ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? - How to convert your Bad Luck into Good Luck? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? - How to convert your Bad Luck into Good Luck? in Kannada

ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? How to convert your Bad Luck into Good Luck?

                  ಹಾಯ್ ಗೆಳೆಯರೇ, ಕೆಲವೊಂದಿಷ್ಟು ಜನ ಯಾವಾಗಲೂ ನನ್ನ ಲಕ್ ಸರಿಯಿಲ್ಲ, ಅದಕ್ಕೆ ನನ್ನ ಲೈಫಲ್ಲಿ ಏನು ಸ್ಪೆಷಲ್ ಆಗ್ತಿಲ್ಲ, ಅದಕ್ಕೆ ನನಗೆ ಸಕ್ಸೆಸ್ ಸಿಗುತ್ತಿಲ್ಲ ಅಂತಾ ಕೊರಗುತ್ತಿರುತ್ತಾರೆ. ಅದಕ್ಕಾಗಿ ಇವತ್ತಿನ ಎಪಿಸೋಡನಲ್ಲಿ ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ ಅಂತಾ ನೋಡೋಣಾ.

                  ಗೆಳೆಯರೇ, ಲಕ್ ಬಗ್ಗೆ ನಿಮಗೆನನಿಸುತ್ತೆ? ಲಕ್ ನಿಜವಾಗಿಯೂ ಇದೆಯಾ? ಅಥವಾ ಇಲ್ವಾ? ಲಕ್ ಬಗ್ಗೆ ನಿಮಗೇನನಿಸುತ್ತೆ ಅನ್ನೋದನ್ನ ಕಮೆಂಟ ಮಾಡಿ. ನನಗೆ ಕೆಲವು ಸಲ ಲಕ್ ಇದೆ ಅಂತಾ ಅನಿಸುತ್ತೆ. ಏಕೆಂದರೆ ನಾವು ಜನಿಸುವಾಗಲೇ 300 ಮಿಲಿಯನ್ ಸ್ಪರ್ಮಗಳ ಮಹಾನ್ ರೇಸನ್ನು ಗೆದ್ದು ವಿಜಯಶಾಲಿಯಾಗಿ ಜನಿಸಿದ್ದೇವೆ. ಎಷ್ಟೋ ಜನರಿಗೆ ಯಾರು ಇಲ್ಲದೆ ಅವರು ಅನಾಥರಾಗಿದ್ದಾರೆ, ಆದರೆ ನಮಗೆ ಫ್ರೆಂಡ್ಸ್, ಫ್ಯಾಮಿಲಿ, ರಿಲೆಟಿವ್ಸ ಎಲ್ರೂ ಇದಾರೆ. ಎಷ್ಟೋ ಜನರಿಗೆ ತಿನ್ನೋಕೆ ಹೊಟ್ಟೆತುಂಬ ಅನ್ನವಿಲ್ಲ, ಉಡೋಕೆ ಮೈತುಂಬ ಬಟ್ಟೆಯಿಲ್ಲ, ಇರೋಕೆ ಮನೆಯಿಲ್ಲ, ಮೆಡಿಕಲ್ ಸ್ಪೆಶಲಿಟಿಯಿಲ್ಲ, ಎಜುಕೇಶನ ಇಲ್ಲ. ಆದರೆ ನಮಗೆ ಎಲ್ಲವೂ ಸಿಕ್ಕಿದೆ. ಎಷ್ಟೋ ಜನ ಹ್ಯಾಂಡಿಕ್ಯಾಪಾಗಿದ್ದಾರೆ, ಆದರೆ ನಾವು ಹೆಲ್ದಿಯಾಗಿದೀವಿ. ಎಷ್ಟೋ ಜನ ಈಗಲೂ ಸಹ ಸ್ವಾತಂತ್ರ್ಯವಿರದ ಕ್ರೂರ ರಾಷ್ಟ್ರಗಳಲ್ಲಿ ನರಳುತ್ತಿದ್ದಾರೆ, ಆದರೆ ನಾವೆಲ್ಲರೂ ನಮ್ಮ ಹೆಮ್ಮೆಯ ಗ್ರೇಟ್ ಇಂಡಿಯಾದಲ್ಲಿದ್ದೇವೆ. ಈಗ ನಮ್ಮ ಬಳಿಯಿರುವ ವಸ್ತುಗಳು ಮತ್ತು ನಮ್ಮ ಜೀವನ ಎಷ್ಟೋ ಜನರ ಕನಸಾಗಿದೆ. ಅದಕ್ಕಾಗಿ ನನಗೆ ಲಕ್ ಇದೆ ಅಂತ ಅನಿಸುತ್ತೆ. ನಿಜವಾಗಿಯೂ ಲಕ್ ಇದೆ.

ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? How to convert your Bad Luck into Good Luck?

                                  ನನಗೆ ಪರ್ಸನಲ್ಲಾಗಿ ಸಹ ಲಕ್ ಬಹಳಷ್ಟು ಸಲ ಹೆಲ್ಪ ಮಾಡಿದೆ. ನನಗೆ ಚಿಕ್ಕಂದಿನಿಂದಲೂ ಎಷ್ಟೇ ಕಷ್ಟಗಳಾದರೂ ನನಗೆ ಅಷ್ಟೇನು ನಷ್ಟವಾಗಿಲ್ಲ. ಎಷ್ಟೋ ಜನ ಆಕ್ಸಿಡೆಂಟಾಗಿ ಸ್ಥಳದಲ್ಲೇ ಜೀವ ಕಳೆದುಕೊಳ್ತಾರೆ, ಆದರೆ ನನಗೆ ಬದುಕೋಕೆ ಮತ್ತೊಂದು ಚಾನ್ಸ್ ಸಿಕ್ಕಿದೆ. ನನಗೆ ಒಳ್ಳೆ ಗೆಳತಿ, ಒಳ್ಳೇ ಬ್ರದರ್, ಒಳ್ಳೇ ಬಾಸ್, ಒಳ್ಳೇ ಬಿಜನೆಸ್ ಪಾರ್ಟನರ್ಸ, ಒಳ್ಳೆ ಟೀಮ ಮೆಂಬರ್ಸ ಸಿಕ್ಕಿದ್ದಾರೆ. ಅದಕ್ಕೆ ನನಗೆ ಪರ್ಸನಲ್ಲಾಗಿ ಲಕ್ ಇದೆ ಅಂತಾ ಅನಿಸುತ್ತೆ. ಆದರೆ ಲಕ್ ಇದೆಯಂತ ನಾವು ಪ್ರಯತ್ನಿಸದೆ, ಕೆಲಸ ಮಾಡದೇ ಕುಂತರೆ ನಾವು ಬಡವರಾಗೋದಂತು ಗ್ಯಾರಂಟಿ. ಏಕೆಂದರೆ ಪ್ರಯತ್ನಿಸದೇ ಬಿಟ್ಟಿಯಾಗಿ ಏನು ಸಿಗಲ್ಲ, ಒಂದು ವೇಳೆ ಸಿಕ್ಕರೂ ಬಹಳ ದಿನ ಉಳಿಯಲ್ಲ. ನಾವು ಬಯಸಿದ್ದೆಲ್ಲವು ನಮಗೆ ಬಿಟ್ಟಿಯಾಗಿ ಸಿಗಲ್ಲ. ಆದರೆ ಕೆಲವು ಸಲ ಕೆಲವೊಂದಿಷ್ಟು ಜನರಿಗೆ ಪ್ರಯತ್ನವಿಲ್ಲದೇ ಕೆಲವು ಅವಕಾಶಗಳು ಸಿಗುತ್ತವೆ. ಯಾಕ ಹೀಗೆ? ಏಕೆಂದರೆ ಅವರು ಅದಕ್ಕೆ ಅರ್ಹರಾಗಿರುತ್ತಾರೆ, ಅವರ ಬಳಿ ಆ ಅವಕಾಶಗಳನ್ನು ಪಡೆದುಕೊಳ್ಳುವ ಯೋಗ್ಯತೆ ಇರುತ್ತದೆ. ಅವರು ಅವಕಾಶಗಳಿಗೆ ಪ್ರಯತ್ನಿಸದಿದ್ದರೂ ಯೋಗ್ಯತೆಗಾದರೂ ಖಂಡಿತ ಬೆವರು ಸುರಿಸಿರುತ್ತಾರೆ.

ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? How to convert your Bad Luck into Good Luck?

               ನಾನು ಈ ಲಕ್ ಬಗ್ಗೆ ಬಹಳಷ್ಟು ಯೋಚಿಸಿರುವೆ. ಈ ಲಕ್ ಒಂಥರಾ ಲವರ್ ಇದ್ದಂಗೆ. ಯಾವುದೇ ಕೆಲಸಕಾರ್ಯ ಮಾಡದೇ ಬರೀ ಪ್ರೀತಿ ಪ್ರೀತಿ ಅನ್ನೋರಿಗೆ ಯಾವುದೇ ಪ್ರೇಯಸಿ ಸಿಗಲ್ಲ, ಏಕೆಂದರೆ ಪ್ರೀತಿಯಿಂದ ಹೊಟ್ಟೆ ತುಂಬಲ್ಲ. ಯೋಗ್ಯತೆ ಇರದಿದ್ದರೆ ಪ್ರೇಯಸಿ ಸಿಗಲ್ಲ. ಅದೇ ರೀತಿ ಯೋಗ್ಯತೆ ಇಲ್ಲದವರ ಬಳಿ ಲಕ್ ಸುಳಿಯಲ್ಲ. ಒಂದು ಹೇಳಿಕೆಯ ಪ್ರಕಾರ 99% ಎಫರ್ಟ ಇರುತ್ತದೆ, 1% ಮಾತ್ರ ಲಕ್ ಇರುತ್ತದೆ. ಹೀಗಿರುವಾಗ ನಾವು ನಮ್ಮ ಲಕ್ಕನ್ನು ಸೃಷ್ಟಿಸಿಕೊಳ್ಳಬಹುದು. ಹೇಗೆಂದರೆ 99% ಎಫರ್ಟ ನಮ್ಮ ಕೈಯಲ್ಲೇ ಇದೆಯಲ್ಲ? We can create our good luck by our good deeds. Because we have 99% effort in our hand. ಎಷ್ಟೋ ಜನ 99% ಎಫರ್ಟ ಹಾಕದೆ ನನ್ನ ಲಕ್ ಸರಿಯಿಲ್ಲ ಅಂತಾ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ, ಇನ್ನೂ ಕೆಲವೊಂದಿಷ್ಟು ಜನ ನಾನು ಲಕ್ಕಿ ಅಂತಾ ಬರೀ 1% ಲಕ್ ಇಟ್ಟುಕೊಂಡು ಅನಸಕ್ಸೆಸಫುಲ ಲೈಫ ಲೀಡ್ ಮಾಡುತ್ತಿದ್ದಾರೆ. ನೀವು 99% ಎಫರ್ಟ ಹಾಕದಿದ್ದರೆ ನಿಮ್ಮತ್ರ 1% ಲಕ್ ಇದ್ದರೂ ಏನು ಪ್ರಯೋಜನವಿಲ್ಲ. ಲಕ್ ನಮ್ಮ ಕೈಯಲಿಲ್ಲ ನಿಜ, ಆದರೆ ನಾವು 99% ಎಫರ್ಟನ್ನು ಹಾಕಿದರೆ ಲಕ್ ನಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ. ನಾವು ಸರಿಯಾಗಿ ಎಫರ್ಟಾಕಿದರೆ ಲೇಟಾದರೂ ಸಹ ಲಕ್ ನಮ್ಮ ಪ್ರಯತ್ನದೊಂದಿಗೆ ಬಂದು ಸೇರುತ್ತದೆ. ನಮಗೆ ಸಕ್ಸೆಸ್ ಸಿಕ್ಕೇ ಸಿಗುತ್ತದೆ.

ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? How to convert your Bad Luck into Good Luck?

                  ಲಕ್ ಇದೆ ಎಂಬುದನ್ನು ನಾನು ಒಪ್ಪಿಕೋಳ್ತೀನಿ. ಆದರೆ ಲಕ್ಕಿ ವ್ಯಕ್ತಿಗಳಿರುತ್ತಾರೆ, ಅವರು ಮುಟ್ಟಿದೆಲ್ಲ ಚಿನ್ನವಾಗುತ್ತೆ, ಅವರು ಬಯಸಿದ್ದೆಲ್ಲ ಅವರ ಕಾಲ ಬಳಿ ಬಂದು ಬೀಳುತ್ತೆ ಎಂಬುದನ್ನೆಲ್ಲ ನಾನು ಒಪ್ಪಲ್ಲ. ಅದು ಬರೀ ಬಿಲ್ಡಪ್ ಅಷ್ಟೇ. ಎಲ್ಲರಿಗೂ ಬಯಸಿದ್ದೆಲ್ಲವು ಸಿಕ್ಕಿದ್ದರೆ ಈ ಜಗತ್ತಿನಲ್ಲಿ ದು:ಖವೇ ಇರುತ್ತಿರಲಿಲ್ಲ, ಹಣಕ್ಕೆ ಬೆಲೆಯೇ ಇರುತ್ತಿರಲಿಲ್ಲ.

ಉದಾ : ಕೈಲಾಗದ ಜನ ಬಿಜನೆಸಮ್ಯಾನಗಳನ್ನು ನೋಡಿ "ಅವರಿಗೇನ ಬಿಡ್ರಿ, ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ, ಬಿಜನೆಸ ಹಿಟ್ಟಾಗಿದೆ. ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ತಿದ್ದಾರೆ, ಕಾರ ಮೇಲೆ ಕಾರ ತಗೋತಿದಾರೆ, ಅವರಿಗೆ ಲಕ್ಕಿದೆ" ಅಂತೆಲ್ಲ ಹೇಳುತ್ತಾರೆ. ಜನರಿಗೆ ಅವರ 1% ಲಕ್ ಮಾತ್ರ ಕಾಣಿಸುತ್ತೆ, ಆದ್ರೆ ಅವರ 99% ಎಫರ್ಟ, ಸ್ಟ್ರಗಲ್, ಹಾರ್ಡವರ್ಕ ಕಾಣಿಸಲ್ಲ. ಅವರು ಹಗಲು ರಾತ್ರಿ ಪಡ್ತಿರೋ ಕಷ್ಟ ಕಾಣಿಸಲ್ಲ. ಇಲ್ಲೇ ಜನ ಮೋಸ ಹೋಗ್ತಾರೆ. ಕೆಲಸ ನೋಡದೇ, ಕೆಲಸ ಮಾಡದೇ ನಮಗೆ ಲಕ್ಕಿಲ್ಲ ಅಂತಾ ತಮಗೆ ತಾವೇ ಮೋಸ ಮಾಡಿಕೊಳ್ತಾರೆ.

