ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business in Kannada : Network Marketing in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business in Kannada : Network Marketing in Kannada

ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business


                                                    ಬಿಜನೆಸ್ ಲೆಸನ್ 15

                   ಹಾಯ್ ಗೆಳೆಯರೇ, ಬಹಳಷ್ಟು ಕಂಪನಿಗಳು ಒಂದು ಕಾಲದಲ್ಲಿ ನೆಟವರ್ಕ ಮಾರ್ಕೆಟಿಂಗನಿಂದಲೇ ತಮ್ಮ ನೆಟವರ್ಥನ್ನು ಮಾಡಿಕೊಂಡಿವೆ. ಆದರೆ ಈಗ ಟೆಕ್ನಾಲಜಿ ಬಹಳಷ್ಟು ಬೆಳೆದಿದೆ, ಈಗ ಅದಕ್ಕಿಂತಲೂ ಬೆಸ್ಟ ಆಪ್ಶನಗಳಿವೆ. ಆದರೂ ಸಹ ನೀವು ಬಿಜನೆಸಮ್ಯಾನ ಆಗಿದ್ದರೆ ನೀವು ಈ ನೆಟವರ್ಕ ಮಾರ್ಕೆಟಿಂಗ್ ಬಗ್ಗೆ ತಿಳಿದುಕೊಳ್ಳಲೇಬೇಕು. ಏಕೆಂದರೆ ಇದು ನಿಮ್ಮ ಬಿಜನೆಸ್ಸಗೂ ಸಹ ಹೆಲ್ಪಾಗಬಹುದು. ಸೋ ಗೆಳೆಯರೇ, ಇವತ್ತಿನ ಬಿಜನೆಸ್ ಲೆಸ್ಸನನಲ್ಲಿ ನೆಟವರ್ಕ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಬಗ್ಗೆ ನೋಡೋಣಾ.


ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business

                          ನಿಮ್ಮ ಬಿಜನೆಸ್ ಪ್ರೊಡಕ್ಟ ಬೇಸ್ಡ ಆಗಿರಲಿ ಅಥವಾ ಸರ್ವಿಸ್ ಬೇಸ್ಡ ಆಗಿರಲಿ ನೀವು ನಿಮ್ಮ ಬಿಜನೆಸನ ಗ್ರೋಥಗಾಗಿ ಸ್ವಲ್ಪನಾದ್ರು ನೆಟವರ್ಕನ್ನು ಬೆಳೆಸಲೇಬೇಕು. ನೆಟವರ್ಕ ಮಾರ್ಕೆಟಿಂಗನ್ನು ಕಲಿಯಲೇಬೇಕು. ನಿಮ್ಮದು ಒಂದು ಸೋಪ್ ಮ್ಯಾನುಫ್ಯಾಕ್ಚರಿಂಗ ಕಂಪನಿಯಿದೆ ಎಂದುಕೊಳ್ಳಿ. ನೀವು ಸೋಪ್ ತಯಾರು ಮಾಡುತ್ತೀರಾ. ಸೋಪ್ ತಯಾರು ಮಾಡಿದ ಮೇಲೆ ಅದನ್ನು ದೇಶದ ತುಂಬೆಲ್ಲ ಮಾರಾಟ ಮಾಡಬೇಕಲ್ಲ? ಹೇಂಗ ಮಾಡ್ತೀರಿ? ಇದಕ್ಕೆ ಎರಡು ದಾರಿಗಳಿವೆ ; ಒಂದು ನಿಮ್ಮದೇ ಆದಂತಹ ಒಂದು ಸ್ವಂತ ನೆಟವರ್ಕ ಮೂಲಕ ಮಾರಾಟ ಮಾಡುವುದು, ಎರಡನೆಯದ್ದು ಡಿಜಿಟಲ ಮಾರ್ಕೆಟ್ ಮೂಲಕ ಡೈರೆಕ್ಟ ಮಾರ್ಕೆಟಿಂಗ್ ಮಾಡುವುದು. ಈ ಎಪಿಸೋಡನಲ್ಲಿ ಬರೀ ನೆಟವರ್ಕ ಮಾರ್ಕೆಟಿಂಗ್ ಬಗ್ಗೆಯಷ್ಟೇ ನೋಡೋಣಾ. ನೀವು ನಿಮ್ಮ ಕಂಪನಿಯ ಪ್ರೋಡಕ್ಟನ್ನು ಅಥವಾ ಸರ್ವಿಸನ್ನು ನೆಟವರ್ಕ ಮಾರ್ಕೆಟಿಂಗ್ ಮೂಲಕ ದೇಶದ ತುಂಬೆಲ್ಲ ಮಾರಬಹುದು. ನೀವು ನಿಮ್ಮ ಕಂಪನಿ, ಡಿಸ್ಟ್ರಿಬ್ಯೂಟರ್ ಮತ್ತು ಕಸ್ಟಮರ ನಡುವೆ ಒಂದು ದೊಡ್ಡ ಚೈನನ್ನು ನಿರ್ಮಿಸಿ ನಿಮ್ಮ ಪ್ರೊಡಕ್ಟನ್ನು ಅಥವಾ ಸರ್ವಿಸನ್ನು ಸುಲಭವಾಗಿ ಮಾರಬಹುದು.

