ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? - How to develop good habits in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? - How to develop good habits in Kannada

ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? How to develop good habits

             ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಕೆಟ್ಟ ಚಟಗಳನ್ನು ಬಿಡುವುದು ಎಷ್ಟು ಕಷ್ಟವೋ, ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಅದಕ್ಕಿಂತಲೂ ಕಷ್ಟಕರವಾಗಿದೆ. ಏಕೆಂದರೆ ನಮ್ಮ ಮನಸ್ಸು ಸಾಮಾನ್ಯವಾಗಿ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದರ ಕಡೆಗೆ ಬೇಗನೇ ಆಕರ್ಷಿತವಾಗುತ್ತದೆ. ನಮಗೆ ಒಳ್ಳೆ ಸುದ್ದಿಗಳಿಗಿಂತ ಕೆಟ್ಟ ಸುದ್ದಿಗಳು, ಬ್ರೇಕಿಂಗ್ ನ್ಯೂಜಗಳು ಹೆಚ್ಚಿಷ್ಟವಾಗುತ್ತವೆ. ಅದಕ್ಕಾಗಿ ಒಳ್ಳೆಯ ಹ್ಯಾಬಿಟ್ಸಗಳನ್ನು ಬೆಳೆಸಿಕೊಳ್ಳಲು ನಮಗೆ ಕಷ್ಟವಾಗುತ್ತದೆ. ಆದರೂ ಸಹ ನಾವು ಕೆಲವೊಂದಿಷ್ಟು ಗುಡ್ ಹ್ಯಾಬಿಟ್ಸಗಳನ್ನು ಬೆಳೆಸಿಕೊಳ್ಳಲೇಬೇಕು. ಸೋ ಬನ್ನಿ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಗುಡ್ ಹ್ಯಾಬಿಟ್ಸಗಳನ್ನು ಬೆಳೆಸಿಕೊಳ್ಳುವುದು ಹೇಗೆ ಅಂತಾ ನೋಡೋಣಾ.

ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? How to develop good habits

         ಗುಡ್ ಹ್ಯಾಬಿಟ್ಸಗಳನ್ನು ಬೆಳೆಸಿಕೊಳ್ಳಲು ಎರಡು ವಿಧಾನಗಳಿವೆ. ಒಂದು ಡೇಡಿಕೆಷನ್ ಮೆಥಡ ಅಥವಾ ವಿಲ್ ಪವರ್ ಮೆಥಡ, ಎರಡನೆಯದ್ದು ಪ್ರ್ಯಾಕ್ಟೀಸ್ ಮೆಥಡ.

1) Dedication Method - Will Power Method.

                    ನಾವು ಸ್ಟ್ರಾಂಗ ಆಗಿ ಡಿಸಿಜನ್ ತೆಗೆದುಕೊಂಡು ಡೆಡಿಕೆಷನನಿಂದ ಯಾವುದೇ ಗುಡ್ ಹ್ಯಾಬಿಟನ್ನು ಬೇಗನೇ ಬೆಳೆಸಿಕೊಳ್ಳಬಹುದು. ಈ ಮೆಥಡನಿಂದ ಗುಡ್ ಹ್ಯಾಬಿಟನ್ನು ಬೆಳೆಸಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಏಕೆಂದರೆ ನಿಮಲ್ಲಿ ಪ್ರಬಲವಾದ ಇಚ್ಛಾಶಕ್ತಿ ಬೇಕಾಗುತ್ತದೆ. ಸ್ಟ್ರಾಂಗ್ ವಿಲ್ ಪವರ್ ಬೇಕಾಗುತ್ತದೆ. ಸೆಲ್ಫ ಮೋಟಿವೇಷನ ಬೇಕಾಗುತ್ತದೆ. ಅಂದಾಗಲೇ ನೀವು ಈ ಮೆಥಡನಿಂದ ಬೇಗನೆ ಯಾವುದೇ ಗುಡ್ ಹ್ಯಾಬಿಟನ್ನು ಬೆಳೆಸಿಕೊಳ್ಳಬಹುದು. 

