ಗುರಿ ಮತ್ತು ಗುರು - Goal and Guru - Goal Setting Tips in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗುರಿ ಮತ್ತು ಗುರು - Goal and Guru - Goal Setting Tips in Kannada

ಗುರಿ ಮತ್ತು ಗುರು - Goal and Guru - Goal Setting Tips in Kannada

                                      ಹಾಯ್ ಗೆಳೆಯರೇ, ಯಾವತ್ತಾದ್ರೂ ನೀವು ನಿಮ್ಮ ಬದುಕು ಯಾಕೆ ಅಸ್ತವ್ಯಸ್ತವಾಗಿದೆ ಎಂದು ಯೋಚಿಸಿದ್ದೀರಾ?. ಯಾಕೆ ನಿಮಗೆ ಕಾರಣವಿಲ್ಲದೆ ದು:ಖವಾಗುತ್ತದೆ, ಕಾರಣವಿಲ್ಲದೆ ಕೋಪ ಬರುತ್ತದೆ, ಕಾರಣವಿಲ್ಲದೆ ಏನೇನೋ ಕಲ್ಪನೆಗಳು, ವಿಚಾರಗಳು ಯಾಕೆ ನಿಮ್ಮ ತಲೆಯಲ್ಲಿ ಬರುತ್ತವೆ ಅಂತಾ ಯೋಚನೆ ಮಾಡಿದ್ದೀರಾ? ಯಾಕೆ ನೀವು ಅನಾವಶ್ಯಕವಾಗಿ ಬೇರೆಯವರ ಬಗ್ಗೆ ಯೋಚಿಸುತ್ತಿದ್ದೀರಿ, ಮಾತನಾಡುತ್ತಿದ್ದೀರಿ, ಯಾವಾಗಲೂ ಆಲಸ್ಯದಲ್ಲಿರುತ್ತೀರಿ, ಡಲ್ಲಾಗಿರುತ್ತೀರಿ ಎಂದು ಯೋಚಿಸಿದ್ದಾರಾ? ಒಂದು ವೇಳೆ ಇವೆಲ್ಲ ಪ್ರಶ್ನೆಗಳ ಬಗ್ಗೆ ಯೋಚಿಸಿದ್ದರೆ ನೀವಿನ್ನೂ ಬೌದ್ಧಿಕವಾಗಿ ದಿವಾಳಿಯಾಗಿಲ್ಲ ಎಂದರ್ಥ. ಗೆಳೆಯರೇ, ನಿಮ್ಮ ಅಸ್ತವ್ಯಸ್ತ ಜೀವನಕ್ಕೆ, ಕಾರಣವಿಲ್ಲದ ಕೋಪಕ್ಕೆ, ದು:ಖಕ್ಕೆ, ಆಲಸ್ಯಕ್ಕೆ ಗುರಿ ಮತ್ತು ಗುರುವಿನ ಕೊರತೆಯೇ ಮುಖ್ಯ ಕಾರಣ. Lack of Goal and Guru is the main reason for your sad and disordered life.