ಉದಾಹರಣೆಗೆ ; 

೧) ಪತಂಜಲಿಯನ್ನು ತೆಗೆದುಕೊಳ್ಳಿ. ಪತಂಜಲಿ ಕಂಪನಿ ಹರಿದ್ವಾರದಲ್ಲಿ ತಯಾರಾದ ತನ್ನ ಪ್ರೊಡಕ್ಟಗಳನ್ನು ಪತಂಜಲಿ ಸ್ಟೋರಗಳ ಮೂಲಕ ದೇಶದ ಮೂಲೆಮೂಲೆಗೆ ತಲುಪಿಸುತ್ತದೆ. ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಇವತ್ತು ಪತಂಜಲಿ ಸ್ಟೋರಗಳಿವೆ. ಈ ಎಲ್ಲ ಸ್ಟೋರಗಳನ್ನು ಸೇರಿಸಿದಾಗ ಒಂದು ದೊಡ್ಡ ಪತಂಜಲಿ ನೆಟವರ್ಕ ಆಗುತ್ತದೆ, ಪತಂಜಲಿ ಸೆಲ್ಸ ಚೈನ್ ಆಗುತ್ತದೆ. ಪತಂಜಲಿ ಸ್ಟೋರ್ಸ್ ಪತಂಜಲಿ ಕಂಪನಿಯ ಚೈನಾಗಿದೆ. ಈ ಚೈನ ಮೂಲಕ ಪತಂಜಲಿ ಕಂಪನಿ ತನ್ನೆಲ್ಲ ಪ್ರೊಡಕ್ಟಗಳನ್ನು ಈಜಿಯಾಗಿ ಮಾರಾಟ ಮಾಡುತ್ತದೆ.

೨) ಇದೇ ರೀತಿ ಜಪಾನ ಮೂಲದ ಕ್ಯಾಮರಾ ಮ್ಯಾನುಫ್ಯಾಕ್ಚರಿಂಗ ಕಂಪನಿ ಕ್ಯಾನನ್ ತನ್ನದೇ ಆದ Canon Image Square ಶಾಪಗಳ ಮೂಲಕ ಜಗತ್ತಿನಾದ್ಯಂತ ತನ್ನ ಕ್ಯಾಮರಾ ಹಾಗೂ ಇಮೇಜಿಂಗ ಪ್ರೊಡಕ್ಟಗಳನ್ನು ಜಗತ್ತಿನ ತುಂಬೆಲ್ಲ ಮಾರಾಟ ಮಾಡುತ್ತದೆ. Canon Image Square ಕ್ಯಾನನ್ ಕಂಪನಿಯ ನೆಟವರ್ಕ ಆಗಿದೆ, ಚೈನ್ ಆಗಿದೆ. 

 ೩) ಇದೇ ರೀತಿ ಜೀಯೋ - ಟೆಲಿಕಮ್ಯುನಿಕೇಷನ ಹಾಗೂ ಇಂಟರನೆಟ ಚೈನಾಗಿದೆ, ಒಯೋ - ಹೋಟೆಲ್ ರೂಮಗಳ ಚೈನಾಗಿದೆ, ಓಲಾ - ರೆಂಟೆಡ ಕಾರಗಳ ಚೈನಾಗಿದೆ, ರಿಲಾಯನ್ಸ ರಿಟೇಲ್ - ಕಂಜುಮರ್ ಗುಡ್ಸ ಆ್ಯಂಡ್ ಎಲೆಕ್ಟ್ರಾನಿಕ್ಸ ಪ್ರೊಡಕ್ಟಗಳ ಸೇಲ್ಲಿಂಗ ಚೈನಾಗಿದೆ, KFC - ಫೂಡ್ ಚೈನಾಗಿದೆ. 

