ಡೋಂಟ್ ವರಿ - Don't Worry - Kannada Motivational Article - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಡೋಂಟ್ ವರಿ - Don't Worry - Kannada Motivational Article

ಡೋಂಟ್ ವರಿ - Don't Worry - Kannada Motivational Article

ನಿಮಗೆ ಅವಮಾನವಾದ ಜಾಗದಲ್ಲೇ ನಿಮಗೆ ಒಂದಲ್ಲ ಒಂದಿನ ಸನ್ಮಾನ ಸಿಗುತ್ತದೆ Don't worry. ಆದರೆ Terms & Conditions apply.

ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುವ ಜನ ಒಂದಲ್ಲ ಒಂದಿನ ಬಾಯ್ಮುಚ್ಚಿಕೊಂಡು ಸೈಡಲ್ಲಿತ್ತಾರೆ Don't worry. ಆದರೆ Terms & Conditions apply.

ನಿಮ್ಮನೀಗ ನೆಗ್ಲೆಕ್ಟ ಮಾಡಿದ ಜನ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗಲು ನಿಮ್ಮ ಮನೆ ಮುಂದೆ ಕಾಯ್ತಾರೆ Don't worry. ಆದರೆ Terms & Conditions apply.

ನಿಮ್ಮ ಕಾಲೆಳೆದ ಜನ ಒಂದಲ್ಲ ಒಂದಿನ ನಿಮ್ಮ ಕಾಲ ಕೆಳಗಿರ್ತಾರೆ Don't worry. ಆದರೆ Terms & Conditions apply.

ನಿಮ್ಮ ಬಳಿ ಕಾರಿಲ್ಲ, ಬ್ಯಾಂಕ್ ಬ್ಯಾಲನ್ಸ ಚೆನ್ನಾಗಿಲ್ಲ, ಇರೋಕೆ ದೊಡ್ಡ ಮನೆಯಿಲ್ಲ ಅಂತಾ ನಿಮ್ಮನ್ನು ಬಿಟ್ಟೋದ ನಿಮ್ಮ X ಲವರ್ ಒಂದಲ್ಲ ಒಂದಿನ ಪಶ್ಚಾತ್ತಾಪ ಪಡ್ತಾಳೆ Don't worry. ಆದರೆ Terms & Conditions apply. 

ನಿಮ್ಮನ್ನು ಫೇಸ್ಬುಕಲ್ಲಿ ಬ್ಲಾಕ್ ಮಾಡಿದ ಹುಡುಗಿ ಮುಂದೊಂದಿನ ನಿಮ್ಮನ್ನು ಗೂಗಲನಲ್ಲಿ ಹುಡುಕುತ್ತಾಳೆ Don't worry. ಆದರೆ Terms & Conditions apply. 

ನಿಮ್ಮನ್ನು ಹೇಟ್ ಮಾಡುವ ಗಂಡ, ಗೋಳಿಡಿದುಕೊಳ್ಳುವ ಅತ್ತೆ ಒಂದಲ್ಲ ಒಂದಿನ ನಿಮ್ಮ ಕೇರ್ ತೆಗೆದುಕೊಳ್ಳುತ್ತಾರೆ Don't worry. ಆದರೆ Terms & Conditions apply.

ನೀವು ಪಟ್ಟ ಕಷ್ಟಕ್ಕೆ, ತೆಗೆದುಕೊಂಡ ದಿಟ್ಟ ನಿರ್ಧಾರಕ್ಕೆ ಒಂದಲ್ಲ ಒಂದಿನ ಮಹಾನ್ ಪ್ರತಿಫಲ ಸಿಕ್ಕೇ ಸಿಗುತ್ತದೆ Don't worry. ಆದರೆ Terms & Conditions apply.

ನಿಮ್ಮ ಎಲ್ಲ ಕನಸುಗಳು ಒಂದಲ್ಲ ಒಂದಿನ ಖಂಡಿತ ನನಸಾಗುತ್ತವೆ Don't worry. ಆದರೆ Terms & Conditions apply.