ಗುರಿ ಮತ್ತು ಗುರು - Goal and Guru - Goal Setting Tips in Kannada

                                ನಿಮ್ಮ ಬಳಿ ಗುರಿ ಮತ್ತು ಗುರು ಇದ್ದರೆ ನಿಮ್ಮ ಬದುಕು ಸುವ್ಯವಸ್ಥಿತವಾಗಿರುತ್ತದೆ. ಉದಾಹರಣೆಗಾಗಿ; ಸಾಮಾನ್ಯವಾಗಿ ನೀವು ದಿನಾಲು ಬೇಗನೆ ಎದ್ದೇಳುವುದಿಲ್ಲ. ಆದರೆ ನೀವು ಎಲ್ಲಿಗಾದರೂ ಪ್ರವಾಸಕ್ಕೆ ಹೋಗುವವರಿದ್ದರೆ ಎಷ್ಟೊಂದು ಉತ್ಸುಕತೆಯಿಂದ ಬೇಗನೆ ಎದ್ದೇಳುತ್ತೀರಿ ತಾನೇ? ಗುರಿಯಿದ್ದರೆ ನೀವು ಡಿಸಿಪ್ಲೆನ್ಡ್ ಆಗಿರುತ್ತೀರಿ, ಗುರಿ ಇದ್ದರೆ ನಿಮ್ಮ ಲೈಫ್ ಡಿಸಿಪ್ಲೆನ್ಡ್ ಆಗಿರುತ್ತದೆ. ನಿಮಗೆ ಯಾವುದೇ ಗುರಿಗಳಿಲ್ಲದಿದ್ದರೆ, ಕನಸುಗಳಿಲ್ಲದಿದ್ದರೆ ನೀವು ವ್ಯರ್ಥ ಜೀವನ ಸಾಗಿಸುತ್ತಿದ್ದೀರಿ ಎಂದರ್ಥ. ನಿಮ್ಮ ಬಳಿ ಗುರಿಗಳಿಲ್ಲದಿದ್ದರೆ, ಕನಸುಗಳಿಲ್ಲದಿದ್ದರೆ ನೀವು ಬೇರೆಯವರ ಕನಸುಗಳ ನನಸಿಗಾಗಿ ಬಳಕೆಯಾಗುತ್ತೀರಿ. ನೀವು ನಿಮಗಾಗಿ ಕೆಲಸ ಮಾಡದಿದ್ದರೆ ಬೇರೆಯವರು ನಿಮ್ಮನ್ನು ಅವರ ಕೆಲಸಕ್ಕೆ ಪುಕ್ಸಟ್ಟೆಯಾಗಿ ಬಳಸಿಕೊಳ್ಳುತ್ತಾರೆ.

ಗುರಿ ಮತ್ತು ಗುರು - Goal and Guru - Goal Setting Tips in Kannada

                  ನನಗೆ ನನ್ನದೇ ಆದ ಒಂದು ಗುರಿಯಿದೆ. ನನಗೆ ನನ್ನ ಕಂಪನಿಯನ್ನು ಜಗತ್ತಿನ ಅತಿ ದೊಡ್ಡ ವಿಡಿಯೋ ಪ್ರೊಡಕ್ಷನ ಕಂಪನಿಯನ್ನಾಗಿಸುವ ಗುರಿಯಿದೆ. ಹೀಗಾಗಿ ನಾನು ನನ್ನ ಸಮಯವನ್ನು ಯಾವುದೇ ಕಾರಣಕ್ಕೂ ಹಾಳು ಮಾಡುವುದಿಲ್ಲ, ಗೊಳ್ಳು ಗೆಳೆಯರೊಂದಿಗೆ ಊರುರು ಸುತ್ತುವುದಿಲ್ಲ, ವೀಕೆಂಡ ಪಾರ್ಟಿಯಂತ ಯಾವುದೇ ಬಾರಲ್ಲಿ ಬೀಳುವುದಿಲ್ಲ, ಚಿಲ್ಲರೆ ವ್ಯಕ್ತಿಗಳೊಂದಿಗೆ ಚಿಲ್ಲರೆ ವಿಷಯಗಳಿಗಾಗಿ ವಾದ ಮಾಡುವುದಿಲ್ಲ, ನನಗೆ ಸಂಬಂಧಪಡದ ವಿಷಯಗಳಲ್ಲಿ ತಲೆ ಹಾಕಲ್ಲ. ಗುರಿಯಿರುವುದರಿಂದಲೇ ನಾನು ನನ್ನ ಲೈಫಲ್ಲಿ ದುಷ್ಟ ವ್ಯಕ್ತಿಗಳ, ದುಶ್ಚಟಗಳ ಸಹವಾಸವಿಲ್ಲದೇ ಸಂತೋಷವಾಗಿರುವೆ. ನನ್ನ ಗುರಿ ನನ್ನನ್ನು ದಾರಿ ತಪ್ಪದಂತೆ ತಡೆ ಹಿಡಿದಿದೆ. ನನಗೆ ಗುರಿಯಿರುವುದರಿಂದಲೇ ನಾನು ದಿನಾಲು ಸುರ್ಯೋದಯಕ್ಕಿಂತ ಮುಂಚೆ ಎದ್ದೇಳುತ್ತಿರುವೆ, ಜಗತ್ತು ಮಲಗಿ ಮಧ್ಯರಾತ್ರಿಯಾದರೂ ಕೆಲಸ ಮಾಡುತ್ತಿರುವೆ.