               ಇದೇ ರೀತಿ ಬಹಳಷ್ಟು ಕಂಪನಿಗಳು ತಮ್ಮ ಪ್ರೊಡಕ್ಟಗಳನ್ನು ಮತ್ತು ಸರ್ವಿಸನ್ನು ಮಾರಾಟ ಮಾಡಲು ತಮ್ಮದೇ ಆದ ಒಂದು ಸ್ಟ್ರಾಂಗ್ ನೆಟವರ್ಕನ್ನು ಬೆಳೆಸಿವೆ, ಚೈನನ್ನು ಬೆಳೆಸಿವೆ. ಕಂಪನಿಯ ಮ್ಯಾನುಫ್ಯಾಕ್ಚರಿಂಗ ಯುನಿಟನಿಂದ ಕಂಜುಮರನ ಮನೆತನಕ ಒಂದು ಪೈಪಲಾಯಿನನ್ನು ಕ್ರಿಯೆಟ್ ಮಾಡಿವೆ. ಈ ನೆಟವರ್ಕ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯ ಮೇಲೆ ಅವುಗಳ ನೆಟವರ್ಥ ಹಾಗೂ ನೆಟ ಪ್ರೋಫಿಟ ನಿಂತಿದೆ. ಈ ಸ್ಟ್ರಾಟರ್ಜಿಯಿಂದಲೇ ಅವು ಬೇಗನೆ ಬಿಲಿಯನ ಡಾಲರ್ ಕಂಪನಿಗಳಾಗಿವೆ.


ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business

                     ನೆಟವರ್ಕ ಮಾರ್ಕೆಟಿಂಗ ಬಹಳಷ್ಟು ಪವರಫುಲ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯಾಗಿದೆ. ಇದನ್ನು ಸರಿಯಾಗಿ  ಅರ್ಥಮಾಡಿಕೊಂಡು ತನ್ನದೇ ಆದ ನೆಟವರ್ಕನ್ನು ರೆಡಿಮಾಡಿದ ಬಿಜನೆಸಮ್ಯಾನಗೆ ಬಿಲೆನಿಯರ ಆಗಲು ಬಹಳಷ್ಟು ಸಮಯ ಬೇಕಾಗುವುದಿಲ್ಲ. ಏಕೆಂದರೆ ಈ ನೆಟವರ್ಕ ಮಾರ್ಕೆಟಿಂಗ್ ಒಂದು ದೊಡ್ಡ ಚೈನಾಗಿದೆ. 

ಉದಾಹರಣೆಗೆ ; ಗುರಗಾಂವನಲ್ಲಿರುವ ಒಂದು ಕಂಪನಿ ದೆಹಲಿಯಲ್ಲಿರುವ ಒಬ್ಬ ವ್ಯಕ್ತಿಗೆ ಡಿಸ್ಟ್ರಿಬ್ಯೂಷನನ್ನು ಕೊಟ್ಟರೆ ಅದು ನೋಯ್ಡಾ, ಇಂದೋರ, ಜೈಪುರ, ಅಹಮದಾಬಾದ, ಮುಂಬೈ, ಪುಣೆ, ಹುಬ್ಬಳಿ, ಬೆಂಗಳೂರ, ಹೈದರಾಬಾದ, ಚೆನ್ನೈ, ಕೊಚ್ಚಿ, ತಿರುವನಂತಪುರ ದಾಟಿ ಕನ್ಯಾಕುಮಾರಿಗೆ ಹೋಗುವಷ್ಟರಲ್ಲಿ ಸಾವಿರಾರು ಜನ ಈ ನೆಟವರ್ಕಲ್ಲಿ ಬಂದು ಸೇರಿಕೊಳ್ಳುತ್ತಾರೆ. ಒಬ್ಬನಿಂದ ಇಬ್ಬರಾಗುತ್ತಾರೆ, ಇಬ್ಬರಿಂದ ನಾಲ್ಕಾಗುತ್ತಾರೆ, ನಾಲ್ವರಿಂದ ಎಂಟಾಗುತ್ತಾರೆ. ಇದೇ ರೀತಿ ಈ ಚೈನ ಇನಫೈನೈಟಾಗಿ ಬೆಳೆಯುತ್ತಲೇ ಹೋಗುತ್ತದೆ. ಈ ಚೈನ ಬೆಳೆದಷ್ಟು ಹೆಚ್ಚು ಹೆಚ್ಚು ಪ್ರೊಡಕ್ಟಗಳು ಸೇಲಾಗುತ್ತವೆ, ಕಂಪನಿಗೆ ಹೆಚ್ಚು ಪ್ರೋಫಿಟಾಗುತ್ತದೆ. ಈ ರೀತಿ ನೆಟವರ್ಕ ಮಾರ್ಕೆಟಿಂಗ್ ಬಹಳಷ್ಟು ಪವರಫುಲ್ ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಟೂಲ ಆಗಿದೆ. ಈ ನೆಟವರ್ಕ ಮಾರ್ಕೆಟಿಂಗಗೆ ಮಲ್ಟಿ ಲೆವಲ ಮಾರ್ಕೆಟಿಂಗ್, ರಿಫರಲ ಮಾರ್ಕೆಟಿಂಗ್, ಚೈನ್ ಮಾರ್ಕೆಟಿಂಗ್ ಅಂತಲೂ ಕರೆಯುತ್ತಾರೆ.


ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business

            ನೀವೊಬ್ಬ ಬಿಜನೆಸ್ ಆಗಿದ್ದರೆ ಈ ನೆಟವರ್ಕ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ನಿಮ್ಮ ಬಿಜನೆಸಗೆ ಸೂಟ ಆಗುತ್ತಿದ್ದರೆ ನೀವು ಇದನ್ನು ಬಳಸಿಕೊಳ್ಳಬಹುದು. ಬಳಸಿಕೊಂಡು ಕಡಿಮೆ ಸಮಯಾವಕಾಶದಲ್ಲಿ ಹೆಚ್ಚಿನ ಹಣವನ್ನು ಗಳಿಸಬಹುದು, ಬೇಗನೆ ಬಿಲೆನಿಯರ ಆಗಬಹುದು.

              ನೆಟವರ್ಕ ಮಾರ್ಕೆಟಿಂಗಲ್ಲಿ ಇಳಿಯುವುದಕ್ಕಿಂತ ಮುಂಚೆ ನಿಮ್ಮ ಪ್ರೊಡಕ್ಟನ್ನು ಇಂಪ್ರೂವ ಮಾಡಿ, ಸಾಧ್ಯವಾದಷ್ಟು ಬೆಸ್ಟ ಕ್ವಾಲಿಟಿ ಮೆಂಟೆನ ಮಾಡಿ. ನಂತರ ನಿಮ್ಮ ಟಾರ್ಗೆಟ ಸೆಟ ಮಾಡಿ. ಅಂದರೆ ನೀವು ಎಷ್ಟು ಟೈಮಲ್ಲಿ ಎಷ್ಟು ಪ್ರೊಡಕ್ಟಗಳನ್ನು ಮಾರಾಟ ಮಾಡಬೇಕು ಎಂಬುದನ್ನು ಕನಫರ್ಮ ಮಾಡಿಕೊಳ್ಳಿ. ಅದನಂತರ ಸರಿಯಾದ ಡಿಸ್ಟ್ರಿಬ್ಯೂಟರಗಳನ್ನು ಹಾಯರ ಮಾಡಿ. ಅವರನ್ನು ಸರಿಯಾಗಿ ಟ್ರೇನ ಮಾಡಿ, ಮೋಟಿವೇಟ್ ಮಾಡಿ. ಅವರಿಗೆ ಅವಶ್ಯಕವಾದ ಸೇಲ್ಸ ಆ್ಯಂಡ್ ಕಮ್ಯುನಿಕೇಷನ ಸ್ಕೀಲಗಳನ್ನು, ಪೀಪಲ ಸ್ಕೀಲಗಳನ್ನು ಕಲಿಸಿ. ನಂತರ ಅವರನ್ನು ಮಾರ್ಕೆಟಿಂಗಗೆ ಬಿಡಿ. ಅವರು ಹೆಚ್ಚಿನ ಕಮಿಷನ್ನಿನ ಆಸೆಗೆ ಹೆಚ್ಚೆಚ್ಚು ಪ್ರೊಡಕ್ಟಗಳನ್ನು ಸೇಲ್ ಮಾಡುತ್ತಾರೆ. ಅವರು ಅವರ ನೆಟವರ್ಥನ್ನು ಹೆಚ್ಚಿಸಿಕೊಳ್ಳಲು ಹಗಲುರಾತ್ರಿ ಕಷ್ಟಪಟ್ಟು ನಿಮ್ಮ ಕಂಪನಿಯ ಪ್ರೊಡಕ್ಟಗಳನ್ನು ಮಾರಾಟ ಮಾಡುತ್ತಾರೆ. ಅವರ ನೆಟವರ್ಥ ಹೆಚ್ಚಾದಾಗ ನಿಮ್ಮ ಕಂಪನಿಯ ನೆಟವರ್ಥ ತಾನಾಗಿಯೇ ಹೆಚ್ಚಾಗುತ್ತದೆ. ನಂತರ ನಿಮ್ಮ ಬಿಜನೆಸ್ಸನ್ನು ಫುಲ್ಲಿ ಅಟೋಮೇಷನ ಮೋಡಗೆ ತನ್ನಿ ಮತ್ತು ನಿಮ್ಮ ಲೈಫನ್ನು ಎಂಜಾಯ ಮಾಡಿ. ಇದೇ ನೆಟವರ್ಕ ಮಾರ್ಕೆಟಿಂಗ್. ಇದರಲ್ಲಿ ಅಂಥ ರಾಕೆಟ್ ಸಾಯಿನ್ಸ ಏನಿಲ್ಲ. ನಿಮ್ಮ ಕಂಪನಿಯ ಬಳಿ ಬೆಸ್ಟ ಪ್ರೊಡಕ್ಟ ಇದ್ದರೆ ಅಂದರೆ Problem Solving Product ಇದ್ದರೆ ನೀವು ಈ ನೆಟವರ್ಕ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯಿಂದ ಬಹುಬೇಗನೆ ಶ್ರೀಮಂತರಾಗಬಹುದು ಮತ್ತು ನಿಮ್ಮ ಎಲ್ಲ ಅದ್ದೂರಿ ಕನಸುಗಳನ್ನು ಸುಲಭವಾಗಿ ನನಸಾಗಿಸಿಕೊಳ್ಳಬಹುದು.


ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ : Network Marketing Business

                             ಗೆಳೆಯರೇ, ಇದಿಷ್ಟು ನೆಟವರ್ಕ ಮಾರ್ಕೆಟಿಂಗಗೆ ಸಂಬಂಧಪಟ್ಟ ಒಂದು ಸಣ್ಣ ಲೆಸನ. ಆದರೆ ಡಿಜಿಟಲ ಮಾರ್ಕೆಟಿಂಗ್ ಹಾಗೂ ಈ ಕಾಮರ್ಸ್ ಬಂದಾಗಿನಿಂದ ಈ ಸ್ಟ್ರ್ಯಾಟರ್ಜಿ ಈಗ ಸ್ವಲ್ಪ ಡೇಟಬಾರ ಆಗಿದೆ. ಆದರೆ ಕೆಲವೊಂದಿಷ್ಟು ಪ್ರೊಡಕ್ಟಗಳಿಗೆ ಈಗಲೂ ಇದು ಬೆಸ್ಟ ಸ್ಟ್ರ್ಯಾಟರ್ಜಿಯಾಗಿದೆ. ಅದಕ್ಕಾಗಿ ನೆಟವರ್ಕ ಮಾರ್ಕೆಟಿಂಗ್ ಸ್ಟ್ರಾಟರ್ಜಿಯನ್ನು ನಿಮ್ಮ ಬಿಜನೆಸಗೆ ಬಳಸಿಕೊಳ್ಳುವ ಮುಂಚೆ ಇದು ನಿಮ್ಮ ಬಿಜನೆಸಗೆ ಸೂಟಾಗುತ್ತಾ ಅಥವಾ ಇಲ್ವಾ ಎಂಬುದನ್ನು ಮೊದಲು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಇದು ಬಿಜನೆಸಗಳಿಗೆ ಬೇಕಾದ ಮಾಹಿತಿಯಾಯ್ತು. ಇನ್ನೂ ನಿಮ್ಮಲ್ಲಿ ಎಷ್ಟೋ ಜನ "ನೆಟವರ್ಕ ಮಾರ್ಕೆಟಿಂಗ್ ಜಾಬ್ ಮಾಡಬೇಕು ಅಂತಾ ಅಂದುಕೊಂಡಿರುವೆ ಏನ ಮಾಡ್ಲಿ ಸರ್?" ಅಂತಾ ಬಹಳಷ್ಟು ಕಮೆಂಟ ಮಾಡಿದ್ದೀರಿ. ಸೋ ಈ ನೆಟವರ್ಕ ಮಾರ್ಕೆಟಿಂಗ್ ಜಾಬ್ ಮಾಡಬೇಕಾ ಅಥವಾ ಬೇಡ್ವಾ ಎಂಬುದನ್ನು ನಾಳೆಯ ಎಪಿಸೋಡನಲ್ಲಿ ನೋಡೋಣಾ. All the best and Thanks you.

Blogger ನಿಂದ ಸಾಮರ್ಥ್ಯಹೊಂದಿದೆ.