ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? - People Hate You for these Reasons in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? - People Hate You for these Reasons in Kannada

ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

                       ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನೀವು ಯಾವುದೇ ತಪ್ಪುಗಳನ್ನು ಮಾಡದಿದ್ದರೂ ಸಹ ಕೆಲವೊಂದಿಷ್ಟು ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ. ಈ ವಿಷಯ ನಿಮ್ಮ ಗಮನಕ್ಕೂ ಸಹ ಬಂದಿರಬಹುದು. ಯಾವುದೇ ಸರಿಯಾದ ಕಾರಣವಿಲ್ಲದೆ ನಿಮ್ಮ ಮೇಲೆ ದ್ವೇಷದ ಮಳೆಯಾದಾಗ ನಿಮಗೆ ದು:ಖ ಸಹ ಆಗಿರಬಹುದು. ಕಾರಣವಿಲ್ಲದೆ ಯಾರು ಯಾರನ್ನು ದ್ವೇಷಿಸುವುದಿಲ್ಲ. ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಸೋ ಬನ್ನಿ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಯಾಕೆ ಕೆಲವೊಂದಿಷ್ಟು ಜನ ಕಾರಣವಿಲ್ಲದೆ ಎಲ್ಲರನ್ನೂ ದ್ವೇಷಿಸುತ್ತಾರೆ ಎಂಬುದನ್ನು ನೋಡೋಣಾ.

ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

1) Reason - 1 : Jealousy - ಜಲಸಿ

                          ಗೆಳೆಯರೇ, ನೀವು ಏನಾದರೂ ಒಂದನ್ನು ಒಳ್ಳೆಯದನ್ನು ಮಾಡಲು ಹೊರಟಾಗ, ಹೊಸದನ್ನು ಮಾಡಲು ಹೊರಟಾಗ, ಏನಾದರೂ ಒಂದನ್ನು ಸಾಧಿಸಲು ಹೊರಟಾಗ, ಏನಾದರೂ ಒಂದನ್ನು ಗಳಿಸಲು ಹೊರಾಟಾಗ ಜನ ನಿಮ್ಮನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ. ಈ ಜನ ಮೊಸ್ಟ ಆಫ್ ದ ಕೇಸಸ ನಿಮ್ಮ ಫೇಕ್ ಫ್ರೆಂಡ್ಸ್ ಆ್ಯಂಡ್ ರಿಲೆಟಿವ್ಸಗಳಾಗಿರುತ್ತಾರೆ. ಯಾವಾಗ ನೀವು ನಿಮ್ಮ ಜೀವನದಲ್ಲಿ ಮುಂದೆ ಬರಲು ಪ್ರಾರಂಭಿಸುತ್ತಿರೋ, ಹೆಚ್ಚಿಗೆ ಹಣವನ್ನು ಸಂಪಾದಿಸಲು ಪ್ರಾರಂಭಿಸುತ್ತಿರೋ ಆವಾಗ ಜನ ನಿಮ್ಮನ್ನು ಸೈಲೆಂಟಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ, ಬಹಿರಂಗವಾಗಿ ನಿಮ್ಮನ್ನು ಅವೈಡ್ ಮಾಡಲು ಪ್ರಾರಂಭಿಸುತ್ತಾರೆ, ನಿಮ್ಮಿಂದ ಕಾರಣವಿಲ್ಲದೆ ದೂರಾಗುತ್ತಾರೆ. ಯಾಕೆ ಹೀಗೆ? ಇಷ್ಟಕ್ಕೆಲ್ಲಾ ಇರೋ ಕಾರಣ ಒಂದೇ. ಅದು ಜಲಸಿ. ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ ಹೇಳಬೇಕೆಂದರೆ ಹೊಟ್ಟೆಕಿಚ್ಚು.

