ಮೋಟಿವೇಷನ ಹಾವಳಿ : Motivation is diverting you - Kannada Life Changing and Motivational Article - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಮೋಟಿವೇಷನ ಹಾವಳಿ : Motivation is diverting you - Kannada Life Changing and Motivational Article

ಮೋಟಿವೇಷನ ಹಾವಳಿ : Motivation is diverting you - Kannada Life Changing and Motivational Article

                                       ಹಾಯ್ ಗೆಳೆಯರೇ, ಸದ್ಯಕ್ಕೆ ಮೋಟಿವೇಷನ ಮಾಫಿ**ಯಾ ಜೋರಾಗಿ ನಡಿತಿದೆ. ಬಹಳಷ್ಟು ಮೋಟಿವೇಷನಲ್ ಸ್ಪೀಕರಗಳು ಆನ್ಲೈನ್ ಮಾರ್ಕೆಟಗೆ ಕಾಲಿಟ್ಟಿದ್ದಾರೆ. ಈಗ ಮೋಟಿವೇಷನಲ್ ಸ್ಪೀಕಿಂಗ್ ಒಂದು ದಂಧೆಯಾಗಿ ಮಾತ್ರ ಉಳಿದಿಲ್ಲ. ಅದೊಂದು ಮಾಫಿ**ಯಾ ಆಗಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ತಾನು ಮೋಟಿವೇಷನಲ್ ಸ್ಪೀಕರ್ ಎಂದು ಕ್ಲೇಮ್ ಮಾಡಿಕೊಳ್ಳುತ್ತಿದ್ದಾನೆ. 

                   ನಿಮಗಂತೂ ಈಗ ಬೆಳಿಗ್ಗೆ ಬೇಗನೆ ಎದ್ದೇಳಲು, ರಾತ್ರಿ ಬೇಗನೆ ಮಲಗಲು, ದಪ್ಪ ಆಗಲು, ಸಣ್ಣ ಆಗಲು, ಸ್ಟಡಿ ಮಾಡಲು, ಬ್ರೇಕಪ ಮಾಡಿಕೊಳ್ಳಲು, ಬಿಜನೆಸ್ ಮಾಡಲು, ಕೆಲಸ ಮಾಡಲು, ಬದುಕಲು ಮೋಟಿವೇಷನ ಬೇಕಾಗಿದೆ. ಎಲ್ಲದಕ್ಕೂ ನಿಮಗೆ ಮೋಟಿವೇಷನಲ್ ವಿಡಿಯೋಗಳು ಬೇಕಾಗಿವೆ. ನಾನೆಳೋದು ಸರಿ ತಾನೇ? ಒಂದು ವೇಳೆ ನೀವು ಈ ಮೋಟಿವೇಷನಗೆ ಇದೇ ರೀತಿ ಅಡಿಕ್ಟ ಆದರೆ ಮುಂದೊಂದು ದಿನ ನಿಮಗೆ ಉಸಿರಾಡೋಕೂ ಮೋಟಿವೇಷನ ಬೇಕಾಗಬಹುದು. ಮೋಟಿವೇಷನಲ್ ವಿಡಿಯೋಗಳನ್ನು ನೋಡಬೇಕಾದ ಪರಿಸ್ಥಿತಿ ಬರಬಹುದು.

