ದುಶ್ಚಟಗಳನ್ನು ಬಿಡುವುದು ಹೇಗೆ? - How to quit bad habits? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ದುಶ್ಚಟಗಳನ್ನು ಬಿಡುವುದು ಹೇಗೆ? - How to quit bad habits? in Kannada

ದುಶ್ಚಟಗಳನ್ನು ಬಿಡುವುದು ಹೇಗೆ? How to quit bad habits?

                   ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನಾವು ಏನಾದರೂ ಒಂದು ಅಮೂಲ್ಯವಾದದ್ದನ್ನು ಪಡೆದುಕೊಳ್ಳಬೇಕೆಂದರೆ ಕೆಲವೊಂದಿಷ್ಟು ಕೆಟ್ಟ ಚಟಗಳನ್ನು ಬಿಡಲೇಬೇಕಾಗುತ್ತದೆ. ಬಹಳಷ್ಟು ಜನ ತಮ್ಮ ದುಶ್ಚಟಗಳನ್ನು ಬಿಡಲು ಪ್ರಯತ್ನಿಸುತ್ತಾರೆ. ಆದರೆ ಅವರಿಂದ ಬಿಡಲಾಗುವುದಿಲ್ಲ. ಅಂಥವರಿಗಾಗಿ ನಾನೀ ಅಂಕಣವನ್ನು ಬರೆಯುತ್ತಿರುವೆ. ಈ ಅಂಕಣದಲ್ಲಿ ದುಶ್ವಟಗಳನ್ನು ಬಿಡುವುದು ಹೇಗೆ ಎಂಬುದನ್ನು ನೋಡೋಣಾ.

                    ಯಾವುದೇ ದುಶ್ಚಟವನ್ನು ನಿಮ್ಮಿಂದ ಒಂದೇ ದಿನದಲ್ಲಿ ಬಿಡಕ್ಕಾಗಲ್ಲ. ಸಡನ್ನಾಗಿ ಒಂದೇ ದಿನದಲ್ಲಿ ಅಥವಾ ಒಂದು ವಾರದಲ್ಲಿ ನಿಮಗೆ ಯಾವುದೇ ದುಶ್ಚಟವನ್ನು ಬಿಡಲು ಸಾಧ್ಯವಿಲ್ಲ. ನೀವು ಸ್ಲೋಲಿ ಸಣ್ಣ ಸಣ್ಣ ಸ್ಟೆಪಗಳಲ್ಲಿ ಆ ದುಶ್ಚಟವನ್ನು ಹಂತಹಂತವಾಗಿ ಬಿಡಬೇಕಾಗುತ್ತದೆ. ಮೊದಲು ದುಶ್ಚಟದ ರೂಟನ್ನು ಸರಿ ಮಾಡಿದರೆ ಸಾಕು ಫ್ರುಟ್ ತಂತಾನೇ ಸರಿಯಾಗುತ್ತದೆ. ನೀವು ಯಾವುದೇ ದುಶ್ಚಟವನ್ನು ಶುರು ಮಾಡಿಕೊಳ್ಳುವಾಗ 0, 30, 60, 90, Full ಎಂಬ ಪ್ಯಾಟರ್ನನಲ್ಲಿ ಸ್ಟಾರ್ಟ ಮಾಡಿರುತ್ತೀರಿ ಅಂದರೆ ನೀವು ಬಿಡೋವಾಗ Full, 90, 60, 30, 0 ಪ್ಯಾಟರ್ನನನ್ನು ಫಾಲೋ ಮಾಡಬೇಕಾಗುತ್ತದೆ.

                    ಯಾವುದೇ ದುಶ್ಚಟವನ್ನು ಬಿಡೋಕೆ ಒಂದೇ ಒಂದು ಫವರಫುಲ್ ಸೂತ್ರವಿದೆ. ಅದೇನೆಂದರೆ "Develop a higher test to discard the lower one" ಅಂದರೆ ಕೆಟ್ಟ ಚಟವನ್ನು ಒಳ್ಳೆ ಚಟದಿಂದ ರಿಪ್ಲೆಸ್ ಮಾಡುವುದು ಎಂದರ್ಥ. ಈ ಫಾರ್ಮುಲಾವನ್ನು ನಾನು ಭಗವದ್ಗೀತೆಯಿಂದ ತಿಳಿದುಕೊಂಡಿರುವೆ. ಈ ಫಾರ್ಮುಲಾ ವರ್ಕೌಟ ಆಗಬೇಕೆಂದರೆ ನಿಮ್ಮಲ್ಲಿ ವಿಲ್ ಪವರ್ ಮತ್ತು ಕಮ್ಮಿಟಮೆಂಟ ಇರಲೇಬೇಕು. ಓಕೆ ಫೈನ್, ಈ ಫಾರ್ಮುಲಾ ಬಳಸಿಕೊಂಡು ದುಶ್ವಟಗಳನ್ನು ಬಿಡುವುದು ಹೇಗೆ ಎಂಬುದನ್ನು ನೋಡೋಣಾ.


