ಯಾರು ನಿಮ್ಮ ನಿಜವಾದ ಬೆಸ್ಟಫ್ರೆಂಡ್ ಎಂಬುದನ್ನು ಪತ್ತೆ ಹಚ್ಚೋದು ಹೇಗೆ? : How to find out your best friend? in Kannada
ಹಾಯ್ ಗೆಳೆಯರೇ, ಕೆಲವು ತಿಂಗಳುಗಳ ಹಿಂದೆ ನಾನು "ನಿಮ್ಮ ಗೆಳೆಯರಿಂದ ಸ್ವಲ್ಪ ಎಚ್ಚರವಾಗಿರಿ..." ಎಂಬ ಮೋಟಿವೇಷನಲ್ ಅಂಕಣವನ್ನು ಬರೆದಿದ್ದೆ. ಅದನ್ನು ಓದಿದ ನಂತರ ಬಹಳಷ್ಟು ಜನ "ಯಾರು ನಮ್ಮ ನಿಜವಾದ ಬೆಸ್ಟಫ್ರೆಂಡ್ ಎಂಬುದನ್ನು ಹೇಗೆ ಪತ್ತೆ ಹಚ್ಚುವುದು?" ಅಂತಾ ಕೇಳಿದ್ದಾರೆ. ಸೋ ಬನ್ನಿ ಗೆಳೆಯರೇ ಇವತ್ತಿನ ಅಂಕಣದಲ್ಲಿ ಯಾರು ನಿಮ್ಮ ಬೆಸ್ಟ ಫ್ರೆಂಡ್ ಎಂಬುದನ್ನು ಹೇಗೆ ಪತ್ತೆ ಹಚ್ಚುವುದು ಎಂಬುದನ್ನು ನೋಡೊಣಾ.
ಯಾರೋ ಒಬ್ಬ ವ್ಯಕ್ತಿನಾ ನೋಡಿದ ತಕ್ಷಣವೇ ಇವರು ಬೆಸ್ಟ, ಇವರು ವರ್ಸ್ಟ ಅಂತಾ ಹೇಳೊಕ್ಕಾಗಲ್ಲ. ಮುಖ ನೋಡಿ ಮನಸ್ಸನ್ನು ಅಳೆಯೋಕ್ಕಾಗಲ್ಲ. ಹಾಕೋಂಡಿರೋ ಟಿಶರ್ಟ ನೋಡಿ ಹಾರ್ಟ ವ್ಯಾಲೂ ಹೇಳೋಕ್ಕಾಗಲ್ಲ. ಜೀವನದಲ್ಲಿ ಸಾವಿರ ಜನ ಬರ್ತಾರೆ, ಸಾವಿರ ಜನ ಹೋಗ್ತಾರೆ. ಆದ್ರೆ ಕೆಲವೊಂದಿಷ್ಟು ಜನ ಮಾತ್ರ ಬೆಸ್ಟ ಫ್ರೆಂಡಾಗಿ ನಮ್ಮೊಂದಿಗೆ ಕೊನೆ ತನಕ ಇರ್ತಾರೆ. ನಿಮ್ಮ ನಿಜವಾದ ಬೆಸ್ಟ ಫ್ರೆಂಡ್ ಯಾರಂತ ಪತ್ತೆ ಹಚ್ಚೋ ಅವಶ್ಯಕತೆ ನಿಮಗಿಲ್ಲ. ಯಾಕಂದ್ರೆ ನಿಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ನಿಮಗೆ ಯಾರು