ಅಸಾಧ್ಯವಾದ ಸಂಗತಿಗಳನ್ನು ಸಾಧಿಸುವುದು ಹೇಗೆ? : How to achieve impossible things? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಅಸಾಧ್ಯವಾದ ಸಂಗತಿಗಳನ್ನು ಸಾಧಿಸುವುದು ಹೇಗೆ? : How to achieve impossible things? in Kannada

ಅಸಾಧ್ಯವಾದ ಸಂಗತಿಗಳನ್ನು ಸಾಧಿಸುವುದು ಹೇಗೆ? How to achieve impossible things?

                        ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಈ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ, ಮನುಷ್ಯ ಮನಸ್ಸು ಮಾಡಿದರೆ ಎಲ್ಲವನ್ನು ಸಾಧಿಸಬಹುದು ಅಂತಾ ಬಹಳಷ್ಟು ಮೋಟಿವೇಷನಲ್ ಸ್ಪೀಕರಗಳು ಹೇಳುತ್ತಾರೆ. ನಾನು ಅವರು ಹೇಳ್ತಿರೋದು ತಪ್ಪು ಅಂತಾ ಹೇಳ್ತಿಲ್ಲ. ಅವರು ಹೇಳ್ತಿರೋದು ಸರಿಯಾಗಿದೆ. ಆದರೆ ಕೆಲವೊಂದಿಷ್ಟು ಸಂಗತಿಗಳು ಅಸಾಧ್ಯವಾಗಿವೆ. ಅವುಗಳ ಬಗ್ಗೆ ಈಗ ಮಾತಾಡೋದ ಬೇಡ. But in most of the cases, ಸಮಸ್ಯೆಗಳು ಎದುರಾದಾಗ ಸಾಧ್ಯವಿರುವ ಸಂಗತಿಗಳೇ ಅಸಾಧ್ಯ ಅಂತ ಅನ್ನಿಸುತ್ತವೆ. ಕೂಲ ಆಗಿ ಯೋಚನೆ ಮಾಡಿ ನೋಡಿದರೆ ಸಾಧ್ಯ ಅಂತಾ ಅನ್ನಿಸುತ್ತವೆ. ಆದರೆ ಸಮಸ್ಯೆ ಎದುರಾದಾಗ ಅಸಾಧ್ಯ ಅಂತಾ ಅನ್ನಿಸುತ್ತವೆ. ಇಂಥ Impossible ಸಂಗತಿಗಳನ್ನು Possible ಮಾಡುವುದು ಹೇಗೆ ಎಂಬುದನ್ನು ಈ ಎಪಿಸೋಡನಲ್ಲಿ ನೋಡೋಣಾ.


ಅಸಾಧ್ಯವಾದ ಸಂಗತಿಗಳನ್ನು ಸಾಧಿಸುವುದು ಹೇಗೆ? How to achieve impossible things?

ಗೆಳೆಯರೇ, ಅಸಾಧ್ಯವಾದ ಸಂಗತಿಗಳನ್ನು ಸಾಧಿಸಲು ಎರಡೇ ಎರಡು ಸ್ಟೆಪಗಳಿವೆ. ಅವುಗಳಲ್ಲಿ

Step - 1 : Kill the Logic : ಲಾಜಿಕನ್ನು ಸಾಯಿಸಿ

Step - 2 : Work Consistently : ಕನ್ಸಿಸ್ಟಂಟಾಗಿ ಕೆಲಸ ಮಾಡಿ.

            ಗೆಳೆಯರೇ, ಯಾವುದೇ ಒಂದು ಕನಸನ್ನು ಕಾಣುವಾಗ ಇಲ್ಲವೇ ಕೆಲಸ ಪ್ರಾರಂಭಿಸುವಾಗ ಲಾಜಿಕನ್ನು ಮಧ್ಯೆ ತರಬೇಡಿ. ಈ ಲಾಜಿಕಗೆ ಬಹಳಷ್ಟು ಇಂಪಾರಟನ್ಸ ಕೊಡಬೇಡಿ. ಏಕೆಂದರೆ ಈ ಲಾಜಿಕ್ ನಿಮ್ಮನ್ನು ಹೆದರಿಸುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತದೆ. ಸಾಧ್ಯವಿರುವ ಸಂಗತಿಯನ್ನು ಅಸಾಧ್ಯವೆಂಬಂತೆ ತೋರಿಸುತ್ತದೆ.