ದುಶ್ಚಟಗಳನ್ನು ಬಿಡುವುದು ಹೇಗೆ? How to quit bad habits?

1) ಪೋ* ವಾಚಿಂಗ್ ಅಡಿಷ್ಕನ : P*** Watching Addiction

                       ಸಾಮಾನ್ಯವಾಗಿ ಒಂಟಿಯಾಗಿರುವ ಯುವಕ ಯುವತಿಯರು ಪೋ** ವಾಚಿಂಗಗೆ ಅಡಿಕ್ಟ ಆಗಿರುತ್ತಾರೆ. ಇದರಿಂದ ಅವರ ಕೆಲಸ, ಪ್ರೋಡಕ್ಟಿವಿಟಿ, ಸ್ಟಡಿ, ಸೆಲ್ಪ ಇಂಫ್ರೂವಮೆಂಟ, ಮೆಂಟಲ ಹೆಲ್ಥ, ಸ್ಲೀಪ್ ಕ್ವಾಲಿಟಿ, ಹ್ಯಾಪಿನೆಸ್ ಎಲ್ಲವೂ ಹಾಳಾಗಿರುತ್ತವೆ. ಅವರು ಈ ಕೆಟ್ಟ ಚಟವನ್ನು ಬಿಡಬೇಕು ಅಂತಾ ಪ್ರಯತ್ನಿಸುತ್ತಿರುತ್ತಾರೆ, ಅಷ್ಟರಲ್ಲಿ ಟಿವಿಯಲ್ಲೋ ಅಥವಾ ಸೋಸಿಯಲ್ ಮಿಡಿಯಾದಲ್ಲೋ ಏನೋ ಒಂದು ಸೆನ್ಸಿಬಲ್ ಫೋಟೋ ಅಥವಾ ವಿಡಿಯೋ ನೋಡಿ ಟ್ರಿಗರ್ ಆಗುತ್ತಾರೆ. ಮತ್ತೆ ಅಶ್ಲೀಲ ವಿಡಿಯೋಗಳನ್ನು ನೋಡಲು ಪ್ರಾರಂಭಿಸುತ್ತಾರೆ. ನೀವು ಅಂಥವರಲ್ಲಿ ಒಬ್ಬರಾಗಿದ್ದರೆ "Develop a higher test to discard the lower one" ಫಾರ್ಮುಲಾದಿಂದ ಈ ಕೆಟ್ಟ ಚಟವನ್ನು ಶಾಶ್ವತವಾಗಿ ಬಿಟ್ಟುಬಿಡಿ. 

               ಕೆಟ್ಟ ಚಟವನ್ನು ಬಿಡುವುದಕ್ಕಾಗಿ ಒಳ್ಳೆ ಚಟವನ್ನು ಬೆಳೆಸಿಕೊಳ್ಳಿ. ಅಶ್ಲೀಲ ಚಿತ್ರಗಳ ವಿಡಿಯೋಗಳನ್ನು ನೋಡುವ ಬದಲು ಸ್ಟಾಂಡಅಪ್ ಕಾಮಿಡಿಗಳನ್ನು ನೋಡಿ, ಒಳ್ಳೇ ಎಜುಕೇಶನಲ ಕಂಟೆಂಟಗಳನ್ನು ನೋಡಿ, ಅನಿಮೇಷನಗಳನ್ನು ನೋಡಿ. ನಿಮ್ಮ ಡರ್ಟಿ ಥಾಟ್ಸಗಳನ್ನು ಕಂಟ್ರೋಲ್ ಮಾಡುವುದಕ್ಕಾಗಿ ಡೇಲಿ ಯೋಗಾಭ್ಯಾಸ ಮಾಡಿ. ನಿಮ್ಮನ್ನು ಸದಾ ಕ್ರಿಯೆಟಿವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಒಂಟಿಯಾಗಿರುವುದನ್ನು ಬಿಟ್ಟು ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರಿ. ನಿಮ್ಮ ಈ ದರಿದ್ರ ದುಶ್ಚಟ ನಿಮ್ಮಿಂದ ದೂರ ಹೋಗುತ್ತದೆ.

