ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? - How to achieve Financial Freedom? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? - How to achieve Financial Freedom? in Kannada

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

                   ಹಾಯ್ ಗೆಳೆಯರೇ, "ದುಡ್ಡು ಒಳ್ಳೆಯದಲ್ಲ, ದುಡ್ಡಿದ್ರೆ ಶ್ರೀಮಂತರ ರೋಗಗಳು ಬರುತ್ತವೆ, ಶ್ರೀಮಂತರಾಗಲು ಅಸೆಪಡಬಾರದು..." ಎಂಬಿತ್ಯಾದಿ ಮೂರ್ಖ ವಿಚಾರಗಳು ನಿಮ್ಮ ತಲೆಯಲ್ಲಿದ್ದರೆ ಮೊದಲು ಅವುಗಳನ್ನು ಡೀಲಿಟ ಮಾಡಿ. ಜೀವನದಲ್ಲಿ ದುಡ್ಡು ತುಂಬಾನೇ ಮುಖ್ಯ. ದುಡ್ಡಿಲ್ಲದೇ ನಾವೆಂದುಕೊಂಡಂತೆ ಬದುಕಲು ಸಾಧ್ಯವಿಲ್ಲ. ನಾವೆಂದುಕೊಂಡಂತೆ ನಮಗೆ ಬದುಕಲು ಸಾಧ್ಯವಾಗದಿದ್ದರೆ ನಾವು ಸಂತೋಷವಾಗಿರಲ್ಲ. ಅದಕ್ಕಾಗಿ ದುಡ್ಡು ಮುಖ್ಯ, ದುಡ್ಡು ಬೇಕೆ ಬೇಕು. ನಿಮಗೆ ದುಡ್ಡಿನ ಪ್ರಾಮುಖ್ಯತೆ ಅರ್ಥವಾಗಿದ್ದರೆ, ದುಡ್ಡಿನ ಕೊರತೆಯಿಂದ ನಿಮ್ಮ ಎಷ್ಟೋ ಅದ್ದೂರಿ ಕನಸುಗಳು ಅಪೂರ್ಣವಾಗಿ ನಿಂತಿವೆ ಎಂಬುದು ನಿಮ್ಮ ಗಮನಕ್ಕೆ ಬಂದಿದ್ದರೆ ಮಾತ್ರ ಈ ವಿಡಿಯೋವನ್ನು ನೋಡಿ ಮತ್ತು ಫೈನಾನ್ಸಿಯಲ್ ಫ್ರೀಡಂನ್ನು ಸಾಧಿಸಿ. 

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

ಯಾವತ್ತೂ ನೀವು ಬರೀ ಹಣಕ್ಕಾಗಿ ದುಡಿಯುವುದಿಲ್ಲವೋ ಅವತ್ತು ನೀವು ಫೈನಾನ್ಸಿಯಲಿ ಫ್ರೀಯಾಗಿದ್ದಿರಿ ಎಂದರ್ಥ. 

ಯಾವತ್ತೂ ನೀವು ಪ್ರೈಜ ಟ್ಯಾಗನ್ನು ನೋಡದೆ, ಹೆಚ್ಚಿಗೆ ಬಾರಗೇನನ್ನ ಮಾಡದೇ ಇಷ್ಟಪಟ್ಟ ಎಲ್ಲ ವಸ್ತುಗಳನ್ನು ಈಜಿಯಾಗಿ ಖರೀದಿಸುತ್ತಿರೋ ಅವತ್ತು ನೀವು ಫೈನಾನ್ಸಿಯಲಿ ಫ್ರೀಯಾಗಿದ್ದೀರಿ ಎಂದರ್ಥ. ‌

ಯಾವತ್ತೂ ನೀವು ನಿಮ್ಮ‌ ಕನಸಲ್ಲಿ ಬರುವ ವಸ್ತುಗಳನ್ನು, ಕಾರುಗಳನ್ನು, ಮನೆಯನ್ನು ಸಾಲ ಮಾಡದೇ ಖರೀದಿಸುತ್ತಿರೋ ಅವತ್ತು ನೀವು ಫೈನಾನ್ಸಿಯಲಿ ಫ್ರೀಯಾಗಿದ್ದಿರಿ ಎಂದರ್ಥ. 