                 ನಾರ್ಮಲಾಗಿ ಕೆಲವೊಂದಿಷ್ಟು ಜನರಿಗೆ ಬೇರೆಯವರ ಏಳ್ಗೆಯನ್ನು ಈಜಿಯಾಗಿ ಅರಗಿಸಿಕೊಳ್ಳೊಕ್ಕಾಗಲ್ಲ. ನೀವು ಅವರಿಗಿಂತ ಒಂದೆಜ್ಜೆ ಹಿಂದೇನೇ ಇರಬೇಕು, ಒಂದು ಲೆವೆಲ ಕೇಳಗೇನೆ ಇರಬೇಕು ಎಂದವರು ಆಸೆಪಡುತ್ತಾರೆ. ನೀವು ಅವರಿಗಿಂತ ಮುಂದೆ ಹೋದಾಗ ಅವರಿಗೆ ಹೊಟ್ಟೆ ಉರಿಯುತ್ತೆ, ಅನಸೇಫ್ ಫೀಲಾಗುತ್ತೆ. ಅದಕ್ಕವರು ನಿಮ್ಮನ್ನು ಸೈಲೆಂಟಾಗಿ ಹೇಟ್ ಮಾಡ್ತಾರೆ. ನಿಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪಗಳನ್ನು ಹಬ್ಬಿಸುತ್ತಾರೆ. ನಿಮ್ಮ ಒಳ್ಳೇ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಾರೆ. ಇಂಥವರನ್ನು ಸರ್ವನಾಶ ಮಾಡೋಕೆ ಇರುವ ಒಂದೇ ಒಂದು ದಾರಿಯೆಂದರೆ ನೀವು ಸಕ್ಸೆಸಫುಲ್ಲಾಗಿ. ನೀವು ಜಸ್ಟ ಸಕ್ಸೆಸಫುಲ್ಲಾಗಿ ; ಇಂಥವರು ತಾನಾಗಿಯೇ ಸರ್ವನಾಶವಾಗ್ತಾರೆ.


ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

2) Reason - 2 : Attention Grabber Disease : ಗಮನ ಸೆಳೆಯುವ ರೋಗ

                  ಈ ಜಗತ್ತಿನಲ್ಲಿ ತುಂಬಾ ಜನ ಸಿಂಗಲಾಗಿದಾರೆ. ಅಂದ್ರೆ ಫ್ರೆಂಡ್ಸ್, ಫ್ಯಾಮಿಲಿ ಎಲ್ಲ ಇದ್ರೂ ಸಹ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಇವರಿಗೆ ಫೇಸ್ಬುಕಲ್ಲಿ ಸಾವಿರಾರು ಜನ ಫ್ರೆಂಡ್ಸಯಿದಾರೆ. ಲೈಫಬುಕ್ಕಲ್ಲಿ ಒಬ್ರು ಸಹ ರಿಯಲ್ ಫ್ರೆಂಡ್ಸ್ ಇಲ್ಲ. ಸಾಯ್ತಿದೀನಿ ಅಂದ್ರೂ ಸಹ ಇವರ ಕಷ್ಟಕ್ಕೆ ಹೆಗಲು ಕೊಡಲು ಯಾರು ಬರಲ್ಲ. ಅವರು "ಫಿಲಿಂಗ್ ಸ್ಯಾಡ್" ಅಂತಾ ಸ್ಟೇಟಸ್ ಹಾಕಿದಾಗ ಒಂದೆರಡು ಟೈಮಪಾಸ್ ಗೆಳತಿಯರು "Y..." ಅಂತಾ ಕಮೆಂಟ್ ಮಾಡ್ತಾರೆ. ಆದ್ರೆ ಅವರಿಗೆ ನೋವಾದಾಗ ಅವರನ್ನು ಮಡಿಲಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡೋಕೆ ಯಾವುದೇ ಗರ್ಲಫ್ರೆಂಡ ಇಲ್ಲ. ಅದಕ್ಕೆ ಇವರು ಫೇಕ್ ಪರ್ಸನಾಲಿಟಿಯನ್ನು ಮೆಂಟೇನ ಮಾಡುತ್ತಾರೆ. ಹ್ಯಾಪಿಯಾಗಿದೀನಿ ಅನ್ನೋ ತರ ಬಿಲ್ಡಪ್ ಕೊಡುತ್ತಾರೆ. ಆದರೆ ಯಾರು ಇವರಿಗೆ ಕೇರ್ ಮಾಡಲ್ಲ. ಇವರಿಗೆ ಮತ್ತು ಇವರ ಭಾವನೆಗಳಿಗೆ ಬೆಲೆ ಕೊಡಲ್ಲ. ಅದಕ್ಕಾಗಿ ಇಂಥವರು ಬೇರೆಯವರ ಅಟೆನಷನನ್ನು ಗ್ರ್ಯಾಬ್ ಮಾಡುವುದಕ್ಕಾಗಿ ಅಂದರೆ ಬೇರೆಯವರ ಗಮನವನ್ನು ತಮ್ಮೆಡೆಗೆ ಸೆಳೆಯುವುದಕ್ಕಾಗಿ ಸೋಸಿಯಲ್ ಮೇಡಿಯಾಗಳಲ್ಲಿ ಮತ್ತು ಯುಟ್ಯೂಬನಲ್ಲಿ ಬೇರೆಯವರ ಪೋಸ್ಟಗಳ ಕೆಳಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಎಲ್ಲ ಸರಿಯಿದ್ರು ಬೇರೆಯವರನ್ನು ಕ್ರಿಟಿಸೈಜ ಮಾಡುತ್ತಾರೆ. ಬೇರೆಯವರನ್ನು ಡಿಫೇಮ ಮಾಡಿ ತಾವು ಫೇಮಸ್ ಆಗಲು ಯತ್ನಿಸುತ್ತಾರೆ. ತಾವು ತುಂಬಾ ಕೂಲ್ ಅಂತಾ ತೋರಿಸಿಕೊಳ್ಳೋಕೆ ಎಲ್ಲಡೆಗೆ ಕಿರಿಕ್ ಮಾಡುತ್ತಾರೆ. ಎಲ್ಲವನ್ನೂ ಹೇಟ್ ಮಾಡುತ್ತಾರೆ. ಇಂಥವರನ್ನು ಅವೈಡ್ ಮಾಡಲು ಇರುವ ಒಂದೇ ಒಂದು ಉಪಾಯವೆಂದರೆ ಇವರನ್ನು ಇಗ್ನೋರ್ ಮಾಡೋದು. ನೀವು ಇವರನ್ನು ಜಸ್ಟ ಇಗ್ನೋರ್ ಮಾಡಿದರೆ ಸಾಕು, ಇವರು ನಿಮ್ಮ ತಂಟೆಗೆ ಬರಲ್ಲ. ಆದರೆ ನೀವು ಅಪ್ಪಿತಪ್ಪಿ ಇವರ ಕಮೆಂಟಗಳಿಗೆ ರಿಪ್ಲೆ ಮಾಡಿ ಅವರಿಗೆ ನಿಮ್ಮ ಅಟೆನಷನನ್ನ ಕೊಟ್ರೆ ಮುಗೀತು ಅವರು ಮತ್ತಷ್ಟು ಕೆಟ್ಟ ಕಮೆಂಟಗಳನ್ನು ಮಾಡುತ್ತಾರೆ. ಅದಕ್ಕಾಗಿ ಇಂಥವರನ್ನು ಜಸ್ಟ ಇಗ್ನೋರ್ ಮಾಡಿ. ಆಗದಿದ್ರೆ ಸೀದಾ ಬ್ಲಾಕ್ ಮಾಡಿಬಿಡಿ.


ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

3) Reason - 3 : Misunderstanding - ತಪ್ಪು ಗ್ರಹಿಕೆ

                      ಕೆಲವು ಸಲ misunderstandingನಿಂದಾಗಿ ಜನ ನಿಮ್ಮನ್ನು ದ್ವೇಷಿಸುತ್ತಾರೆ. ಅವರಿಗೆ ನಿಮ್ಮ ಕಂಪ್ಲಿಟ್ ಇನಫಾರ್ಮೆಷನ ಇರಲ್ಲ, ಅವರಿಗೆ ನಿಮ್ಮ ಬಗ್ಗೆ ಸರಿಯಾಗಿ ಏನು ಗೊತ್ತಿರಲ್ಲ, ಇಲ್ಲ ಅವರು ನಿಮ್ಮ ಬಗ್ಗೆ ಎಲ್ಲೋ ಕೆಟ್ಟದಾಗಿ ಕೇಳಿರತ್ತಾರೆ. ಅದಕ್ಕಾಗಿ ಅವರು ನಿಮ್ಮನ್ನು ದ್ವೇಷಿಸುತ್ತಾರೆ. ಒಂದು ವೇಳೆ ಅವರಿಗೆ ನೀವು ಏನಂತಾ ಅರ್ಥವಾದರೆ ಅವರು ನಿಮ್ಮನ್ನು ಪ್ರೀತಿಸಬಹುದು. ಇಂಥ ಸಂದರ್ಭದಲ್ಲಿ ನೀವು ಏನು ಮಾಡದೇ ಜಸ್ಟ ಸೈಲೆಂಟಾಗಿದ್ರೆ ಸಾಕು ಎಲ್ಲ ಸರಿ ಹೋಗುತ್ತದೆ. ಕಾಲ ಎಲ್ಲರಿಗೂ ಎಲ್ಲವನ್ನೂ ಅರ್ಥಮಾಡಿಸುತ್ತೆ. ಅರ್ಥ ಮಾಡಿಕೊಳ್ಳದಿದ್ದರೆ ಪಾಠ ಕಲಿಸುತ್ತೆ. ಅದಕ್ಕಾಗಿ ನೀವು ಸ್ವಲ್ಪ ಸೈಲೆಂಟಾಗಿದ್ರೆ ಸಾಕು.
ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

4) Reason - 4 : Insecure Feelings - ಅಸುರಕ್ಷಿತ ಭಾವನೆಗಳು

               ಬಹಳಷ್ಟು ಜನರು ಬೇರೆಬೇರೆ ಕಾರಣಗಳಿಗಾಗಿ ಇನಸೇಕ್ಯುರ ಫೀಲ ಮಾಡುತ್ತಾರೆ. ಅವರ ಬಳಿ ಇಲ್ಲದಿರುವ ವಸ್ತು ನಿಮ್ಮ ಬಳಿಯಿದ್ರೆ ಅವರು ನಿಮ್ಮನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ.

ಉದಾಹರಣೆಗಾಗಿ ; ನೀವು  ಕಾರ ತಗೊಂಡ್ರೆ ಇಲ್ಲ ದೊಡ್ಡ ಮನೆ ತಗೊಂಡ್ರೆ ಅವರ ಬಳಿ ಇವು ಇಲ್ಲದಿದ್ರೆ ಅವರು ನಿಮ್ಮನ್ನು ದ್ವೇಷಿಸಬಹುದು. 100% ದ್ವೇಷಿಸುತ್ತಾರೆ ಅಂತ ಹೇಳೊಕ್ಕಾಗಲ್ಲ. ಏಕೆಂದರೆ ಯಾರಿಂದಲೂ ಏನನ್ನೂ ಬಯಸದೆ, ಯಾರ ಮೇಲೂ ಹೊಟ್ಟೆ ಉರಿದುಕೊಳ್ಳದೆ ಹಾಯಾಗಿ ಬದುಕುತ್ತಿರುವ ಜನ ಬಹಳಷ್ಟಿದ್ದಾರೆ.


ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

            ಯಾವಾಗ ಜನರಿಗೆ ನಿಮ್ಮ ಲೆವಲಗೆ ಬರಲು ಸಾಧ್ಯವಾಗುವುದಿಲ್ಲವೋ, ನಿಮ್ಮಷ್ಟು ಸಕ್ಸೆಸಫುಲ್ಲಾಗಲು ಸಾಧ್ಯವಾಗುವುದಿಲ್ಲವೋ ಆವಾಗ ಅವರು ನಿಮ್ಮನ್ನು ದ್ವೇಷಿಸುತ್ತಾರೆ. ಬೇಸಿಕಲಿ ಅವರು ಅವರ ಲೈಫನೊಂದಿಗೆ ಅನಹ್ಯಾಪಿಯಾಗಿರುತ್ತಾರೆ. They are unhappy with their life. So they hate you. ಅವರಿಗೆ ನಿಮ್ಮ ಬ್ಯೂಟಿಫುಲ್ ಲೈಫನ್ನು ನೋಡಿ ಅವರ ಅಗ್ಲಿ ಲೈಫ ಅರ್ಥವಾಗುತ್ತೆ. ಅವರಿಗೆ ನಿಮ್ಮ ಸಕ್ಸೆಸನ್ನು ನೋಡಿ ಅವರ ಸೋಲು ಅವರ ನೆನಪಿಗೆ ಬರುತ್ತೆ, ನಿಮಗೆ ಸಿಗುತ್ತಿರುವ ಸನ್ಮಾನವನ್ನು ನೋಡಿ ಅವರಿಗಾದ ಅವಮಾನಗಳು ಅವರಿಗೆ ನೆನಪಾಗುತ್ತವೆ. ಆಗವರು ಇನಸೆಕ್ಯುರ್ ಫೀಲ ಮಾಡುತ್ತಾರೆ. ನಿಮ್ಮನ್ನು ದ್ವೇಷಿಸುತ್ತಾರೆ. ನೀವು ಇಂಥವರ ವಿಷಯದಲ್ಲಿ ಏನನ್ನೂ ಮಾಡುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ನಿಮ್ಮನ್ನು ದ್ವೇಷಿಸುತ್ತಿಲ್ಲ. ಅವರು ಅವರನ್ನು ದ್ವೇಷಿಸುತ್ತಿದ್ದಾರೆ, ಅವರ ಕೆಟ್ಟ ಲೈಫನ್ನು ದ್ವೇಷಿಸುತ್ತಿದ್ದಾರೆ. ಅದಕ್ಕಾಗಿ ನೀವು ಇಂಥವರ ಬಗ್ಗೆ ಜಾಸ್ತಿ ತಲೆ ಕೆಡಸಿಕೊಳ್ಳಬೇಡಿ. ಹ್ಯಾಪಿಯಾಗಿರಿ.


ಈ ಕಾರಣದಿಂದ ಜನ ನಿಮ್ಮನ್ನು ಕಾರಣವಿಲ್ಲದೆ ದ್ವೇಷಿಸುತ್ತಾರೆ? People Hate You for these Reasons

                  ಇವಿಷ್ಟು ಕಾರಣಗಳಿಂದಾಗಿ ಜನ ಕಾರಣವಿಲ್ಲದೆ ಬೇರೆಯವರನ್ನು ದ್ವೇಷಿಸುತ್ತಾರೆ. ಆದರೆ ನೀವು ಯಾರನ್ನು ದ್ವೇಷಿಸಬೇಡಿ. ನಿಮ್ಮ ದ್ವೇಷಿಗಳನ್ನು ಸಹ ದ್ವೇಷಿಸಬೇಡಿ. Because your haters are your real fans. ನೀವು ನಿಮ್ಮ ಕೆಲಸ ಮಾಡಿ. ನಿಮಗೆ ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಜನ ಸಿಗ್ತಾರೆ. ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಜನರ ಕಡೆಗೆ ನೋಡಿ, ನಿಮ್ಮನ್ನು ದ್ವೇಷಿಸುವ ನಾಲ್ಕು ಜನರ ಕಡೆಗಲ್ಲ. Thanks you and take care.
Blogger ನಿಂದ ಸಾಮರ್ಥ್ಯಹೊಂದಿದೆ.