ದುಶ್ಚಟಗಳನ್ನು ಬಿಡುವುದು ಹೇಗೆ? How to quit bad habits?

2) ಸೋಸಿಯಲ್ ಮೀಡಿಯಾಗಳ ಗೀಳು : Social Media Addiction

                        ಸದ್ಯಕ್ಕಂತು ಬಹಳಷ್ಟು ಜನ ಈ ಮೊಬೈಲ್ ಮತ್ತು ಸೋಸಿಯಲ್ ಮೀಡಿಯಾಗಳಿಗೆ ಅಂಟಿಕೊಂಡಿದ್ದಾರೆ. ಯಾವಾಗ ನೋಡಿದರೂ ವಾಟ್ಸಾಪಲ್ಲಿ ಚಾಟಿಂಗೂ, ಫೇಸ್ಬುಕಲ್ಲಿ ಲೈಕು ಕಾಮೆಂಟು, ಇನ್ಸಸ್ಟಾಗ್ರಾಮಲ್ಲಿ ಫೋಟೋಸ ಅಂತಾ ಬೆಳಿಗ್ಗೆ ಏದ್ದಾಗಿನಿಂದ ಮಧ್ಯರಾತ್ರಿ ತನಕ ಅದರಲ್ಲೇ ಬಿದ್ದಿರುತ್ತಾರೆ. ಅನ್ನ, ನೀರು, ಗಾಳಿಗಿಂತ ಮೊಬೈಲ್ ಹಾಗೂ ಇಂಟರನೆಟ್ಟೇ ಮುಖ್ಯ ಅನ್ನೋ ಹಾಗೆ ಆಡ್ತಾರೆ. ಲೈಕ್ ಸಿಗಲಿಲ್ಲ ಅಥವಾ ರಿಪ್ಲೆ ಬರಲಿಲ್ಲ ಅಂದ್ರೆ ಸಾಯೋ ಹಾಗೆ ಆಡ್ತಾರೆ. ತಮ್ಮ ಕೆಲಸ ಎಲ್ಲ ಬಿಟ್ಟು ಟೈಮಪಾಸ್ ಮಾಡ್ತಾರೆ.  ನೀವು ಸಹ ಅಂಥವರಲ್ಲಿ ಒಬ್ಬರಾಗಿದ್ದರೆ ಈ ಸೋಸಿಯಲ್ ಮೀಡಿಯಾ ಅಡಿಕ್ಷನನ್ನು ಬಿಡುವುದಕ್ಕಾಗಿ ಒಳ್ಳೆ ಯುಜಫುಲ್ ವಿಷಯಗಳ ಅಡಿಕ್ಷನನ್ನು ಅಂಟಿಸಿಕೊಳ್ಳಿ. 

ಉದಾಹರಣೆಗೆ : ಬುಕ್ ರೀಡಿಂಗ್ ಹವ್ಯಾಸವನ್ನು ಬೆಳೆಸಿಕೊಳ್ಳಿ. ಸರಿಯಾಗಿ ಟೈಮ ಮ್ಯಾನೆಜ ಮಾಡಿ. ನಿಮ್ಮ ಗೋಲಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಿ. ಸೋಸಿಯಲ್ ಮೀಡಿಯಾಗಳನ್ನು ನಿಮ್ಮ ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಬಿಜನೆಸ್ ಗ್ರೋಥಗಾಗಿ ಬೆಳೆಸಿಕೊಳ್ಳಿ. ಆದರೆ Too much is to be bad ಎಂಬುದನ್ನು ಮರೆಯಿದಿರಿ.


ದುಶ್ಚಟಗಳನ್ನು ಬಿಡುವುದು ಹೇಗೆ? How to quit bad habits?