ಉದಾಹರಣೆಗಾಗಿ ; ಬೆಳಿಗ್ಗೆ 4 ಗಂಟೆಗೆ ಎದ್ದು ರೆಡಿಯಾಗಿ ಜಿಮ್ಮಿಗೆ ಹೋಗಬೇಕೆಂದರೆ ಹೋಗಲೇಬೇಕು, ದಿನಾಲು ಎಕ್ಸರಸೈಜ ಮಾಡಬೇಕೆಂದರೆ ಮಾಡಲೇಬೇಕು, ಬಾಡಿ ಬಿಲ್ಡ ಮಾಡಬೇಕೆಂದರೆ ಮಾಡಲೇಬೇಕು. No any silly excuses. ರಾತ್ರಿ ಮಲಗಲು ಲೇಟಾಯ್ತು, ಬೆಳಿಗ್ಗೆ ಕಣ್ತೆರೆಯಲಿಲ್ಲ ಇಂಥ ಕುಂಟು ನೆಪಗಳೆಲ್ಲ ನಡೆಯಲ್ಲ. ಆದ್ರೆ ಈ ತರಹದ Will power ಬಹಳಷ್ಟು ಜನರಲ್ಲಿ ಇರಲ್ಲ. ನಾನು ಗಮನಿಸಿದಂತೆ 99% ಜನರಲ್ಲಿ ಇರಲ್ಲ. ನಿಮ್ಮ ಬಳಿ Strong will power ಇದ್ದರೆ ನೀವು ಈ ಮೆಥಡನಿಂದ ನಿಮಗೆ ಬೇಕಾದ ಗುಡ್ ಹ್ಯಾಬಿಟನ್ನು ಡೈರೆಕ್ಟಾಗಿ ಬೆಳೆಸಿಕೊಳ್ಳಿ. ಇಲ್ಲವಾದರೆ ಸೆಕೆಂಡ ಮೆಥಡನ್ನು ಫಾಲೋ ಮಾಡಿ.


ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? How to develop good habits

2) Practice Method - Small Start Self Reward Method.

               ಯಾವುದೇ ಗುಡ್ ಹ್ಯಾಬಿಟನ್ನು ಬೆಳೆಸಿಕೊಳ್ಳಲು ಇರುವ ಈಜಿ ಮತ್ತು ಬೆಸ್ಟ ಮೆಥಡಯೆಂದರೆ ಪ್ರ್ಯಾಕ್ಟೀಸ್ ಮೆಥಡ. ಈ ಪ್ರ್ಯಾಕ್ಟೀಸ್ ಮೆಥಡಗೆ Small Start Self Reward ಮೆಥಡ ಅಂತಲೂ ಕರೆಯುತ್ತಾರೆ. ನೀವು ಯಾವುದೇ ಒಂದು ಗುಡ್ ಹ್ಯಾಬಿಟನ್ನು ಒಂದೇ ದಿನದಲ್ಲಿ ಬೆಳೆಸಿಕೊಳ್ಳಲು ಮೊಸ್ಟ ಆಫ್ ದ ಕೇಸಸ ಸಾಧ್ಯವಿಲ್ಲ. ಒಮ್ಮೆಲೇ ದೊಡ್ಡ ಪರ್ವತದ ತುತ್ತ ತುದಿಗೆ ಏರಲು ಸಾಧ್ಯವಿಲ್ಲ. ಹಂತಹಂತವಾಗಿ ಒಂದೊಂದೆ ಹೆಜ್ಜೆಗಳನ್ನು ಇಡುತ್ತಾ ಏರಬೇಕಾಗುತ್ತದೆ. ಅದೇ ರೀತಿ ನಾವು ಹಂತಹಂತವಾಗಿ ಗುಡ್ ಹ್ಯಾಬಿಟನ್ನು ಪ್ರ್ಯಾಕ್ಟೀಸ್ ಮಾಡಿ ಬೆಳಸಿಕೊಳ್ಳಬೇಕಾಗುತ್ತದೆ.