ನಿಮ್ಮ ಬೆಸ್ಟಫ್ರೆಂಡ ಎಂಬುದು ಆಟೋಮ್ಯಾಟಿಕಾಗಿ ಗೊತ್ತಾಗುತ್ತದೆ. ನಾನು ನನ್ನ ಲೈಫಲ್ಲಿ ಒಂದ್ಸಲ ಇದ್ದು ಸತ್ತಂತಾದಾಗ, ಮತ್ತೊಂದ್ಸಲ ಸತ್ತು ಬದುಕಿದಾಗ ನನಗೆ ನನ್ನ ನಿಜವಾದ ಬೆಸ್ಟ ಫ್ರೆಂಡ್ ಯಾರು ಅಂತಾ ಗೊತ್ತಾಗಿದೆ. ಅದರ ಆಧಾರದ ಮೇಲೆ ನಾನು ಬೆಸ್ಟಫ್ರೆಂಡನ ಕೆಲವೊಂದಿಷ್ಟು ಮಹಾನ ಗುಣಗಳನ್ನು ಹೇಳುತ್ತೇನೆ. ಇವುಗಳಲ್ಲಿ ಯಾವುದಾದರೂ 3 ಗುಣ ನಿಮ್ಮ ಫ್ರೆಂಡ್ಸಗಳಲ್ಲಿದ್ರೆ ಅವರು ನಿಮ್ಮ ಬೆಸ್ಟಫ್ರೆಂಡ ಅಂತಾ ತಿಳ್ಕೊಳಿ. ಒಂದು ಗುಣವೂ ಇಲ್ಲದಿದ್ರೆ ಅವರು ನಿಮಗೆ ವರ್ಸ್ಟ ಫ್ರೆಂಡ್ ಎಂಬುದನ್ನು ಅರ್ಥ ಮಾಡ್ಕೋಳಿ.
ನಿಮ್ಮ ಬೆಸ್ಟಫ್ರೆಂಡ್ ನಿಮ್ಮನ್ನು ನೀವು ಯಾವ ರೀತಿ ಇದೀರೋ ಅದೇ ರೀತಿ as it is ಆ್ಯಕ್ಸೆಪ್ಟ ಮಾಡ್ತಾರೆ. ಅನಾವಶ್ಯಕವಾಗಿ ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸಲ್ಲ, ನಿಮಗೆ ಬದಲಾಗಿ ಅಂತಾ ಫೋರ್ಸ ಮಾಡಲ್ಲ. ನೀವು ರೀಚ ಆಗಿರಿ, ಪೂವರ ಆಗಿರಿ, ಹ್ಯಾಂಡಸಮ್ಮಾಗಿರಿ ಅಥವಾ ಅಗ್ಲಿಯಾಗಿರಿ ನಿಮ್ಮ ಬೆಸ್ಟಫ್ರೆಂಡ್ ಯಾವುದಕ್ಕೂ ಕೇರ್ ಮಾಡಲ್ಲ. ನೀವು ಹೇಗಿದಿರೋ ಅದೇ ರೀತಿ ನಿಮ್ಮನ್ನು ನಿಮ್ಮ ಬೆಸ್ಟ ಫ್ರೆಂಡ್ ಆ್ಯಕ್ಸೆಪ್ಟ ಮಾಡ್ತಾರೆ. ಅವರು ನಿಮ್ಮ ಬಳಿಯಿರುವ ಹಣ ನೋಡಲ್ಲ, ಗುಣ ನೋಡ್ತಾರೆ. ನಿಮ್ಮ ಮನೆತನ ನೋಡಲ್ಲ, ಮನತನ ನೋಡ್ತಾರೆ.
