ಹಾಯ್ ಗೆಳೆಯರೇ, ನೀವು ನಿಮ್ಮ ಫೀಲ್ಡಲ್ಲಿ 100% ಪರಫೆಕ್ಟಾಗಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಕಾಂಪಿಟೇಟರಗಳಿಗಿಂತ ಬೆಸ್ಟ ಆಗಬಹುದು. ನೀವು ನಿಮ್ಮ ಫೀಲ್ಡಲ್ಲಿ ಬೆಸ್ಟ ಆದರೆ ನಿಮಗೆ ಬೆಸ್ಟ ಆಫರಗಳು ಸಿಗುತ್ತವೆ, ಬೆಸ್ಟ ಅಪಾರ್ಚುನಿಟಿಗಳು ಸಿಗುತ್ತವೆ, ಬೆಸ್ಟ ಮನಿ ಪ್ಯಾಕೆಜಸಗಳು ಸಿಗುತ್ತವೆ, ಬೆಸ್ಟ ಲೈಫ ಪಾರ್ಟನರ ಸಿಗುತ್ತಾರೆ. ಒಟ್ಟಾರೆಯಾಗಿ ನಿಮ್ಮ ಲೈಫ ಬೆಸ್ಟಾಗಿರುತ್ತದೆ. ಸೋ ಯಾವುದೇ ಫೀಲ್ಡಲ್ಲಿ ಬೆಸ್ಟ ಆಗಲು ಬೆಸ್ಟ ಟಿಪ್ ಇಲ್ಲಿದೆ ;
ನೀವು ಯಾವತ್ತಾದರೂ, ಯಾಕೆ ವಿರಾಟ ಕೊಯ್ಲಿ ಬೆಸ್ಟ ಬ್ಯಾಟ್ಸಮನ ಆಗಿದ್ದಾರೆ?, ಯಾಕೆ ಶ್ರೇಯಾ ಘೋಷಾಲ ಬೆಸ್ಟ ಸಿಂಗರಾಗಿದ್ದಾರೆ?, ಯಾಕೆ ಸಂದೀಪ ಮಹೇಶ್ವರಿ ಬೆಸ್ಟ ಮೋಟಿವೇಷನಲ್ ಸ್ಪೀಕರಾಗಿದ್ದಾರೆ?, ಯಾಕೆ ಮೇರಿ ಕೋಮ ಬೆಸ್ಟ ಬಾಕ್ಸರಾಗಿದ್ದಾರೆ? ಯಾಕೆ ಹುಸೇನ್ ಬೋಲ್ಟ ಬೆಸ್ಟ ರನ್ನರರಾಗಿದ್ದಾರೆ? ಯಾಕೆ ಜೇಮ್ಸ ಕ್ಯಾಮರಾನ ಬೆಸ್ಟ ಫಿಲ್ಮಮೇಕರಾಗಿದ್ದಾರೆ? ಯಾಕೆ ಅಮೆಜಾನ್, ಫೇಸ್ಬುಕ್, ಗೂಗಲ್ ಇಷ್ಟೊಂದು ಸಕ್ಸೆಸಫುಲ್ ಕಂಪನಿಗಳಾಗಿವೆ? ಅಂತಾ ಯೋಚನೆ ಮಾಡಿದ್ದೀರಾ? ಯೋಚನೆ ಮಾಡಿರದಿದ್ದರೆ ಈಗ ಯೋಚನೆ ಮಾಡಿ ಮತ್ತು ನಿಮಗೇನನಿಸುತ್ತೆ ಅದನ್ನು ಕಮೆಂಟ ಮಾಡಿ. Comment right now.
ಗೆಳೆಯರೇ, ಇವರೆಲ್ಲ ಯಾಕೆ ಬೆಸ್ಟಾಗಿದ್ದಾರೆ ಅಂದರೆ ಇವರು ತಮ್ಮ ಜೀವನದ 10,000 ಗಂಟೆಗಳಿಗಿಂತಲೂ ಅಧಿಕ ಸಮಯವನ್ನು ತಮ್ಮ ಕೆಲಸಕ್ಕೆ ಕೊಟ್ಟಿದ್ದಾರೆ. ಅಂದರೆ 10,000 ಗಂಟೆಗಳಿಗಿಂತಲೂ ಅಧಿಕ ಸಮಯವನ್ನು ಪ್ರ್ಯಾಕ್ಟೀಸನಲ್ಲಿ ಕಳೆದಿದ್ದಾರೆ. ಅಂದರೆ ಆ್ಯಟಲಿಸ್ಟ 3 ವರ್ಷ ಹಗಲು ರಾತ್ರಿ ತಮ್ಮ ಪ್ಯಾಷನಗಾಗಿ ಬೆವರು ಸುರಿಸಿದ್ದಾರೆ, ಕಷ್ಟ ಪಟ್ಟಿದ್ದಾರೆ. ಇವರು ಬೆಸ್ಟ ಆಗಲು ಕಾರಣ ಏನಪ್ಪ ಅಂದ್ರೆ ಅವರ ಡೆಡಿಕೆಟೆಟ ಪ್ರ್ಯಾಕ್ಟೀಸ್.
