲಿ ಕುಂತಿಲ್ಲ. ಆದ್ದರಿಂದ ಬೇರೆಯವರ ಬಳಿ ನಿಮಗೆ ಬೇಕಾಗಿರುವುದನ್ನೆಲ್ಲ ಕೇಳಿ ಅವಮಾನಿತರಾಗಬೇಡಿ. ನಿಮ್ಮ ಸಮಸ್ಯೆಗಳ ಪರಿಹಾರವನ್ನು ನಿಮಗೆ ನೀವೇ ಕೇಳಿಕೊಳ್ಳಿ. ಕಷ್ಟ ಬಂದಾಗ, ನೋವಾದಾಗ ಒಂದ್ಸಲ ನಿಮ್ಮೊಂದಿಗೆ ನೀವು ಮಾತನಾಡಿ. ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ಎಲ್ಲ ಸಮಸ್ಯೆಗಳ ಪರಿಹಾರ ನಿಮ್ಮತ್ರಾನೆ ಇದೆ. ನಿಮಗೆ ಬೇಕಾಗಿರುವುದನ್ನೆಲ್ಲ ಪಡೆದುಕೊಳ್ಳುವ ಸಾಮರ್ಥ್ಯ ನಿಮ್ಮತ್ರಾನೆ ಇದೆ. ನಿಮ್ಮ ಬಗ್ಗೆ ಸದಾ ಕಾಲ ಯೋಚಿಸುವ ಒಬ್ಬ ವ್ಯಕ್ತಿ ಇದ್ದಾನೆ. ಅದು ನಿಮ್ಮೊಳಗಿನ ನೀವು. ಅವನನ್ನು ಕೇಳಿ. ಅವನಿಗೆ ಬಯಸಿದ್ದೆಲ್ಲವನ್ನು ಪಡೆದುಕೊಳ್ಳುವ ಶಕ್ತಿಯಿದೆ.
ನಿಮಗೆ ಫಿಟ್ ಆ್ಯಂಡ್ ಆ್ಯಕ್ಟಿವ ಬಾಡಿ ಬೇಕಾದರೆ ನಿಮ್ಮೊಳಗಿನ "ನಾನು"ಗೆ ಕೇಳಿ, ಆತನಿಗೆ ಆರ್ಡರ್ ಮಾಡಿ. ಆತ ಎಕ್ಸರಸೈಜ ಮಾಡುತ್ತಾನೆ, ನಿಮಗೆ ಫಿಟ್ ಆ್ಯಂಡ್ ಆ್ಯಕ್ಟಿವ್ ಬಾಡಿ ಸಿಗುತ್ತದೆ.
ನಿಮಗೆ ಕಾರ ಬೇಕಿದ್ದರೆ, ಹಣ ಬೇಕಿದ್ದರೆ, ಅಪಾರ ಐಶ್ವರ್ಯ ಬೇಕಿದ್ದರೆ, ರಾಯಲ್ ಲೈಫ ಬೇಕಿದ್ದರೆ ನಿಮ್ಮೊಳಗಿನ "ನಾನು"ಗೆ ಕೇಳಿ, ಅವನಿಗೆ ಆರ್ಡರ್ ಮಾಡಿ. ಅವನು ಕೆಲಸ ಮಾಡುತ್ತಾನೆ. ನಿಮಗೆ ಬೇಕಾಗಿರುವುದು ನಿಮಗೆ ಸಿಗುತ್ತದೆ.
ನಿಮಗೆ ಏನೇ ಬೇಕಿದ್ದರೂ ಬೇರೆಯವರಿಗೆ ಕೇಳಬೇಡಿ, ಬೇರೆಯವರತ್ರ ಕೈಚಾಚಬೇಡಿ. ನಿಮ್ಮೊಳಗಿನ "ನಾನು"ವಿಗೆ ಕೇಳಿ. ನನಗೆ ಏನೇ ಬೇಕಾದರೂ ಮೊದಲು ನಾನು ನನ್ನೊಳಗಿನ "ನಾನು"ವಿಗೆ ಕೇಳುತ್ತೇನೆ. ಅವನಿಗೆ ಆರ್ಡರ್ ಮಾಡಿ ಪಡೆದುಕೊಳ್ಳುತ್ತೇನೆ.
ನಿಮಗೆ ಬೇಕಿರುವುದನ್ನು ಬೇರೆಯವರತ್ರ ಕೇಳುವುದನ್ನು ನಿಲ್ಲಿಸಿ. ದಿನಾಲು ದೇವರ ಬಳಿ ಅದು ಕೊಡು, ಇದು ಕೊಡು, ಕೆಲಸ ಮಾಡದೆ ಸಂಪತ್ತನ್ನು ಕೊಡು, ಸರ್ಕಾರಿ ನೌಕರಿ ಕೊಡು, ಸುಂದರವಾದ ಹುಡುಗಿಯೊಂದಿಗೆ ಮದುವೆ ಮಾಡಿಸು, ಶ್ರೀಮಂತ ಗಂಡನನ್ನು ಕೊಡು ಎಂದೆಲ್ಲ ಭಿಕ್ಷೆ ಬೇಡುವುದನ್ನು ನಿಲ್ಲಿಸಿ. Stop begging at God. ದೇವರತ್ರ ಭಿಕ್ಷೆ ಬೇಡುವುದನ್ನು ನಿಲ್ಲಿಸಿ. ನಿಮಗೇನು ಬೇಕೋ ಅದನ್ನು ಕಷ್ಟಪಟ್ಟು ಕೆಲಸ ಮಾಡಿ ಪಡೆದುಕೊಳ್ಳಿ. ನೀವು ಕೆಲಸ ಮಾಡಿದಾಗಲೇ ನಿಮಗೆ ಫಲ ಸಿಗೋದು. ಸ್ವತಃ ಪರಮಾತ್ಮ ಶ್ರೀಕೃಷ್ಣನೇ ಸಾರಥಿಯಾಗಿ ಜೊತೆಗಿದ್ದರೂ ಅರ್ಜುನನಿಗೆ ಯುದ್ಧ ಮಾಡಲೇಬೇಕಾಯಿತು, ಅಂದರೆ ಅವನ ಕೆಲಸವನ್ನು ಅವನಿಗೇನೆ ಮಾಡಬೇಕಾಯಿತು. ಸೋ ನಿಮ್ಮ ಗುರು, ನೀವು ನಂಬಿರೋ ದೇವರು, ನಿಮ್ಮ ಲಕ್ ಎಲ್ಲ ನಿಮ್ಮ ಜೊತೆಯಲ್ಲಿದ್ದರೂ ನೀವು ನಿಮ್ಮ ಕೆಲಸವನ್ನು ಮಾಡಲೇಬೇಕು. ಕೆಲಸ ಮಾಡಿದರೇನೆ ಫಲ. ಇಲ್ದಿದ್ರೆ ಏನು ಇಲ್ಲ. ಆದ್ದರಿಂದ ಬೇರೆಯವರ ಬಳಿ ಕೈಚಾಚುವುದನ್ನು ಬಿಟ್ಟು ಬಿಡಿ. ದೇವರತ್ರ ಭಿಕ್ಷೆ ಬೇಡುವುದನ್ನು ನಿಲ್ಲಿಸಿ. ನಿಮಗೇನು ಬೇಕೋ ಅದನ್ನು ನೀವೇ ಕೆಲಸ ಮಾಡಿ ಪಡೆದುಕೊಳ್ಳಿ. Ask yourself, work for it and get it. ಆಲ್ ದ ಬೆಸ್ಟ ಆ್ಯಂಡ್ ಥ್ಯಾಂಕ್ಸ್...