ನೀವು 5+5=15 ಅಂತಂದ್ರೆ ನಿಮ್ಮ ಫೇಕ್ ಫ್ರೆಂಡ್ಸ್ ನೀವು ಹೇಳಿದ್ದು ಸರಿಯಿದೆ ಅಂತಾ ಬೆನ್ತಟ್ಟಿ ನಿಮ್ಮನ್ನು ಅಟ್ಟಕ್ಕೇರಿಸಿ ಆಮೇಲೆ ರಪ್ ಅಂತ ಕೆಳಗೆ ಬೀಳಿಸಿ ಮಜಾ ನೋಡುತ್ತಾರೆ. ಆದ್ರೆ ನಿಮ್ಮ ರಿಯಲ್ ಫ್ರೆಂಡ್ಸ್ ನಿಮ್ಮ ಒದೆಗೆ ಒದ್ದಂತೆ ನಿಮ್ಮ ಮುಖದ ಮೇಲೆ 5+5=10 ಅಂತೇಳಿ ನಿಮ್ಮನ್ನು ತಿದ್ದುತ್ತಾರೆ. ನೀವು ನಷ್ಟ ಅನುಭವಿಸದಂತೆ, ಅವಮಾನಕ್ಕೆ ತುತ್ತಾಗದಂತೆ ಕಾಪಾಡುತ್ತಾರೆ. ನಿಮ್ಮ ಬಗ್ಗೆ ಇದ್ದಿದ್ದನ್ನ ಇದ್ದಂಗೆ ಹೇಳೊ ಗಟ್ಸ ನಿಮ್ಮ ಬೆಸ್ಟ ಫ್ರೆಂಡಗೆ ಮಾತ್ರ ಇರುತ್ತೆ. ನಿಮಗೆ ಬೈದು ಬುದ್ಧಿವಾದ ಹೇಳೋ ಗಟ್ಸ ನಿಮ್ಮ ಬೆಸ್ಟಫ್ರೆಂಡಗೆ ಮಾತ್ರ ಇರುತ್ತೆ. ಸತ್ಯವನ್ನು ಹೇಳೋ ಗುಂಡಿಗೆ ನಿಮ್ಮ ಬೆಸ್ಟಫ್ರೆಂಡಗೆ ಮಾತ್ರ ಇರುತ್ತೆ. ನಿಮ್ಮ ಬೆಸ್ಟಫ್ರೆಂಡ ಯಾವುದೇ ಮುಜುಗುರ ಹಿಂಜರಿಕೆ ಇಲ್ಲದೆ ನಿಮ್ಮ ತಪ್ಪುಗಳನ್ನು ನಿಮಗೆ ತೋರಿಸುತ್ತಾರೆ ಮತ್ತು ನಿಮಗೆ ನಷ್ಟವಾಗದಂತೆ ತಡೆಯುತ್ತಾರೆ. ಒಟ್ನಲ್ಲಿ ರೈಟನ್ನು ರೈಟ ಅಂತಾ, ರಾಂಗನ್ನು ರಾಂಗ ಅಂತಾ ಹೇಳೊ ಗಟ್ಸ ನಿಮ್ಮ ಬೆಸ್ಟಫ್ರೆಂಡಗೆ ಮಾತ್ರಯಿರುತ್ತೆ.
ನೀವು ಬ್ಯಾಡ ಸಿಚುವೇಷನಲ್ಲಿದ್ದಾಗ ನೀವು ಹೆಲ್ಪಗಾಗಿ ಕರಿಲಿ ಅಂತಾ ನಿಮ್ಮ ಬೆಸ್ಟಫ್ರೆಂಡ್ ಕಾಯ್ತಾ ಕೂಡಲ್ಲ. ಅವರು ಯಾವುದೇ ಇನ್ವಿಟೇಷನಯಿಲ್ದೆ ಹೆಲ್ಪ ಮಾಡೋಕೆ ಬರ್ತಾರೆ. ಹೆಲ್ಪ ಮಾಡಿ ಯಾವುದೇ ಕ್ರೆಡಿಟ್ ತಗೋಳದೆ ಸುಮ್ಮನೆ ಹೋಗ್ತಾರೆ. ಒಂದು ವೇಳೆ ಅವರಿಗೆ ಯಾವುದೇ ಹೆಲ್ಪ ಮಾಡಕ್ಕಾಗದಿದ್ರೆ ನಿಮ್ಮ ಜೊತೆಗಿದ್ದು ನಿಮಗೆ ಧೈರ್ಯ ತುಂಬ್ತಾರೆ. ಮಾನಸಿಕ ಬೆಂಬಲ ನೀಡ್ತಾರೆ. ಯಾವುದೇ ಕಾರಣಕ್ಕೂ ನೀವು ಕಷ್ಟದಲ್ಲಿರುವಾಗ ನಿಮ್ಮನ್ನು ಒಂಟಿಯಾಗಿ ಬಿಟ್ಟೊಗಲ್ಲ. ಅವರು ಯಾವಾಗಲೂ ನಿಮ್ಮ ಲೈಫಿಗೆ ವ್ಯಾಲೂ ಆ್ಯಡ್ ಮಾಡ್ತಾರೆ.
