
ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಎಪಿಸೋಡನಲ್ಲಿ ಕಮೆಂಟಲ್ಲಿ ಬಂದಿರೋ ಒಂದು ಇಂಟರೆಸ್ಟಿಂಗ ಕ್ವೇಷ್ಶನ ಮೇಲೆ ಡಿಸ್ಕಸ ಮಾಡೋಣಾ. ಆ ಕ್ವೇಷ್ಶನ ಏನಪ್ಪ ಅಂದ್ರೆ "ಪ್ರತಿ ಹೆಜ್ಜೆಯಲ್ಲೂ ನಮ್ಮ ತಪ್ಪನ್ನೇ ಹುಡುಕಿ ನಮ ಮೇಲೆ ಆಪಾದನೆ ಕೊಡುವವರಿಗೆ ಏನು ಮಾಡಬೇಕು? ಜೀವನಾನೇ ಬೇಡ ಅನಿಸಿದೆ ಬ್ರೋ?". ಸೋ ಬನ್ನಿ ಗೆಳೆಯರೇ ಇವತ್ತಿನ ಎಪಿಸೋಡನಲ್ಲಿ ಪ್ರತಿ ಹೆಜ್ಜೆಯಲ್ಲಿ ನಮ್ಮ ತಪ್ಪುಗಳನ್ನು ಹುಡುಕುವವರಿಗೆ ಯಾವ ರೀತಿ ಉತ್ತರ ಕೊಡೋದು ಅಂತಾ ನೋಡೊಣಾ.
ಈ ಸಮಸ್ಯೆ ಪರ್ಸನಲ್ಲಾಗಿ ನನಗೂ ಸಹ ಕೆಲವು ಸಲ ಕಾಡುತ್ತೆ. ಕೆಲವೊಂದಿಷ್ಟು ವ್ಯಕ್ತಿಗಳು ಅನಾವಶ್ಯಕವಾಗಿ ಏನೇನೋ ಸಗೇಷನ್ಸಗಳನ್ನು ಕೊಟ್ಟು ಇಲ್ಲ ಏನೋ ಒಂದು ಇಲ್ಲದ ಮಿಸ್ಟೇಕನ್ನು ಕೆದಕಿ ನಮ್ಮ ಫೋಕಸ್ಸನ್ನು ಹಾಳು ಮಾಡಲು ಟ್ರಾಯ ಮಾಡ್ತಾರೆ. ಪ್ರತಿ ಹೆಜ್ಜೆಯಲ್ಲಿ ನಮ್ಮ ತಪ್ಪುಗಳನ್ನು ಹುಡುಕಲು ಟ್ರಾಯ ಮಾಡ್ತಾರೆ ಇಲ್ಲ ನಾವೇ ಏನಾದರೂ ಒಂದು ಮಿಸ್ಟೇಕ ಮಾಡಿ ಎಡವಿ ಬೀಳಲಿ ಅಂತಾ ಕಾಯ್ತಾ ಇರ್ತಾರೆ. ಆದರೆ ನಾವು ಅವರಿಗೆ ಅವರು ಬಯಸಿದ ಅವಕಾಶವನ್ನು ಕೊಡಬಾರದು. ನಾವು ಏನಿಟೈಮ ಅಲರ್ಟಾಗಿರಬೇಕು.

