ಬಿಜನೆಸ್ ಮಿಥ್ಸಗಳು : Myths about Business in India in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬಿಜನೆಸ್ ಮಿಥ್ಸಗಳು : Myths about Business in India in Kannada

ಬಿಜನೆಸ್ ಮಿಥ್ಸಗಳು : Myths about Business in India


ಬಿಜನೆಸ್ ಲೆಸನ್ - 03
                ಹಾಯ್ ಗೆಳೆಯರೇ, ನಮಸ್ಕಾರ. ನಾನು ನಿಮ್ಮ ಸತೀಶಕುಮಾರ. ಭಾರತದಲ್ಲಿ ಬಿಜನೆಸನ ಬಗ್ಗೆ ಹಲವಾರು ರೀತಿಯ ಮಿಥ್ಸಗಳಿವೆ. ಅಂದರೆ ತಪ್ಪುನಂಬಿಕೆಗಳಿವೆ, ಕಟ್ಟು ಕಥೆಗಳಿವೆ. ಈ ಮಿಥ್ಸಗಳಿಂದಾಗಿ ಭಾರತದಲ್ಲಿ ಬಹಳಷ್ಟು ಜನ ಬಿಜನೆಸ್ ಫಿಲ್ಡಿಗೆ ಬರುವುದಿಲ್ಲ. ಎಲ್ಲಿಂದಲೋ ಮೋಟಿವೇಷನ ಸಿಕ್ಕಿ ಬಿಜನೆಸ್ ಸ್ಟಾರ್ಟ ಮಾಡಿದರೂ ಸಹ ತುಂಬಾ ದಿನ ಕಂಟಿನ್ಯೂ ಮಾಡುವುದಿಲ್ಲ. ಅದಕ್ಕಾಗಿ ನೀವು ಈ ಮಿಥ್ಸಗಳನ್ನು ನಿಮ್ಮ ತಲೆಯಿಂದ ಮೊದಲು ಡೀಲಿಟ ಮಾಡಬೇಕು. ಆ ಮಿಥ್ಸಗಳು ಇಂತಿವೆ ;

1) ದುಡ್ಡಿರೋರು ಮಾತ್ರ ಬಿಜನೆಸ್ ಮಾಡಬೇಕು. ದುಡ್ಡಿಲ್ಲದವರು ಜಾಬ್ ಮಾಡಬೇಕು. ಈ ಮಿಥ ಭಾರತದಲ್ಲಿ ಬಹಳಷ್ಟು ಕಾಮನ್ ಆಗಿದೆ ಹಾಗೂ ಎಲ್ಲರೂ ಇದನ್ನು ಬಲವಾಗಿ ನಂಬಿದ್ದಾರೆ. ನಿಮ್ಮ ತಲೆಯಲ್ಲಿ ದುಡ್ಡಿರೋರು ಮಾತ್ರ ಬಿಜನೆಸ್ ಮಾಡಬೇಕು ಎಂಬ ಮಿಥ ಇದ್ದರೆ ಅದನ್ನು ನಿಮ್ಮ ತಲೆಯಿಂದ ಡಿಲೀಟ ಮಾಡಿ. ಏಕೆಂದರೆ ಬಡತನದಲ್ಲಿಯೇ ನಿಜವಾದ ಪ್ರತಿಭೆ ಬೆಳೆಯೋದು, ಕೆಸರಲ್ಲೇ ಕಮಲ ಅರಳೋದು, ಸಾಮಾನ್ಯ ವ್ಯಕ್ತಿಯಿಂದಲೇ ಅಸಾಮಾನ್ಯ ಕೆಲಸಗಳಾಗೋದು. Only ordinary man can do extraordinary things. ಸ್ಟೀವ್ ಜಾಬ್ಸರವರಿಗೆ ಯಾರು ದುಡ್ಡನ್ನು ಕೊಟ್ಟಿದ್ರು? ಬಿಲಗೇಟ್ಸಗೆ, ಜಾಕ್ ಮಾ'ಗೆ, ಜೆಫ ಬೆಜೋಸಗೆ, ಧೀರುಬಾಯ್ ಅಂಬಾನಿಯವರಿಗೆ ಯಾರು ದುಡ್ಡನ್ನು ಕೊಟ್ಟಿದ್ರು? ಸ್ಟೀವ್ ಜಾಬ್ಸ, ಬಿಲಗೇಟ್ಸ, ಮಾರ್ಕ ಜುಜರಬರ್ಗ ಕಾಲೇಜ್ ಡ್ರಾಪೌಟಾಗಿ ಗ್ಯಾರೇಜಿನಿಂದ ಬಿಜನೆಸ್ ಸ್ಟಾರ್ಟ ಮಾಡಿ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿದ್ದಾರೆ. ಸ್ಕ್ರ್ಯಾಚನಿಂದ ಸ್ಟಾರ್ಟ ಮಾಡಿ ಬಿಲಿಯನ್ ಡಾಲರ್ ಕಂಪನಿ ಕಟ್ಟಿದ್ದಾರೆ. ಈಗ ಬೆಳೆದು ನಿಂತವರೆಲ್ಲ ನಮ್ಮ ನಿಮ್ಮಂತೆ ಸಾಧಾರಣ ಮಿಡಲ ಕ್ಲಾಸ್ ಫ್ಯಾಮಿಲಿಯಿಂದ ಬಂದವರೇ. ಅವರಲ್ಲಿ ಬೆಳಿಬೇಕು ಅನ್ನೋ ಹುಚ್ಚಿತ್ತು. ನಾವು ಆ ಹುಚ್ಚನ್ನು ಬೆಳೆಸಿಕೊಳ್ಳಬೇಕು. ದುಡ್ಡಿರೋರು ಮಾತ್ರ ಬಿಜನೆಸ್ ಮಾಡಬೇಕು ಎಂಬ ಮಿಥನ್ನು ಬಿಡಿ, ಮುಂದೆ ಬರೋಕೆ ದಾರಿ ಹುಡುಕಿ. 

