ಯಾಕೆ ನೀವೆಲ್ಲರೂ ಬಿಜನೆಸ್ ಮಾಡಬೇಕು? - Why you all should do Business? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಯಾಕೆ ನೀವೆಲ್ಲರೂ ಬಿಜನೆಸ್ ಮಾಡಬೇಕು? - Why you all should do Business? in Kannada

ಬಿಜನೆಸ್ ಲೆಸನ್ - 02 : ಯಾಕೆ ನೀವೆಲ್ಲರೂ ಬಿಜನೆಸ್ ಮಾಡಬೇಕು?  Why you all should do Business?

ಬಿಜನೆಸ್ ಲೆಸನ್ - 02

                       ಹಾಯ್ ಗೆಳೆಯರೇ, ಕಳೆದ ಎಪಿಸೋಡನಲ್ಲಿ ನಾನು ನಿಮಗೆ ಜಾಬ್ ಮತ್ತು ಬಿಜನೆಸನ ಒಟ್ಟಾರೆ ವ್ಯತ್ಯಾಸವನ್ನು ತಿಳಿಸಿಕೊಟ್ಟಿದ್ದೆ. ಜೊತೆಗೆ ಜಾಬನ ಬದಲಾಗಿ ನಿಮಗೆ ಬಿಜನೆಸ್ ಮಾಡಲು ರೆಕಮೆಂಡ ಮಾಡಿದ್ದೆ. ಯಾಕೆ ಅಂತಾ ಈ ಎಪಿಸೋಡನಲ್ಲಿ ನೋಡೋಣಾ.

ನಿಮಗೆ ಸಾಧ್ಯವಾದ್ರೆ ಇಲ್ಲವೇ ನಿಮಗೆ ಇಂಟರೆಸ್ಟ್ ಇದ್ರೆ ಯಾಕೆ ನೀವು ಬಿಜನೆಸಮ್ಯಾನ ಆಗಬೇಕು ಎಂಬುದಕ್ಕೆ ಕಾರಣಗಳು ಇಂತಿವೆ.

1) ನೀವು ಸರ್ವಂಟ್ ಆದ್ರೆ ನೀವು ಮತ್ತು ನಿಮ್ಮ ಫ್ಯಾಮಿಲಿ ಮಾತ್ರ ಸುಖವಾಗಿರಬಹುದು. ಹಣದ ಕೊರತೆಯಿಂದ ನೀವು ಸ್ವಾರ್ಥಿಗಳಾಗಬಹುದು. ನಿಮ್ಮ ತಂದೆತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳದೇ ಇರಬಹುದು. ಆದರೆ ನೀವು ದೊಡ್ಡ ಬಿಜನೆಸಮ್ಯಾನ ಆದರೆ ನಿಮ್ಮ ಫ್ಯಾಮಿಲಿ, ನಿಮ್ಮ ಊರು, ನಮ್ಮ ರಾಜ್ಯ ಹಾಗೂ ನಮ್ಮ ದೇಶವನ್ನು ಚೆನ್ನಾಗಿ ನೋಡಿಕೊಳ್ಳಬಹುದು. ದೇಶದ ಜೊತೆಗೆ ಸಾವಿರಾರು ಕುಟುಂಬಗಳಿಗೆ ಬೆಳಕಾಗಬಹುದು.

ಬಿಜನೆಸ್ ಲೆಸನ್ - 02 : ಯಾಕೆ ನೀವೆಲ್ಲರೂ ಬಿಜನೆಸ್ ಮಾಡಬೇಕು?  Why you all should do Business?

2) ನಿಮ್ಮ ಬಳಿ ಟ್ಯಾಲೆಂಟ ಇದ್ದರೆ ಬೇರೆಯವರಿಗಾಗಿ ಕೆಲಸ ಮಾಡುವುದಕ್ಕಿಂತ ಸ್ವಂತಕ್ಕಾಗಿ ಕೆಲಸ ಮಾಡುವುದು ಎಷ್ಟೋ ಪಟ್ಟು ಉತ್ತಮ. ಏಕೆಂದರೆ ನಿಮ್ಮನ್ನು ಚೆನ್ನಾಗಿ ಬಳಸಿಕೊಂಡು ನಿಮ್ಮ ಬಾಸ್ ಆಡಿ ಕಾರಲ್ಲಿ ಸುತ್ತುತ್ತಾನೆ. ಆದರೆ ನೀವು ಅದೇ ಬಾಡಿಗೆ ಮನೆಯಲ್ಲಿ ಒದ್ದಾಡುತ್ತಿರಿ. ನಿಮ್ಮ ಬಾಸ್ ನಿಮಗೆ ಪ್ರೋಫಿಟನ 10% ಮಾತ್ರ ಸಂಬಳ ಅಂತಾ ಕೊಡುತ್ತಾನೆ. ಮಿಕ್ಕ 90%ನ್ನು ತನ್ನ ಜೇಬಿಗೆ ಹಾಕಿಕೊಳ್ಳುತ್ತಾನೆ. ಒಂದು ವೇಳೆ ನಿಮಗೆ 10 ಸಾವಿರ ಸಂಬಳ ಬರ್ತಿದೆ ಅಂದ್ರೆ ನಿಮ್ಮ ಬಾಸ್ ನಿಮ್ಮಿಂದ 1 ಲಕ್ಷದ ಕೆಲಸ ತೆಗೆದುಕೊಳ್ಳುತ್ತಿದ್ದಾನೆ ಎಂದರ್ಥ. ಎಲ್ಲವನ್ನೂ ಬಿಡಿಸಿ ಹೇಳಲು ಸಾಧ್ಯವಿಲ್ಲ. ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಿ. ನಿಮ್ಮ ಬಳಿ ಟ್ಯಾಲೆಂಟ ಇದ್ರೆ ಆಳಾಗುವುದಕ್ಕಿಂತ ಅರಸನಾಗಿ.