ಯಾರಾದರೂ ನಮ್ಮ ಮೇಲೆ ಆಪಾದನೆಗಳನ್ನು ಹೊರೆಸಿದರೆ ಇಲ್ಲ ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದರೆ ನಾವು ಕೋಪಿಸಿಕೊಳ್ಳದೆ "ಯಾರು ನಮ್ಮ ತಪ್ಪುಗಳನ್ನು ಹುಡುಕಿ ಹೇಳುತ್ತಿದ್ದಾರೆ? ಯಾವ ತಪ್ಪುಗಳನ್ನು ಹೇಳುತ್ತಿದ್ದಾರೆ? ಯಾಕೆ ಹೇಳುತ್ತಿದ್ದಾರೆ?" ಎಂಬುದನ್ನು ಸರಿಯಾಗಿ ಅನಲೈಜ ಮಾಡಬೇಕು. ಅವರು ಎತ್ತಿ ತೋರಿಸುತ್ತಿರುವ ತಪ್ಪುಗಳು ವ್ಯಾಲಿಡ ಆಗಿದ್ದರೆ ನಾವು ಅದನ್ನು ಒಪ್ಪಿಕೊಂಡು ಆ ತಪ್ಪುಗಳನ್ನು ಕರೆಕ್ಟ ಮಾಡಿಕೊಂಡು ಬೆಸ್ಟ ಪರ್ಸನ ಆಗಬೇಕು. ಒಂದು ವೇಳೆ ಬೇರೆಯವರು ಹೇಳುತ್ತಿರುವ ವಿಚಾರಗಳು ಫೇಕ ಆಗಿದ್ದರೆ, ಇನವ್ಯಾಲಿಡ ಆಗಿದ್ದರೆ ಅವುಗಳನ್ನು ಡೈರೆಕ್ಟಾಗಿ ಇಗ್ನೋರ ಮಾಡಿ ಆರಾಮಾಗಿರಬೇಕು. ಅಂಥವರ ವಿಚಾರದಲ್ಲಿ ಮುಂದೆ ಕಿವಿಯಿದ್ದು ಕಿವುಡರಾಗಬೇಕು. ಅವರನ್ನು ಟೊಟಲಾಗಿ ನೆಗ್ಲೆಕ್ಟ ಮಾಡಿ.
ಉದಾಹರಣೆಗೆ ; ನಾನೇನಾದರೂ ತಪ್ಪುಗಳನ್ನು ಮಾಡಲು ಸ್ಟಾರ್ಟ ಮಾಡಿದರೆ ನನ್ನ ವೆಲವಿಶ್ಶರಗಳು ಅಂದ್ರೆ ನಮ್ಮ ಬಾಸ್, ನಮ್ಮ ಟೀಮ ಮೆಂಬರ್ಸ, ನನ್ನ ಬಿಜನೆಸ್ ಮೆಂಟರ್ಸ, ಕಂಪನಿಯ ಬೋರ್ಡ ಆಫ್ ಡೈರೆಕ್ಟರ್ಸ ಹಾಗೂ ನನ್ನ ಬೆಸ್ಟ ಫ್ರೆಂಡ ನನಗೆ ನನ್ನ ತಪ್ಪುಗಳನ್ನು ಹೇಳಿ ಸುಧಾರಿಸಿಕೊಳ್ಳಲು ಸರಿಯಾಗಿ ಗೈಡ ಮಾಡುತ್ತಾರೆ. ಇವರು ನನ್ನ ತಪ್ಪುಗಳನ್ನು ನಾಲ್ಕು ಜನರ ಮುಂದೆ ಹೇಳಲ್ಲ, ನಾಲ್ಕು ಗೋಡೆಗಳ ಮಧ್ಯೆ ಪರ್ಸಲ್ಲಾಗಿ ಹೇಳುತ್ತಾರೆ. ಯಾರು ನಿಮ್ಮ ತಪ್ಪುಗಳನ್ನು ನಾಲ್ಕು ಗೋಡೆಗಳ ಮಧ್ಯೆ ನಿಮಗಷ್ಟೇ ಹೇಳುತ್ತಾರೋ ಅವರು ನಿಮಗೆ ನಿಜವಾದ ವೆಲವಿಶ್ಶರ ಆಗಿರುತ್ತಾರೆ. ಅವರು ಹೇಳಿದನ್ನು ಕೇಳಿ. ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಬೆಸ್ಟ ಪರ್ಸನ ಆಗಿ. ನಿಮ್ಮ ಲೈಫಲ್ಲಿ ಫಾಸ್ಟೆಸ್ಟಾಗಿ ಗ್ರೋ ಆಗಿ.

ಇನ್ನೂ ಯಾರು ನಿಮ್ಮ ಸಣ್ಣಪುಟ್ಟ ತಪ್ಪುಗಳನ್ನು ನಾಲ್ಕು ಜನರ ಮುಂದೆ ಹೇಳಿ ನಿಮ್ಮನ್ನು ಬೇಕಂತಲೆ ಅವಮಾನ ಮಾಡುತ್ತಾರೋ, ಡಿಮೊಟಿವೇಟ ಮಾಡುತ್ತಾರೋ ಅವರು ನಿಮ್ಮ ಫೇಕ್ ವೆಲವಿಶ್ಶರ ಆಗಿರುತ್ತಾರೆ. ಇವರು ನಿಮ್ಮ ಸೈಲೆಂಟ್ ಹೇಟರ್ಸ ಆಗಿರುತ್ತಾರೆ. ಹೊಟ್ಟೆಕಿಚ್ಚಿನಿಂದ ಏನೇನೋ ಹೇಳಿ ನಿಮ್ಮನ್ನು ಹರ್ಟ ಮಾಡುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಇವರ ಆಪಾದನೆಗಳಲ್ಲಿ ಯಾವುದೇ ಅರ್ಥವಿರಲ್ಲ. ಎಲ್ಲವೂ ಬಕ್ವಾಸ ಆಗಿರುತ್ತವೆ. ಅದಕ್ಕಾಗಿ ಇಂಥವರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ. ಜಸ್ಟ ಇಗ್ನೋರ ಮಾಡಿ, ನಿಮ್ಮ ಕೆಲಸದ ಮೇಲೆ ಫೋಕಸ ಮಾಡಿ.