ಯಾವತ್ತೂ ನಿಮಗೆ ನಾಳೆಯ ಖರ್ಚಿಗೆ ಹಣ ಗಳಿಸಬೇಕು, ವಯಸ್ಸಾದಾಗ ಬದುಕಲು ಹಣವನ್ನು ಕೂಡಿಡಬೇಕು, ಮಕ್ಕಳಿಗೆ ಇನ್ನೂ ಆಸ್ತಿ ಮಾಡಬೇಕು, ಇನ್ನೂ ದುಡ್ಡು ಮಾಡಬೇಕು ಎಂಬಿತ್ಯಾದಿ ಚಿಂತೆಗಳು ಕಾಡುವುದಿಲ್ಲವೋ ಅವತ್ತು ನೀವು ಫೈನಾನ್ಸಿಯಲಿ ಫ್ರೀಯಾಗಿದ್ದಿರಿ ಎಂದರ್ಥ. 

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

ನೀವು ಫೈನಾನ್ಸಿಯಲಿ ಫ್ರೀಯಾಗಿದ್ದರೆ ತುಂಬಾ ಒಳ್ಳೇ‌ ವಿಚಾರ. ಒಂದು ವೇಳೆ ಫೈನಾನ್ಸಿಯಲಿ ಫ್ರೀಯಾಗಿರದಿದ್ದರೆ ಈ ಟಿಪ್ಸಗಳನ್ನು ಫಾಲೋ ಮಾಡಿ. 

೧) ಫೈನಾನ್ಸಿಯಲಿ ಸ್ಟ್ರಾಂಗ್ ಆ್ಯಂಡ್ ಸ್ಟೇಬಲ್ ಆಗದೇ ಮನೆ, ಮದುವೆ, ಮಕ್ಕಳು ಇತ್ಯಾದಿ ಲೈಯಾಬಿಲಿಟಿಗಳನ್ನು ಮಾಡಿಕೊಳ್ಳಬೇಡಿ. ಭಾರತದಲ್ಲಿ ಬಹಳಷ್ಟು ಜನ ಫೈನಾನ್ಸಿಯಲಿ ಸ್ಟ್ರಾಂಗ್ ಆ್ಯಂಡ್ ಸ್ಟೇಬಲ ಆಗದೇ ಆತುರದಲ್ಲಿ ಮದುವೆಯಾಗುತ್ತಾರೆ. ನಂತರ ಮಕ್ಕಳ ಮಾಡೋ ಟೈಮಲ್ಲಿ ಅಥವಾ ಒಂದೆರಡು ಮಕ್ಕಳನ್ನು ಮಾಡಿ ಹಣಕ್ಕಾಗಿ ಹಗಲು ರಾತ್ರಿ ಕತ್ತೆ ತರ ದುಡಿಯುತ್ತಾರೆ. ಅದಕ್ಕಾಗಿ ನಿಮಗೆ ಫೈನಾನ್ಸಿಯಲಿ ಫ್ರೀಡಂನ್ನು ಸಾಧಿಸುವ ಆಸೆಯಿದ್ದರೆ ನೀವು ಈ ತಪ್ಪನ್ನು ಮಾಡಬೇಡಿ. ಫೈನಾನ್ಸಿಯಲಿ ಸ್ಟ್ರಾಂಗ್ ಆ್ಯಂಡ್ ಸ್ಟೇಬಲ್ ಆಗದೇ ಯಾವುದೇ ತರಹದ ಲೈಯಾಬಿಲಿಟಿಗಳನ್ನು ಮಾಡಿಕೊಳ್ಳಬೇಡಿ. ಮನೆ, ಮದುವೆ, ಮಕ್ಕಳು, ಕಾರು ಇತ್ಯಾದಿಗಳ ಗೋಜಿಗೆ ಬೇಗನೆ ಹೋಗಬೇಡಿ. ಮೊದಲು ನಿಮ್ಮ ಪ್ರೊಫೆಷನಲ್ ಲೈಫಲ್ಲಿ ಗ್ರೋ ಆಗಿ, ಮೊದಲು ನಿಮ್ಮ ಬಿಜನೆಸ್ಸನ್ನು ಫುಲ್ಲಿ ಸ್ಟೇಬಲ್ ಮಾಡಿ. ಮೊದಲು ಫೈನಾನ್ಸಿಯಲ್ ಪ್ಲ್ಯಾನಿಂಗ್ ಮಾಡಿ. ಆನಂತರ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿ. ಒಂದೆರಡು ವರ್ಷ ಲೇಟಾಗಿ ಮದುವೆಯಾದ್ರೆ, ಒಂದೆರಡು ವರ್ಷ ಲೇಟಾಗಿ ಮನೆ ತಗೊಂಡ್ರೆ, ಒಂದೆರಡು ವರ್ಷ ಲೇಟಾಗಿ ಕಾರ ತಗೊಂಡ್ರೆ ಏನು ವ್ಯತ್ಯಾಸವಾಗಲ್ಲ. ಅದಕ್ಕಾಗಿ ಮೊದಲು ಫೈನಾನ್ಸಿಯಲಿ ಸ್ಟ್ರಾಂಗ್ ಆ್ಯಂಡ್ ಸ್ಟೇಬಲ ಆಗಿ. ಆನಂತರ ಮನೆ, ಮದುವೆ, ಮಕ್ಕಳು ಇತ್ಯಾದಿಗಳನ್ನು ‌ಮಾಡಿಕೊಳ್ಳಿ. 