ನಿಮ್ಮ ಬೆಸ್ಟ ಫ್ರೆಂಡ್ ನಿಮ್ಮ ಮುಂದೆ ಕೆಟ್ಟದಾಗಿ ಮಾತಾಡಬಹುದು, ಕಾಲ ಎಳಿಬಹುದು. ನಿಮಗೆ ಗೌರವ ಕೊಡದೇ ಏಕವಚನದಲ್ಲಿ ಮಾತಾಡಿಸಬಹುದು. ಆದರೆ ನಿಮ್ಮ ಬೆನ್ನ ಹಿಂದೆ ಅವರು ಯಾವತ್ತೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಲ್ಲ. ಒಂದು ವೇಳೆ ಮಾತಾಡಿದ್ರೆ ಅವರು ನಿಮ್ಮ ಬೆಸ್ಟಫ್ರೆಂಡ ಆಗೋಕೆ ಅರ್ಹನಾದ ವ್ಯಕ್ತಿಯಲ್ಲ. ಅವರನ್ನು ಒದ್ದು ದೂರ ಕಳಿಸಿ.
ನಮ್ಮ ಖುಷಿನಾ ನೋಡೋ ದುರ್ಭಾಗ್ಯ ಎಲ್ಲರಿಗೂ ಸಿಕ್ಕಿರುತ್ತೆ. ಆದ್ರೆ ನಮ್ಮ ಕಣ್ಣಿರ್ನಾ ನೋಡೋ ಸೌಭಾಗ್ಯ ನಮ್ಮ ಬೆಸ್ಟಫ್ರೆಂಡಗೆ ಮಾತ್ರ ಸಿಕ್ಕಿರುತ್ತೆ. ಆಗ ನೀವು ಅವರನ್ನು ಬೈದು ದೂರ ಕಳುಹಿಸಿದರೂ ಅವರು ನಿಮ್ಮನ್ನು ಅಂತ ಪರಿಸ್ಥಿತಿಯಲ್ಲಿ ಒಬ್ಬಂಟಿಯಾಗಿ ಬಿಟ್ಟೊಗಲ್ಲ.
ನಿಮ್ಮ ಬೆಸ್ಟಫ್ರೆಂಡ ಯಾವತ್ತೂ ನಿಮ್ಮ ಸೋಲನ್ನು ನೋಡೋಕೆ ಇಷ್ಟಪಡಲ್ಲ. ಅವರು ನೀವು ಸಕ್ಸೆಸಫುಲ್ ಆದಾಗ ನಿಮ್ಮನ್ನು ಹೆಗಲ ಮೇಲೆ ಕೂಡಿಸಿಕೊಂಡು ಮೆರೆಸೋಕೆ ಕಾಯ್ತಾ ಇರ್ತಾರೆ. ನಿಮ್ಮ ಫೇಕ್ ಫ್ರೆಂಡ್ಸ್ ನಿಮ್ಮ ಮೇಲೆ ಜಲಸಿ ಫೀಲ್ ಮಾಡ್ತಾರೆ. ಆದರೆ ನಿಮ್ಮ ಬೆಸ್ಟ ಫ್ರೆಂಡ್ ನಿಮ್ಮ ಸಕ್ಸೆಸ್ಸನ್ನು ಸೆಲೆಬ್ರೆಟ್ ಮಾಡ್ತಾರೆ. ನೀವು ಗೆದ್ರೆ ನಿಮ್ಮ ಬೆಸ್ಟಫ್ರೆಂಡಗೆ ನಿಮಗಿಂತ ಜಾಸ್ತಿ ಖುಷಿಯಾಗುತ್ತೆ, ನೀವು ಸೋತ್ರೆ ನಿಮ್ಮ ಬೆಸ್ಟಫ್ರೆಂಡಗೆ ನಿಮಗಿಂತ ಜಾಸ್ತಿ ದು:ಖವಾಗುತ್ತೆ. ಅದಕ್ಕಾಗಿ ಅವರು ನಿಮ್ಮನ್ನು ಯಾವಾಗಲೂ ಮೋಟಿವೆಟ್ ಮಾಡುತ್ತಾರೆ. ನೀವು ನಿಮ್ಮ ಗುರಿಗಳನ್ನು ತಲುಪಲು ನಿಮಗೆ ಸಹಾಯ ಮಾಡುತ್ತಾರೆ.