ಇನ್ನೂ ಕೆಲವೊಂದಿಷ್ಟು ಜನ ಮಿಸ್ಸಿಂಗ್ ಟೈಲ ಸಿಂಡ್ರೋಮನಿಂದ ಬಳಲುತ್ತಿರುತ್ತಾರೆ. ಅವರಿಗೆ ಯಾವುದು ಇಷ್ಟವಾಗುವುದಿಲ್ಲ. ಅವರ ಕಣ್ಣಿಗೆ ಯಾವುದು ಬ್ಯೂಟಿಫುಲ್ಲಾಗಿ ಕಾಣಿಸುವುದಿಲ‌್ಲ. ಇವರೊಂಥರಾ ಅತೃಪ್ತ ಆತ್ಮಗಳಂತೆ ಇರುತ್ತಾರೆ. ಇವರನ್ನು ನೆಗ್ಲೆಕ್ಟ ಮಾಡುವುದು ಉತ್ತಮ. ಏಕೆಂದರೆ ನಾವು ಕಲ್ಲು ಹೃದಯಗಳನ್ನು ಬದಲಾಯಿಸಬಹುದು, ಆದರೆ ಕೊಳಕು ಹೃದಯಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ಇಂಥವರನ್ನು ನೆಗ್ಲೆಕ್ಟ ಮಾಡಿ. ಇದನ್ನು ಬಿಟ್ಟು ಬೇರೆ ಆಪ್ಶನ ಇಲ್ಲ. ನೀವು ಯಾರನ್ನು ಟಾರ್ಗೆಟ ಮಾಡಿ ಈ ಪ್ರಶ್ನೆ ಕೇಳಿದ್ದಿರಾ ಎಂಬುದು ನಂಗೊತ್ತು. ಆದರೆ ನಾನು ಡೈರೆಕ್ಟಾಗಿ ಏನನ್ನೂ ಹೇಳಲಾರೆ. ಸಾಧ್ಯವಾದರೆ ಅವರನ್ನು ಬದಲಿಸಿ ಇಲ್ಲವಾದರೆ ಬದಲಾಯಿಸಿ. ನಾವು ಹಾಯಾಗಿರಬೇಕೆಂದರೆ ಹಾಳಾದವರಿಂದ ದೂರವಿರಬೇಕು. ಇಲ್ಲವಾದರೆ ಅವರು ನಮ್ಮನ್ನು ಹಾಳು ಮಾಡುತ್ತಾರೆ.

ಓಕೆ ಫೈನ, ಯಾರಾದರೂ ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸಿದಾಗ ಅವರು ನಿಮ್ಮ ರಿಯಲ್ ವೆಲವಿಶ್ಶರಾಗಿದ್ದರೆ ಅವರು ಸಗೇಷನ್ಸಗಳನ್ನು ತೆಗೆದುಕೊಂಡು ಸುಧಾರಿಸಿಕೊಳ್ಳಿ. ಅವರು ಫೇಕ್ ವೆಲವಿಶ್ಶರಾಗಿದ್ದರೆ ಅವರನ್ನು ಇಗ್ನೋರ ಮಾಡಿ ಆರಾಮಾಗಿರಿ. ನಿಮ್ಮ ಸೈಲೆಂಟ ಹೇಟರ್ಸಗಳನ್ನು ನಿಮ್ಮ ಸ್ಮೈಲ ಹಾಗೂ ಸಕ್ಸೆಸನಿಂದ ಸೈಲೆಂಟಾಗಿ ಸಾಯಿಸಿ. All the Best and Thanks You...