ಬಿಜನೆಸ್ ಲೆಸನ್ - 03 : ಬಿಜನೆಸ್ ಬಗ್ಗೆಯಿರುವ ಮಿಥ್ಸಗಳು : Myths about Business in India

2) ಪರಫೆಕ್ಟ ಟೈಮ ಬಂದಾಗ ಇಲ್ಲವೇ ಪರಫೆಕ್ಷನ ಬಂದಾಗ ಬಿಜನೆಸ್ ಸ್ಟಾರ್ಟ ಮಾಡ್ತೀನಿ. ನನ್ನ ಬಳಿ ಎಲ್ಲ ಬಂದಾಗ ಬಿಜನೆಸ್ ಸ್ಟಾರ್ಟ ಮಾಡ್ತೀನಿ. ಈ ಮಿಥ ಭಾರತದಲ್ಲಿ ಬಹಳಷ್ಟು ಪಾಪ್ಯುಲರ ಆಗಿದೆ. ಈ ಮಿಥ ಬಗ್ಗೆ ನಾನು ಬಹಳಷ್ಟು ಮಾತಾಡಲ್ಲ. ಆದರೆ ಒಂದು ಸೆಕ್ರೆಟನ್ನು ಹೇಳಬಲ್ಲೆ. ಎಲ್ಲ ಬಂದಾಗ ಅಥವಾ ಎಲ್ಲ ಇದ್ದಾಗ ಬಿಜನೆಸ್ ಸ್ಟಾರ್ಟ ಮಾಡೋದ್ರಲ್ಲಿ ಯಾವುದೇ ಗ್ರೇಟನೆಸಯಿಲ್ಲ. ಎಲ್ಲ ಇದ್ದಾಗ ಬಿಜನೆಸ್ ಸ್ಟಾರ್ಟ ಮಾಡೋದಲ್ಲ. ಏನು ಇಲ್ಲದಿರುವಾಗ ಏನಾದರೂ ಒಂದನ್ನು ಗಳಿಸೋಕೆ ಬಿಜನೆಸ್ ಸ್ಟಾರ್ಟ ಮಾಡಬೇಕು. Achieve something by nothing. ನಿಮ್ಮತ್ರ ಎಷ್ಟಿದೀಯೋ ಅಷ್ಟರಲ್ಲೇ ಸ್ಟಾರ್ಟ ಮಾಡಿ. ಮುಂದೆ ಒಂದೊಂದಾಗಿ ಎಲ್ಲ ನಿಮ್ಮ ಬಳಿ ಬರುತ್ತವೆ. ಬದುಕು ನಿಮಗೆಲ್ಲವನ್ನು ಸಿಸ್ಟಮ್ಯಾಟಿಕಾಗಿ ಕಲಿಸಿ ಕೊಡುತ್ತದೆ. ಒಳ್ಳೇ ಜನ ನಿಮ್ಮೊಂದಿಗೆ ಬಂದು ಕೈಜೊಡಿಸ್ತಾರೆ, ನೀವು ಸಕ್ಸೆಸಫುಲ್ ಆಗ್ತೀರಿ.