ನಿಮ್ಮ ಟ್ರು ಫ್ರೆಂಡ್ ಮಾತ್ರ ನಿಮ್ಮೊಂದಿಗೆ ತಮ್ಮ ಪರ್ಸನಲ ಸಮಸ್ಯೆಗಳನ್ನು ಶೇರ್ ಮಾಡುತ್ತಾರೆ. ಏಕೆಂದರೆ ಅವರು ನಿಮ್ಮನ್ನು ಯಾವಾಗಲೂ ಸೂಪರ ಹೀರೋ ತರಹ ನೋಡ್ತಾರೆ. ಅವರ ಜೀವನದಲ್ಲಿ ಕಷ್ಟ ಬಂದಾಗ ಅವರು ಸುಧಾಮನಾಗ್ತಾರೆ, ನಿಮ್ಮನ್ನು ಶ್ರೀಕೃಷ್ಣನ ತರಹ ನೋಡ್ತಾರೆ. ನೀವು ಅವರಿಗೆ ಬೆಸ್ಟಫ್ರೆಂಡ ಆಗಿದ್ರೆ ನೀವು ನಿಮ್ಮ ಜೀವ ಒತ್ತೆಯಿಟ್ಟಾದ್ರು ಅವರಿಗೆ ಸಹಾಯ ಮಾಡುತ್ತೀರಿ. ನೀವು ಅವರಿಗೆ ಜಸ್ಟ ಫ್ರೆಂಡಾಗಿದ್ರೆ ಏನಾದರೂ ಒಂದು ಕುಂಟು ನೆಪ ಹೇಳಿ ಜಾರಿಕೊಳ್ತೀರಿ.
ಕಷ್ಟಗಳು ಬಂದಾಗ ಫ್ರೆಂಡಶಿಪ ಡೇ ದಿನ ಕೈಮೇಲಿದ್ದ ಬ್ಯಾಂಡಗಳಷ್ಟು ಕೈಗಳು ನಿಮ್ಮ ಹೆಗಲ ಮೇಲೆ ಇರಲ್ಲ. ಕೇವಲ ಒಂದೇ ಒಂದು ಕೈಯಿರುತ್ತದೆ. ಅದು ನಿಮ್ಮ ಬೆಸ್ಟ ಫ್ರೆಂಡದಾಗಿರುತ್ತದೆ.
ನಿಮ್ಮ ನಿಜವಾದ ಶಕ್ತಿ ಸಾಮರ್ಥ್ಯ ನಿಮ್ಮ ಶತ್ರುಗಳಿಗೆ ಗೊತ್ತಿರುತ್ತದೆ. ಆದರೆ ನಿಮ್ಮ ವಿಕನೆಸ್ ನಿಮ್ಮ ಬೆಸ್ಟ ಫ್ರೆಂಡಗೆ ಮಾತ್ರ ಗೊತ್ತಿರುತ್ತದೆ. ಅವರು ಎಲ್ಲಿ ತನಕ ನಿಮ್ಮ ಸೀಕ್ರೆಟನ್ನು ಸೀಕ್ರೆಟಾಗಿ ಇಡ್ತಾರೋ ಅಲ್ಲಿ ತನಕ ಮಾತ್ರ ಅವರು ನಿಮಗೆ ಬೆಸ್ಟ ಫ್ರೆಂಡಾಗಿರ್ತಾರೆ.
