ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills in Kannada

ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


ಬಿಜನೆಸ್ ಲೆಸನ್ - 05
                  ಹಾಯ್ ಗೆಳೆಯರೇ, ನಮಸ್ಕಾರ. ನಾನು ನಿಮ್ಮ ಸತೀಶಕುಮಾರ. ಇವತ್ತಿನ ಬಿಜನೆಸ್ ಲೆಸ್ಸನನಲ್ಲಿ ಒಬ್ಬ ಬಿಜನೆಸಮ್ಯಾನಗೆ ಇರಬೇಕಾದ ಸ್ಕೀಲಗಳ ಬಗ್ಗೆ ನೋಡೋಣಾ. ಒಬ್ಬ ಬಿಜನೆಸಮ್ಯಾನಗೆ ಸಾಮಾನ್ಯವಾಗಿ ಬ್ರಾಡ್ ಥಿಂಕಿಂಗ್ ಜೊತೆಗೆ ಸಿಂಪಲ್ ವರ್ಕಿಂಗ್ ಸ್ಟೈಲ್ ಇರಬೇಕು. ಅವನಿಗೆ ಫೀಯರ್ ಆಫ್ ಫೇಲಿವರ ಇರಬಾರದು. ಬಿಜನೆಸನಲ್ಲಿ ವಿದ್ಯೆಗಿಂತ ಹೆಚ್ಚಾಗಿ ಬುದ್ಧಿ ಕೆಲಸಕ್ಕೆ ಬರುತ್ತದೆ. Man Power ಹಾಗೂ Money Powerಗಿಂತ ಮೊದಲು ಸ್ಟ್ರಾಂಗ್ Mind Power ಬೇಕಾಗುತ್ತದೆ. ಇದರ ಜೊತೆಗೆ ಒಬ್ಬ ವ್ಯಕ್ತಿ ಬಿಜನೆಸ್ಸಲ್ಲಿ ಸಕ್ಸೆಸಫುಲ ಆಗಬೇಕೆಂದರೆ ಅವನ Skill ಹಾಗೂ Will ಎರಡೂ ಪರವಫುಲ್ ಆಗಿರಬೇಕಾಗುತ್ತದೆ. ಒಬ್ಬ ಬಿಜನೆಸಮ್ಯಾನಗೆ ಬೇಕಾದ ಟಾಪ್ ಸ್ಕೀಲಗಳು ಇಲ್ಲಿವೆ. ಇವುಗಳನ್ನು ತಪ್ಪದೆ ಬೆಳಸಿಕೊಳ್ಳಿ.

1) Good Communication Skills : ಉತ್ತಮ ಸಂಹವನ ಕೌಶಲ್ಯಗಳು

               ಒಬ್ಬ ಬಿಜನೆಸಮ್ಯಾನಗೆ ಉತ್ತಮ ಕಮ್ಯುನಿಕೇಷನ ಸ್ಕಿಲಗಳಿರಬೇಕು. ಅವನಿಗೆ ಬೇರೆಯವರೊಂದಿಗೆ ಕಂಫರ್ಟೆಬಲಾಗಿ ಹಾಗೂ ಪ್ರೊಫೆಷನಲ್ಲಾಗಿ ಮಾತನಾಡುವ ಸಾಮರ್ಥ್ಯವಿರಬೇಕು. ಮಾತಿನಿಂದ ಎದುರುಗಡೆಯಿರುವ ವ್ಯಕ್ತಿಗಳ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಅವನಲ್ಲಿರಬೇಕು. ಇದರ ಜೊತೆಗೆ ಅವನಿಗೆ Self Promoting and Self Branding ಮಾಡಿಕೊಳ್ಳುವ ಕಲೆ ಕರಗತವಾಗಿರಬೇಕು.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