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

೨) ಸಾಧ್ಯವಾದಷ್ಟು ಅಸೆಟಗಳನ್ನು ಮಾಡಲು ಪ್ರಯತ್ನಿಸಿ, ಲೈಯಾಬಿಲಿಟಿಗಳನ್ನು ಕಡಿಮೆ ಮಾಡಿ. ನಾನು ಗಮನಿಸಿದಂತೆ ಬಹಳಷ್ಟು ಜನರಿಗೆ ಫೈನಾನ್ಸಿಯಲ್ ‌ನಾಲೇಡ್ಜ ಸ್ವಲ್ಪವೂ ಇಲ್ಲ. ಅವರಿಗೆ ಚೆನ್ನಾಗಿ ಸಂಪಾದಿಸಿ ಲೈಫಲ್ಲಿ ಚೆನ್ನಾಗಿ ಸೆಟ್ಲಾಗಬೇಕು ಎಂಬಾಸೆ ಸ್ವಲ್ಪವೂ ಇರುವುದಿಲ್ಲ. ಅದಕ್ಕಾಗಿ ಅವರು ಗಳಿಸಿದ ಹಣವನ್ನೆಲ್ಲ ದುಶ್ಚಟಗಳಲ್ಲಿ, ಪಾರ್ಟಿಗಳಲ್ಲಿ ಹಾಗೂ ಒಣ ಶೋಕಿಗಳಲ್ಲಿ ಸುಟ್ಟು ಬಿಡುತ್ತಾರೆ. ತಿಂಗಳಿಗೆ ಹತ್ತು ಸಾವಿರ ಸಂಬಳ ಬರುತ್ತಿದ್ದರೂ ಸಹ ಹುಡುಗಿಯರನ್ನು ಪಟಾಯಿಸಲು ಸಾಲ ಮಾಡಿ EMI ಮೇಲೆ ಅನಾವಶ್ಯಕವಾಗಿ ಐಫೋನ ಖರೀದಿಸುತ್ತಾರೆ, ಇಲ್ಲವೇ ಬೈಕ್, ಕಾರಗಳನ್ನು ಖರೀದಿಸುತ್ತಾರೆ.‌ ಸಾಲ ಮಾಡಿ ಒಣ ಶೋಕಿ ಮಾಡುತ್ತಾರೆ. ಇನ್ನೂ ದೊಡ್ಡವರು ಸ್ನೇಹಿತರ ಹಾಗೂ ಸಂಬಂಧಿಕರ ಹೊಟ್ಟೆ ಉರಿಸುವುದಕ್ಕಾಗಿ ಸಾಲ ಮಾಡಿ ಅನಾವಶ್ಯಕ ವಸ್ತುಗಳನ್ನು ಖರೀದಿಸಿ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ನಿಮಗೆ ಫೈನಾನ್ಸಿಯಲ್ ಫ್ರೀಡಂನ್ನು ಸಾಧಿಸುವ ಆಸೆಯಿದ್ದರೆ ನೀವು ಈ ತರಹದ ತಪ್ಪುಗಳನ್ನು ಮಾಡಬೇಡಿ. ನೀವು ಸಾಲ ಮಾಡಿ ಶೋಕಿ ಮಾಡಬೇಡಿ. ನಿಮಗೆ ಯಾವ ವಸ್ತುಗಳ ಅವಶ್ಯಕತೆ ‌ಇದೆಯೋ ಅವುಗಳನ್ನಷ್ಟೇ ಖರೀದಿಸಿ.‌ ನಿಮ್ಮ ನೀಡ್ (Need) ಮತ್ತು ವಾಂಟ (Want) ಇವುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಿ. ನಿಮ್ಮ ಹಣವನ್ನು ಅನಾವಶ್ಯಕವಾಗಿ ಸುಡಬೇಡ‌.‌ ಅದನ್ನು ಸರಿಯಾಗಿ ಮ್ಯಾನೇಜ ಮಾಡಿ. ನಿಮ್ಮ ಹಣವನ್ನು ಹಾಳು ಮಾಡುವ ಬದಲು ನಿಮ್ಮ ಮನೆ ಮಂದಿಗೆಲ್ಲ ಹೆಲ್ಥ ಇನ್ಶುರೆನ್ಸ್‌, ನಿಮ್ಮ ಬಿಜನೆಸ್ ಇನ್ಶುರೆನ್ಸ್‌, ನಿಮ್ಮ ಬೈಕ ಕಾರುಗಳಿಗೆ ಫುಲ್ ಬಾಡಿ ಇನ್ಶುರೆನ್ಸ್‌ ಮಾಡಿಸಿ. ಏಕೆಂದರೆ ಆ್ಯಕ್ಸಿಡೆಂಟ ಹಾಗೂ ‌ಆಸ್ಪತ್ರೆ ಖರ್ಚಿನಿಂದ ಬೀದಿಪಾಲಾದ ಕುಟುಂಬಗಳನ್ನು ನಾನು ಸಾಕಷ್ಟು ನೋಡಿರುವೆ. ಅದಕ್ಕಾಗಿ ಎಮರ್ಜೆನ್ಸಿ ಕೆಲಸಗಳಿಗಾಗಿ ಸಾಕಾಗುವಷ್ಟು ಹಣವನ್ನು ಕೂಡಿಡಿ. 