ಮೋಟಿವೇಷನ ಹಾವಳಿ : Motivation is diverting you - Kannada Life Changing Article

                    ನಿರಂತರ ಓದು, ಇಷ್ಟವಿಲ್ಲದ ಜಾಬ್ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಗಳಿಂದಾಗಿ ನೀವು ಮಾನಸಿಕವಾಗಿ ಮುರಿದು ಬಿದ್ದಿರುತ್ತೀರಾ ಎಂಬುದು ನಂಗೊತ್ತು. ನನಗಿದು ಅರ್ಥವಾಗುತ್ತದೆ. ಈಗ ನಿಮಗೆ ಜೀವನದಲ್ಲಿ ಮತ್ತೆ ಮೇಲೆಳಲು ಮೋಟಿವೇಷನ ಬೇಕಾಗುತ್ತದೆ. ಈಗ ಮೋಟಿವೇಷನಲ್ ವಿಡಿಯೋಗಳ ಸಹಾಯ ಪಡೆದುಕೊಳ್ಳಿ ಪರವಾಗಿಲ್ಲ. ಆದರೆ ಎಲ್ಲ ಕೆಲಸಗಳಿಗೆ ಅನಾವಶ್ಯಕವಾಗಿ ಯಾಕೆ ಮೊಟಿವೇಷನನ್ನು ಹುಡುಕುತ್ತಿರುವಿರಿ? ಮೋಟಿವೇಷನ ಒಂದು ಮೆಡಿಸಿನ್ ಆಗಿದೆ. ಅದನ್ನು ಮೆಡಿಸಿನ್ ತರಹ ಮಾತ್ರ ಯುಜ ಮಾಡಿ. ಡ್ರಗ ತರ ಯುಜ ಮಾಡಬೇಡಿ. ಒಂದು ವೇಳೆ ನೀವು ಹೆಲ್ದಿಯಾಗಿರುವಾಗ ಮೆಡಿಸಿನನ್ನ ತಿಂದರೆ ಅದು ನಿಮಗೆ ಪಾಯಿಜನ ಆಗುತ್ತದೆ. ಅದೇ ರೀತಿ ಮೋಟಿವೇಷನಲ್ ವಿಡಿಯೋಗಳು ನಿಮಗೆ ಪಾಯಿಜನ ಆಗುತ್ತವೆ. 

ಮೋಟಿವೇಷನ ಹಾವಳಿ : Motivation is diverting you - Kannada Life Changing Article

              ನೀವು ಸದಾಕಾಲ ಮೋಟಿವೇಟೆಡ ಆಗಿರಲು ಸಾಧ್ಯವಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನೀವು ಯಾವಾಗಲೂ ಎಜ್ಗೈಟೆಡ ಆಗಿದ್ದರೆ ಕೆಲಸ ಹೇಗೆ ಮಾಡುವಿರಿ? ಆದ್ದರಿಂದ ಎಜ್ಗೈಟೆಡ್ ಸ್ಟೇಟನಿಂದ ಹೊರಬನ್ನಿ ಮತ್ತು ಸೂಪರ್ ನಾರ್ಮಲ ಸ್ಟೇಟನಲ್ಲಿದ್ದುಕೊಂಡು ನಿಮ್ಮ ಕೆಲಸವನ್ನು 100% ಫೋಕಸ್ ಹಾಗೂ ಇಂಟರೆಸ್ಟನೊಂದಿಗೆ ಮಾಡಿ. ಮೋಟಿವೇಷನಲ್ ವಿಡಿಯೋಗಳ ಓವರ ಡೋಜನಿಂದ ಹೊರಬಂದು ರಿಯಾಲಿಟಿಯನ್ನು ಅರ್ಥಮಾಡಿಕೊಂಡು ಪ್ರ್ಯಾಕ್ಟಿಕಲ್ಲಾಗಿ ಕೆಲಸ ಮಾಡಿ. ಬರೀ ಕನಸುಗಳನ್ನು ಕಾಣುವುದರಿಂದ ಏನು ಆಗಲ್ಲ. ಕನಸುಗಳಿಗೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಕನಸುಗಳನ್ನು ನನಸು ಮಾಡುವುದಕ್ಕಾಗಿ ಸರಿಯಾದ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕ್ಯಾಲ್ಕುಲೆಟೆಡ ರಿಸ್ಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದು ಸರಿಯಾದ ಡೈರೆಕ್ಷನನಲ್ಲಿ. 