2) Financial Skills : ಆರ್ಥಿಕ ಕೌಶಲ್ಯಗಳು

                             ಒಬ್ಬ ಬಿಜನಸೆಮ್ಯಾನಗೆ ಕಮ್ಯುನಿಕೇಷನ ಸ್ಕೀಲಗಳ ಜೊತೆಗೆ ಫೈನಾನ್ಸಿಯಲ್ ಸ್ಕೀಲಗಳು ಸಹ ಅವಶ್ಯವಾಗಿ ಬೇಕಾಗುತ್ತವೆ. ಅವನಿಗೆ ಮನಿ ಮ್ಯಾನೇಜಮೆಂಟ ಗೊತ್ತಿರಬೇಕಾಗುತ್ತದೆ. ಅವನಿಗೆ ದುಡ್ಡನ್ನು ನಿಭಾಯಿಸಲು ಬರದಿದ್ರೆ ಬಿಜನೆಸ್ಸಲ್ಲಿ ನೆಗೆಟಿವ್ ಕ್ಯಾಷ್ ಫ್ಲೋ ಆಗಿ ಬಿಜನೆಸ್ ಬೀದಿಗೆ ಬರುತ್ತದೆ. ಅದಕ್ಕಾಗಿ ಆತ ಮನಿಯನ್ನು ಮ್ಯಾನೇಜ ಮಾಡಲು ಕಲಿಯಬೇಕು. ಜೊತೆಗೆ ಅವನಿಗೆ ಮನಿ ಸೇವಿಂಗ್ ಆ್ಯಂಡ್ ಇನ್ವೆಸ್ಟಮೇಂಟ ಬಗ್ಗೆ ಸ್ವಲ್ಪನಾದ್ರೂ ನಾಲೇಜ್ಡ ಇರಲೇಬೇಕು. ಅವನಿಗೆ ಟ್ಯಾಕ್ಸೆಷನ ಬಗ್ಗೆ ಚೆನ್ನಾಗಿ ಗೊತ್ತಿರಬೇಕು. ಅವನಿಗೆ ಫ್ರೊಪಿಟ್ ಲಾಸ್ ರೆಷೋ ಹಾಗೂ ಟ್ಯಾಕ್ಸ ಬಗ್ಗೆ ಸರಿಯಾಗಿ ಗೊತ್ತಿದ್ರೆ ಮಾತ್ರ ಆತ ತನ್ನ ಸರ್ವಿಸಗೆ ಅಥವಾ ಪ್ರೋಡಕ್ಟಗೆ ಸರಿಯಾದ ಬೆಲೆಯನ್ನು ನಿಗದಿಪಡಿಸಲು ಸಾಧ್ಯವಾಗೋದು, ಜಾಸ್ತಿ ಲಾಭಗಳಿಸಲು ಸಾಧ್ಯವಾಗೋದು. ಒಬ್ಬ ಬಿಜನೆಸೆಮ್ಯಾನಗೆ ಕಮರ್ಷಿಯಲ್ ಮೈಂಡಸೆಟ ಮತ್ತು ಕಮರ್ಷಿಯಲ್ ಥಿಂಕಿಂಗ ಬೇಕೇಬೇಕು. ಬಹಳಷ್ಟು ಸೋಸಿಯಲಿ ಥಿಂಕ ಮಾಡಿದ್ರೆ ಬಿಜನೆಸ್ಸಲ್ಲಿ ಬದುಕಕ್ಕಾಗಲ್ಲ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