ಗುರಿ ಮತ್ತು ಗುರು - Goal and Guru - Goal Setting Tips in Kannada

                               ನೀವು ಸಹ ಒಂದು ದೊಡ್ಡ ಗುರಿ ಇಟ್ಟುಕೊಳ್ಳಿ. ಆ ಗುರಿ ನಿಮ್ಮನ್ನು ದಾರಿ ತಪ್ಪದಂತೆ ನೋಡಿಕೊಳ್ಳುತ್ತದೆ. ನಿಮ್ಮ ಗುರಿ ದೊಡ್ಡದಾಗಿದ್ದರೆ ನೀವು ಆಲಸ್ಯ ಬಿಟ್ಟು ದುಡಿಯುತ್ತಿರಿ, ಬೇರೆಯವರ ಬಗ್ಗೆ ಮಾತನಾಡಿ ಟೈಮವೇಸ್ಟ ಮಾಡುವುದನ್ನು ನಿಲ್ಲಿಸುತ್ತಿರಿ, ಬೇರೆಯವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತಿರಿ, ದುಶ್ಚಟಗಳಿಂದ ದೂರ ಉಳಿಯುತ್ತೀರಿ, ಸಣ್ಣಪುಟ್ಟ ಜಗಳಗಳಿಂದ, ಜಲಸಿಯಿಂದ ದೂರ ಉಳಿಯುತ್ತೀರಿ. ಜೀವನಪೂರ್ತಿ ಸುಖ ಸಂಪತ್ತಿನೊಂದಿಗೆ ಸಂತೋಷದಿಂದ ಇರುತ್ತೀರಿ. ಆದ್ದರಿಂದ ಒಂದು ಮಹಾನ ಗುರಿಯನ್ನು ಇಟ್ಟುಕೊಳ್ಳಿ. 

ಗುರಿ ಮತ್ತು ಗುರು - Goal and Guru - Goal Setting Tips in Kannada

                    ಮಹಾನ ಗುರಿಯೊಂದಿಗೆ ಒಬ್ಬ ಮಹಾನ ಗುರು ಇದ್ರೆ ಉತ್ತಮ. ಆದರೆ ನನಗೆ ಇಲ್ಲಿ ತನಕ ಸರಿಯಾದ ಗುರು ಸಿಕ್ಕಿಲ್ಲ. ಕಾಟಾಚಾರಕ್ಕೆ ಎಬಿಸಿಡಿ ಕಲಿಸಿ ಅರ್ಧಕ್ಕೆ ಕೈಬಿಟ್ಟವರನ್ನೆಲ್ಲ ಗುರು ಅಂತಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗುರು ಇಲ್ಲದಿದ್ದರೂ ಪರವಾಗಿಲ್ಲ, ನೋ ಪ್ರಾಬ್ಲಮ್. ಆ್ಯಟಲಿಸ್ಟ ಒಂದು ದೊಡ್ಡ ಗುರಿಯನ್ನಾದರೂ ಇಟ್ಟುಕೊಳ್ಳಿ. ಅದೇ ನಿಮಗೆ ಗುರುವಾಗುತ್ತದೆ. ನಿಮ್ಮನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ. ಆಲ್ ದ ಬೆಸ್ಟ ಆ್ಯಂಡ್ ಥ್ಯಾಂಕ್ಸ್ ಯು...

ಗುರಿ ಮತ್ತು ಗುರು - Goal and Guru - Goal Setting Tips in Kannada
Blogger ನಿಂದ ಸಾಮರ್ಥ್ಯಹೊಂದಿದೆ.