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

೩) ಬರೀ ಹಣವನ್ನು ಕೂಡಿಡುವುದರಿಂದ ನೀವು ಫೈನಾನ್ಸಿಯಲಿ ಫ್ರೀಯಾಗುತ್ತೀರಿ ಎಂಬ ಮಿಥನ್ನು ನಿಮ್ಮ ತಲೆಯಿಂದ ಡೀಲಿಟ ಮಾಡಿ. ನೀವು ಹೆಚ್ಚಿಗೆ ಹಣವನ್ನು ಉಳಿಸುವುದರಿಂದ ಶ್ರೀಮಂತರಾಗಲ್ಲ, ಹೆಚ್ಚೆಚ್ಚು ಹಣವನ್ನು ಗಳಿಸುವುದರಿಂದ ಶ್ರೀಮಂತರಾಗುತ್ತೀರಿ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ನಿಮ್ಮ ಹಣವನ್ನು ಬ್ಯಾಂಕಲಿಟ್ಟು ಕೊಳೆಯಿಸುವುದರಿಂದ ನಿಮ್ಮ‌‌ ಹಣ ಡಬ್ಬಲ್ ‌ಆಗಲ್ಲ.‌ ಇನ್ವೇಸ್ಟರ ಮೆಂಟ್ಯಾಲಿಟಿಯನ್ನು ಬೆಳೆಸಿಕೊಳ್ಳಿ. ಬರೀ ನೀವು ದುಡಿಯದೇ, ನಿಮ್ಮ ಬಳಿಯಿರುವ ದುಡ್ಡನ್ನು‌ ಸಹ ದುಡಿಸಿ ದುಡ್ಡು ಮಾಡಿ. ದುಡ್ಡನ್ನು ದುಡಿಸುವ ಕಲೆಯನ್ನು ಕಲಿಯಿರಿ. ನಿಮ್ಮ ಹಣವನ್ನು ಬ್ಯಾಂಕಲಿಟ್ಟು ಕೊಳೆಯಿಸದೇ ಅದನ್ನು FD, RD, Mutual Funds, Share Market, Real Estate, Business, Gold ಇತ್ಯಾದಿಗಳಲ್ಲಿ ‌ಇನ್ವೇಸ್ಟ ಮಾಡಿ.‌ ದುಡ್ಡಿಗಾಗಿ ಬರೀ ಒಂದೇ ಒಂದು ಮೂಲದ ಮೇಲೆ ಡಿಪೆಂಡಾಗಬೇಡಿ. ನಿಮ್ಮ ಖಾಲಿ ಪ್ಲಾಟುಗಳಲ್ಲಿ ಮನೆಗಳನ್ನು, ವ್ಯಾಪಾರ ಮಳಿಗೆಗಳನ್ನು ಕಟ್ಟಿಸಿ ಬಾಡಿಗೆಗೆ ಕೊಡಿ, ವಾಹನಗಳನ್ನು ಖರೀದಿಸಿ ಬಾಡಿಗೆಗೆ ಬಿಡಿ. ನಿಮ್ಮ ಬಿಜನೆಸ ಸಕ್ಸೆಸಫುಲ್ಲಾಗಿ ನಡೆಯುತ್ತಿರುವಾಗ ಮತ್ತೊಂದು ಸೈಡ ಬಿಜನೆಸ್ ಸ್ಟಾರ್ಟ ಮಾಡಿ, ಬೇರೆ ಬಿಜನೆಸಗಳಲ್ಲಿ ಹಣ ಹೂಡಿಕೆ ಮಾಡಿ. ಈ ರೀತಿ ಮಲ್ಟಿಪಲ್ ಮೂಲಗಳಿಂದ ನಿಮಗೆ ಹಣ ಬರುವಂತೆ ನೋಡಿಕೊಳ್ಳಿ, ಪ್ಯಾಸೀವ್ ಇನಕಮ ಬರುವಂತೆ ನೋಡಿಕೊಳ್ಳಿ. 