ಬಿಜನೆಸ್ ಲೆಸನ್ - 02 : ಯಾಕೆ ನೀವೆಲ್ಲರೂ ಬಿಜನೆಸ್ ಮಾಡಬೇಕು?  Why you all should do Business?

3) ದೊಡ್ಡ ಕಂಪನಿಯಲ್ಲಿ ದೊಡ್ಡ ನೌಕರನಾಗುವುದಕ್ಕಿಂತ ಇಲ್ಲವೇ ಪರದೇಶದ ಕಂಪನಿಗಳ ಗುಲಾಮಗಿರಿ ಮಾಡುವುದಕ್ಕಿಂತ ಒಂದು ಸಣ್ಣ ಕಂಪನಿಯ ಮಾಲೀಕನಾಗುವುದು ಉತ್ತಮ ಮತ್ತು ಹೆಮ್ಮೆಯ ವಿಷಯ. ಮಾಲೀಕನಾಗುವುದರಲ್ಲಿರುವ ಖುಷಿ ಬೇರೆನೆ ಇದೆ ಬಿಡಿ. ಅದು ಆರ್ಡಿನರಿ ವ್ಯಕ್ತಿಗಳ ತಲೆಗೆ ಹತ್ತಲ್ಲ. Servant is servant only and owner is owner only. ನನ್ನ ಪ್ರಕಾರ ಭಾರತದಲ್ಲಿ ಹುಟ್ಟಿ, ಭಾರತದಲ್ಲಿ ಬೆಳೆದು, ಭಾರತದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಪರದೇಶದ ಕಂಪನಿಗಳ ಗುಲಾಮಗಿರಿಯನ್ನು ಮಾಡುತ್ತಾ ಪರದೇಶದಲ್ಲಿ ಸೆಟ್ಲಾದವರೆಲ್ಲ ದೇಶದ್ರೋಹಿಗಳೇ. ಅವರು ಹೇಳಿಕೊಳ್ಳುವುದಕ್ಕೆ ಮಾತ್ರ ಭಾರತೀಯರು. ಅವರಿಂದ ದೇಶಕ್ಕೆ ಯಾವುದೇ ತರಹದ ಲಾಭವಿಲ್ಲ.

4) ಬೇರೆ ದೇಶದವರು ಭಾರತಕ್ಕೆ ಬಂದು ಬಿಜನೆಸ್ ಮಾಡಿ ನಮ್ಮನ್ನು ಹಾಡುಹಗಲೇ ದೋಚಿಕೊಂಡು ಹೋಗುತ್ತಿದ್ದಾರೆ. ನಮ್ಮ ದೇಶದ ಟ್ಯಾಲೆಂಟಗಳು ಅವರ ಕೈಕೆಳಗೆ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ಇದು ಮೊದಲು ಬದಲಾಗಬೇಕು. ಇಲ್ಲವಾದರೆ ನಮ್ಮ ದೇಶ ಉಳಿಯಿಲ್ಲ. ಜಗತ್ತಿನ ಯಾವುದೇ ಕಂಪನಿಯನ್ನು ತೆಗೆದುಕೊಳ್ಳಿ ಅದರ ಇನಕಮನ ಮೂಲ ಸೌರ್ಸ ಭಾರತವಾಗಿರುತ್ತದೆ. ಇವರೆಲ್ಲರೂ ಭಾರತದಿಂದಲೇ ಬದುಕುತ್ತಿದ್ದಾರೆ. ಆದರೆ ನಾವು ಇನ್ನು ಬಡತನದಲ್ಲಿದ್ದೇವೆ. ನಾವು ಬೆಳೆಯಬೇಕೆಂದರೆ, ನಮ್ಮ ದೇಶ ಬೆಳೆಯಬೇಕೆಂದರೆ ನಮ್ಮ ದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜನೆಸ್ ಫಿಲ್ಡಿಗೆ ಬರಬೇಕು. ಅಂದಾಗಲೇ ನಾವು ವಲ್ಡ ಲೀಡರ್ ಆಗಲು ಸಾಧ್ಯ. ಅದಕ್ಕಾಗಿ ನಿಮಗೆ ಇಂಟರೆಸ್ಟ್ ಇದ್ದರೆ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಜನ ನಿಮಗೆ ತಲೆ ಕೆಟ್ಟಿದೆ ಅಂದ್ರೂ ಪರವಾಗಿಲ್ಲ, ನೀವು ಬಿಜನೆಸ್ ಸ್ಟಾರ್ಟ ಮಾಡಿ ಮತ್ತು ದೇಶಕ್ಕೆ ನಿಮ್ಮದೇ ಆದ ಕೊಡುಗೆಯನ್ನು ಕೊಡಿ. Next ಎಪಿಸೋಡನಲ್ಲಿ ಮತ್ತೆ ಸಿಗ್ತೀನಿ. ಅಲ್ಲಿ ತನಕ All the best and Thanks you...

Blogger ನಿಂದ ಸಾಮರ್ಥ್ಯಹೊಂದಿದೆ.