80 - 20 ಪ್ರಿನ್ಸಿಪಲ್ : 80-20 Principle in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

80 - 20 ಪ್ರಿನ್ಸಿಪಲ್ : 80-20 Principle in Kannada

80 - 20 ಪ್ರಿನ್ಸಿಪಲ್ : 80-20 Principle in Kannada

                                                             ಬಿಜನೆಸ ಲೆಸನ - 22

                      ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನಮಗೆ ನಮ್ಮ ಜೀವನದಲ್ಲಿ ಏನು ಬೇಕು, ಏನು ಮಾಡಬೇಕು ಎಂಬುದು ಗೊತ್ತಿಲ್ಲದಿದ್ದರೂ ಏನು ಬೇಡ, ಏನು ಮಾಡಬಾರದು ಎಂಬುದು ಚೆನ್ನಾಗಿ ಗೊತ್ತಿರಬೇಕು. ಏನು ಗೊತ್ತಿಲ್ಲದಿರುವಾಗ ನಾವು ಸುಮ್ಮನಿದ್ರೆ ನಾವು ಝೀರೋ ಪೋಜಿಷನಲ್ಲಿರುತ್ತೇವೆ, ನಾವು ಏನಾದರೂ ಯಡವಟ್ಟು ಮಾಡಿಕೊಂಡರೆ ನೆಗೆಟಿವಗೆ ಹೋಗುತ್ತೇವೆ. ಆನಂತರ ನೆಗೆಟಿವನಿಂದ ಝೀರೋಗೆ, ಝೀರೋದಿಂದ ಪೋಜಿಟಿವಗೆ ಬರೋವಷ್ಟರಲ್ಲಿ ನಮ್ಮ‌ ಜೀವನ ಕಳೆದೊಗುತ್ತದೆ. ಅದಕ್ಕಾಗಿ ನಮಗೆ ಏನು ಬೇಕು, ಏನು ಮಾಡಬೇಕು ಎಂಬುದು ಗೊತ್ತಿಲ್ಲದಿದ್ದರೂ ಏನು ಬೇಡ, ಏನು ಮಾಡಬಾರದು ಎಂಬುದು ಚೆನ್ನಾಗಿ ಗೊತ್ತಿರಬೇಕು. ಇಂತಹ ಸಂದರ್ಭಗಳಲ್ಲಿ ನಾವು 80-20 ಪ್ರಿನ್ಸಿಪಲನ್ನು ಫಾಲೋ ಮಾಡೋದು ಬೆಸ್ಟ ಆಗಿದೆ. 

80 - 20 ಪ್ರಿನ್ಸಿಪಲ್ : 80-20 Principle in Kannada

                ಮೊದಲು 80-20 ಪ್ರಿನ್ಸಿಪಲ್ ಏನ ಹೇಳುತ್ತೆ ಅಂತಾ ನೋಡೋಣಾ. 80-20 ಪ್ರಿನ್ಸಿಪಲ್ ಏನ ಹೇಳುತ್ತೆ ಅಂದರೆ "ಕೇವಲ 20% ಆ್ಯಕ್ಷನ್ಸಗಳಿಂದ 80% ರಿಜಲ್ಟಗಳು ಸಿಗುತ್ತವೆ. ಅಂದರೆ ಬರೀ 20% ಇನಪುಟದಿಂದ ಮಾತ್ರ 80% ಔಟಪುಟ ಬರುತ್ತೆ..." ಅಂತಾ. 

ಉದಾಹರಣೆಗೆ : 

20% ಎಫೆಕ್ಟಿವ್ ಆ್ಯಡಗಳಿಂದ 80% ಸೇಲ್ಸ ಆಗುತ್ತವೆ‌. 

20% ಲಾಯಲ್ ಕಸ್ಟಮರಗಳಿಂದ 80% ಪ್ರೋಫಿಟಾಗುತ್ತದೆ.

20% ಪ್ರಾಬ್ಲಮ್ಸಗಳಿಂದ 80% ಲಾಸ ಆಗುತ್ತದೆ.

20% ಕೆಟ್ಟ ಜನರಿಂದ 80% ಸಮಾಜಕ್ಕೆ ತೊಂದರೆಯಾಗುತ್ತದೆ.

20% ನೆಗ್ಲಿಜೆಂಟ ಡ್ರೈವರಗಳಿಂದ 80%  ರೋಡ ಆ್ಯಕ್ಸಿಡೆಂಟಗಳಾಗುತ್ತವೆ. 