ಬಿಜನೆಸ್ ಲೆಸನ್ - 03 : ಬಿಜನೆಸ್ ಬಗ್ಗೆಯಿರುವ ಮಿಥ್ಸಗಳು : Myths about Business in India

3) ಅಣ್ಣ ಅಥವಾ ತಮ್ಮನೊಂದಿಗೆ ಸೇರಿ ಬಿಜನೆಸ್ ಸ್ಟಾರ್ಟ ಮಾಡಿದರೆ ಬಿಜನೆಸ್ ಬಹಳ ದಿನ ನಡೆಯಲ್ಲ. ಈ ಮಿಥ ಅಂತೂ ಭಾರತದ ಮನೆಮನೆಯಲ್ಲಿದೆ ಎಂದರೆ ತಪ್ಪಾಗಲಾರದು. ಸಮಾಜ ಮತ್ತು ಸಂಬಂಧಿಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ರಾಮಲಕ್ಷ್ಮಣರಂತಿದ್ದ ಸಹೋದರರನ್ನು ಪಾಂಡವ ಕೌರವರನ್ನಾಗಿ ಮಾರ್ಪಾಡಿಸುತ್ತಾರೆ. ಅದಕ್ಕಾಗಿ ಕಿವಿ ಚುಚ್ಚುವವರಿಂದ ಸ್ವಲ್ಪ ದೂರವಿರಿ. ಅಣ್ಣ ಅಥವಾ ತಮ್ಮನೊಂದಿಗೆ ಸೇರಿ ಬಿಜನೆಸ್ ಪ್ರಾರಂಭಿಸಿದರೆ ಪ್ಲಾಫ ಆಗುತ್ತೆ ಎಂಬ ಮಿಥನ್ನು ಮರೆತು ಬಿಡಿ. ರಾವಣ ಯಾಕೆ ಸತ್ತ ಅಂತಾ ಗೊತ್ತಾ? ಏಕೆಂದರೆ ಅವನೊಂದಿಗೆ ಅವನ ಸೋದರ ವಿಭೀಷಣನಿರಲಿಲ್ಲ. ಶ್ರೀರಾಮ ಯಾಕೆ ಗೆದ್ದ ಅಂದ್ರೆ ಅವನೊಂದಿಗೆ ಲಕ್ಷ್ಮಣನಿದ್ದ. ಇಷ್ಟರಲ್ಲೇ ನೀವು ನಿಮ್ಮ ಸೋದರನ ಬೆಲೆಯನ್ನು ಅರ್ಥಮಾಡಿಕೊಳ್ಳಿ. ಇದಕ್ಕಿಂತಲೂ ಬೆಸ್ಟ ಎಕ್ಸಾಮಪಲ್ ನಿಮಗೆ ಸಿಗಲು ಸಾಧ್ಯವಿಲ್ಲ. ಒಂದು ಸೆಕ್ರೆಟ ಹೇಳ್ತೀನಿ ಕೇಳಿ. ನಮ್ಮ ರೋರಿಂಗ್ ಕ್ರಿಯೇಷನ್ಸ ಪ್ರೈವೇಟ್ ಲಿಮಿಟೆಡ್ ಕೂಡ ಇಬ್ಬರು ಸೋದರರು ಸೇರಿ ಪ್ರಾರಂಭಿಸಿದ ಸ್ಟಾರ್ಟಪ್.

