ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

                           ಬಹಳ ದಿನಗಳಿಂದ ಎಲ್ಲರಿಂದ ಒಂದು ಕಾಮನ ಪ್ರಶ್ನೆ ಬರ್ತಿದೆ. ಅದೇನೆಂದರೆ Law of Attraction ನಿಜಾನಾ? ಅಂತಾ. ನಿಜವಾಗಿಯೂ Law of Attraction ಕೆಲಸ ಮಾಡುತ್ತಾ ಅಂತಾ?. ಸೋ ಬನ್ನಿ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ Law of Attractionನ ನೈಜತೆಯನ್ನು ತಿಳಿದುಕೊಳ್ಳೋಣ. 

      ಮೊದಲು ಈ ಲಾ ಆಫ್ ಅಟ್ರ್ಯಾಕ್ಷನ ಅಂದ್ರೆ ಏನು ಅಂತಾ ನೋಡೋಣಾ. ಈ ಲಾ ಆಫ್ ಅಟ್ರ್ಯಾಕ್ಷನ ಏನ ಹೇಳುತ್ತೆ ಅಂದ್ರೆ ನಿಮಗೇನು ಬೇಕೋ ಅದು ನಿಮಗೆ ಸಿಕ್ಕಿದೆ ಅಂತಾ ಅಂದುಕೊಳ್ಳಿ. ಆಮೇಲೆ ಅದು ನಿಮಗೆ ತಂತಾನೇ ಸಿಗುತ್ತೆ. ನಿಮಗೆ ಬೇಕಾಗಿರುವ ವಸ್ತು ಅಥವಾ ವ್ಯಕ್ತಿ ನಿಮಗೆ ಸಿಕ್ಕಿದ್ದಾರೆ ಎಂದುಕೊಳ್ಳಿ, ಅವರು ನಿಮಗೆ ಸಿಕ್ಕಂತೆ ಇಮ್ಯಾಜಿನೇಷನ ಮಾಡಿ, ನಿಮಗವರು ಸಿಗುತ್ತಾರೆ. ಒಟ್ಟಲ್ಲಿ ಲಾ ಆಫ್ ಅಟ್ರ್ಯಾಕ್ಷನ ಹೇಳೋದಿಷ್ಟೆ ನಿಮಗೆ ಬೇಕಾಗಿರುವುದು ಈಗಾಗಲೇ ನಿಮಗೆ ಸಿಕ್ಕಿದೆ ಅಂದುಕೊಳ್ಳಿ, ಅದನ್ನು ಇಮ್ಯಾಜಿನ್ ಮಾಡಿ. ಅದನ್ನು ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಮೂಲಕ ಅಟ್ರ್ಯಾಕ್ಟ ಮಾಡಿ ಅಂತಷ್ಟೇ. 

ಉದಾಹರಣೆಗೆ : ನಿಮಗೆ ಕಾರ ಬೇಕಿದ್ದರೆ, ಈಗಾಗಲೇ ನಿಮಗೆ ಕಾರ ಸಿಕ್ಕಿದೆ ಅಂತಾ ಅಂದುಕೊಳ್ಳುವುದು, ಕಾರ ಬಗ್ಗೆ ಹಗಲು ರಾತ್ರಿ ಇಮ್ಯಾಜಿನೇಷನ ಮಾಡುವುದು, ಕಾರ ಫೋಟೋ ಪ್ರಿಂಟ್ ಮಾಡಿ ಬೆಡರೂಮಲ್ಲಿ ಅಂಟಿಸೋದು ಇತ್ಯಾದಿ. ಇದು ಲಾ ಆಫ್ ಅಟ್ರ್ಯಾಕ್ಷನ. ಇದು ಸುಳ್ಳು ಅಂತಾ ಕೆಲವರು ವಾದಿಸುತ್ತಾರೆ, ಇನ್ನು ಕೆಲವರು ಲಾ ಆಫ್ ಅಟ್ರ್ಯಾಕ್ಷನ ನಿಜ, ನನಗೆ ಅದು ಸಿಕ್ಕಿದೆ, ಇದು ಸಿಕ್ಕಿದೆ ಅಂತಾ ಬುರುಡೆ ಬಿಡುತ್ತಾರೆ. ಮೋಟಿವೇಷನಲ್ ಕಥೆಗಳನ್ನು ಹೇಳುತ್ತಾರೆ. 

ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

            ತುಂಬಾ ಜನ ಯುವಕರಿಗೆ ಈ ಲಾ ಆಫ್ ಅಟ್ರ್ಯಾಕ್ಷನ ನಿಜವಾಗಿಯೂ ವರ್ಕೌಟ್ ಆಗುತ್ತಾ ಎಂಬ ಅನುಮಾನವಿದೆ. ಕಾಲೇಜಿನಲ್ಲಿರುವಾಗ ನನಗೂ ಈ ಅನುಮಾನವಿತ್ತು. ಈಗ ಅದು ಕ್ಲಿಯರ್ ಆಗಿದೆ. ಲಾ ಆಫ್ ಅಟ್ರ್ಯಾಕ್ಷನ ಬಗ್ಗೆ ಹಿಂದಿನಿಂದಲೂ ಬಹಳಷ್ಟು ವಾದವಿವಾದಗಳಿವೆ. ಆದರೆ 2006ರಲ್ಲಿ ಬಿಡುಗಡೆಯಾದ ''ದಿ ಸೀಕ್ರೆಟ್'' ಅನ್ನೋ ಸಿನಿಮಾದಿಂದ ಈ ಲಾ ಆಫ್ ಅಟ್ರ್ಯಾಕ್ಷನಗೆ ಹೆಚ್ಚಿನ ಪಾಪ್ಯುಲಾರಿಟಿ ಸಿಕ್ಕಿತು. ಮುಂದೆ ''ದಿ ಸೀಕ್ರೆಟ್'' ಎಂಬ ಹೆಸರಿನಿಂದ ಒಂದು ಪುಸ್ತಕವೂ ಬಿಡುಗಡೆಯಾಗಿ ಲಾ ಆಫ್ ಅಟ್ರ್ಯಾಕ್ಷನನ ಜನಪ್ರಿಯತೆಯನ್ನು ಹೆಚ್ಚಿಸಿತು. ಈಗ ಈ ಲಾ ಆಫ್ ಅಟ್ರ್ಯಾಕ್ಷನ ಬಹಳಷ್ಟು ನಕಲಿ ಮೋಟಿವೇಷನಲ್ ಸ್ಪೀಕರಗಳಿಗೆ, ನಕಲಿ ಬಾಬಾಗಳಿಗೆ ಮೂಲ ಬಂಡವಾಳವಾಗಿದೆ. ಏಕೆಂದರೆ ನಮ್ಮ ಜನ ಬಹಳಷ್ಟು ಲಾಜಿಕಲ್ಲಾಗಿ ಯೋಚಿಸಲ್ಲ. ಲಾ ಆಫ್ ಅಟ್ರ್ಯಾಕ್ಷನ ಎಲ್ಲರ ವಿಷಯದಲ್ಲಿ ನಿಜವಾಗಲ್ಲ. ಅದು ಜಸ್ಟ ಕೋ ಇನ್ಸಿಡೆಂಟ ಅಷ್ಟೇ. ಅದು ರಿಯಾಲಿಟಿಯಲ್ಲಿ ಕೆಲಸ ಮಾಡುತ್ತೆ ಅನ್ನೋದಕ್ಕೆ ಯಾವುದೇ ಆಧಾರಗಳಿಲ್ಲ. 