3) Advertising & Marketing Skills : ಜಾಹೀರಾತು ಮತ್ತು ಮಾರಾಟ ಕೌಶಲ್ಯಗಳು

               ಒಬ್ಬ ಬಿಜನೆಸಮ್ಯಾನಗೆ ತನ್ನ ಬಿಜನೆಸನ್ನು ಸರಿಯಾಗಿ ಅಡ್ವಟೈಜ ಮಾಡುವ ಕಲೆ ಗೊತ್ತಿರಲೇಬೇಕು. ಅಡ್ವಟೈಜಿಂಗ ಮಾಡದಿದ್ರೆ ಕಸ್ಟಮರ್ಸಗೆ ಅವನ ಬಿಜನೆಸ್ ಹೇಗೆ ಗೊತ್ತಾಗುತ್ತೆ?. ಒಂದು ಸಕ್ಸೆಸಫುಲ್ ಬಿಜನೆಸಲ್ಲಿ ಅಡ್ವಟೈಜಿಂಗ್ ಹಾಗೂ ಮಾರ್ಕೆಟಿಂಗ್ ಕೌಶಲ್ಯಗಳು ಬಹಳಷ್ಟು ಪ್ರಮುಖವಾದ ಪಾತ್ರವನ್ನು ನಿಭಾಯಿಸುತ್ತವೆ. ಒಬ್ಬ ಬಿಜನೆಸಮ್ಯಾನಗೆ ತನ್ನ ಪ್ರೋಡಕ್ಟನ್ನು ಅಥವಾ ಸರ್ವಿಸನ್ನು ಸರಿಯಾದ ಮಾರ್ಕೆಟನಲ್ಲಿ ಸರಿಯಾಗಿ ಪ್ರೋಮೋಟ ಮಾಡಿ ಕಸ್ಟಮರ್ಸಗೆ ಬೆಸ್ಟ ಸರ್ವಿಸನ್ನು ಕೊಟ್ಟು ಹೆಚ್ಚಿಗೆ ಸೇಲ್ಸಗಳನ್ನು ಮಾಡುವುದೇಗೆ ಎಂಬುದು ಗೊತ್ತಿರಬೇಕು. ಒಂದ್ಸಲ ಬಂದ ಕಸ್ಟಮರನನ್ನು ಪ್ರತಿಸಲ ತನ್ನ ಬಳಿಯೇ ಬರುವಂತೆ ಮಾಡಿಕೊಳ್ಳುವ ಜಾಣತನ ಅವನಲ್ಲಿರಬೇಕು. ಈ ಸಂದರ್ಭದಲ್ಲಿ ಅವನಿಗೆ ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಸ್ಕೀಲಗಳು ಪ್ರಯೋಜನಕ್ಕೆ ಬರುತ್ತವೆ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


4) Negotiation Skills : ನೆಗೋಷಿಯೆಷನ ಕೌಶಲ್ಯಗಳು

               ಒಬ್ಬ ಬಿಜನೆಸಮ್ಯಾನನಲ್ಲಿ ನೆಗೋಷಿಯೆಷನ ಕೌಶಲ್ಯಗಳು ಕಂಪಲ್ಸರಿಯಾಗಿ ಇರಲೇಬೇಕು. ಒಂದು ವೇಳೆ ಅವನಲ್ಲಿ ನೆಗೋಷಿಯೆಷನ ಸ್ಕೀಲಗಳಿಲ್ಲದಿದ್ದರೆ ಆತ ಪ್ರತಿ ಹಂತದಲ್ಲಿ ನಷ್ಟವನ್ನು ಅನುಭವಿಸುತ್ತಾನೆ ಮತ್ತು ಕಸ್ಟಮರ್ಸಗಳನ್ನು ಕಳೆದುಕೊಳ್ಳುತ್ತಾನೆ. ಕಸ್ಟಮರ್ ಯಾವುದೇ ವಸ್ತುವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಬಾರಗೇನನ್ನು ಮಾಡಿಯೇ ಮಾಡುತ್ತಾನೆ. ಅದು ಅವನ ಸ್ವಭಾವ. ಆದರೆ ಅವನ ನೀಡ್ ಮತ್ತು ಬಜೆಟನ್ನು ಅರ್ಥಮಾಡಿಕೊಂಡು ತನಗೆ ನಷ್ಟವಾಗದಂತೆ ಬಿಜನೆಸ್ ಮಾಡುವುದು ಬಿಜನೆಸಮ್ಯಾನನ ಜಾಣತನ. ತಲೆಯಲ್ಲಿ ಕೂದಲಿಲ್ಲದಿರುವವನಿಗೆ ಬಾಚಣಿಕೆ ಮಾರುವ ಕೌಶಲ್ಯ ಯಾವನಲ್ಲಿರುತ್ತದೆಯೋ ಆತ ಬಿಜನೆಸ್ಸಲ್ಲಿ ಬೇಗನೇ ಬೆಳೆಯುತ್ತಾನೆ. ಯಾವನಿಗೆ ಮಾತುಗಳನ್ನು ಮಾರಲು ಬರುತ್ತದೆಯೋ ಆತ ಏನೂ ಬೇಕಾದರೂ ಸುಲಭವಾಗಿ ಮಾರುತ್ತಾನೆ. ವಸ್ತುಗಳನ್ನು ಮಾರಾಟ ಮಾಡುವುದಕ್ಕಿಂತ ಮೊದಲು ಮಾತುಗಳನ್ನು ಮಾರುವುದನ್ನೇ ನಾವು ನೆಗೋಷಿಯೆಷನ ಸ್ಕೀಲ್ಸ ಎನ್ನುತ್ತೇನೆ. ಇವು ಪ್ರತಿಯೊಬ್ಬ ಬಿಜನೆಸಮ್ಯಾನಗೆ ಬೇಕೇಬೇಕು.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