ಬಿಜನೆಸ್ ಲೆಸನ್ - 03 : ಬಿಜನೆಸ್ ಬಗ್ಗೆಯಿರುವ ಮಿಥ್ಸಗಳು : Myths about Business in India

4) ದುಡ್ಡು ಒಳ್ಳೆದಲ್ಲ. ಶ್ರೀಮಂತರೆಲ್ಲ ಭ್ರಷ್ಟಾಚಾರ ಮಾಡಿ ದುಡ್ಡನ್ನು ಸಂಪಾದಿಸಿದ್ದಾರೆ. ದುಡ್ಡಿದ್ರೆ ರೋಗಗಳು ಬರುತ್ತವೆ. ಈ ಮಿಥನ್ನು ನಾನು ಬಹಳಷ್ಟು ಜನರ ಬಾಯಿಯಿಂದ ಕೇಳಿದೀನಿ. ಯಾರಾದರೂ ಸ್ವಲ್ಪ ಚೆನ್ನಾಗಿ ದುಡ್ಡು ಮಾಡಿದ್ದಾರೆ ಅಥವಾ ಮಾಡ್ತಿದಾರೆ ಅಂತಾ ಗೊತ್ತಾದ್ರೆ ಸಾಕು ನಮ್ಮ ಜನ ಅವರ ಬಗ್ಗೆ ನೆಗೆಟಿವ್ ಪ್ರಚಾರವನ್ನು ಪ್ರಾರಂಭಿಸುತ್ತಾರೆ. ಅವರು ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ, ದೋನ್ ನಂಬರ ಬಿಜನೆಸ್ ಮಾಡ್ತಿದಾರೆ ಎಂದೆಲ್ಲ ಅಪಪ್ರಚಾರವನ್ನು ಮಾಡುತ್ತಾರೆ. ಭಾರತದಲ್ಲಿ ಕರಪ್ಷನಯಿದೆ. ನಾನಿದನ್ನು ಒಪ್ಪಿಕೊಳ್ತೀನಿ. ಆದರೆ ಎಲ್ಲ ಬಿಜನೆಸಮ್ಯಾನಗಳು, ಶ್ರೀಮಂತರು ಕಳ್ಳನನಮಕ್ಕಳಲ್ಲ. ಹಣ ಗಳಿಸಿದವರೆಲ್ಲ ಭ್ರಷ್ಟರು, ದುಡ್ಡಿದ್ರೆ ಶ್ರೀಮಂತರ ರೋಗಗಳು ಬರುತ್ತವೆ ಎಂಬ ಮಿಥನ್ನು ನಂಬಿ ನಿನಗೆ ನೀವೇ ಮೋಸ ಮಾಡಿಕೊಳ್ಳಬೇಡಿ. ಜೀವನದಲ್ಲಿ ದುಡ್ಡು ತುಂಬಾ ಮುಖ್ಯ. ದುಡ್ಡಿಲ್ಲದೇ ಚೆನ್ನಾಗಿ ಬದುಕಲು ಸಾಧ್ಯವಿಲ್ಲ.

ಬಿಜನೆಸ್ ಲೆಸನ್ - 03 : ಬಿಜನೆಸ್ ಬಗ್ಗೆಯಿರುವ ಮಿಥ್ಸಗಳು : Myths about Business in India

      ಈ ಮಿಥಗಳನ್ನೆಲ್ಲ ನಿಜವೆಂದು ನಂಬಿ ನಿಮಗೆ ನೀವೇ ಮೋಸ ಮಾಡಿಕೊಳ್ಳಬೇಡಿ. ಬಹಳಷ್ಟು ಜನ ಬಡತನದಲ್ಲಿ ಬೆಂದು ಮೇಲೆ ಬಂದಿದ್ದಾರೆ. ಅವರ ಬಳಿ Money Power ಇರಲಿಲ್ಲ, Man Power ಇರಲಿಲ್ಲ. ಬರೀ Mind Power ಮಾತ್ರ ಇತ್ತು. ಅದನ್ನಿಟ್ಟುಕೊಂಡು ಅವರು ಮುಂದೆ ಬಂದಿದ್ದಾರೆ. ಅಂಥವರಲ್ಲಿ ನಾನು ಒಬ್ಬ. ನಿಮಗೂ ಸಹ ಏನಿಲ್ಲ ಅಂದ್ರೂ ಮೆದುಳಂತು ಇದೆ. ಅದನ್ನು ಸರಿಯಾಗಿ ಬಳಸಿಕೊಂಡು ಬೇಗನೆ ಮುಂದೆ ಹೇಗೆ ಬರೋದು ಎಂಬುದರ ಮೇಲೆ ಮಾತ್ರ ಫೋಕಸ್ ಮಾಡಿ. All the Best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.