ನೀವು ಬಾಯ್ಬಿಚ್ಚಿ ನಿಮ್ಮ ಬೆಸ್ಟ ಫ್ರೆಂಡಗೆ ಏನು ಹೇಳಬೇಕಾಗಿಲ್ಲ. ನೀವು ಏನು ಹೇಳದಿದ್ರು ಅವರಿಗೆ ಎಲ್ಲ ಗೊತ್ತಾಗುತ್ತದೆ. ನಿಮ್ಮನ್ನು ನೋಡಿದ್ರೆ ಸಾಕು, ನಿಮ್ಮ ವೈಸ್ ಕೇಳಿದ್ರೆ ಸಾಕು ನೀವು ಹ್ಯಾಪಿಯಾಗಿದೀರಿ ಅಥವಾ ಇಲ್ವಾ ಎಂಬುದು ಅವರಿಗೆ ಗೊತ್ತಾಗುತ್ತದೆ. ನಿಮ್ಮ ಬೆಸ್ಟ ಫ್ರೆಂಡ್ ಅನಾವಶ್ಯಕವಾಗಿ ನಿಮ್ಮಿಂದ ಏನನ್ನೂ ಸಹ ಬಯಸುವುದಿಲ್ಲ. ಆದರೆ ಅವಶ್ಯಕತೆ ಬಿದ್ರೆ ನಿಮಗೆ ಎಲ್ಲವನ್ನೂ ಕೊಡಲು ತಯಾರಾಗುತ್ತಾರೆ.
ನೀವು ಎಡವಿದಾಗ ನಿಮ್ಮ ಬೆಸ್ಟಫ್ರೆಂಡ್ ನಿಮ್ಮನ್ನು ನೋಡಿ ನಗಬಹುದು. ಆದ್ರೆ ಅಪ್ಪಿತಪ್ಪಿ ನೀವೇನಾದರೂ ಕೆಳಗೆ ಬಿದ್ರೆ ಅವರು ತಕ್ಷಣವೇ ನಿಮ್ಮನ್ನು ಮೇಲೆತ್ತುತ್ತಾರೆ. ನಿಮಗಿಂತ ಅವರಿಗೆ ಜಾಸ್ತಿ ಸ್ಯಾಡ ಫೀಲಾಗುತ್ತದೆ. ಈ ಪಾಯಿಂಟ್ ನಿಮಗೆ ಈಜಿಯಾಗಿ ಅರ್ಥವಾಗಲ್ಲ. ಇದರ ಅರ್ಥ ಏನಪ್ಪ ಅಂದ್ರೆ ನಿಮ್ಮ ಬೆಸ್ಟ ಫ್ರೆಂಡ್ ನಿಮ್ಮ ಕೆಟ್ಟ ಕೆಲಸಗಳಿಗೆ ಕುಮ್ಮಕ್ಕು ಕೊಡಲ್ಲ ಅಂತರ್ಥ. ಅವರು ನಿಮ್ಮ ದುಶ್ಚಟಗಳಿಗೆ ಸಪೋರ್ಟ್ ಮಾಡಲ್ಲ. ನೀವು ದುಶ್ಚಟಗಳಿಗೆ ಬಲಿಯಾಗಲು ನಿಮ್ಮ ಬೆಸ್ಟ ಫ್ರೆಂಡ್ ಯಾವತ್ತೂ ಅವಕಾಶ ಕೊಡಲ್ಲ. ಒಂದು ವೇಳೆ ಕೊಟ್ರೆ ಅವರು ನಿಮ್ಮ ಬೆಸ್ಟ ಫ್ರೆಂಡ್ ಅಲ್ವೇ ಅಲ್ಲ.