20% ವರ್ಕರಗಳಿಂದ 80% ಕೆಲಸ ಆಗುತ್ತದೆ. 

20% ಇನವೆಸ್ಟಮೆಂಟನಿಂದ 80% ರಿಟರ್ನ್ಸ ಸಿಗುತ್ತದೆ.

20% ಒಳ್ಳೇ ಜನರಿಂದ 80% ಒಳ್ಳೇ ಕೆಲಸಗಳಾಗುತ್ತಿವೆ, ದೇಶ ಅಭಿವೃದ್ಧಿಯಾಗುತ್ತಿದೆ. 

ಬರೀ 20% ಜನರತ್ರ ದೇಶದ 80% ಹಣ ಹಾಗೂ ಅಸೆಟ್ಸಯಿದೆ. 

20% ಮೋಡಗಳಿಂದ 80%  ಮಳೆಯಾಗುತ್ತದೆ. 

100ರಲ್ಲಿ ಬರೀ 20% ಜನರಷ್ಟೇ ಸಕ್ಸೆಸಫುಲ್ ಆಗುತ್ತಾರೆ. 

100ರಲ್ಲಿ ಬರೀ 20% ಜನರಿಗಷ್ಟೇ ಏನಾದರೂ ಒಂದನ್ನು ಸಾಧಿಸಬೇಕು, ಜೀವನದಲ್ಲಿ ಮುಂದೆ ಬರಬೇಕು ಎಂಬ ಛಲವಿರುತ್ತದೆ. 

80 - 20 ಪ್ರಿನ್ಸಿಪಲ್ : 80-20 Principle in Kannada

                            ಈ ರೀತಿ ಕೇವಲ 20% ಆ್ಯಕ್ಷನ್ಸಗಳಿಂದ ನಮಗೆ 80% ರಿಜಲ್ಟ್ಸಗಳು ಸಿಗುತ್ತವೆ‌. ನಮ್ಮ‌ ಜೀವನದಲ್ಲಿ ಈ 80-20 ಪ್ರಿನ್ಸಿಪಲ್ ಬಹಳಷ್ಟು ಇಂಪಾರಟಂಟಾದ ರೋಲನ್ನು ಪ್ಲೇ ಮಾಡುತ್ತದೆ. ಬರೀ ಬಿಜನೆಸ್ ‌ಮ್ಯಾನೇಜಮೆಂಟ ಅಷ್ಟೇ ಅಲ್ಲ, ನಮ್ಮ ಲೈಫ ಮ್ಯಾನೇಟಮೆಂಟ ಹಾಗೂ ಟೈಮ ಮ್ಯಾನೇಜಮೆಂಟಲ್ಲಿಯೂ ಸಹ ಈ 80-20 ಪ್ರಿನ್ಸಿಪಲ್ ಪ್ರಯೋಜನಕ್ಕೆ ಬರುತ್ತದೆ. ನೀವು ನಿಮ್ಮ ಸ್ಟಡಿಜಗಳಲ್ಲಿ, ವರ್ಕಲ್ಲಿ, ಬಿಜನೆಸ್ಸಲ್ಲಿ 80-20 ಪ್ರಿನ್ಸಿಪಲನ್ನು ಅಪ್ಲಾಯ ಮಾಡಿಕೊಂಡರೆ ನಿಮಗೆ ಬಹಳಷ್ಟು ಬೇಗನೆ ಸಕ್ಸೆಸ್ ಸಿಗುತ್ತದೆ. ಅದಕ್ಕಾಗಿ 80-20 ಪ್ರಿನ್ಸಿಪಲನ್ನು ನಿಮ್ಮ ಕೆಲಸದಲ್ಲಿ ಅಪ್ಲಾಯ ಮಾಡಿಕೊಳ್ಳಿ. ಸ್ಮಾರ್ಟ್ ಆ್ಯಂಡ್ ಕ್ಲಿಯರ್ ಗೋಲಗಳನ್ನು ಸೆಟ್ ಮಾಡಿಕೊಳ್ಳಿ. ನೀವು ಮಾಡುತ್ತಿರುವ ಕೆಲಸಗಳಲ್ಲಿ ಯಾವ 20% ಕೆಲಸಗಳಿಂದ ನಿಮಗೆ 80% ರಿಜಲ್ಟ್ಸ ಸಿಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿ. ಬರೀ ಆ 20% ಕೆಲಸಗಳ ಮೇಲಷ್ಟೇ ಫುಲ್ಲಿ ಫೋಕಸ ಮಾಡಿ, ಆ 20% ಕೆಲಸಗಳನ್ನು ಸರಿಯಾಗಿ ಮಾಡಿ. ಆ 20% ಕೆಲಸಗಳನ್ನು ರಿಪೀಟ ರೀಪಿಟಾಗಿ ಮಾಡಿ. ನಿಮಗೆ ಬೇಗನೆ ರಿಜಲ್ಟ್ಸಗಳು ಸಿಗುತ್ತವೆ‌. 