               ಲಾಸ್ಟ್ ಇಯರ್ ನಮ್ಮ ಅಪಾರ್ಟಮೆಂಟಲ್ಲಿ ಒಬ್ಬಳು ಹುಡುಗಿ IAS ಎಕ್ಸಾಮ ಕ್ರ್ಯಾಕ್ ಮಾಡಿದಳು. ಈಗ ಎಲ್ರೂ ಅವಳನ್ನು ನೋಡಿ "ಅವಳಿಗೇನ ಬಿಡ್ರಿ, ಅವಳು ಬೈಬರ್ಥ ಬ್ರಿಲಿಯಂಟಾಗಿದಾಳೆ. ಅವಳ ಬ್ರೇನ ಶಾರ್ಪಾಗಿದೆ. ಅವಳಿಗೆ ಈಗ ಗವರ್ನಮೆಂಟ ಅಪಾರ್ಟಮೆಂಟ, ಗವರ್ನಮೆಂಟ ಕಾರ ಎಲ್ಲ ಕೊಡ್ತಾರೆ, ಅವಳು ತುಂಬಾ ಲಕ್ಕಿ..." ಅಂತಾ ಮಾತಾಡಲು ಸ್ಟಾರ್ಟ ಮಾಡಿದರು. ಅವಳ ವಿಷಯದಲ್ಲೂ ಜನ ಇದೇ ತಪ್ಪನ್ನು ಮಾಡಿದರು. ಜನರಿಗೆ ಮತ್ತು ಅವಳ ಕ್ಲಾಸಮೇಟ್ಸಗಳಿಗೆ ಅವಳ 99% ಎಫರ್ಟ ಕಾಣಿಸಲೇ ಇಲ್ಲ. ಬರೀ 1% ಲಕ್ ಮಾತ್ರ ಕಾಣಿಸಿತು. ಇದೇ ಹುಡುಗಿ ಮುಂಚೆ ಎಷ್ಟೋ ಸಲ ಟೆರೆಸ ಮೇಲೆ ಒಬ್ಬಳೇ ಕಣ್ಣೀರಾಕೋವಾಗ ಯಾರಿಗೂ ಅವಳ ಲಕ್ ಕಾಣಿಸಲಿಲ್ಲ, ಅವಳು ಹಗಲು ರಾತ್ರಿ ಸ್ಟಡಿ ಮಾಡುವಾಗ ಯಾರಿಗೂ ಅವಳ ಲಕ್ ಕಾಣಿಸಲಿಲ್ಲ. ಈಗ ಅವಳಿಗೆ ಸಕ್ಸೆಸ್ ಸಿಕ್ಕ ನಂತರ ಎಲ್ರಿಗೂ ಅವಳ ಲಕ್ ಕಾಣಿಸಿತು. ಸೋ, 1% ಲಕನಿಂದ ಏನು ಆಗಲ್ಲ. 99% ಎಫರ್ಟಯಿದ್ದಾಗಲೇ 1% ಲಕಗೆ ಒಂದು ಬೆಲೆ ಬರೋದು.

ನಿಮ್ಮ ಬ್ಯಾಡ ಲಕ್ಕನ್ನು ಗುಡ್ ಲಕ್ಕಾಗಿ ಬದಲಾಯಿಸೋದು ಹೇಗೆ? How to convert your Bad Luck into Good Luck?

                    ನಿಮಗೆ ಲಕ್ಕಿದೆ ಅಂತಾ ಸುಮ್ನೆ ಕುಂತ್ರೆ ನಿಮಗೆ ನಷ್ಟವಾಗುತ್ತದೆ, ನಿಮಗೆ ಲಕ್ಕಿಲ್ಲ ಅಂತಾ ನೀವು ಟ್ರಾಯ ಮಾಡದಿದ್ರೆ ಆವಾಗಲೂ ನಿಮಗೆ ನಷ್ಟವಾಗುತ್ತದೆ. ಅದಕ್ಕಾಗಿ 99% ಎಫರ್ಟನ್ನು ಹಾಕಿ 1% ಲಕ್ ತಾನಾಗಿಯೇ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತೆ. ನೀವು ಕೆಲಸ ಪ್ರಾರಂಭಿಸುವಾಗ 1% ಲಕ್ ಬಗ್ಗೆ ಒಂಚೂರು ಯೋಚನೆ ಮಾಡಬೇಡಿ. ನೀವು 99% ಎಫರ್ಟನ್ನು ಪ್ರಾಮಾಣಿಕವಾಗಿ ಹಾಕಿ ನಿಮ್ಮ ಬ್ಯಾಡ ಲಕ್ ತಾನಾಗಿಯೇ ಗುಡ್ ಲಕ್ಕಾಗಿ ಬದಲಾಗುತ್ತದೆ. ನೀವು ಎಲ್ಲಿ ತನಕ ನಿಮ್ಮ 99% ಎಫರ್ಟನ್ನು ಹಾಕಲ್ಲವೋ ಅಲ್ಲಿ ತನಕ ನಿಮ್ಮ ಬ್ಯಾಡಲಕ್ ಗುಡ್ ಲಕ್ಕಾಗಿ ಬದಲಾಗಲ್ಲ. ಸೋ ನಿಮ್ಮ ಕೆಲಸದಲ್ಲಿ ನಿಮ್ಮ 99%ನ್ನು ನಿಯತ್ತಾಗಿ ಕೊಡಿ ಮತ್ತು ಸಕ್ಸೆಸಫುಲ್ಲಾಗಿ. All the best and thanks you...

Blogger ನಿಂದ ಸಾಮರ್ಥ್ಯಹೊಂದಿದೆ.