ಉದಾಹರಣೆಗಾಗಿ ; ನಾನು ಮತ್ತು ನನ್ನ ಬ್ರದರ್ ನಮ್ಮ ಕಂಪನಿ ಸ್ಟಾರ್ಟ ಮಾಡುವಾಗ ಬಿಜನೆಸ್ ಮಾಡಲು ಕೋಟ್ಯಾಂತರ ರೂಪಾಯಿ ಬಜೆಟ್ ಬೇಕು, ಬಜೆಟ ಇಲ್ಲದಿದ್ದರೆ ಬಿಜನೆಸ್ ಸಕ್ಸೆಸಫುಲ್ಲಾಗಲ್ಲ ಎಂಬ ಲಾಜಿಕಗೆ ತಲೆ ಕೆಡಿಸಿಕೊಂಡಿದ್ರೆ ನಾವಿಬ್ಬರೂ ನಮ್ಮ ಕಂಪನಿಯನ್ನು ಪ್ರಾರಂಭಿಸುತ್ತಿರಲಿಲ್ಲ ಮತ್ತು ಅದನ್ನು ಸಕ್ಸೆಸಫುಲ್ಲಾಗಿ ರನ್ ಮಾಡುತ್ತಿರಲಿಲ್ಲ. ಅದಕ್ಕಾಗಿ ಗೆಳೆಯರೇ, ಯಾವುದೇ ಕೆಲಸದ ಆರಂಭದಲ್ಲಿ ಬಹಳಷ್ಟು ಲಾಜಿಕಲ್ಲಾಗಿ ಯೋಚಿಸಬೇಡಿ. ಮೂರ್ಖ ಲಾಜಿಕಗಳಿಗೆ ಹೆದರಿ ಹಿಂದೆ ಸರಿಯಬೇಡಿ. ಬಿಜನೆಸ್ ಸ್ಟಾರ್ಟ ಮಾಡುವಾಗ ಯಾರು ಸಹ 100% ಪರಫೆಕ್ಟಾಗಿರಲ್ಲ. ಹಂತಹಂತವಾಗಿ ಎಲ್ಲರೂ ಪರಫೆಕ್ಟಾಗುತ್ತಾರೆ.


ಅಸಾಧ್ಯವಾದ ಸಂಗತಿಗಳನ್ನು ಸಾಧಿಸುವುದು ಹೇಗೆ? How to achieve impossible things?

             ಒಂದು ವೇಳೆ ಲಾಜಿಕಗೆ ಹೆದರಿದ್ದರೆ ತೆನಸಿಂಗ ನಾರ್ಗೆ ಮೌಂಟ್ ಎವರೆಸ್ಟನ್ನು ಏರುತ್ತಿರಲಿಲ್ಲ. ಪೆಟ್ರೋಲ್ ಬಂಕಲ್ಲಿ ಕೆಲಸ ಮಾಡುತ್ತಿದ್ದ ಧೀರುಬಾಯಿ ಅಂಬಾನಿ ರಿಲಾಯನ್ಸ ಎಂಬ ದೈತ್ಯ ಸಾಮ್ರಾಜ್ಯವನ್ನು ಕಟ್ಟುತ್ತಿರಲಿಲ್ಲ, ವಡೋದರಾ ರೈಲ್ವೆ ಸ್ಟೇಷನನಲ್ಲಿ ಟೀ ಮಾರುತ್ತಿದ್ದ ಹುಡುಗ ಪ್ರಧಾನಿ ನರೇಂದ್ರ ಮೋದಿಯಾಗುತ್ತಿರಲಿಲ್ಲ, ಸ್ವಂತ ಖರ್ಚಲ್ಲಿ ಫಿಲ್ಮಸೀಟಿಗೂ ಬರುವ ಯೋಗ್ಯತೆಯಿಲ್ಲದ ಹುಡುಗ ಬಾಲಿವುಡ ಬಾದಷಾ ಆಗುತ್ತಿರಲಿಲ್ಲ, ಆರ್ಡಿನರಿ ಕಾರ ಡ್ರೈವರಾಗಿದ್ದ ನಾನು ಈಗ ಮುಂದೆ ನಿಂತು ಮಾತನಾಡುತ್ತಿರಲಿಲ್ಲ. So friends, kill the logic. ಲಾಜಿಕನ್ನು ಸಾಯಿಸಿ. ನಿಮ್ಮ ಮೇಲೆ, ನಿಮ್ಮ ಕನಸಿನ ಮೇಲೆ ನಂಬಿಕೆಯಿಟ್ಟು ಕೆಲಸ ಸ್ಟಾರ್ಟ ಮಾಡಿ. ನಿಮ್ಮತ್ರ ಏನಿಲ್ಲದಿದ್ದರೂ ಕೆಲಸ ಸ್ಟಾರ್ಟ ಮಾಡಿ. ಎಲ್ಲವೂ ಮತ್ತು ಎಲ್ಲರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಎಲ್ಲ ಅಸಾಧ್ಯ ಸಂಗತಿಗಳು ಖಂಡಿತವಾಗಿಯೂ ಸಾಧ್ಯವಾಗುತ್ತವೆ.