           ನೀವು ಯಾವ ಗುಡ್ ಹ್ಯಾಬಿಟನ್ನು ಬೆಳಸಿಕೊಳ್ಳಲು ಬಯಸುತ್ತಿರೋ ಆ ಹ್ಯಾಬಿಟನ್ನು ಸಣ್ಣ ಪ್ರಮಾಣದಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿ. ಸಣ್ಣ ಪ್ರಮಾಣದಲ್ಲಿ ಅಂದರೆ ಅತಿ ಸಣ್ಣ ಪ್ರಮಾಣದಲ್ಲಿ. Small step means very small step.

ಉದಾಹರಣೆಗೆ : ನೀವು ಎಕ್ಸರಸೈಜ ಮಾಡುವ ಹ್ಯಾಬಿಟನ್ನು ಬೆಳೆಸಿಕೊಳ್ಳಬೇಕೆಂದಿದ್ದರೆ ಮೊದಲು ದಿನಾಲು ಬರೀ 2 ನಿಮಿಷ ಎಕ್ಸರಸೈಜ ಮಾಡಿ. ವಾಕಿಂಗ್ ಹ್ಯಾಬಿಟನ್ನು ಬೆಳೆಸಿಕೊಳ್ಳಬೇಕೆಂದಿದ್ದರೆ ಮೊದಲು ದಿನಾಲು ಬರೀ 5 ನಿಮಿಷವಷ್ಟೇ ವಾಕ್ ಮಾಡಿ. ನೀವು ಯೋಗ ಮತ್ತು ಪ್ರಾಣಾಯಾಮ ಮಾಡಬೇಕೆಂದಿದ್ದರೆ ಮೊದಲು ದಿನಾಲು ಬರೀ 1 ನಿಮಿಷ ಮಾತ್ರ ಪ್ರಾಣಾಯಾಮ ಮಾಡಿ. ಬುಕ್ ರೀಡಿಂಗ್ ಹ್ಯಾಬಿಟನ್ನು ಬೆಳೆಸಿಕೊಳ್ಳಬೇಕೆಂದಿದ್ದರೆ ದಿನಾಲು 1 ಪೇಜ್ ಮಾತ್ರ ಓದಿ. ಈ ರೀತಿ ಅತಿ ಸಣ್ಣ ಪ್ರಮಾಣದಲ್ಲಿ ನೀವು ಬೆಳಸಿಕೊಳ್ಳಬೇಕೆಂದಿರುವ ಹ್ಯಾಬಿಟನ್ನು ದಿನಾಲು ತಪ್ಪದೆ ಪ್ರ್ಯಾಕ್ಟಿಸ್ ಮಾಡಿ.


ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? How to develop good habits