5) Leadership Skills (ನಾಯಕತ್ವ ಗುಣ)

            ಒಬ್ಬ ಬಿಜನೆಸಮ್ಯಾನಗೆ ಲೀಡರಶೀಪ ಸ್ಕೀಲ ಅತಿ ಮುಖ್ಯವಾಗಿ ಬೇಕೆ ಬೇಕಾಗುತ್ತದೆ. ಏಕೆಂದರೆ ಬಿಜನೆಸಲ್ಲಿ ಟಾಪ್ ಲೆವೆಲಗೆ ಹೋಗಲು ಒಂದು ಪವರಫುಲ್ ಟೀಮ ಬೇಕಾಗುತ್ತದೆ. ಆತ ಒಬ್ಬಂಟಿಯಾಗಿ ಏನನ್ನೂ ಮಾಡಲಾರ. ಅವನಿಗೊಂದು ಪವರಫುಲ ಟೀಮ ಬೇಕೆ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವನಲ್ಲಿರುವ ಲೀಡರಶೀಪ ಸ್ಕೀಲ್ಸ ಪ್ರಯೋಜನಕ್ಕೆ ಬರುತ್ತವೆ. ಅವನು ಒಂದು ಟೀಮ ಬಿಲ್ಡ ಮಾಡಬೇಕಾಗುತ್ತದೆ, ಅದರ ಜೊತೆಗೆ ಅದನ್ನು ಸರಿಯಾದ ಡೈರೆಕ್ಷನನಲ್ಲಿ ಲೀಡ ಮಾಡಬೇಕಾಗುತ್ತದೆ. ಆತ ತನ್ನ ಟೀಮನ್ನು ಎಜುಕೇಟ್ ಮಾಡಿ, ಮೋಟಿವೇಟ್ ಮಾಡಿ ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಟೀಮನ್ನು ಅಚ್ಚುಕಟ್ಟಾಗಿ ಮ್ಯಾನೇಜ ಮಾಡುವುದರ ಜೊತೆಗೆ ಟೀಮಲ್ಲಿ ಯಾವಾಗಲೂ ಫ್ರೆಂಡ್ಲಿನೆಸ್ ಮತ್ತು ಹ್ಯಾಪಿನೆಸ್ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಬರೀ ಬಾಸ್ ಚೇರಲ್ಲಿ ಕುಳಿತುಕೊಂಡು ಆರ್ಡರ್ ಮಾಡಿದ್ರೆ ಏನು ಆಗಲ್ಲ. ಟೀಮನೊಂದಿಗೆ ಎಂಗೇಜ ಆಗಬೇಕಾಗುತ್ತದೆ, ಟೀಮ ಮೆಂಬರಗಳನ್ನು ಇನ್ವಾಲ್ವ ಮಾಡಿಸಿ ಜಾಣತನದಿಂದ ಕೆಲಸ ತೆಗೆದುಕೊಳ್ಳಬೇಕಾಗುತ್ತದೆ. ಟೀಮ್ ಮೆಂಬರಗಳಿಂದ ಟೈಮ ಮ್ಯಾನೇಜಮೆಂಟನ್ನು Expect  ಮಾಡುವ ಮೊದಲು ತಾನು ಸರಿಯಾಗಿರಬೇಕಾಗುತ್ತದೆ. ಏಕೆಂದರೆ ಯಥಾ ರಾಜಾ ತಥಾ ಪ್ರಜಾ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