               ನನ್ನ ಪ್ರಕಾರ ಲಾ ಆಫ್ ಅಟ್ರ್ಯಾಕ್ಷನನ್ನು ನಂಬಿಕೊಂಡು ಕೆಲಸ ಮಾಡದೇ ಸುಮ್ಮನಿರುವುದು ನಮಗೆ ನಾವೇ ಮಾಡಿಕೊಳ್ಳುವ ಮೋಸ. ಏಕೆಂದರೆ ಬರೀ ಬಯಸುವುದರಿಂದ ಏನು ಸಿಗಲ್ಲ. ಬೆವರು ಸುರಿಸಿದಾಗಲೇ ನಾವು ಬಯಸಿದ್ದು ನಮಗೆ ಸಿಗುತ್ತದೆ.  ಬರೀ ಇಮ್ಯಾಜಿನೇಷನ ಮಾಡುವುದರಿಂದ ನಿಮಗೆ ಕಾರ ಸಿಗಲ್ಲ. ಕಷ್ಟಪಟ್ಟು ಕೆಲಸ ಮಾಡಿದಾಗಲೇ ನಿಮಗೆ ಕಾರ ಸಿಗೋದು? ಸ್ವಲ್ಪ ಲಾಜಿಕಲ್ಲಾಗಿ ವರ್ತಿಸಿ. ಲಾ ಆಫ್ ಅಟ್ರ್ಯಾಕ್ಷನನ್ನು ನಂಬಿಕೊಂಡು ಒಂದು ಕಾರ ಫೋಟೋ ಪ್ರಿಂಟ್ ತೆಗೆಸಿ ಬೆಡರೂಮಲ್ಲಿ ಅಂಟಿಸಿ 24 hour ಕಾರ-ಕಾರ ಅಂದ್ರೆ, ಕಾರ ಬಗ್ಗೆ ಇಮ್ಯಾಜಿನೇಷನ ಮಾಡಿದ್ರೆ ನಿಮಗೆ ಕಾರ ಸಿಗುತ್ತಾ? ಬರೀ ಬಯಸುವುದರಿಂದ ನಿಮಗೆ ಕಾರ್ ಸಿಗಲ್ಲ. ಆ್ಯಕ್ಷನ್ಸಗಳಿಂದ ಅಂದರೆ ಕೆಲಸದಿಂದ ನಿಮಗೆ ಕಾರ ಸಿಗಬಹುದು. ಆದರೆ ಲಾ ಆಫ್ ಅಟ್ರ್ಯಾಕ್ಷನದಿಂದ ನಿಮಗೆ ಕಾರ ಸಿಗಲು ಸಾಧ್ಯವಿಲ್ಲ.  ಆ್ಯಕ್ಷನ್ಸಗಳಿಲ್ಲದಿದ್ದರೆ ಲಾ ಆಫ್ ಅಟ್ರ್ಯಾಕ್ಷನ ಕೆಲಸ ಮಾಡಲ್ಲ. Without action law of attraction doesn't work. 

ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

                                 ನೀವು ಸಮಸ್ಯೆಯಲ್ಲಿ ಸಿಲುಕಿದಾಗ, ನಿಮ್ಮ ಬಳಿ ದುಡಿಲ್ಲದಿರುವಾಗ, ನೀವು ಕಂಫರ್ಟ ಝೋನಲ್ಲಿ ಕೊಳೆಯುತ್ತಿರುವಾಗ, ನಿಮ್ಮ ಆರೋಗ್ಯ ಸರಿಯಿಲ್ಲದಿರುವಾಗ ಲಾ ಆಫ್ ಅಟ್ರ್ಯಾಕ್ಷನನ್ನು ನಂಬಿಕೊಂಡು ಎಲ್ಲ ಸರಿಯಾಗಿದೆ, ಎಲ್ಲ 100% ಫರಫೇಕ್ಟಾಗಿದೆ ಅಂದುಕೊಂಡು ಸುಮ್ಮನಾಗೋದು ಸರಿಯಲ್ಲ. ಏಕೆಂದರೆ ಎಲ್ಲ ಸರಿಯಿದೆಯಂತ ಭಾವಿಸಿ ಸುಮ್ಮನಾಗೋದ್ರಿಂದ ಸಮಸ್ಯೆ ಸಾಲ್ವ ಆಗಲ್ಲ, ಸಿಚುವೇಷನ ಬದಲಾಗಲ್ಲ. ಇರೋ ಪರಿಸ್ಥಿತಿಯನ್ನು ಒಪ್ಪಿಕೊಂಡು ಸರಿಯಾದ ಆ್ಯಕ್ಷನ್ಸಗಳನ್ನು ತೆಗೆದುಕೊಂಡಾಗಲೇ ನಿಮ್ಮ ಕೆಟ್ಟ ಪರಿಸ್ಥಿತಿ ಬದಲಾಗೋದು, ಸಮಸ್ಯೆ ಸಾಲ್ವ ಆಗೋದು. ನೀವು ಬಡತನದಲ್ಲಿರುವಾಗ ಬಡತನವನ್ನು ಸಿರಿತನದಲ್ಲಿ ಬದಲಾಯಿಸಲು ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಎಲ್ಲ ಸರಿಯಿದೆ ಅಂತಾ ಸುಮ್ಮನಾದ್ರೆ ಯಾರಿಗೆ ಕಷ್ಟ? ನಿಮಗೆ ತಾನೇ? ಅದಕ್ಕಾಗಿ ಲಾ ಆಫ್ ಅಟ್ರ್ಯಾಕ್ಷನ ಸಿದ್ಧಾಂತದಿಂದ ಮೋಸ ಹೋಗದೇ ಸರಿಯಾಗಿ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಿ. ನಿಮ್ಮ ಮೈಂಡ್, ಬಾಡಿ, ಎನರ್ಜಿ, ಬರ್ನಿಂಗ್ ಡಿಜೈರ್, ರೈಟ್ ಥಿಂಕಿಂಗ್ ಎಲ್ಲವನ್ನು ಒಗ್ಗುಡಿಸಿ ಕೆಲಸ ಮಾಡಿ. ನಿಮ್ಮ ಕೆಟ್ಟ ಪರಿಸ್ಥಿತಿಯನ್ನು ಸುಧಾರಿಸಿ. ನಿಮಗೆ ಬೇಕಾಗಿರುವುದನ್ನು ಕೆಲಸ ಮಾಡಿ ಪಡೆದುಕೊಳ್ಳಿ. 