ಜಗತ್ತೇ ಎದುರಾಗಿ ನಿಂತ್ರು ನಿಮ್ಮ ಬೆಸ್ಟ ಫ್ರೆಂಡ್ ನಿಮ್ಮ ಜೊತೆಗಿರ್ತಾರೆ. ಕಿವಿ ಚುಚ್ಚುವವರ ಮಾತಿಗೆಲ್ಲ ಅವರು ಕಿವಿ ಕೊಡಲ್ಲ.
ಉದಾಹರಣೆಗೆ ; ನಾನು 12thನಲ್ಲಿದ್ದಾಗ ನನ್ನ ಲೈಫಲ್ಲಿ ಒಂದು ಸಣ್ಣ ಬ್ಯಾಡ್ ಇನ್ಸಿಡೆಂಟಾಗಿತ್ತು. ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ನಮ್ಮ ಸಂಬಂಧಿಕರು, ನನ್ನ ನಕಲಿ ಗೆಳೆಯರು ಮತ್ತು ನಮ್ಮೂರ ಜನ ಹೊಟ್ಟೆಕಿಚ್ಚಿನಿಂದ, ಜಲಸಿಯಿಂದ ನನ್ನ ಬಗ್ಗೆ ಇಲ್ಲಸಲ್ಲದ ಗಾಸಿಪಗಳನ್ನು ಹಬ್ಬಿಸಿದರು. ಅವುಗಳನ್ನೆಲ್ಲ ನಿಜ ಅಂತಾ ನಂಬಿ ತುಂಬಾ ಜನ ನನ್ನ ನೋಡಿ ಗೇಲಿ ಮಾಡಿಕೊಂಡು ನಕ್ಕರು. ನನ್ನ ಟೀಚರ್ಸರೆಲ್ಲ ನನ್ನ ಬಗ್ಗೆ ಸ್ಕೂಲಲ್ಲಿ ಅಪಪ್ರಚಾರ ಮಾಡಿದರು. ಆ ಟೈಮಲ್ಲಿ ನಮ್ಮ ಫ್ಯಾಮಿಲಿ ಮೆಂಬರ್ಸ, ಫ್ರೆಂಡ್ಸ್, ಟೀಚರ್ಸ, ರಿಲೆಟಿವ್ಸ, ವಿಲೆಜರ್ಸ ಎಲ್ಲರೂ ನನ್ನ ಅಗೆನಷ್ಟ ಆಗಿದ್ರು. ಆವಾಗ ನನ್ನ ಜೊತೆಗಿದ್ದ ಏಕೈಕ ವ್ಯಕ್ತಿ ನನ್ನ ಬೆಸ್ಟಫ್ರೆಂಡ್. ಅವತ್ತಿನಿಂದ ಇವತ್ತಿನವರೆಗೂ ಆಕೆ ನನ್ನ ಜೊತೆಗಿದ್ದು ನನ್ನಲ್ಲಿ ಧೈರ್ಯ ತುಂಬಿದಾಳೆ, ನನ್ನನ್ನು ಮೊಟಿವೆಟ್ ಮಾಡಿದಾಳೆ, ನನಗೆ ಬಹಳಷ್ಟು ಸಲ ಹಣ ಸಹಾಯ ಮಾಡಿದ್ದಾಳೆ. ನಾನು ನನ್ನ ಜೀವನದಲ್ಲಿ ಬೌನ್ಸಬ್ಯಾಕ್ ಮಾಡಲು ಇನ್ಸಪಿರೇಷನ ಮತ್ತು ಎನರ್ಜಿ ಎರಡು ಅವಳೇ.