6) Problem Solving and Decision Making Skills

                         ಒಬ್ಬ ಬಿಜನೆಸಮ್ಯಾನನಲ್ಲಿ problem solving and decision making skillsಗಳು ಇರುವುದು ಕಂಪಲ್ಸರಿಯಾಗಿದೆ. ಏಕೆಂದರೆ ಬಿಜನೆಸಲ್ಲಿ ದಿನಾ ನೂರಾಯೆಂಟು ಸಮಸ್ಯೆಗಳು ಬರುತ್ತವೆ, ಮಾರುಕಟ್ಟೆಯಲ್ಲಿ ಪ್ರತಿ ಸೆಕೆಂಡಗೆ ಏರೀಳಿತಗಳಾಗುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ತನ್ನ ಬಿಜನೆಸನ್ನು ಸಸ್ಟೇನ ಮಾಡಿಕೊಂಡು ಪ್ರೋಫಿಟನಲ್ಲಿ ಮುನ್ನಡೆಸಿಕೊಂಡು ಹೋಗುವುದು ಒಬ್ಬ ಬುದ್ಧಿವಂತ ಬಿಜನೆಸಮ್ಯಾನನ ಕರ್ತವ್ಯವಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಹೆದರಿ ಹಿಂದೆ ಸರಿದ್ರೆ ಬಿಜನೆಸ್ಸಲ್ಲಿ ಮುಂದೆ ಹೋಗಕ್ಕಾಗಲ್ಲ. ವಿಸಿಟಿಂಗ್ ಕಾರ್ಡಲ್ಲಿ CEO ಅಂತಾ ಹಾಕಿಕೊಂಡು ಬೇಜಾವ್ದಾರಿತನದಿಂದ ತಿರುಗಾಡಿದ್ರೆ ಏನು ಪ್ರಯೋಜನವಾಗಲ್ಲ. ಬಂದಿರುವ ಪ್ರಾಬ್ಲಮನ್ನು ಸರಿಯಾಗಿ ಅನಲೈಜ ಮಾಡಿ ಅದಕ್ಕೆ ಸೋಲುಷನ ಹುಡುಕಿ ಟೀಮನ್ನು ಮೋಟಿವೇಟ ಮಾಡಿಕೊಂಡು ಮುನ್ನುಗ್ಗುವವನಿಗೆ ಸಕ್ಸೆಸ್ ಸಿಗುತ್ತದೆಯೆ ಹೊರತು ಎಲ್ಲ ಬಿಟ್ಟು ಕೈಕಟ್ಟಿ ಕುಳಿತುಕೊಳ್ಳುವವನಿಗಲ್ಲ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