ನಿಮ್ಮ ಪ್ರತಿ ಕಣ್ಣೀರ ಹನಿಗೆ ಒಂದಲ್ಲ ಒಂದಿನ ನ್ಯಾಯ ಸಿಕ್ಕೇ ಸಿಗುತ್ತದೆ Don't worry. ಆದರೆ Terms & Conditions apply.

ನೀವು ಸೋತಾಗ ಕೇಕೆ ಹಾಕಿ ಗೇಲಿ ಮಾಡಿಕೊಂಡು ನಕ್ಕ ಜನ ಮುಂದೆ ಒಂದಲ್ಲ ಒಂದಿನ ನೀವು ಗೆದ್ದಾಗ ನಿಮ್ಮನ್ನು ಹೆಗಲ ಮೇಲೆ ಕೂಡಿಸಿಕೊಂಡು ಮೆರೆಸುತ್ತಾರೆ Don't worry. ಆದರೆ Terms & Conditions apply.


ಡೋಂಟ್ ವರಿ - Don't Worry - Kannada Motivational Article

                   ಎಲ್ಲ ಓಕೆ, ಆದರೆ ಈ Terms & Conditions ಎಲ್ಲ ಯಾಕೆ?  ಅಂತಾ ನೀವು ಯೋಚಿಸುತ್ತಿರಬಹುದು. ಫ್ರೀಯಾಗಿ ಸಿಕ್ಕಿರೋದಕ್ಕೆ ಬೆಲೆಯಿರಲ್ಲ. ಬೆವರು ಸುರಿಸಿ ಪಡೆದಾಗಲೇ ಅದಕ್ಕೊಂದು ಬೆಲೆ ಇರೋದು. ಆ Terms & Conditions ಏನಪ್ಪ ಅಂದ್ರೆ Work, Work and Work. ನಿಮಗೆ ಎಷ್ಟೇ ಕಷ್ಟವಾದರೂ, ನಷ್ಟವಾದರೂ, ನೋವಾದರೂ, ಡಿಮೋಟಿವೇಟ ಆದರೂ ನೀವು ನಿಮ್ಮ ಕೆಲಸವನ್ನು ಅರ್ಧಕ್ಕೆ ಬಿಡದೇ ಮಾಡಿದರೆ ಸಾಕು ನಿಮ್ಮೆಲ್ಲ ಸಮಸ್ಯೆಗಳು ಸಾಲ್ವ ಆಗುತ್ತವೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಸಾಯಿಸುವ ತಾಕತ್ತು ನಿಮ್ಮ ಕೆಲಸಕ್ಕೆ ಮಾತ್ರ ಇದೆ. ನೀವು ನಿಮ್ಮ ಕಲೆಯನ್ನು ಕೊಲೆ ಮಾಡದೆ ನಿಮ್ಮ ಪ್ಯಾಷನನ್ನು ಫಾಲೋ ಮಾಡಿದರೆ ಸಾಕು ನಿಮ್ಮೆಲ್ಲ ಕನಸುಗಳು ನನಸಾಗುತ್ತವೆ. ನಿಮ್ಮ ಎಲ್ಲ ಬಯಕೆಗಳನ್ನು ಈಡೇರಿಸುವ ತಾಕತ್ತು ನಿಮ್ಮ ಪ್ಯಾಷನಗೆ ಮಾತ್ರ ಇದೆ. Work & Passion ಇವೇ ಆ Terms & Conditionsಗಳು. ಇವೆರಡನ್ನು ಫಾಲೋ ಮಾಡಿದರೆ ಸಾಕು ಎಲ್ಲ ಸರಿಹೋಗುತ್ತದೆ. All the best and Thanks you....

Blogger ನಿಂದ ಸಾಮರ್ಥ್ಯಹೊಂದಿದೆ.