ಗೋಲ ಸೆಟ್ ಮಾಡುವುದು ತಪ್ಪಲ್ಲ, 
ಆ ಗೋಲಗಳನ್ನು ಗೋಡೆ ಮೇಲೆ ಬರೆಯುವುದು ತಪ್ಪಲ್ಲ, 
ಆದರೆ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳದೆ ನಾನು ಆ ಗೋಲ ರೀಚ್ ಆಗ್ತೀನಿ, ಕೆಲಸ ಮಾಡದೇ ನನಗೆ ಅದುಇದು ಸಿಗುತ್ತೆ ಅಂತಾ ನಂಬೋದು ಅಥವಾ ಸಿಗಲಿ ಅಂತಾ ಬಯಸೋದು ತಪ್ಪು. ಏಕೆಂದರೆ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳದೇ ನಿಮಗೇನು ಸಿಗಲ್ಲ. ಆಮೇಲೆ ನಿಮಗೆ ನೋವಾಗುತ್ತೆ. ಕೆಲವು ಸಲ ಕಾಗೆ ಕೂಡೋದಕ್ಕೆ ಕೊಂಬೆ ಮುರಿಯಿತು ಅನ್ನೋ ಹಾಗೇ ಕೆಲವೊಂದಿಷ್ಟು ಕೋ ಇನ್ಸಿಡೆಂಟಗಳಾಗುತ್ತವೆ. ಅದನ್ನೇ ನೀವು ಲಾ ಆಫ್ ಅಟ್ರ್ಯಾಕ್ಷನ ಅಂತಾ ಅಂದುಕೊಂಡು ಮೋಸಹೋಗುತ್ತೀರಿ. 

ಉದಾಹರಣೆಗೆ : ನೀವು ನಿಮ್ಮ ಶತ್ರುವಿಗೆ ಆ್ಯಕ್ಸಿಡೆಂಟಾಗಲಿ ಅಥವಾ ಏನಾದ್ರೂ ಕೆಟ್ಟದಾಗಲಿ ಅಂತ ಅಂದುಕೊಳ್ತೀರಾ. ಆಮೇಲೆ ಅವರಿಗೆ ಆ್ಯಕ್ಸಿಡೆಂಟಾಗುತ್ತದೆ. ನೀವು ನನ್ನ ಶಾಪದಿಂದಾಗಿ ಅವರಿಗೆ ಆ್ಯಕ್ಸಿಡೆಂಟಾಗಿದೆ ಅಂತ ಖುಷಿಪಡ್ತೀರಿ. ಆದರೆ ನೀವು ಅಂದುಕೊಂಡಿದಕ್ಕೆ ಅವರಿಗೆ ಆ್ಯಕ್ಸಿಡೆಂಟ ಆಗಿರುವುದಿಲ್ಲ. ಅವರು ಡ್ರೈವ ಮಾಡುವಾಗ ಮಾಡಿದ ಆತುರಕ್ಕೆ ಇಲ್ಲವೇ ತಪ್ಪಿಗೆ ಅವರಿಗೆ ಆ್ಯಕ್ಸಿಡೆಂಟಾಗಿರುತ್ತದೆಯೇ ಹೊರತು ನೀವು ಆ್ಯಕ್ಸಿಡೆಂಟ ಆಗಲಿ ಅಂತಾ ಅಂದಿದ್ದಕ್ಕಾಗಿ ಅಲ್ಲ. ಇದು ಜಸ್ಟ ಒಂದು ಕೋ ಇನ್ಸಿಡೆಂಟ್ ಅಂದ್ರೆ ಕಾಕತಾಳೀಯ ಅಷ್ಟೇ. ಲಾ ಆಫ್ ಅಟ್ರ್ಯಾಕ್ಷನ ಅಲ್ವೇ ಅಲ್ಲ. ಯಾವಾಗ ನಾವು ಲಾ ಅನ್ನುತ್ತಿವಿಯೋ ಆವಾಗದು ಎಲ್ಲರಿಗೂ ಅಪ್ಲಾಯ ಆಗಬೇಕು, ಎಲ್ಲರ ವಿಚಾರದಲ್ಲಿಯೂ ನಿಜವಾಗಬೇಕು. ಅಂದಾಗಲೇ ಅದೊಂದು ಲಾ ಅಂತಾ ಹೇಳಬಹುದು. ಯಾರೋ ಒಂದಿಬ್ಬರಿಗೆ ಕಾಕತಾಳೀಯವಾಗಿ ನಿಜವಾಯ್ತು ಅಂತಾ ಅದನ್ನು ಲಾ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಸೋ ಲಾ ಆಫ್ ಅಟ್ರ್ಯಾಕ್ಷನ ಒಂದು ನಂಬಿಕೆ ಅಷ್ಟೇ. 

ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

                ನಮ್ಮ ಯೋಚನೆಗಳು ಆ್ಯಕ್ಷನಗಳಾಗಿ ಬದಲಾಗುತ್ತವೆ. ಆ್ಯಕ್ಷನ್ಸಗಳಿಂದ ನಮಗೆ ರಿಜಲ್ಟ್ಸಸಿಗುತ್ತವೆ ಎಂಬುದನ್ನು ನಾನು ಒಪ್ಪಿಕೊಳ್ತೀನಿ. ಆದರೆ ಬರೀ ಯೋಚಿಸುವುದರಿಂದ ಮತ್ತು ಭಾವನಾತ್ಮಕವಾಗಿ ಅಟ್ರ್ಯಾಕ್ಟ ಮಾಡುವುದರಿಂದ  ರಿಜಲ್ಟ್ಸಸಿಗುತ್ತವೆ ಎಂಬ ಪೆದ್ದುವಾದವನ್ನು ನಾನು ಒಪ್ಪಲ್ಲ. If you think Good, then you will get good. But wishing good, don't become good always.

ಉದಾಹರಣೆಗಾಗಿ :  10thನಲ್ಲಿದ್ದಾಗ ನಾನು 95% ಸ್ಕೋರ್ ಮಾಡಬೇಕೆಂದಿದ್ದೆ. ಆದರೆ 95.68% ಸ್ಕೋರ್ ಮಾಡಿದೆ. ನಾನು ಬಯಸಿದ್ದಕ್ಕೆ 95.68% ಸಿಗಲಿಲ್ಲ. ನಾನು 4 ತಿಂಗಳು ಸರಿಯಾಗಿ ಸರಿಯಾಗಿ ಸ್ಟಡಿ ಮಾಡಿದಕ್ಕೆ ಅಷ್ಟೊಂದು ಸ್ಕೋರ್ ಆಯ್ತು. ಆದರೆ ನಾನು ಬರೀ ಯೋಚಿಸಿ ಇಲ್ಲ ಆಸೆಪಟ್ಟು ಎಲ್ಲರ ತರ ಸುಮ್ಮನೆ ಟೈಮಪಾಸ್ ಮಾಡಿದ್ದರೆ ಅಷ್ಟೊಂದು ಸ್ಕೋರ್ ಆಗುತ್ತಿರಲಿಲ್ಲ.

ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

                  ನನಗೆ ಬಾಲ್ಯದಿಂದಲೂ ಬಿಜನೆಸಮ್ಯಾನ ಆಗಬೇಕು ಎಂಬ ಕನಸಿತ್ತು. ಏಕೆಂದರೆ ನನ್ನ ಬಡತನವನ್ನು ಬಿಜನೆಸದಿಂದ ಸುಲಭವಾಗಿ ಸಾಯಿಸಬಹುದು ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು. ಆವಾಗಿನಿಂದಲೂ ನಾನು ಎಲ್ಲ ತರಹದ ಬುಕ್ಸಗಳನ್ನು ಓದುತ್ತಿರುವೆ. ಎಲ್ಲರಿಂದ ಕಲಿಯುತ್ತಿರುವೆ. Bsc ಡಿಗ್ರಿ ಮುಗಿದ ನಂತರ ಫಿಲ್ಮಮೇಕಿಂಗ್ ಹಾಗೂ ಬಿಜನೆಸ್ ಸ್ಟಡಿಗಳಲ್ಲಿ ಸ್ಪೆಷಲ್ ಕೋರ್ಸಗಳನ್ನು ಮಾಡಿ ನಾನು ಬಿಜನೆಸ್ ಸ್ಟಾರ್ಟ ಮಾಡಿರುವೆ. ನನಗೆ ನಮ್ಮ ರೋರಿಂಗ್ ಕ್ರೀಯೇಷನ್ಸ ಪ್ರೈವೇಟ ಲಿಮಿಟೆಡ್ ಕಂಪನಿಯನ್ನು ಇಂಟರನ್ಯಾಷನಲ್ ಲೆವಲಗೆ ತೆಗೆದುಕೊಂಡು ಹೋಗುವ ಕನಸಿದೆ. ಆದರೆ ಕನಸಿದೆ ಅಂತಾ ಸುಮ್ಮನೆ ಕುಂತ್ರೆ ಏನು ಆಗಲ್ಲ. ಅದಕ್ಕಾಗಿ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಬೇಕು. ಅಂದಾಗಲೇ ಡ್ರೀಮ್ ರಿಯಾಲಿಟಿಯಾಗಿ ಬದಲಾಗುತ್ತದೆ. ಅದನ್ನು ಬಿಟ್ಟು ಲಾ ಆಫ್ ಅಟ್ರ್ಯಾಕ್ಷನನ್ನು ನಂಬಿಕೊಂಡು ಸುಮ್ನೆ ಗಾಳಿಯಲ್ಲಿ ತೇಲಾಡಿದರೆ ಏನು ಸಿಗಲ್ಲ. ಸೋ ನನ್ನ ಪ್ರಕಾರ ಲಾ ಆಫ್ ಅಟ್ರ್ಯಾಕ್ಷನ ಜಸ್ಟ ಒಂದು ಮಿಥ ಅಷ್ಟೇ. ಒಂದು ವೇಳೆ ನಿಮಗೆ ಲಾ ಆಫ್ ಅಟ್ರ್ಯಾಕ್ಷನದಿಂದ ಕೆಲಸ ಮಾಡದೇ ಬರೀ ಯೋಚಿಸಿ, ನೀವು ಬಯಸಿದ್ದೆಲ್ಲವು ನಿಮಗೆ ಸಿಕ್ಕಿದ್ದರೆ fine, no problem. ನೀವು ಬಯಸಿದ ತಕ್ಷಣ ನಿಮಗೆ ಕಾರು, ಮನೆ, ಹಣ ಸಿಕ್ರೇ ಅದೇ ರೀತಿ ಹೆಚ್ಚು ಹೆಚ್ಚು ಬಯಸಿ ಬಡವರಿಗೆ ಕೊಡಿ. ಜನ ನಿಮ್ಮನ್ನು ದೇವರು ಮಾಡಿದ್ರೂ ಮಾಡಬಹುದು. 

ಫ್ರೆಂಡ್ಸ್, ಲಾ ಆಫ್ ಅಟ್ರ್ಯಾಕ್ಷನ ಭ್ರಮೆಯಿಂದ ಹೊರಬನ್ನಿ. ಲಾ ಆಫ್ ಕರ್ಮ ಅಂದ್ರೆ ನಿಮ್ಮ ಕೆಲಸದ ಮೇಲೆ ನಂಬಿಕೆಯಿಡಿ. ನೀವು ನಿಮ್ಮ ಕೆಲಸದಲ್ಲಿ ಪರಫೆಕ್ಟಾಗಿ ನೀವು ಬಯಸಿದ್ದೆಲ್ಲವು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. All the best.ಲಾ ಆಫ್ ಅಟ್ರ್ಯಾಕ್ಷನನ ನೈಜತೆ - Reality of Law of Attraction in Kannada

Blogger ನಿಂದ ಸಾಮರ್ಥ್ಯಹೊಂದಿದೆ.