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

೪) ಒಂದು ಜಬರದಸ್ತ ಬಿಜನೆಸ್ ಐಡಿಯಾ ಹುಡುಕಿ ಅದರ ಮೇಲೆ‌‌ ಕೆಲಸ ಮಾಡಿ ಅಥವಾ ಒಂದು ದೊಡ್ಡ ಗೋಲ ಸೆಟ್ ಮಾಡಿಕೊಂಡು ಅದನ್ನು ನನಸಾಗಿಸಿ. ಆಗ ನೀವು ಕನಸ್ಸಲ್ಲೂ ಊಹಿಸಿರದಷ್ಟು ಹಣ, ಆಸ್ತಿ, ಅಂತಸ್ತು, ನೇಮ, ಫೇಮ್ ಇತ್ಯಾದಿಗಳೆಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಬಿಜನೆಸ್ ಸ್ಟಾರ್ಟ ಮಾಡಿ, ಎಲ್ಲ ಬಿಟ್ಟು ಮೂರ್ನಾಲ್ಕು ವರ್ಷ ಹಗಲು ರಾತ್ರಿ ರಾಕ್ಷಸನಂತೆ ಕೆಲಸ ಮಾಡಿ ಆನಂತರ ರಾಜನಂತೆ ರಾಯಲ್ ಲೈಫನ್ನು ಲೀಡ್ ಮಾಡಿ. ಲಕ್ಷಗಳಲ್ಲಿ ಬಿಜನೆಸ್ ಸ್ಟಾರ್ಟ ಮಾಡಿ ಕೋಟಿಗಟ್ಟಲೇ ಹಣ ಸಂಪಾದಿಸಿ. ನಿಮ್ಮ ಮಿಕ್ಕ ಜೀವನವನ್ನು ನಿಮಗೆ ಬೇಕಾದಂತೆ ಎಂಜಾಯ ಮಾಡಿ. ಸಾಕಷ್ಟು ಹಣವನ್ನು ಸಂಪಾದಿಸಿ, ಅದರಿಂದ ನಿಮ್ಮ ಎಲ್ಲ ಅದ್ದೂರಿ ಕನಸುಗಳನ್ನು ಈಡೇರಿಸಿಕೊಂಡು ಹಾಯಾಗಿರಿ. 

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? How to achieve Financial Freedom?

                    ಓಕೆ‌ ಗೆಳೆಯರೇ, ಈ ನಾಲ್ಕು ಟಿಪ್ಸಗಳನ್ನು ಫಾಲೋ ಮಾಡಿದರೆ ನಿಮಗೆ ಖಂಡಿತವಾಗಿಯೂ ಫೈನಾನ್ಸಿಯಲ್ ಫ್ರೀಡಂ ಸಿಕ್ಕೇ ಸಿಗುತ್ತದೆ. ಇವುಗಳಲ್ಲಿ ಮೊದಲ ಮೂರು ಟಿಪ್ಸಗಳನ್ನು ನಾನು ಈಗಾಗಲೇ ಬಳಸಿಕೊಂಡು ನನ್ನ ಬಡತನವನ್ನು ಸುಲಭವಾಗಿ ಸಾಯಿಸಿರುವೆ‌. ನಾಲ್ಕನೇ ಟಿಪನ್ನು ಸಹ ಈಗ ಅಪ್ಲಾಯ ಮಾಡಿಕೊಂಡು ಅರ್ಧ ದಾರಿಯನ್ನು ಕ್ರಮಿಸಿರುವೆ‌. ಈಗ ಸೈಲೆಂಟಾಗಿ ಕೆಲಸ ಮಾಡುತ್ತಿರುವೆ, ಮುಂದೆ ನಮ್ಮ ಸಕ್ಸೆಸ್ ಸದ್ದು ಮಾಡಿದಾಗ ನಿಮಗೆಲ್ಲವೂ ಆಟೋಮ್ಯಾಟಿಕಾಗಿ ಗೊತ್ತಾಗುತ್ತದೆ. ಸದ್ಯಕ್ಕೆ ಈ ಆರ್ಟಿಕಲಗೆ ಲೈಕ ಮಾಡಿ ಮತ್ತು ಪೇಜಗೆ ಫಾಲೋ ಮಾಡಿ. All the Best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.