ಮೋಟಿವೇಷನ ಹಾವಳಿ : Motivation is diverting you - Kannada Life Changing Article

                     ಇತ್ತೀಚೆಗೆ ಇಂಟರನೆಟ್ಟಲ್ಲಿ ಬಹಳಷ್ಟು ರಾಂಗ್ ಇನಫಾರ್ಮೇಷನ ಬರ್ತಿದೆ. ಕೆಲವೊಂದಿಷ್ಟು ಜನ ತಮ್ಮ ಲಾಭಕ್ಕಾಗಿ ಬೇರೆಯವರ ನೆಗೆಟಿವ್ ಬ್ರೇನವಾಶ ಮಾಡುತ್ತಿದ್ದಾರೆ. ಸ್ವಂತ ಲೈಫಲ್ಲಿ ಅನಸಕ್ಸೆಸಫುಲ್ಲಾಗಿರುವ ವ್ಯಕ್ತಿ ನಿಮಗೆ ಸಕ್ಸೆಸ್ ಟಿಪ್ಸಗಳನ್ನು ಕೊಡುತ್ತಿದ್ದಾನೆ. ಖಾಲಿ ಜೇಬಿನೊಂದಿಗೆ ಅಲೆಯುತ್ತಿರುವ ವ್ಯಕ್ತಿ ನಿಮಗೆ ಯುಟ್ಯೂಬನಲ್ಲಿ ಶ್ರೀಮಂತರಾಗುವುದು ಹೇಗೆ? ಎಂಬ ವಿಷಯದ ಮೇಲೆ ಉದ್ದುದ್ದಾ ಲೆಕ್ಚರಗಳನ್ನು ಕೊಡುತ್ತಿದ್ದಾನೆ. ನಾನು ಅಂಥವರ ವಿಡಿಯೋಗಳನ್ನು ನೋಡಬೇಡಿ, ಅವರ ಮಾತನ್ನು ಕೇಳಬೇಡಿ ಅಂತಾ ಹೇಳುತ್ತಿಲ್ಲ. ನಾನು ಹೇಳುತ್ತಿರುವುದಿಷ್ಟೆ, ಮೊಟಿವೇಷನಿನ್ ನಶೆಯಲ್ಲಿ ಸಿಕ್ಕಿದ್ದನ್ನೆಲ್ಲ ನಿಮ್ಮ ಮೆದುಳಲ್ಲಿ ಫೀಡ್ ಮಾಡಿಕೊಳ್ಳಬೇಡಿ ಎಂದಷ್ಟೇ. ಮೊದಲು ನಾರ್ಮಲಾಗಿ ಯೋಚಿಸಿ, ಟೆಸ್ಟ್ ಆ್ಯಂಡ್ ಟ್ರೈಲ್ ಮಾಡಿ ನಂತರ ವಿಷಯಗಳನ್ನು ನಿಮ್ಮ  ಮೆದುಳಿಗೆ ಫೀಡ್ ಮಾಡಿ. ಅದನ್ನು ಬಿಟ್ಟು ನಿಮ್ಮ ಮೆದುಳನ್ನು ಕಸದ ತೊಟ್ಟಿ ಮಾಡಿಕೊಳ್ಳಬೇಡಿ. ಮೋಟಿವೇಷನಲ್ ವಿಡಿಯೋಗಳನ್ನು ನೋಡಿ ಕಿರುಬೆರಳಿನಿಂದ ಪರ್ವತ ಎತ್ತುವ ಮೊಂಡು ಧೈರ್ಯವನ್ನು ಮಾಡಬೇಡಿ. 