ವಿರಾಟ ಕೊಯ್ಲಿ ತಮ್ಮ ಕರಿಯರನ ಆರಂಭದಿಂದಲೂ ಸಿಕ್ಕಾಪಟ್ಟೆ ಪ್ರ್ಯಾಕ್ಟೀಸ್ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಅವರು ಬ್ಯಾಟಿಂಗನಲ್ಲಿ ಮಿಕ್ಕವರಿಗಿಂತ ಬೆಸ್ಟಾಗಿದ್ದಾರೆ. ಎ.ಬಿ.ಡೀವಿಲಿಯರ್ಸ ಕೂಡ ಸಿಕ್ಕಾಪಟ್ಟೆ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಅದಕ್ಕಾಗಿಯೇ ಅವರು 360° ಆ್ಯಂಗಲನಲ್ಲಿ ಕಾನ್ಪಿಡೆಂಟಾಗಿ ಬ್ಯಾಟ ಬೀಸುತ್ತಾರೆ. ಇನ್ನು ಶ್ರೇಯಾ ಘೋಷಾಲನವರು ಸಹ 10,000 ಗಂಟೆಗಿಂತಲೂ ಅಧಿಕ ಸಮಯವನ್ನು ಸಿಂಗಿಂಗನಲ್ಲಿ ಇನ್ವೇಸ್ಟ ಮಾಡಿದ್ದಾರೆ. ಅದಕ್ಕಾಗಿಯೇ ಅವರು ಯಾವುದೇ ಭಾಷೆಯ ಹಾಡನ್ನು ಕೊಟ್ಟರೂ ಸೂಪರಾಗಿ ಹಾಡುತ್ತಾರೆ. ಇದೇ ರೀತಿ ಉಳಿದವರೆಲ್ಲರೂ ಸಹ 10,000 ಗಂಟೆಗಳಿಗಿಂತಲೂ ಅಧಿಕ ಸಮಯವನ್ನು ಪ್ರ್ಯಾಕ್ಟೀಸನಲ್ಲಿ ಕಳೆದಿದ್ದಾರೆ. ಅದಕ್ಕಾಗಿಯೇ ಅವರು ಅವರ ಫೀಲ್ಡಲ್ಲಿ ಬೆಸ್ಟಾಗಿದ್ದಾರೆ.
ಇನ್ನು ಅಮೆಜಾನ್, ಫೇಸ್ಬುಕ್, ಗೂಗಲನಂಥ ಕಂಪನಿಗಳು ಯಾಕೆ ಬೆಸ್ಟಾಗಿವೆ ಎಂದರೆ ಅವು ಪ್ರತಿದಿನ ತಮ್ಮ ಸರ್ವಿಸನ್ನು ಇಂಪ್ರೂವ ಮಾಡಿಕೊಳ್ಳುವುದಕ್ಕಾಗಿ ಸಾವಿರಾರು ಎಕ್ಸಪೇರಿಮೆಂಟನ್ನು ಮಾಡುತ್ತವೆ. ಅಮೆಜಾನ್ ತನ್ನ ಕಸ್ಟಮರಗಳಿಗೆ ಬೆಸ್ಟ ಸರ್ವಿಸನ್ನು ಕೊಡಲು ದಿನಾಲು ಸಾವಿರಾರು ಎಕ್ಸಪೇರಿಮೆಂಟಗಳನ್ನು ಮಾಡುತ್ತದೆ. ಅದೇ ರೀತಿ ಫೇಸ್ಬುಕ್ ಕೂಡ ತನ್ನ ಅಡ್ವಟೈಜಿಂಗ ಕ್ಯಾಂಪೇನಗಳನ್ನು ಆ್ಯಕ್ಯುರೇಟ ಮಾಡಲು ಸಿಕ್ಕಾಪಟ್ಟೆ ಎಕ್ಸಪೇರಿಮೆಂಟಗಳನ್ನು ಮಾಡುತ್ತದೆ. ಈ ಎಕ್ಸಪೇರಿಮೆಂಟಗಳಿಂದಲೇ ಅವು ದಿನದಿಂದ ದಿನಕ್ಕೆ ದಿ ಬೆಸ್ಟ ಆಗುತ್ತಾ ಸಾಗಿವೆ.