ಬೆಸ್ಟ ಫ್ರೆಂಡ್ ಬಗ್ಗೆ ಕೊನೆಯದಾಗಿ ಒಂದು ಮಾತನ್ನು ಹೇಳಬೇಕಂದ್ರೆ ನಿಮ್ಮ ಬೆಸ್ಟ ಫ್ರೆಂಡಗೆ ನಿಮ್ಮನ್ನು ಸುಮ್ನೆ ಬಿಟ್ಟಿರೋಕೆ ಆಗಲ್ಲ. ಅವರು ನಿಮ್ಮನ್ನು ಯಾವುದೇ ಕಾರಣಕ್ಕೂ ಒಂಟಿಯಾಗಿ ಇರಲು ಬಿಡಲ್ಲ. ನೀವು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ರು ಸಹ, ನೀವು ಎಷ್ಟೇ ಬಿಜಿಯಾಗಿದ್ರು ಸಹ ಅವರು ನಿಮ್ಮನ್ನು ಡಿಸ್ಟರ್ಬ ಮಾಡದೇ ಬಿಡಲ್ಲ. ನಿಮಗೆ ಏನಾದರೂ ಒಂದನ್ನು ಅನ್ನದಿದ್ರೆ ಅವರಿಗೆ ತಿಂದ ಅನ್ನ ಜೀರ್ಣವಾಗಲ್ಲ. ಅವರು ಅವರ ಸುಖದು:ಖಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳದೇ ಬಿಡಲ್ಲ. ಅವರು ಮಧ್ಯೆರಾತ್ರಿಯಾದ್ರೂ ನಿಮಗೆ ಕಾಲ ಮಾಡೋಕೆ ಹಿಂದುಮುಂದು ನೋಡೊಲ್ಲ. ಅವರು ಸೀದಾ ಕಾಲ ಮಾಡ್ತಾರೆ. ತುಂಬಾ ಎಮರ್ಜೆನ್ಸಿ ಇದ್ರೆ ಸೀದಾ ಮನೆಗೂ ಬರ್ತಾರೆ. ನೀವಿರುವಾಗ ಅವರು ಬೇರೆ ಯಾರ ಬಳಿಯೂ ಸಹಾಯ ಕೇಳಲ್ಲ.
ನನ್ನ ಜೀವನದ ಅನುಭವದ ಆಧಾರದ ಮೇಲೆ ಬೆಸ್ಟಫ್ರೆಂಡ ಬಗ್ಗೆ ನನಗಿಷ್ಟೇ ಗೊತ್ತಿರೋದು. ನಾನ ನೋಡಿದಂಗೆ ಎಲ್ಲೋ ನೂರಕ್ಕೆ ಒಬ್ಬರಿಗೆ ಬೆಸ್ಟಫ್ರೆಂಡ್ಸ ಸಿಗ್ತಾರೆ. ಮಿಕ್ಕವರು ಪ್ರಾಬ್ಲಮ್ ಬಂದಾಗ ಮಾಯವಾಗಿ ಪಾರ್ಟಿಲಿ ಪ್ರತ್ಯಕ್ಷವಾಗೋರನ್ನ, ಬಿಟ್ಟಿ ಟೀ ಕುಡಿದು ಬೈಕ್ ಮೇಲೆ ಜೊತೇಲಿ ಊರ ಸುತ್ತೋಕೆ ಬರೋ ಡಮ್ಮಿ ಫ್ರೆಂಡ್ಸಗಳನ್ನು ರಿಯಲ್ ಫ್ರೆಂಡ್ಸ್ ಅನಕೊಂಡು ಹಾಯಾಗಿರ್ತಾರೆ ಇಲ್ಲ ಹಾಳಾಗ್ತಾರೆ. ನಿಮ್ಮ ಲೈಫಲ್ಲಿ ನಿಮಗ್ಯಾರಾದರೂ ಟ್ರೂ ಬೆಸ್ಟ ಫ್ರೆಂಡ್ ಸಿಕ್ಕಿದ್ರೆ ಯಾವುದೇ ಕಾರಣಕ್ಕೂ ಅವರನ್ನು ಕಳೆದುಕೊಳ್ಳಬೇಡಿ. ಅವರಿಗೆ ಮೋಸ ಮಾಡಬೇಡಿ. ನಿಯತ್ತಾಗಿರಿ, ನಗ್ತಾಯಿರಿ. All the best and Thanks You...