3) ಆಂತರಿಕ ದುಶ್ಚಟಗಳು : Inner Bad Habits

        ಅತಿಯಾದ ಆತುರತೆ, ದುರಾಸೆ, ಕಾಮ, ಕ್ರೋಧ, ಮದ, ಮತ್ಸರ, ಲೋಭ, ಜಲಸಿ, ಸ್ವಾರ್ಥ, ಆಲಸಿತನ, ನೆಪ ಹೇಳುವುದು, ಅನಾವಶ್ಯಕ ವಸ್ತುಗಳ ಬಗ್ಗೆ ಮತ್ತು ವ್ಯಕ್ತಿಗಳ ಬಗ್ಗೆ ಚಿಂತಿಸುವುದು, ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಇವೆಲ್ಲ ಆಂತರಿಕ ದುಶ್ವಟಗಳಾಗಿವೆ. ಇವುಗಳನ್ನು ಬಿಡದಿದ್ದರೆ ಮನುಷ್ಯ ಎಷ್ಟೇ ಎತ್ತರವಾದ ಸ್ಥಾನದಲ್ಲಿದ್ದರೂ ಬೇಗನೆ ಕೆಳಗೆ ಬೀಳುತ್ತಾನೆ. ಆದ್ದರಿಂದ ಈ ಆಂತರಿಕ ದುಶ್ಚಟಗಳನ್ನು ನಾವು ಬಿಡಲೇಬೇಕು. ಇವುಗಳನ್ನು ಬಿಡಲು ಮೂರು ದಾರಿಗಳಿವೆ.

೧) ನಮ್ಮನ್ನು ನಾವು ಎಜುಕೇಟ್ ಮಾಡಿಕೊಳ್ಳುವುದು. ಸ್ವಲ್ಪ ಮ್ಯಾಚುರ ಆಗುವುದು.

೨) ಯೋಗ ಹಾಗೂ ಮೆಡಿಟೇಷನ ಮಾಡಿ ನಮ್ಮ ದೇಹ ಮತ್ತು ಮನಸ್ಸು ಎರಡನ್ನು ಹಿಡಿತದಲ್ಲಿಟ್ಟುಕೊಳ್ಳುವುದು.

೩) ಸಾಧ್ಯವಾದ್ರೆ ಸ್ವಲ್ಪ ಆಧ್ಯಾತ್ಮದ ಕಡೆಗೆ ಒಲುವು ತೋರಿಸುವುದು. ನನ್ನ ಪ್ರಕಾರ ಕಲ್ಲು ದೇವರನ್ನು ಪೂಜಿಸುವುದು ಆಧ್ಯಾತ್ಮವಲ್ಲ. ನಮ್ಮನ್ನು ನಾವು ಕಂಡುಕೊಂಡು ನಮ್ಮ ಹುಟ್ಟಿಗೆ ಅರ್ಥ ಕಟ್ಟಿ ಕೊಡುವುದೇ ನಿಜವಾದ ಆಧ್ಯಾತ್ಮ. ಯೋಗ, ಆತ್ಮ ಜ್ಞಾನ ಹಾಗೂ ಆಧ್ಯಾತ್ಮದಿಂದ ನಾವು ಆಂತರಿಕ ದುಶ್ಚಟಗಳನ್ನು ಸಾಯಿಸಬಹುದು.


ದುಶ್ಚಟಗಳನ್ನು ಬಿಡುವುದು ಹೇಗೆ? How to quit bad habits?

                  ಗೆಳೆಯರೇ, ಈ ರೀತಿ ನಾವು "Develop a Higher test to discard the lower one" ಫಾರ್ಮುಲಾದಿಂದ ಯಾವ ದುಶ್ಚಟವನ್ನು ಬೇಕಾದರೂ ಬಿಡಬಹುದು. ಮೊದಲು ಯಾಕೆ ಬಿಡಬೇಕು? ಎಂಬುದರ ಬಗ್ಗೆ ಕ್ಲಿಯರಾಗಿರಿ, ಆಮೇಲೆ ಹೇಗೆ ಬಿಡಬೇಕು ಎಂಬುದು ನಿಮಗೆ ಗೊತ್ತಾಗುತ್ತದೆ. ಒಂದು ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ, ನಿಮ್ಮ ಬಳಿ ಯಾವುದೇ ದುಶ್ಚಟಗಳು ಸುಳಿಯುವುದಿಲ್ಲ. ಈ ಟಿಪ ನಿಮಗೆ ಇಷ್ಟವಾಗಿದ್ದರೆ ಈ ಅಂಕಣವನ್ನು ಲೈಕ್ ಮಾಡಿ ಮತ್ತು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ. ಪ್ರತಿದಿನ ಇದೇ ರೀತಿಯ ಯುಜಫುಲ್ ಅಂಕಣಗಳನ್ನು ಉಚಿತವಾಗಿ ಓದಲು ಫೇಸ್ಬುಕ್, ಟ್ವೀಟರ್, ಇನ್ಸಸ್ಟಾಗ್ರಾಮಗಳಲ್ಲಿ ನನ್ನನ್ನು (Director Satishkumar)  ತಪ್ಪದೇ ಫಾಲೋ ಮಾಡಿ. ಧನ್ಯವಾದಗಳು.



Blogger ನಿಂದ ಸಾಮರ್ಥ್ಯಹೊಂದಿದೆ.