ಗೆಳೆಯರೇ, ನಿಮಗೂ ಸಹ ನಿಮ್ಮ ಫೀಲ್ಡಲ್ಲಿ ಬೆಸ್ಟ ಆಗಬೇಕೆಂಬ ಆಸೆಯಿದ್ದರೆ ಆ್ಯಟಲಿಸ್ಟ 10,000 ಗಂಟೆಗಳನ್ನು ನಿಮ್ಮ ಕೆಲಸದಲ್ಲಿ ಇನ್ವೇಸ್ಟ ಮಾಡಿ. ನೀವು ಆರ್ಟಿಸ್ಟ ಆಗಿದ್ದರೆ ಇಲ್ಲವೇ ಸ್ಪೋರ್ಟ್ಸಮ್ಯಾನ ಆಗಿದ್ದರೆ ಆ್ಯಟಲಿಸ್ಟ 10,000 ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡಿ. ಬರೀ ಕಾಟಾಚಾರಕ್ಕೆ ಪ್ರ್ಯಾಕ್ಟೀಸ್ ಮಾಡಿದರೆ ರಿಜಲ್ಟ್ಸ ಸಿಗಲ್ಲ, ಪ್ರೀತಿಯಿಂದ ಮತ್ತು ಪ್ಯಾಷನನಿಂದ ಪ್ರ್ಯಾಕ್ಟೀಸ್ ಮಾಡಿ. ಅಂದಾಗಲೇ ನಿಮಗೆ ಪೋಜಿಟಿವ ರಿಜಲ್ಟ್ಸ ಸಿಗುತ್ತವೆ. ನಿಮ್ಮ ಪ್ರ್ಯಾಕ್ಟೀಸ್ ನಿಮಗೆ ದೇವರ ಪೂಜೆಯಷ್ಟೇ ಪವಿತ್ರವಾಗಿರವಾಗಿರಬೇಕು. ರಿಯಲ ಐರನಮ್ಯಾನ ಈಲಾನ್ ಮಸ್ಕ ಹೇಳುವಂತೆ ಆರ್ಡಿನರಿ ವ್ಯಕ್ತಿಗಳು ವಾರಕ್ಕೆ ಸರಾಸರಿ 40 ಗಂಟೆ ಕೆಲಸ ಮಾಡುತ್ತಾರೆ. ನೀವು ಎಕ್ಸಟ್ರಾರ್ಡಿನರಿ ಆಗಬೇಕೆಂದರೆ, ಬೆಸ್ಟ ಆಗಬೇಕೆಂದರೆ ನೀವು ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡಬೇಕು. ಅಂದಾಗಲೇ ನೀವು ನಿಮ್ಮ ಕೆಲಸದಲ್ಲಿ ಬೆಸ್ಟ ಆಗುತ್ತೀರಿ.
ರೀಚ್ ಆಗಲು ಶಾರ್ಟಕಟ್ಸಗಳಿವೆ, ಫೇಮಸ್ ಆಗಲು ಶಾರ್ಟಕಟ್ಸಗಳಿವೆ. ಆದರೆ ಬೆಸ್ಟ ಆಗಲು ಯಾವುದೇ ಶಾರ್ಟಕಟ್ಸಗಳಿಲ್ಲ. ಬೆಸ್ಟ ಆಗಲು ಇರುವ ಏಕೈಕ ಬೆಸ್ಟ ಆಪ್ಶನ ಅಂದ್ರೆ ಆ್ಯಟಲಿಸ್ಟ 10,000 ಗಂಟೆಗಳನ್ನು ನಿಮ್ಮ ಕೆಲಸದಲ್ಲಿ ಇನ್ವೇಸ್ಟ ಮಾಡುವುದು. ಇದನ್ನು ಬಿಟ್ಟರೆ ನಿಮಗೆ ಬೇರೆ ಬೆಸ್ಟ ಆಪ್ಶನ ಸಿಗಲ್ಲ ಅನಿಸುತ್ತೆ. ಇದರ ಬಗ್ಗೆ ಮಾಲ್ಕಮ ಗ್ಲ್ಯಾಡವೇಲ ಬರೆದ "Outliers : The Story of Success" ಎಂಬ ಪುಸ್ತಕದಲ್ಲಿ ಡಿಟೇಲ್ಡ ಎಕ್ಸಪ್ಲೆನೆಷನಯಿದೆ. ನಿಮಗೆ ಕ್ವಾಲಿಟಿ ಬೇಕಂದರೆ ನೀವು ಕ್ವಾಂಟಿಟಿ ಆಫ್ ಕೆಟ್ಟ ಎಕ್ಸಪೇರಿಮೆಂಟಗಳನ್ನು ಮಾಡಬೇಕಾಗುತ್ತದೆ. ಒಳ್ಳೇ ಅನುಭವ ಕೆಟ್ಟ ಅನುಭವದಿಂದ ಮಾತ್ರ ಬರುತ್ತದೆ. ಒಂದೇ ಸಲಕ್ಕೆ ಬಲ್ಬನ ಆವಿಷ್ಕಾರವಾಗಲ್ಲ, ಸಾವಿರಾರು ಕೆಟ್ಟ ಎಕ್ಸಪೇರಿಮೆಂಟಗಳನ್ನು ಮಾಡಿದಾಗ ಬಲ್ಬಿನ ಆವಿಷ್ಕಾರವಾಗುತ್ತದೆ. ನಿಮಗೆ ಸ್ಕೀಲ ಇಲ್ಲದಿದ್ದರೂ ಸಹ ಮುಂದೆ ಬರಬೇಕೆಂದರೆ ಬಹಳಷ್ಟು ಪ್ರ್ಯಾಕ್ಟೀಸ್ ಮಾಡ ಬೇಕಾಗುತ್ತದೆ. ಟ್ಯಾಲೆಂಟ ಕೆಲಸ ಮಾಡದಿದ್ದಾಗ ಹಾರ್ಡವರ್ಕ ಟ್ಯಾಲೆಂಟನ್ನು ತುಳಿದು ಮುಂದೆ ಬರುತ್ತದೆ. ನೀವು ಯಾವುದೇ ಕೆಲಸವನ್ನು ಕೆಟ್ಟದಾಗಿ ಪದೇಪದೇ ಮಾಡಿದರೆ ಒಂದಲ್ಲ ಒಂದಿನ ನೀವು ಆ ಕೆಲಸವನ್ನು ಸರಿಯಾಗಿ ಮಾಡುತ್ತೀರಿ. ಹಾಡಿ ಹಾಡಿ ಒಂದಲ್ಲ ಒಂದಿನ ಖಂಡಿತ ರಾಗ ಬರುತ್ತದೆ.
ಉದಾಹರಣೆಗಾಗಿ ನನ್ನೇ ತೆಗೆದುಕೊಳ್ಳಿ ; ನಾನು ಕಮರ್ಷಿಯಲ್ ರೈಟಿಂಗನಲ್ಲಿ, ಕಮರ್ಷಿಯಲ್ ಫೋಟೋಗ್ರಾಫಿ ಆ್ಯಂಡ್ ವಿಡಿಯೋಗ್ರಾಫಿಯಲ್ಲಿ 10,000 ಗಂಟೆಗಳಿಗಿಂತಲೂ ಹೆಚ್ಚಿಗೆ ಪ್ರೀತಿಯಿಂದ ಕೆಲಸ ಮಾಡಿರುವೆ. ಅದಕ್ಕಾಗಿಯೇ ನಾನು ಅವುಗಳಲ್ಲಿ ನನ್ನ ಕಲಿಗಳಿಗಿಂತ ಬೆಸ್ಟಾಗಿರುವೆ.
ಗೆಳೆಯರೇ, ಬೈ ಬರ್ಥ ಯಾರು ಸಹ ಬೆಸ್ಟಾಗಿರಲ್ಲ. ಎಲ್ಲರೂ ಪ್ರ್ಯಾಕ್ಟೀಸ್ ಆ್ಯಂಡ್ ಹಾರ್ಡವರ್ಕನಿಂದಲೇ ಬೆಸ್ಟಾಗುತ್ತಾರೆ. ಸೋ ಗೆಳೆಯರೇ, ನಿಮಗೂ ಸಹ ನಿಮ್ಮ ಫೀಲ್ಡಲ್ಲಿ ಬೆಸ್ಟ ಆಗಬೇಕೆಂದರೆ ನೀವು ಸಹ ನಿಮ್ಮ 10,000 ಗಂಟೆಗಳನ್ನು ನಿಮ್ಮ ಕೆಲಸದಲ್ಲಿ ಪ್ರೀತಿಯಿಂದ ಇನ್ವೆಸ್ಟ ಮಾಡಿ. All the Best and Thanks You...