ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada

ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada


ಬಿಜನೆಸ್ ಲೆಸನ್ - 07
              ಹಾಯ್ ಗೆಳೆಯರೇ, ಬಹಳಷ್ಟು ಜನ ಅರ್ಧ ಜೀವನ ಕಳೆದೋದರೂ ಫೈನಾನ್ಸಿಯಲಿ ಫ್ರಿಯಾಗಲ್ಲ. ಜೀವನ ಕಳೆದೋದರೂ ಅವರಿಗೆ ಫೈನಾನ್ಸಿಯಲ್ ಫ್ರೀಡಂ ಸಿಗಲ್ಲ. ಅವರು ತಮ್ಮ ಲೈಫಿನ ಬಿಗಿನಿಂಗಲ್ಲಿ ಮಾಡಿದ ತಪ್ಪಿನಿಂದಾಗಿ ಲೈಫಿನ ಎಂಡಿಂಗವರೆಗೂ ಹಣಕ್ಕಾಗಿ ಸ್ಟ್ರಗಲ ಮಾಡುತ್ತಾರೆ. ಪೂರ್ತಿ ಜೀವನವನ್ನು ಬರೀ ಅಡ್ಜಷ್ಟಮೆಂಟಲ್ಲೇ ಕಳೆಯುತ್ತಾರೆ. ನಿಮಗೆ ಇಂಥ ಪರಿಸ್ಥಿತಿ ಬರಬಾರದೆಂದರೆ ನೀವು ಅವರು ಮಾಡಿದ ತಪ್ಪುಗಳನ್ನು ಮಾಡಬೇಡಿ. ಮನಿ ಮ್ಯಾನೇಜಮೆಂಟ ಬಗ್ಗೆ ತಿಳಿದುಕೊಂಡು ನಿಮ್ಮ ಹಣವನ್ನು ಸರಿಯಾಗಿ ಮ್ಯಾನೇಜ ಮಾಡಿ.


ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada

              ಬಹಳಷ್ಟು ಜನ ತಮ್ಮ ಬಳಿ ಮೊದಲ ಸಲ ಹಣ ಬಂದಾಗ, ಸ್ಯಾಲರಿ ಬಂದಾಗ ಅಥವಾ ಬಿಜನೆಸ್ಸಲ್ಲಿ ಪ್ರೋಫಿಟ್ ಬಂದಾಗ ಅದನ್ನು ತಮ್ಮ ಪರ್ಸನಲ್ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಇಲ್ಲವೇ ಶೋಅಪ ಮಾಡಿ ಬರಿಗೈ ಫಕೀರನಾಗುತ್ತಾರೆ. ಇಲ್ಲವೇ ಪಾರ್ಟಿ ಮಾಡಿ ಬಂದ ಹಣವನ್ನೆಲ್ಲ ಗಾಳಿಯಲ್ಲಿ ತೂರುತ್ತಾರೆ. ಅದಕ್ಕಾಗಿಯೇ ಅವರು ಫೈನಾನ್ಸಿಯಲಿ ಫ್ರಿಯಾಗಲ್ಲ. ಸೋ ನೀವು ಈ ರೀತಿ ಮಾಡಬೇಡಿ. ನಿಮಗೆ ಫೈನಾನ್ಸಿಯಲಿ ಫ್ರಿಯಾಗೋ ಆಸೆಯಿದ್ದರೆ ಮೊದಲ ಸಲ ನಿಮ್ಮ ಬಳಿ ಹಣ ಬಂದಾಗ ಅದನ್ನು ಪರ್ಸನಲ ಕೆಲಸಗಳಿಗೆ ಬಳಸಿಕೊಳ್ಳಬೇಡಿ. ಅದರಿಂದ ಮನೆ, ಮೊಬೈಲ್, ಬೈಕು, ಕಾರು ಇತ್ಯಾದಿಗಳನ್ನು ಖರೀದಿಸಬೇಡಿ. ಒಣ ಶೋಕಿ ಮಾಡಿ ಬರಿಗೈ ಫಕೀರನಾಗಬೇಡಿ. ಸ್ನೇಹಿತರ ಹಾಗೂ ಸಂಬಂಧಿಕರ ಹೊಟ್ಟೆ ಉರಿಸುವುದಕ್ಕಾಗಿ ಅನಾವಶ್ಯಕ ವಸ್ತುಗಳನ್ನು ಖರೀದಿಸಿ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡಬೇಡಿ. ನಿಮಗೆ ಸಿಕ್ಕ ಹಣವನ್ನು ಸರಿಯಾಗಿ ಮ್ಯಾನೇಜ ಮಾಡಿ. ಲೈಯಾಬಿಲಿಟಿಗಳನ್ನು ಮಾಡಿಕೊಳ್ಳದೇ ಅಸೆಟ್ಸಗಳನ್ನು ಮಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಹರಿಸಿ.


ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada

                ನಿಮಗೆ ಬಂದ ಹಣದಲ್ಲಿ 25%ನ್ನು ನಿಮ್ಮ ಸದ್ಯದ ತುರ್ತು ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಿ. 25%ನ್ನು ಸೇಫ್ಟಿಗಾಗಿ ಸೇವಿಂಗ್ ಮಾಡಿ. ಇನ್ನು ಮಿಕ್ಕ 50%ನ್ನು ನಿಮ್ಮ ಬಿಜನೆಸ್ಸಲ್ಲಿ ರಿಇನ್ವೇಸ್ಟ ಮಾಡಿ. ಒಂದು ವೇಳೆ ನೀವು ಜಾಬ್ ಮಾಡುತ್ತಿದ್ದರೆ ನಿಮ್ಮ ಜಾಬಗೆ ಸಂಬಂಧಪಟ್ಟಂತೆ ಹೊಸಹೊಸ ಸ್ಕೀಲಗಳನ್ನು ಕಲಿಯಲು ಈ ಹಣವನ್ನು ಇನ್ವೆಸ್ಟ ಮಾಡಿ. ನಿಮಗೆ ಯಾವ ಮೂಲದಿಂದ ಹಣ ಬಂದಿರುತ್ತೋ ಆ ಮೂಲವನ್ನು ಭದ್ರಪಡಿಸಿಕೊಳ್ಳಿ. ನಿಮಗೆ ಬಿಜನೆಸನಿಂದ ಹಣ ಬಂದಿದ್ದರೆ ಮೊದಲು ನಿಮ್ಮ ಬಿಜನೆಸ್ಸನ್ನು ಸ್ಟೇಬಲ್ ಮಾಡಿ. ನಿಮ್ಮ ಬಿಜನೆಸ್ ಸ್ಟೇಬಲ್ ಆಗುವ ತನಕ ನಿಮಗೆ ಬರುವ ಪ್ರೋಫಿಟನಲ್ಲಿನ 50%ನ್ನು ಮತ್ತದೇ ಬಿಜನೆಸ್ಸಲ್ಲಿ ರಿಇನ್ವೇಸ್ಟ ಮಾಡಿ. ನಿಮ್ಮ ಬಿಜನೆಸ್ ಸ್ಟೇಬಲ್ ಆಗುವ ತನಕ ಅದರಲ್ಲಿ ರಿಇನ್ವೇಸ್ಟ ಮಾಡುತ್ತಲೇ ಹೋಗಿ.


ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada

          ನಿಮ್ಮ ಬಿಜನೆಸ್ ಫುಲ್ಲಿ ಸ್ಟೇಬಲ್ ಆಗುವುದಕ್ಕಿಂತ ಮುಂಚೆ ಅನಾವಶ್ಯಕವಾದ ಯಾವುದೇ ಖರ್ಚುಗಳನ್ನು ಮಾಡಬೇಡಿ. ಕಾರು, ಬೈಕು, ಬಂಗಲೆ, ಮದುವೆಗಳಂಥ  ಲೈಯಾಬಿಲಿಟಿಗಳನ್ನು ಮಾಡಿಕೊಳ್ಳಬೇಡಿ. First grow your business to stable level. Don't use initial fruit of your business for your personal needs and show ups. First business growth, then rest of the things. ಒಂದೆರಡು ವರ್ಷ ಬಾಡಿಗೆ ಮನೆಯಲ್ಲಿದ್ದರೆ ಏನು ವ್ಯತ್ಯಾಸವಾಗಲ್ಲ. ಒಂದೆರಡು ವರ್ಷ ಲೇಟಾಗಿ ಕಾರ ತಗೊಂಡ್ರೆ ಏನು ವ್ಯತ್ಯಾಸವಾಗಲ್ಲ. ಒಂದೆರಡು ವರ್ಷ ಲೇಟಾಗಿ ಮದುವೆಯಾದ್ರೆ ಏನು ವ್ಯತ್ಯಾಸವಾಗಲ್ಲ. ಆದರೆ ಮೂರು ವರ್ಷದಲ್ಲಿ ನಿಮ್ಮ ಬಿಜನೆಸ್ ಫುಲ್ಲಿ ಸ್ಟೇಬಲ್ ಆಗದಿದ್ರೆ ಬಹಳಷ್ಟು ವ್ಯತ್ಯಾಸವಾಗುತ್ತದೆ, ನಷ್ಟವಾಗುತ್ತದೆ. ಆರಂಭಿಕ ಹಂತದಲ್ಲಿ ನಿಮ್ಮ ಬಿಜನೆಸ್ಸಲ್ಲಿ ಗ್ರೋ ಆಗುವುದನ್ನು ಬಿಟ್ಟು ನೀವು ಮನೆ, ಕಾರು, ಮದುವೆ, ಮಕ್ಕಳು ಅಂತ ಹೋದ್ರೆ ಖಂಡಿತ ನೀವು ಮಿಕ್ಕ ಜೀವನವನ್ನು ಬರೀ ಅಡ್ಜಷ್ಟಮೆಂಟಲ್ಲೇ ಕಳೆಯುತ್ತೀರಾ. ನಿಮಗೆ ಫೈನಾನ್ಸಿಯಲ್ ಫ್ರಿಡಂನ್ನು ಸಾಧಿಸುವುದು ಕನಸಿನ ಮಾತಾಗುತ್ತದೆ. ಬಿಜನೆಸ್ ಗ್ರೋ ಮಾಡೋ ಟೈಮಲ್ಲಿ ಅಥವಾ ಪ್ರೋಫೆಶನಲ ಲೈಫಲ್ಲಿ ಗ್ರೋ ಆಗೋ ಟೈಮಲ್ಲಿ ನೀವು ಫ್ಯಾಮಿಲಿ ಪ್ಲ್ಯಾನ್ ಮಾಡುತ್ತಿದ್ದರೆ ನೀವು ಜೀವನಪೂರ್ತಿ ಹಣಕ್ಕಾಗಿ ಸ್ಟ್ರಗಲ್ ಮಾಡುತ್ತೀರಾ. ಇದರಲ್ಲಿ ಯಾವುದೇ ಅನುಮಾನವಿಲ್ಲ.