7) Learning Skills : ಕಲಿಕಾ ಕೌಶಲ್ಯಗಳು

                ಒಬ್ಬ ಬಿಜನೆಸಮ್ಯಾನನಲ್ಲಿ ಯಾವಾಗಲೂ ತನ್ನ ಬಿಜನೆಸಗೆ ತಕ್ಕಂತೆ ಏನಾದರೂ ಒಂದನ್ನು ಹೊಸದಾಗಿ ಕಲಿಯುವ ಹಂಬಲ ಇರಲೇಬೇಕು. ಇವತ್ತು ಮಾರುಕಟ್ಟೆಗೆ ಹೊಸದಾಗಿ ಯಾವ ಟೆಕ್ನಾಲಜಿ ಬಂದಿದೆ, ಅದರಿಂದ ನಮ್ಮ ಬಿಜನೆಸ್ ಸಿಂಪ್ಲಿಫೈಡ ಆಗುತ್ತಾ ಎಂಬಿತ್ಯಾದಿ ವಿಷಯಗಳನ್ನು ತಿಳಿದುಕೊಂಡು ಯಾವಾಗಲೂ ಅಪಡೇಟೆಡ ಆಗಿರಬೇಕಾಗುತ್ತದೆ. ಒಂದು ವೇಳೆ ಅಪಡೇಟೆಡ ಆಗಿರದಿದ್ದರೆ ಆತ ಆದಷ್ಟು ಬೇಗನೆ ಮಾರ್ಕೆಟನಿಂದ Uninstall ಆಗುತ್ತಾನೆ. ಜಾಸ್ತಿ ಕಲಿತು ಜಾಸ್ತಿ ತಿಳಿದುಕೊಂಡು ಕಸ್ಟಮರ್ಸಗಳಿಗೆ ಕನ್ಸಿಸ್ಟಂಟಾಗಿ Value Adding Service ಅಥವಾ Productನ್ನು ಕೊಡಲು ಆತ ಸದಾ ಹಂಬಲಿಸಬೇಕು. ಅಂದಾಗಲೇ ಆತ ಕಡಿಮೆ ಸಮಯಾವಕಾಶದಲ್ಲಿ ಟಾಪ ಸ್ಥಾನಕ್ಕೇರಲು ಸಾಧ್ಯವಾಗೋದು. More Learning - More Earning ಎಂಬ ಸಿದ್ಧಾಂತವನ್ನು ನೆನಪಿಡಿ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


8) Networking Skills

              ಯಾವ ಬಿಜಸೆನಮ್ಯಾನಗೆ ಒಂದೊಳ್ಳೆ ನೆಟವರ್ಕಿಂಗ್ ಸ್ಕೀಲಗಳಿರುತ್ತವೆಯೋ ಆತನ ಬಿಜನೆಸ್ ಸರಾಗವಾಗಿ ಮತ್ತು ಸೂಪರಫಾಸ್ಟಾಗಿ ಸಾಗುತ್ತದೆ. ಅವನ ನೆಟವರ್ಕ ಎಷ್ಟು ದೊಡ್ಡದಾಗಿರುತ್ತದೆಯೋ ಅಷ್ಟು ದೊಡ್ಡ ನೆಟವರ್ಥ ಅವನದ್ದಾಗಿರುತ್ತದೆ. Big Network leads to Big Net worth ಎಂಬುದನ್ನು ನೆನಪಿಡಿ. ಮಾರ್ಕೆಟನಲ್ಲಿ ಮತ್ತು ಸೊಸೈಟಿಯಲ್ಲಿ ಎಲ್ಲರೊಂದಿಗೆ ನಿಮ್ಮ ರಿಲೆಷನಶೀಪ ಚೆನ್ನಾಗಿದ್ರೆ ನಿಮ್ಮ ಎಲ್ಲ ಕೆಲಸಗಳು ನಿಮ್ಮ ಆಫೀಸಿನಿಂದಲೇ ಸರಾಗವಾಗಿ ಆಗುತ್ತವೆ. ಅದಕ್ಕಾಗಿ ಸರಿಯಾಗಿ ನೆಟವರ್ಕನ್ನು ಬೆಳೆಸಿಕೊಳ್ಳುವುದು ಒಬ್ಬ ಬಿಜನೆಸಮ್ಯಾನಗೆ ಅತಿಮುಖ್ಯವಾಗಿದೆ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills


9) Rejection Handling Skills :