ಮೋಟಿವೇಷನ ಹಾವಳಿ : Motivation is diverting you - Kannada Life Changing Article

      ಮೋಟಿವೇಷನಲ್ ವಿಡಿಯೋಗಳನ್ನು ನೋಡಿ ಸ್ಟಡಿ ನೆಗ್ಲೆಕ್ಟ ಮಾಡೋಕ್ಕಿಂತ ಮುಂಚೆ, ಕಾಲೇಜ ಡ್ರಾಪೌಟ ಮಾಡೋಕ್ಕಿಂತ ಮುಂಚೆ ಮಾರ್ಕ ಜುಕರಬರ್ಗ, ಬಿಲಗೇಟ್ಸ, ಸ್ಟೀವ್ ಜಾಬ್ಸ ಯಾವ ಕಾಲೇಜಗಳಿಂದ ಡ್ರಾಪೌಟಾದರು ಎಂಬುದನ್ನು ಒಂದ್ಸಲ ನೋಡಿ. ಅವರೆಲ್ಲ ಹಾರ್ವರ್ಡ್ ಹಾಗೂ ಸ್ಟ್ಯಾನಫೋರ್ಡಗಳಂತ ಕಾಲೇಜಗಳಿಂದ ಡ್ರಾಪೌಟ ಆಗಿದ್ದಾರೆ. ನಿಮ್ಮಂಥ ಆರ್ಡಿನರಿ ಕಾಲೇಜಗಳಿಂದಲ್ಲ. ಕಾಲೇಜ್ ಬಿಡುವುದು ದೂರದ ಮಾತು, ನಿಮ್ಮಲ್ಲಿ ಎಷ್ಟೋ ಜನರಿಗೆ ಹಾರ್ವರ್ಡ್ ಹಾಗೂ ಸ್ಟ್ಯಾನಫೋರ್ಡಗಳಂತ ಕಾಲೇಜಗಳಿಗೆ ಜಾಯಿನ್ ಆಗುವಷ್ಟು ಟ್ಯಾಲೆಂಟ್ ಕೂಡ ಇಲ್ಲ. ಕಾಲೇಜ ಡ್ರಾಪೌಟ ಆದ ನಂತರ ಸ್ಟಾರ್ಟಅಪ್ ಸ್ಟಾರ್ಟ್ ಮಾಡಲು ಬಿಜನೆಸ್ ಮಾಡೆಲ್ ಹಾಗೂ ಬಜೆಟ್ ಕೂಡ ಇಲ್ಲ. ಹೀಗಿರುವಾಗ ಕಾಲೇಜ್ ಡ್ರಾಪೌಟ  ಮಾಡಿ ಅಥವಾ ಇರೋ ಜಾಬ್ ಬಿಟ್ಟು ನೀವು ಏನು ಮಾಡುವಿರಿ? ಅದಕ್ಕಾಗಿ ಮೋಟಿವೇಷನಲ್ ವಿಡಿಯೋಗಳನ್ನು ನೋಡಿ ಕಾಲೇಜ ಬಿಡುವುದಕ್ಕಿಂತ ಮುಂಚೆ, ಜಾಬ್ ಬಿಡುವುದಕ್ಕಿಂತ ಮುಂಚೆ, ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ಸ್ವಲ್ಪ ಪ್ರ್ಯಾಕ್ಟಿಕಲ್ಲಾಗಿ ಯೋಚನೆ ಮಾಡಿ. ಗಾಳಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಮಣ್ಣು ತಿನ್ನಬೇಡಿ. ಆತುರದಲ್ಲಿ ಸ್ವಂತ ಕಾಲ ಮೇಲೆ ಕಲ್ಲನ್ನು ಎಳೆದುಕೊಳ್ಳಬೇಡಿ. ಸ್ವಲ್ಪ ತಲೆ ಉಪಯೋಗಿಸಿ. ಇಲ್ಲವಾದರೆ ನಿಮ್ಮ ತಲೆ ಉರುಳುತ್ತೆ. ಮೋಟಿವೇಷನ ಮಾಫಿ**ಯಾದಿಂದ ಹಾಗೂ ಮೋಟಿವೇಷನಲ್ ವಿಡಿಯೋಗಳಿಂದ ಸ್ವಲ್ಪ ಹುಷಾರಾಗಿರಿ. All the best and Thanks you...ಮೋಟಿವೇಷನ ಹಾವಳಿ : Motivation is diverting you - Kannada Life Changing and Motivational Article

ಮೋಟಿವೇಷನ ಹಾವಳಿ : Motivation is diverting you - Kannada Life Changing and Motivational Article ಮೋಟಿವೇಷನ ಹಾವಳಿ : Motivation is diverting you - Kannada Life Changing and Motivational Article Reviewed by Director Satishkumar on February 23, 2020 Rating: 4.5
Powered by Blogger.