ನಿಮ್ಮ ಬಳಿ ಹಣ ಬಂದಾಗ ಈ ತಪ್ಪನ್ನು ಮಾಡಬೇಡಿ : ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುತ್ತಿರಾ - Money Management Tips in Kannada
          ಭಾರತದಲ್ಲಿ ಬಹಳಷ್ಟು ಜನ ಹಣ ಮಾಡೋ ಟೈಮಲ್ಲಿ ಹಣ ಮಾಡಲ್ಲ, ಬಿಜನೆಸ್ ಗ್ರೋ ಮಾಡೋ ಟೈಮಲ್ಲಿ ಬಿಜನೆಸ್ ಗ್ರೋ ಮಾಡಲ್ಲ. ಅದರ ಬದಲಾಗಿ ಫ್ಯಾಮಿಲಿ ಪ್ಲ್ಯಾನಿಂಗ ಮಾಡುತ್ತಾರೆ. ಅಂದರೆ ಫೈನಾನ್ಸಿಯಲಿ ಸ್ಟೇಬಲ್ ಆ್ಯಂಡ್ ಸ್ಟ್ರಾಂಗ್  ಆಗದೇ ಆತುರದಲ್ಲಿ ಮದುವೆಯಾಗುತ್ತಾರೆ. ನಂತರ ಮಕ್ಕಳ ಮಾಡೋ ಟೈಮ ಹಣ ಗಳಿಸುವುದರ ಬಗ್ಗೆ ಯೋಚಿಸುತ್ತಾರೆ. ಹಣಕ್ಕಾಗಿ ಹಗಲುರಾತ್ರಿ ಕತ್ತೆ ತರ ದುಡಿಯುತ್ತಾರೆ. ನೀವು ಈ ತಪ್ಪನ್ನು ಮಾಡಿ ಜೀವನಪೂರ್ತಿ ಒದ್ದಾಡಬೇಡಿ. ಫೈನಾನ್ಸಿಯಲ್ ಪ್ಲ್ಯಾನಿಂಗ ಮಾಡೋ ಟೈಮಲ್ಲಿ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮಾಡಿ. ಫ್ಯಾಮಿಲಿ ಪ್ಲ್ಯಾನಿಂಗ್ ಮಾಡೋ ಟೈಮಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿ. ಎರಡನ್ನು ಅದಲುಬದಲು ಮಾಡಿ ಒದ್ದಾಡಬೇಡಿ. ಮೊದಲು ನಿಮ್ಮ ಬಿಜನೆಸ್ಸನ್ನು ಸ್ಟೇಬಲ್ ಮಾಡಿ. ಮೊದಲು ಫೈನಾನ್ಸಿಯಲಿ ಸ್ಟ್ರಾಂಗ್ ಆ್ಯಂಡ್ ಸ್ಟೇಬಲ್ ಆಗಿ. ನಂತರ ಇಂಟರೆಸ್ಟ್ ಇದ್ದರೆ ಮದುವೆ ಮಕ್ಕಳು ಇತ್ಯಾದಿಗಳನ್ನು ಮಾಡಿಕೊಳ್ಳಿ. First live like a beggar and invest like a king. Then enjoy your life like a son of Lakshmi Maata . ಆಲ್ ದ ಬೆಸ್ಟ ಆ್ಯಂಡ್ ಥ್ಯಾಂಕ್ಯೂ...

Blogger ನಿಂದ ಸಾಮರ್ಥ್ಯಹೊಂದಿದೆ.