ಅಸಾಧ್ಯವಾದ ಸಂಗತಿಗಳನ್ನು ಸಾಧಿಸುವುದು ಹೇಗೆ? How to achieve impossible things?

                       ನೀವು ರಾತ್ರೋರಾತ್ರಿ ಸಕ್ಸೆಸಫುಲ್ ಆಗ್ತೀರಾ, ನೀವು ರಾತ್ರೋರಾತ್ರಿ ಫೇಮಸ್ ಆಗ್ತೀರಾ, ನೀವು ರಾತ್ರೋರಾತ್ರಿ ಬಿಲೆನಿಯರ್ ಆಗ್ತೀರಾ, ಆದರೆ ಆ ಸ್ಪೆಷಲ್ ರಾತ್ರಿಯ ಹಿಂದೆ ಎಷ್ಟು ಹಗಲುರಾತ್ರಿಗಳ ಸ್ಟ್ರಗಲಯಿದೆ, ಎಫರ್ಟಿದೆ ಎಂಬುದು ನಿಮಗಷ್ಟೇ ಗೊತ್ತಿರುತ್ತದೆ. ಆ ಸಕ್ಸೆಸಿನ ಹಿಂದೆ ಎಷ್ಟು ರಾತ್ರಿಗಳ ನಿದ್ದೆಯ ತ್ಯಾಗವಿದೆ, ಎಷ್ಟು ಸಮಸ್ಯೆಗಳ ಸಾವಿದೆ ಎಂಬುದು ನಿಮಗಷ್ಟೇ ಗೊತ್ತಿರುತ್ತದೆ. ಕನ್ಸಿಸ್ಟನ್ಸಿಯಿಂದಲೇ ನಿಮಗೆ ಆ ಸಕ್ಸೆಸ್ ಸಿಕ್ಕಿರುತ್ತದೆ, ಕನ್ಸಿಸ್ಟನ್ಸಿಯಿಂದಲೇ ನೀವು ರಾತ್ರೋರಾತ್ರಿ ಫೇಮಸ್ ಆಗ್ತೀರಿ. ಕನ್ಸಿಸ್ಟಂಟಾಗಿ ಕೆಲಸ ಮಾಡಿದರೆ ದೊಡ್ಡದೊಡ್ಡ ಪರ್ವತಗಳೇ ಪುಡಿಪುಡಿಯಾಗುತ್ತವೆ. ಇನ್ನೂ ನಿಮ್ಮ ಸಣ್ಣಪುಟ್ಟ ಸಮಸ್ಯೆಗಳು ಯಾವ ಲೆಕ್ಕ? ಅದಕ್ಕಾಗಿ ಕನ್ಸಿಸ್ಟಂಟಾಗಿ ಕೆಲಸ ಮಾಡಿ. ಜನ ನಿಮಗೆ ತಲೆ ಕೆಟ್ಟಿದೆ ಅಂದ್ರು ನೀವು ನಿಮ್ಮ ಕೆಲಸವನ್ನು ನಿಯತ್ತಾಗಿ ಮಾಡಿ.

           ಓಕೆ ಗೆಳೆಯರೇ, ಅಸಾಧ್ಯವಾದ ಸಂಗತಿಗಳನ್ನು ಸಾಧಿಸಲು ಇರುವ ಏಕೈಕ ಮಾರ್ಗವೆಂದರೆ Consistent work and Self Belief ಒಂದೇ. ನಿಮ್ಮ ಮೇಲೆ ನಂಬಿಕೆಯಿಟ್ಟು ನಿಮ್ಮ ಕೆಲಸವನ್ನು ಕನ್ಸಿಸ್ಟಂಟಾಗಿ ಮಾಡಿ, ನಿಮ್ಮ ಕೆಲಸ ಎಷ್ಟೇ ಕಠಿಣವಾಗಿದ್ದರೂ ಸಹ ಸಾಧ್ಯವಾಗುತ್ತದೆ, ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ. All the best and Thanks you...Blogger ನಿಂದ ಸಾಮರ್ಥ್ಯಹೊಂದಿದೆ.