               ಒಬ್ಬ ಬಿಜನೆಸಮ್ಯಾನಗೆ ತಾಳ್ಮೆಯ ಜೊತೆಗೆ Rejection Handling Skill ಅವಶ್ಯಕವಾಗಿ ಬೇಕಾಗುತ್ತದೆ. ಏಕೆಂದರೆ ಬಿಜನೆಸನಲ್ಲಿ ಸಾಕಷ್ಟು ರಿಜೆಕ್ಷನಗಳು, ಅವಮಾನಗಳು ಎದುರಾಗುತ್ತಲೇ ಇರುತ್ತವೆ. ಕೆಲವೊಂದಿಷ್ಟು ಸಲ ಕಸ್ಟಮರ Unsatisfied ಆದರೆ ಕೆಲವೊಂದಿಷ್ಟು ಸಲ ಕಾಂಪಿಟೆಟರ unsatisfied ಆಗುತ್ತಾನೆ. ಇಂಥ ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸಿದವನು ಮಾತ್ರ ತಾಳುತ್ತಾನೆ. ಕಸ್ಟಮರನಿಂದ ಬರುತ್ತಿರುವ ಫಿಡಬ್ಯಾಕನ್ನು ಗಿಫ್ಟಾಗಿ ತೆಗೆದುಕೊಂಡವನು ಮಾತ್ರ ಮುಂದುವರೆಯಿರುತ್ತಾನೆ. ಕಸ್ಟಮರಗಳ ಫಿಡಬ್ಯಾಕಗಳನ್ನು ತೆಗೆದುಕೊಳ್ಳದವನು ಆದಷ್ಟು ಬೇಗನೆ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ ಮತ್ತು ತನ್ನ ಬಿಜನೆಸ್ಸನ್ನು ತಾನೇ ಫಿನಿಶ್ ಮಾಡಿಕೊಳ್ಳುತ್ತಾನೆ. ಎಲ್ಲವನ್ನೂ ಸರಿಯಾಗಿ ಮಾಡಿದರೂ ಕೆಲವೊಂದಿಷ್ಟು ಸಲ ಬಹಳಷ್ಟು ರಿಜೆಕ್ಷನಗಳು, ಚಾಲೆಂಜಸಗಳು ಬರುತ್ತವೆ. ಆ್ಯಂಜೆಲ ಇನ್ವೆಸ್ಟರ ನಿಮ್ಮ ಬಿಜನೆಸ್ ಐಡಿಯಾವನ್ನು ಬಕ್ವಾಸ ಎನ್ನಬಹುದು, ನಿಮ್ಮ ಕಾಂಪಿಟೇಟರ ನಿಮಗೆ ತೊಂದರೆ ಕೊಡಬಹುದು. ಇವೆಲ್ಲ ಬಿಜನೆಸ್ಸಲ್ಲಿ ಕಾಮನ್. ಇಂಥ ಸಂದರ್ಭದಲ್ಲಿ ನೀವು ಎಷ್ಟು ತಾಳ್ಮೆಯಿಂದ ಇರುತ್ತಿರೋ ಅಷ್ಟು ದಿನ ತಾಳುತ್ತೀರಿ.


ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills

                  ಓಕೆ ಫೈನ ಗೆಳೆಯರೇ, ನನ್ನ ಪ್ರಕಾರ ಇವಿಷ್ಟು ಸ್ಕೀಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು ಅಂದಾಗಲೇ ಆತ ಸಕ್ಸೆಸಫುಲ್ ಆಗಕ್ಕಾಗೋದು. ನಿಮ್ಮಲ್ಲಿ ಯಾವ ಸ್ಕೀಲಗಳಿವೆ, ಯಾವ ಸ್ಕೀಲಗಳಿಲ್ಲ ಎಂಬುದನ್ನು ನೋಡಿಕೊಂಡು ಬೇಗನೆ ನಿಮ್ಮನ್ನು ನೀವು ಅಪಡೇಟ್ ಮಾಡಿಕೊಳ್ಳಿ. All the best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.