             ಅತಿ ಸಣ್ಣ ಪ್ರಮಾಣದಲ್ಲಿ ಟಾರ್ಗೆಟ ಸೆಟ ಮಾಡಿ ದಿನಾಲು ಹ್ಯಾಬಿಟನ್ನು ಪ್ರ್ಯಾಕ್ಟಿಸ್ ಮಾಡುವುದರಿಂದ ನಿಮ್ಮ ಟಾರ್ಗೆಟ ಸುಲಭವಾಗಿ ಯಾವುದೇ ಬೇಜಾರಿಲ್ಲದೆ ಅಡತಡೆಯಿಲ್ಲದೆ ಕಂಪ್ಲಿಟಾಗುತ್ತದೆ. ಟಾರ್ಗೆಟ ಸಣ್ಣದಿರಲಿ ದೊಡ್ಡದಿರಲಿ, ಸಕ್ಸೆಸ್ ಇಸ ಸಕ್ಸೆಸ್. ಈಗ ನಿಮಗೆ ಖುಷಿಯಾಗುತ್ತದೆ. ಈ ಖುಷಿಯನ್ನು ಸಂಭ್ರಮಿಸಿ. ನಿಮ್ಮ ಸಕ್ಸೆಸ್ಸನ್ನು ಸೆಲೆಬ್ರೆಟ ಮಾಡಿ. ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ನಿಮ್ಮನ್ನು ನೀವು ಸೆಲ್ಪ ರಿವಾರ್ಡ ಮಾಡಿಕೊಳ್ಳಿ. ಇದೇ ರೀತಿ ಒಂದು ವಾರದ ತನಕ ತಪ್ಪದೆ ಮಾಡಿ. Small step practice and self reward, Small step practice and self reward ಈ ರೂಟಿನನ್ನು ಒಂದು ವಾರ ಕಂಟಿನ್ಯೂ ಮಾಡಿ. ಒಂದು ವಾರದ ನಂತರ ಈ ರೂಟಿನ ನಿಮ್ಮ ಬಾಡಿ ಕ್ಲಾಕಿಗೆ ಅಡಜಸ್ಟ ಆಗುತ್ತದೆ. ಆಗ ನಿಮ್ಮ ಸ್ಮಾಲ್ ಸ್ಟೆಪನ್ನು ಸ್ವಲ್ಪ ದೊಡ್ಡದು ಮಾಡಿಕೊಳ್ಳಿ. ಅಂದ್ರೆ 1 ಪೇಜ್ ಬದಲಾಗಿ 2 ಪೇಜ್ ಓದಿ, 1 ನಿಮಿಷ ಯೋಗ ಮಾಡುವ ಬದಲು 2 ನಿಮಿಷ ಮಾಡಿ. ಇದೇ ರೀತಿ ಮತ್ತೆ ಒಂದು ವಾರ ಪ್ರ್ಯಾಕ್ಟಿಸ್ ಮಾಡಿ. ನಿಮ್ಮನ್ನು ನೀವು ಸೆಲ್ಪ ರಿವಾರ್ಡ ಮಾಡಿಕೊಳ್ಳಿ. Small step and self reward ಈ ರೂಟಿನನ್ನು ಮಿಸ್ ಮಾಡಬೇಡಿ. ಈ ವಾರದ ನಂತರ ನಿಮ್ಮ ನೆಚ್ಚಿನ ಹ್ಯಾಬಿಟ ನಿಮ್ಮ ಬಾಡಿ ಕ್ಲಾಕಿನೊಂದಿಗೆ ಪರಫೇಕ್ಟಾಗಿ ಅಡಜಸ್ಟ ಆಗಿರುತ್ತದೆ. ನಿಮ್ಮಲ್ಲಿ ನಿಮ್ಮ ನೆಚ್ಚಿನ ಗುಡ್ ಹ್ಯಾಬಿಟ ಬೆಳೆದಿರುತ್ತದೆ. ಈಗ ನೀವು ಎಷ್ಟು ಬೇಕೋ ಅಷ್ಟು ಪೇಜಗಳನ್ನು ಓದಿ, ಎಷ್ಟು ಗಂಟೆ ಬೇಕೋ ಅಷ್ಟು ಗಂಟೆ ಎಕ್ಸರಸೈಜ ಮಾಡಿ.


ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆ? How to develop good habits

                     ಗೆಳೆಯರೇ, ಈ ರೀತಿ ನೀವು Small start and Self reward ಮೆಥಡನಿಂದ ಯಾವುದೇ ಗುಡ್ ಹ್ಯಾಬಿಟನ್ನು ಸುಲಭವಾಗಿ ಬೆಳಸಿಕೊಳ್ಳಬಹುದು. ಗುಡ್ ಹ್ಯಾಬಿಟಗಳನ್ನು ಬೆಳಸಿಕೊಳ್ಳಿ. ಹ್ಯಾಪಿ ಆ್ಯಂಡ್ ಸಕ್ಸೆಸಫುಲ್ ಲೈಫನ್ನು ಲೀಡ್ ಮಾಡಿ. Thanks you and all the best....

Blogger ನಿಂದ ಸಾಮರ್ಥ್ಯಹೊಂದಿದೆ.