80 - 20 ಪ್ರಿನ್ಸಿಪಲ್ : 80-20 Principle in Kannada

                 ಒಂದು ವೇಳೆ ನೀವು ಸ್ಟಡಿ ಮಾಡುತ್ತಿದ್ದರೆ ಯಾವ 20% ಚಾಪ್ಟರಗಳನ್ನು ಕವರ ಮಾಡಿದಾಗ ನಿಮಗೆ 80% ಮಾರ್ಕ್ಸ್ ಸಿಗ್ತಿವೆ ಎಂಬುದನ್ನು ನೋಡಿ ಅವುಗಳನ್ನು ಸರಿಯಾಗಿ ಓದಿ‌. 

                 ನೀವು ಬಿಜನೆಸ ಮಾಡುತ್ತಿದ್ದರೆ ಯಾವ 20% ಆ್ಯಡ ಕ್ಯಾಂಪೇನಗಳಿಂದ, ಆ್ಯಕ್ಷನ್ಸಗಳಿಂದ, ಪ್ರೋಜೆಕ್ಟ್ಸಗಳಿಂದ ನಿಮಗೆ 80% ಪ್ರೋಫಿಟ ಸಿಗುತ್ತಿದೆ ಎಂಬುದನ್ನು ಸರಿಯಾಗಿ ಗಮನಿಸಿ ಮತ್ತು ಆ 20% ಕೆಲಸವನ್ನು ರೀಪಿಟ ಮಾಡಿ, ಸರಿಯಾಗಿ ಮಾಡಿ. ಕಡಿಮೆ‌ ಪ್ರೋಫಿಟನ್ನು ತಂದು ಕೊಡುವ ಕೆಲಸಗಳಿಗೆ ಕಡಿಮೆ ಇಂಪಾರಟನ್ಸ ಕೊಡಿ, ಜಾಸ್ತಿ ಪ್ರೋಫಿಟ ತಂದು ಕೊಡುತ್ತಿರುವ ಕೆಲಸಗಳಿಗೆ ಜಾಸ್ತಿ ಇಂಪಾರಟನ್ಸ ಕೊಡಿ. 

                       ಗೆಳೆಯರೇ, ನಿಮಗೀಗ 80-20 ಪ್ರಿನ್ಸಿಪಲ್ ಏನಂತಾ ಸರಿಯಾಗಿ ಅರ್ಥವಾಗಿದೆ ಅಂತಾ ಎಂದುಕೊಳ್ಳುವೆ‌. ಎಲ್ಲ ಆ್ಯಕ್ಷನ್ಸಗಳಿಂದ ಎಕ್ಸಪೇಕ್ಟೆಡ್ ರಿಜಲ್ಟ್ಸಗಳು ಸಿಗಲ್ಲ, ಬರೀ ರೈಟ ಆ್ಯಕ್ಷನ್ಸಗಳಿಂದ ಮಾತ್ರ ರೈಟ ರಿಜಲ್ಟ್ಸಗಳು ಸಿಗುತ್ತವೆ. ಅದಕ್ಕಾಗಿ 80-20 ಪ್ರಿನ್ಸಿಪಲನ್ನು ನಿಮ್ಮ ಲೈಫಲ್ಲಿ, ಬಿಜನೆಸ್ಸಲ್ಲಿ ಅಪ್ಲಾಯ ಮಾಡಿಕೊಳ್ಳಿ ಮತ್ತು ಬೇಗನೆ ‌ಮುಂದೆ ಬನ್ನಿ. ಧನ್ಯವಾದಗಳು...

The 80/20 Principle Book : https://www.roaringcreationsfilms.com/the-80-20-principle-the-secret-to-achieving-more-with-less-by-richard-koch/


Blogger ನಿಂದ ಸಾಮರ್ಥ್ಯಹೊಂದಿದೆ.